ಕನ್ನಡ ಸುದ್ದಿ  /  Lifestyle  /  Technology News Say Goog Bye To Emoji Google Is Working For Introduce Audio Emoji To Calls And Chats Rmy

ಎಮೋಜಿಗಳಿಗೆ ಹೇಳಿ ಗುಡ್‌ ಬೈ; ಫೋನ್ ಕರೆಗಳು, ಸಂಭಾಷಣೆಗೆ ಆಡಿಯೊಎಮೋಜಿ ತರಲು ಗೂಗಲ್ ಸಿದ್ಧತೆ ಆರಂಭ

Audio Emoji For Phone: ಒಂದೇ ರೀತಿಯ ಎಮೋಜಿಗಳನ್ನು ಶೇರ್ ಮಾಡಿ ಬೇಜಾರಾಗಿದ್ದೀರಾ? ನಿಮಗಾಗಿ ಗೂಗಲ್ ತಂತ್ರಜ್ಞಾನವನ್ನ ಬಳಸಿ ಆಡಿಯೊಎಮೋಜಿ ಪರಿಚಯಿಸಲು ಮುಂದಾಗಿದೆ. ಫೋನ್ ಕರೆಗೊ ಈ ಆಡಿಯೊಎಮೋಜಿ ಬಳಸಹುದು.

ಮೊಬೈಲ್‌ ಫೋನ್‌ಗಳಲ್ಲಿ ಆಡಿಯೊಎಮೋಜಿಗಳನ್ನು ಪರಿಚಯಿಸಲು ಗೂಗಲ್ ಮುಂದಾಗಿದ್ದು, ಇದಕ್ಕಾಗಿ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದೆ.
ಮೊಬೈಲ್‌ ಫೋನ್‌ಗಳಲ್ಲಿ ಆಡಿಯೊಎಮೋಜಿಗಳನ್ನು ಪರಿಚಯಿಸಲು ಗೂಗಲ್ ಮುಂದಾಗಿದ್ದು, ಇದಕ್ಕಾಗಿ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದೆ.

Audio Emoji For Phone: ಗ್ರಾಹಕರ ಅಭಿರುಚಿಗೆ ತಕ್ಕಂತೆ ಹೊಸ ಹೊಸ ತಂತ್ರಜ್ಞಾನ, ಅಪ್ಡೇಟ್‌ಗಳನ್ನು ನೀಡುವ ಗೂಗಲ್ ಸಂಸ್ಥೆ ಇದೀಗ ಮೊಬೈಲ್ ಫೋನ್ ಆ್ಯಪ್‌ಗಳಿಗೆ ಧ್ವನಿ ಆಧಾರಿತ ಎಮೋಜಿ ಹಾಗೂ ಅನಿಮೇಷನ್‌ಗಳನ್ನು ತರಲು ಹೊರಟಿದೆ ಎಂದು ವರದಿಯಾಗಿದೆ. ಈ ಆಡಿಯೊಎಮೋಜಿಗಳನ್ನು ಫೋನ್ ಕರೆಗಳು ಹಾಗೂ ಚಾಟಿಂಗ್‌ಗೆ ಬಳಸಿಕೊಳ್ಳಬಹುದು.

ಆಡಿಯೊಎಮೋಜಿ ವೈಶಿಷ್ಟ್ಯವೆಂದರೆ ಫೋನ್ ಕರೆಯ ಸಮಯದಲ್ಲಿ ಆರು ಧ್ವನಿಗಳಲ್ಲಿ ಯಾವುದಾದರೂ ಒಂದನ್ನು ಪ್ಲೇ ಮಾಡುವ ಆಯ್ಕೆಯನ್ನು ಬಳಕೆದಾರರಿಗೆ ನೀಡುತ್ತಿದೆ. ದುಃಖ, ಚಪ್ಪಾಳೆ, ಸಂಭ್ರಮ, ನಗು, ಡ್ರಮ್ ರೋಲ್ ಹಾಗೂ ಪೂಪ್ ಇವುಗಳನ್ನು ಒಂದನ್ನು ಆಯ್ಕೆ ಮಾಡಿಕೊಳ್ಳಬಹುದು. 2023ರ ಸೆಪ್ಟೆಂಬರ್‌ನಿಂದಲೇ ಆಡಿಯೊಎಮೋಜಿಗಳ ಕೆಲಸ ಆರಂಭವಾಗಿರುವ ಬಗ್ಗೆ ಸುದ್ದಿಯಾಗಿತ್ತು. ಧ್ವನಿ ಪ್ರತಿಕ್ರಿಯೆಗಳು ಎಂಬ ಹೆಸರಿನಲ್ಲಿ ಇದನ್ನು ಅಭಿವೃದ್ಧಿಪಡಿಸಲಾಗುತ್ತಿದೆ.

ಮೊಬೈಲ್ ಫೋನ್‌ಗಳಲ್ಲಿ ಆಡಿಯೊಎಮೋಜಿಗಳನ್ನು ಹೇಗೆ ಸಕ್ರಿಯಗೊಳಿಸಲಾಗುತ್ತದೆ ಅನ್ನೋದು ಇನ್ನೂ ಸ್ಪಷ್ಟವಾಗಿಲ್ಲ. ಅಪ್ಲಿಕೇಶನ್‌ನ ಕಾಲ್ ಸ್ಕ್ರೀನ್‌ನ ಈ ಆಡಿಯೊಎಮೋಜಿಗಳು ಬರುವಂತೆ ಮಾಡಬಹುದು. ಫೋನ್ ಕರೆಯ ವೇಳೆ ಬರುವ ಆಡಿಯೊಎಮೋಜಿಗಳು ಎರಡೂ ಕಡೆಯವರೆಗೆ ಕೇಳಿಸುತ್ತದೆಯೇ ಅನ್ನೋದು ಸ್ಪಷ್ಟವಾಗಿಲ್ಲ.

ಜಗತ್ತಿ ದೈತ್ಯ ಸರ್ಚ್ ಇಂಜಿನ್ ಗೂಗಲ್ ಸಂಸ್ಥೆ ಆಡಿಯೊಎಮೋಜಿ ಬಗ್ಗೆ ಅಧಿಕೃತವಾಗಿ ಘೋಷಣೆ ಮಾಡಿಲ್ಲ ಹೀಗಾಗಿ ಯಾವ ವೈಶಿಷ್ಯಗಳು ಆಡಿಯೊಎಮೋಜಿನಲ್ಲಿ ಎಂಬುದು ಸೇರಿದಂತೆ ಯಾವುದೇ ಗ್ಯಾರಂಟಿ ಇಲ್ಲ. ಆದರೆ ಇದೊಂದು ಪ್ರಕ್ರಿಯೆಯನ್ನು ಆರಂಭಿಸಿದೆ ಎಂಬ ಮಾತುಗಳು ಟೆಕ್ ವಲಯದಲ್ಲಿ ಕೇಳಿ ಬರುತ್ತಿವೆ.

ಸದ್ಯದ ಮಟ್ಟಿಗಂತೂ ವಾಟ್ಸಪ್, ಫೇಸ್‌ಬುಕ್, ಶೇರ್‌ಚಾಟ್, ಮೆಸೆಂಜರ್, ಎಕ್ಸ್‌, ಇನ್‌ಸ್ಟಾ ಸೇರಿದಂತೆ ಯಾವುದೇ ಸಾಮಾಜಿಕ ಜಾಲಾತಣಗಳಲ್ಲಿ ಸಂದೇಶ ಕಳುಹಿಸಬೇಕಾದರೂ ಅದರೊಂದಿಗೆ ಎಮೋಜಿಗಳನ್ನು ಬಳಸುವುದು ಸಾಮಾನ್ಯವಾಗಿದೆ. ನಗು ಮುಖದ ಎಮೋಜಿಗಳು, ಥಂಬ್ಸ್, ದುಃಖ, ನಗು, ಹಾರ್ಟ್, ಆಹಾರದಂತ ಎಮೋಜಿಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹೆಚ್ಚಾಗಿ ಬಳಸಲಾಗುತ್ತಿದೆ. ಅಕ್ಷರ ರೂಪಾದಲ್ಲಿ ಹೇಳುವಂತ ಸಂದೇಶಗಳನ್ನು ಈ ಎಮೋಜಿಗಳ ಮೂಲಕವೇ ಕಳುಹಿಸಬಹುದು. ಬಣ್ಣಗಳು, ರಾಷ್ಟ್ರ ಧ್ವಜಗಳು, ನಗರ, ಪ್ರಾಣಿ, ಪಕ್ಷಿಗಳು, ಹೂ, ಹಣ್ಣುಗಳು, ತರಕಾರಿ, ವಾಹನಗಳು, ಕೃಷಿ, ವಿಜ್ಞಾನ ಹಾಗೂ ಕ್ರೀಡೆಗೆ ಸಂಬಂಧಿಸಿದಂತೆ ಎಲ್ಲಾ ಕ್ಷೇತ್ರಗಳಲ್ಲಿ ಬಳಸಬಹುದಾದ ಸಾವಿರಾರು ಎಮೋಜಿಗಳು ಲಭ್ಯ ಇವೆ.

(This copy first appeared in Hindustan Times Kannada website. To read more like this please logon to kannada.hindustantimes.com )

ವಿಭಾಗ