Moto G45 5G: ಮೊಟೊರೊಲಾ ಕಂಪನಿಯಿಂದ ಹೊಸ 5ಜಿ ಸ್ಮಾರ್ಟ್‌ಫೋನ್‌ ಬಿಡುಗಡೆ; ಕಡಿಮೆ ದರ- ಹೆಚ್ಚು ಫೀಚರ್ಸ್‌
ಕನ್ನಡ ಸುದ್ದಿ  /  ಜೀವನಶೈಲಿ  /  Moto G45 5g: ಮೊಟೊರೊಲಾ ಕಂಪನಿಯಿಂದ ಹೊಸ 5ಜಿ ಸ್ಮಾರ್ಟ್‌ಫೋನ್‌ ಬಿಡುಗಡೆ; ಕಡಿಮೆ ದರ- ಹೆಚ್ಚು ಫೀಚರ್ಸ್‌

Moto G45 5G: ಮೊಟೊರೊಲಾ ಕಂಪನಿಯಿಂದ ಹೊಸ 5ಜಿ ಸ್ಮಾರ್ಟ್‌ಫೋನ್‌ ಬಿಡುಗಡೆ; ಕಡಿಮೆ ದರ- ಹೆಚ್ಚು ಫೀಚರ್ಸ್‌

Moto G45 5G: ಮೊಟೊರೊಲಾ ಕಂಪನಿಯು ಹೊಸ 5ಜಿ ಸ್ಮಾರ್ಟ್‌ಫೋನ್‌ ಬಿಡುಗಡೆ ಮಾಡಿದೆ. 4ಜಿಬಿ ರಾಮ್‌, 128 ಜಿಬಿ ಬೇಸ್‌ ಮಾಡೆಲ್‌ ಮೊಟೊ ಜಿ5 ಸ್ಮಾರ್ಟ್‌ಫೋನ್‌ ಆರಂಭಿಕ ದರ 10,999 ರೂಪಾಯಿ ಇದೆ. (ಬರಹ: ವಿನಯ್ ಭಟ್)

ಕೇವಲ 10,999 ರೂ.ಗೆ 5G ಸ್ಮಾರ್ಟ್ಫೋನ್ ಬಿಡುಗಡೆಗೊಳಿಸಿದ ಮೋಟೋ
ಕೇವಲ 10,999 ರೂ.ಗೆ 5G ಸ್ಮಾರ್ಟ್ಫೋನ್ ಬಿಡುಗಡೆಗೊಳಿಸಿದ ಮೋಟೋ (motorola.in)

ಲೆನೊವೊ ಒಡೆತನದ ಪ್ರಸಿದ್ಧ ಮೊಟೊರೊಲ ಬ್ರ್ಯಾಂಡ್​ನ ಸ್ಮಾರ್ಟ್​ಫೋನ್​ಗಳಿಗೆ ಭಾರತದಲ್ಲಿ ಬೇಡಿಕೆ ಉತ್ತಮವಾಗಿದೆ. ಕಡಿಮೆ ಬೆಲೆಯಿಂದ ದುಬಾರಿ  ಫೋನ್‌ಗಳವರೆಗೆ ಕಂಪನಿಯು ವೈವಿಧ್ಯಮಯ ಫೋನ್‌ಗಳನ್ನು ಮಾರಾಟ ಮಾಡುತ್ತಿದೆ.  ಫೋಲ್ಡ್, ಫ್ಲಿಪ್ ಸೇರಿದಂತೆ ಎಲ್ಲ ಬಗೆಯ ಫೋನುಗಳನ್ನು ಅನಾವರಣ ಮಾಡುವ ಮೋಟೋ ಇದೀಗ ಅತ್ಯಂತ ಕಡಿಮೆ ಬೆಲೆಗೆ ದೇಶದಲ್ಲಿ ಹೊಸ 5ಜಿ ಬೆಂಬಲಿತ ಸ್ಮಾರ್ಟ್​ಫೋನ್ ಪರಿಚಯಿಸಿದೆ. ಇದರ ಹೆಸರು ಮೋಟೋ ಜಿ45 5ಜಿ. ಇದು ಬಜೆಟ್ ಸ್ಮಾರ್ಟ್​ಫೋನ್ ಆಗಿದ್ದರೂ ಕ್ವಾಲ್ಕಂನ ಸ್ನಾಪ್‌ಡ್ರಾಗನ್ 6ಎಸ್‌ ಜೆನ್‌ 3 ಚಿಪ್‌ಸೆಟ್ ಶಕ್ತಿ ಹೊಂದಿದೆ. 50-ಮೆಗಾಪಿಕ್ಸೆಲ್ ಡ್ಯುಯಲ್ ರಿಯರ್ ಕ್ಯಾಮೆರಾಗಳನ್ನು ಹೊಂದಿದೆ. ಇಷ್ಟೊಂದು ಕಡಿಮೆ ಬೆಲೆಗೆ ಇಂತಹ ಅದ್ಭುತ ಫೀಚರ್ಸ್ ಹೊಂದಿರುವ ಕೆಲವೇ ಕೆಲವು ಫೋನುಗಳ ಸಾಲಿಗೆ ಇದು ಕೂಡ ಸೇರ್ಪಡೆಯಾಗಿದೆ.

ಭಾರತದಲ್ಲಿ ಮೊಟೊ ಜಿ45 5ಜಿ ಬೆಲೆ

ಮೋಟೋ ಜಿ45 5ಜಿ ಸ್ಮಾರ್ಟ್​ಫೋನ್ ಭಾರತದಲ್ಲಿ ಎರಡು ಸ್ಟೋರೇಜ್ ಆಯ್ಕೆಯಲ್ಲಿ ಲಭ್ಯವಿದೆ. ಇದರ ಬೇಸ್ ಮಾಡೆಲ್ 4 ಜಿಬಿ ರಾಮ್‌ + 128 ಜಿಬಿ  ಸ್ಟೋರೇಜ್ ರೂಪಾಂತರಕ್ಕೆ 10,999 ರೂ. ನಿಗದಿ ಮಾಡಲಾಗಿದೆ. ಹಾಗೆಯೆ ಇದರ 8 ಜಿಬಿ ರಾಮ್‌ ಮತ್ತು  128 ಜಿಬಿ ಸ್ಟೋರೇಜ್ ಹೊಂದಿರುವ ಟಾಪ್ ಎಂಡ್ ಮಾಡೆಲ್ ಬೆಲೆ ರೂ. 12,999 ಆಗಿದೆ. ಇದನ್ನು ಬ್ರಿಲಿಯಂಟ್ ಬ್ಲೂ, ಬ್ರಿಲಿಯಂಟ್ ಗ್ರೀನ್ ಮತ್ತು ವಿವಾ ಮೆಜೆಂಟಾ ಬಣ್ಣ ಆಯ್ಕೆಗಳಲ್ಲಿ ನೀಡಲಾಗುತ್ತದೆ. ಹೊಸ ಹ್ಯಾಂಡ್‌ಸೆಟ್ ಫ್ಲಿಪ್​ಕಾರ್ಟ್, ಮತ್ತು ಮೊಟೊರೊಲ.in ಮತ್ತು ದೇಶದ ಆಯ್ದ ಚಿಲ್ಲರೆ ಅಂಗಡಿಗಳಲ್ಲಿ ಆಗಸ್ಟ್ 28 ರಿಂದ ಮಧ್ಯಾಹ್ನ 12:00 ಕ್ಕೆ ಮಾರಾಟವಾಗಲಿದೆ.

ಪರಿಚಯಾತ್ಮಕ ಕೊಡುಗೆಯಾಗಿ, ಖರೀದಿದಾರರು ಬ್ಯಾಂಕ್ ರಿಯಾಯಿತಿಯನ್ನು ಪಡೆಯಬಹುದು. ಈ ಕೊಡುಗೆಯು ಸೆಪ್ಟೆಂಬರ್ 10 ರವರೆಗೆ ಮಾನ್ಯವಾಗಿರುತ್ತದೆ. ಇದಲ್ಲದೆ, ಖರೀದಿದಾರರು ರಿಲಯನ್ಸ್ ಜಿಯೋ ಆಧಾರಿತ ಕೊಡುಗೆಗಳನ್ನು ಸಹ ಪಡೆಯಬಹುದು.

ಮೊಟೊ G45 5G ಫೀಚರ್ಸ್

ಡ್ಯುಯಲ್ ಸಿಮ್ (ಹೈಬ್ರಿಡ್) ಮೊಟೊ ಜಿ45 5ಜಿ ಫೋನ್ ಆಂಡ್ರಾಯ್ಡ್ 14 ನಲ್ಲಿ ಆಂಡ್ರಾಯ್ಡ್ 15 ಗೆ ಅಪ್‌ಗ್ರೇಡ್ ಮತ್ತು ಮೂರು ವರ್ಷಗಳ ಭದ್ರತಾ ನವೀಕರಣಗಳೊಂದಿಗೆ ಕಾರ್ಯನಿರ್ವಹಿಸುತ್ತದೆ. ಇದು 6.5-ಇಂಚಿನ ಎಚ್‌ಡಿ+ (720 x 1,600 ಪಿಕ್ಸೆಲ್‌ಗಳು) ಹೋಲ್ ಪಂಚ್ ಹೋಲ್ ಎಲ್‌ಸಿಡಿ ಡಿಸ್​ಪ್ಲೇ ಜೊತೆಗೆ 120Hz ಅಡಾಪ್ಟಿವ್ ರಿಫ್ರೆಶ್ ರೇಟ್, 240Hz ಟಚ್ ಸ್ಯಾಂಪ್ಲಿಂಗ್ ರೇಟ್ ಹೊಂದಿದೆ. ಡಿಸ್​ಪ್ಲೇಯು ಗೊರಿಲ್ಲಾ ಗ್ಲಾಸ್ 3 ರಕ್ಷಣೆ ಹೊಂದಿದೆ. ಇದು ಕ್ವಾಲ್‌ಕಾಮ್‌ನ ಸ್ನಾಪ್‌ಡ್ರಾಗನ್ 6s Gen 3 ಚಿಪ್‌ಸೆಟ್ ಜೊತೆಗೆ 8 ಜಿಬಿ ಎಲ್‌ಎಲ್‌ಡಿಡಿಆರ್‌4ಎಕ್ಸ್‌ ರಾಮ್‌ ಮತ್ತು 12 ಜಿಬಿ ಯುಎಫ್‌ಎಸ್‌  2.2 ಆನ್‌ಬೋರ್ಡ್ ಸಂಗ್ರಹಣೆ ಹೊಂದಿದೆ. ರಾಮ್‌ ಅನ್ನು 16 ಜಿಬಿವರೆಗೆ ವಿಸ್ತರಿಸಲು ಅವಕಾಶವಿದೆ. 

ಫೋನಿನ ಹಿಂಭಾಗದಲ್ಲಿ, 50-ಮೆಗಾಪಿಕ್ಸೆಲ್ ಪ್ರಾಥಮಿಕ ಸಂವೇದಕ-f/1.8 ಅಪಾರ್ಚರ್ ಹೊಂದಿದೆ. ಹಾಗೆಯೆ 2-ಮೆಗಾಪಿಕ್ಸೆಲ್ ಮ್ಯಾಕ್ರೋ ಕ್ಯಾಮೆರಾದೊಂದಿಗೆ f/2.4 ದ್ಯುತಿರಂಧ್ರ, ಸಿಂಗಲ್ ಎಲ್‌ಇಡಿ ಫ್ಲ್ಯಾಷ್‌ನೊಂದಿಗೆ ಡ್ಯುಯಲ್ ಕ್ಯಾಮೆರಾ ಸೆಟಪ್ ನೀಡಲಾಗಿದೆ. ಮುಂಭಾಗದಲ್ಲಿ, ಸೆಲ್ಫಿಗಳು ಮತ್ತು ವೀಡಿಯೊ ಚಾಟ್​ಗಳಿಗಾಗಿ 16-ಮೆಗಾಪಿಕ್ಸೆಲ್ ಕ್ಯಾಮೆರಾವನ್ನು ಅಳವಡಿಸಲಾಗಿದೆ.

ಮೋಟೋ ಜಿ45 5ಜಿಯಲ್ಲಿನ ಕನೆಕ್ಟಿವಿಟಿ ಆಯ್ಕೆಗಳಲ್ಲಿ ಬ್ಲೂಟೂತ್ 5.1, ವೈ-ಫೈ 802.11 a/b/g/n/ac, ಜಿಪಿಎಸ್, ಎ-ಜಿಪಿಎಸ್‌, ಗೆಲಿಲಿಯೋ, 3.5 ಎಂಎಂ ಆಡಿಯೋ ಜ್ಯಾಕ್ ಮತ್ತು ಯುಎಸ್‌ಬಿ ಟೈಪ್-ಸಿ ಸೇರಿವೆ. ಬಯೋಮೆಟ್ರಿಕ್ ದೃಢೀಕರಣಕ್ಕಾಗಿ ಫೋನ್ ಸೈಡ್-ಮೌಂಟೆಡ್ ಫಿಂಗರ್‌ಪ್ರಿಂಟ್ ಸಂವೇದಕ, ಫೇಸ್ ಅನ್‌ಲಾಕ್ ವೈಶಿಷ್ಟ್ಯವನ್ನು ಬೆಂಬಲಿಸುತ್ತದೆ. ಹಾಗೆಯೆ 20 ಡಬ್ಲ್ಯು ವೈರ್ಡ್ ಫಾಸ್ಟ್ ಚಾರ್ಜಿಂಗ್ ಬೆಂಬಲದೊಂದಿಗೆ 5,000 ಎಂಎಎಚ್‌ ಬ್ಯಾಟರಿಯಿಂದ ಬೆಂಬಲಿತವಾಗಿದೆ.

Whats_app_banner