ಸ್ಯಾಮ್‌ಸಂಗ್‌ ಗ್ಯಾಲಕ್ಸಿ ಟ್ಯಾಬ್‌ ಎಸ್‌10 ಅಲ್ಟ್ರಾ, ಎಸ್‌10 ಪ್ಲಸ್‌ ಬಿಡುಗಡೆ; ಫೀಚರ್ಸ್‌ ನೋಡಿ ಖುಷಿಪಡುವಿರಿ, ದರ ಕೇಳಿ ಬೆಚ್ಚಿಬೀಳದಿರಿ-technology news samsung galaxy tab s10 ultra tab s10 plus launched in india new ai features faster chipset pcp ,ಜೀವನಶೈಲಿ ಸುದ್ದಿ
ಕನ್ನಡ ಸುದ್ದಿ  /  ಜೀವನಶೈಲಿ  /  ಸ್ಯಾಮ್‌ಸಂಗ್‌ ಗ್ಯಾಲಕ್ಸಿ ಟ್ಯಾಬ್‌ ಎಸ್‌10 ಅಲ್ಟ್ರಾ, ಎಸ್‌10 ಪ್ಲಸ್‌ ಬಿಡುಗಡೆ; ಫೀಚರ್ಸ್‌ ನೋಡಿ ಖುಷಿಪಡುವಿರಿ, ದರ ಕೇಳಿ ಬೆಚ್ಚಿಬೀಳದಿರಿ

ಸ್ಯಾಮ್‌ಸಂಗ್‌ ಗ್ಯಾಲಕ್ಸಿ ಟ್ಯಾಬ್‌ ಎಸ್‌10 ಅಲ್ಟ್ರಾ, ಎಸ್‌10 ಪ್ಲಸ್‌ ಬಿಡುಗಡೆ; ಫೀಚರ್ಸ್‌ ನೋಡಿ ಖುಷಿಪಡುವಿರಿ, ದರ ಕೇಳಿ ಬೆಚ್ಚಿಬೀಳದಿರಿ

ಸ್ಯಾಮ್‌ಸಂಗ್‌ ಕಂಪನಿಯು ಗ್ಯಾಲಕ್ಸಿ ಟ್ಯಾಬ್‌ ಎಸ್‌10 ಅಲ್ಟ್ರಾ, ಟ್ಯಾಬ್‌ ಎಸ್‌10 ಪಸ್‌ ಎಂಬ ಎರಡು ಟ್ಯಾಬ್ಲೆಟ್‌ಗಳನ್ನು ಭಾರತದಲ್ಲಿ ಬಿಡುಗಡೆ ಮಾಡಿದೆ. ಈ ಹಿಂದಿನ ಟ್ಯಾಬ್‌ಗಳಿಗೆ ಹೋಲಿಸಿದರೆ ಇವುಗಳಲ್ಲಿ ವೇಗದ ಚಿಪ್‌ಸೆಟ್‌, ಎಐ ಫೀಚರ್‌ಗಳು ಸೇರಿದಂತೆ ಸಾಕಷ್ಟು ಹೊಸತನವಿದೆ.

ಸ್ಯಾಮ್‌ಸಂಗ್‌ ಕಂಪನಿಯು ಗ್ಯಾಲಕ್ಸಿ ಟ್ಯಾಬ್‌ ಎಸ್‌10 ಅಲ್ಟ್ರಾ, ಟ್ಯಾಬ್‌ ಎಸ್‌10 ಪ್ಲಸ್‌ ಎಂಬ ಎರಡು ಟ್ಯಾಬ್ಲೆಟ್‌ಗಳನ್ನು ಭಾರತದಲ್ಲಿ ಬಿಡುಗಡೆ ಮಾಡಿದೆ.
ಸ್ಯಾಮ್‌ಸಂಗ್‌ ಕಂಪನಿಯು ಗ್ಯಾಲಕ್ಸಿ ಟ್ಯಾಬ್‌ ಎಸ್‌10 ಅಲ್ಟ್ರಾ, ಟ್ಯಾಬ್‌ ಎಸ್‌10 ಪ್ಲಸ್‌ ಎಂಬ ಎರಡು ಟ್ಯಾಬ್ಲೆಟ್‌ಗಳನ್ನು ಭಾರತದಲ್ಲಿ ಬಿಡುಗಡೆ ಮಾಡಿದೆ. (Samsung)

ಬೆಂಗಳೂರು: ಸ್ಯಾಮ್‌ಸಂಗ್‌ ಕಂಪನಿಯು ಗ್ಯಾಲಕ್ಸಿ ಟ್ಯಾಬ್‌ ಎಸ್‌10 ಸರಣಿಯಲ್ಲಿ ಎರಡು ಹೊಸ ಟ್ಯಾಬ್‌ಗಳನ್ನು ಅನಾವರಣ ಮಾಡಿದೆ. ಗ್ಯಾಲಕ್ಸಿ ಟ್ಯಾಬ್‌ ಎಸ್‌10 ಅಲ್ಟ್ರಾ, ಟ್ಯಾಬ್‌ ಎಸ್‌10 ಪ್ಲಸ್‌ ಎಂಬ ಎರಡು ಟ್ಯಾಬ್ಲೆಟ್‌ಗಳನ್ನು ಭಾರತದಲ್ಲಿ ಬಿಡುಗಡೆ ಮಾಡಿದೆ. ಇವೆರಡು ಕ್ರಮವಾಗಿ 14.6-ಇಂಚಿನ ಮತ್ತು 12.4-ಇಂಚಿನ ಟ್ಯಾಬ್ಲೆಟ್‌ಗಳಾಗಿವೆ. ಇವು ಡೈನಾಮಿಕ್‌ ಅಮೊಲೆಡ್‌ 2ಎಕ್ಸ್‌ ಡಿಸ್‌ಪ್ಲೇ ಹೊಂದಿವೆ.  ಈ ಹಿಂದಿನ ಸ್ಯಾಮ್‌ಸಂಗ್‌ ಟ್ಯಾಬ್‌ಗಳಿಗೆ ಹೋಲಿಸಿದರೆ ಇವುಗಳ ಪರ್ಫಾಮೆನ್ಸ್‌ ಗಮನಾರ್ಹವಾಗಿ ಹೆಚ್ಚಾಗಿದೆ. ಅಂದರೆ, ಸಿಪಿಯು ಕಾರ್ಯಕ್ಷಮತೆ ಶೇಕಡ 18ರಷ್ಟು ಹೆಚ್ಚಾಗಿದೆ. ಎನ್‌ಪಿಯುನಲ್ಲಿ ಶೇಕಡ 14 ಮತ್ತು ಜಿಪಿಯು ಪವರ್‌ನಲ್ಲಿ ಶೇಕಡ 28ರಷ್ಟು ಸುಧಾರಣೆಯಾಗಿದೆ.

ದರ ಮತ್ತು ಇತರೆ ವಿವರ

ಸೆಲ್ಯುಲಾರ್ ಅಲ್ಲದ ಆವೃತ್ತಿಗಳ ದರ ಈ ಮುಂದಿನಂತೆ ಇದೆ. ಗ್ಯಾಲಕ್ಸಿ ಟ್ಯಾಬ್‌ ಎಸ್‌10 ಅಲ್ಟ್ರಾ 256GB+12GB ವರ್ಷನ್‌ ದರ 1,08,999 ರೂಪಾಯಿ ಇದೆ. 512GB+12GB ವರ್ಷನ್‌ ದರ 1,19,999 ರೂಪಾಯಿ ಇದೆ. ಇದೇ ರೀತಿ ಎಸ್‌10 ಪ್ಲಸ್‌ 256GB+12GB ಮಾದರಿ ದರ 90,999 ರೂಪಾಯಿ ಇದೆ. 5 ಜಿ ಸಂಪರ್ಕ ಇರುವ ಸೆಲ್ಯುಲಾರ್‌ ಮಾದರಿಗಳಿಗೆ ಟ್ಯಾಬ್‌ ಎಸ್‌10 ಅಲ್ಟ್ರಾ ಟ್ಯಾಬ್‌ನ ದರ 1,22,999 ಮತ್ತು 1,33,999 ರೂಪಾಯಿ ಇದೆ. ಇದೇ ಎಸ್‌10 ಪ್ಲಸ್‌ನ ಸೆಲ್ಯುಲಾರ್‌ ಆವೃತ್ತಿ ದರ 1,04,999 ರೂಪಾಯಿ ಇದೆ.

ಇವೆರಡು ಟ್ಯಾಬ್ಲೆಟ್‌ಗಳು ಎರಡು ಬಣ್ಣಗಳಲ್ಲಿ ಲಭ್ಯ ಇದೆ. ಮೂನ್‌ಸ್ಟೋನ್‌ ಗ್ರೇ ಮತ್ತು ಪ್ಲಾಟಿನಂ ಸಿಲ್ವರ್‌ ಬಣ್ಣಗಳಲ್ಲಿ ಲಭ್ಯ. ಗ್ಯಾಲಕ್ಸಿ ಟ್ಯಾಬ್‌ ಎಸ್‌10 ಅಲ್ಟ್ರಾ, ಟ್ಯಾಬ್‌ ಎಸ್‌10 ಪ್ಲಸ್‌ ಭಾರತದಲ್ಲಿ ಸೆಪ್ಟೆಂಬರ್‌ 27ರಿಂದ ಮಾರಾಟವಾಗುತ್ತಿದೆ.

ಸ್ಪೆಸಿಫಿಕೇಷನ್‌ ಮಾಹಿತಿ

ಗ್ಯಾಲಕ್ಸಿ ಟ್ಯಾಬ್‌ ಎಸ್‌10 ಅಲ್ಟ್ರಾ, ಟ್ಯಾಬ್‌ ಎಸ್‌10 ಪ್ಲಸ್‌ಗಳು ಮೀಡಿಯಾಟೆಕ್‌ ಡೈಮೆನ್ಸಿಟಿ 9300+ ಚಿಪ್‌ಸೆಟ್‌ ಹೊಂದಿವೆ. ಇವು 12 ಜಿಬಿ ರಾಮ್‌ ಹೊಂದಿವೆ. ಎರಡೂ ಟ್ಯಾಬ್ಲೆಟ್‌ಗಳು ಆಂಡ್ರಾಯ್ಡ್‌ 14 ಆಪರೇಟಿಂಗ್‌ ಸಿಸ್ಟಮ್‌ ಹೊಂದಿವೆ. ಇವೆರಡು ಟ್ಯಾಬ್‌ಗಳಲ್ಲಿ ಎಐ ಫೀಚರ್‌ ಅಳವಡಿಸಲಾಗಿದೆ. ಎರಡರಲ್ಲೂ ಉತ್ತಮ ಸಾಮರ್ಥ್ಯದ ಬ್ಯಾಟರಿಗಳಿವೆ. ಅಂದರೆ, ಟ್ಯಾಬ್ S10 ಅಲ್ಟ್ರಾ 12,000mAh ಬ್ಯಾಟರಿ ಹೊಂದಿದೆ. ಎಸ್‌10+ 10,090mAh ಬ್ಯಾಟರಿ ಹೊಂದಿದೆ.

ಇದೇ ರೀತಿ ಡಿಸ್‌ಪ್ಲೇ ಹೇಗಿದೆ ಎಂಬ ವಿವರ ಪಡೆಯೋಣ. ಟ್ಯಾಬ್ S10 ಅಲ್ಟ್ರಾ 14.6-ಇಂಚಿನ ಡೈನಾಮಿಕ್ ಅಮೊಲೆಡ್‌ 2ಎಕ್ಸ್‌ ಪ್ಯಾನೆಲ್‌ ಹೊಂದಿದೆ. ಟ್ಯಾಬ್ S10+ 12.4-ಇಂಚಿನ ಡಿಸ್ಪ್ಲೇ ಹೊಂದಿದೆ. ಇವೆರಡರ ರಿಫ್ರೆಶ್ ದರ 120Hz ಇದೆ. ಈ ಡಿಸ್‌ಪ್ಲೇಗಳಲ್ಲಿ ಹೊರಗಿನ ಬೆಳಕು ಪ್ರತಿಫಲಿಸುವುದಿಲ್ಲ. ಇಷ್ಟು ಮಾತ್ರವಲ್ಲದೆ ಈ ಎರಡು ಟ್ಯಾಬ್‌ಗಳು ಎಸ್‌ ಪೆನ್‌ ಹೊಂದಿವೆ. ಬ್ಲೂಟೂಥ್‌ ಲೋ ಎನರ್ಜಿ ಬಳಸಿ ಕಾರ್ಯನಿರ್ವಹಿಸುತ್ತದೆ.

ಕ್ಯಾಮೆರಾವೂ ಉತ್ತಮವಾಗಿದೆ. ಇವೆರಡು ಟ್ಯಾಬ್‌ಗಳಲ್ಲಿ 13 ಮೆಗಾಫಿಕ್ಸೆಲ್‌ನ ಮುಖ್ಯ ಕ್ಯಾಮೆರಾ ಮತ್ತು 8 ಮೆಗಾ ಫಿಕ್ಸೆಲ್‌ನ ಆಲ್ಟ್ರಾ ವೈಡ್‌ ಶೂಟರ್‌ ಕ್ಯಾಮೆರಾ ಇದೆ. ಮುಂಭಾಗದಲ್ಲಿ ಎಸ್‌10 ಆಲ್ಟ್ರಾದಲ್ಲಿ 12 ಮೆಗಾಫಿಕ್ಸೆಲ್‌ ಡ್ಯೂಯೆಲ್‌ ಕ್ಯಾಮೆರಾ ಸೆಟಪ್‌ ಹೊಂದಿದೆ. ಎಸ್‌10 ಪ್ಲಸ್‌ನಲ್ಲಿ 12 ಮೆಗಾ ಫಿಕ್ಸೆಲ್‌ನ ಸಿಂಗಲ್‌ ಕ್ಯಾಮೆರಾ ಸೆಟಪ್‌ ಇದೆ.

ಹೆಚ್ಚುವರಿಯಾಗಿ ಈ ಟ್ಯಾಬ್‌ಗಳಲ್ಲಿ IP68 ಧೂಳು ಮತ್ತು ನೀರು ನಿರೋಧಕ ಫೀಚರ್‌ಗಳಿವೆ. ಇನ್‌ ಡಿಸ್‌ಪ್ಲೇ ಫಿಂಗರ್‌ ಪ್ರಿಂಟ್‌ ಸೆನ್ಸಾರ್‌ ಇದೆ. ಕ್ರಿಯಾಶೀಲರಿಗೆ ಅನುಕೂಲವಾಗುವಂತೆ ಈ ಟ್ಯಾಬ್ಲೆಟ್‌ಗಳಲ್ಲಿ ಸ್ಕೆಚ್‌ ಮಾಡಲು ಇಮೇಜ್‌ ಟೂಲ್‌ ಇದೆ. ಚಿತ್ರಗಳು, ವಿಡಿಯೋಗಳಿಂದ ಅಕ್ಷರ ಪಡೆಯಲು, ಅನುವಾದ ಮಾಡಲು ಎಐ ಫೀಚರ್‌ಗಳು ಇವೆ. ಬಿಕ್ಸ್‌ಬೈ, ಗೂಗಲ್‌ ಜೆಮಿನಿಯಂತಹ ಎಐ ಅಸಿಸ್ಟೆಂಟ್‌ಗಳು ಇವೆ.

mysore-dasara_Entry_Point