UPI ಮಾರುಕಟ್ಟೆಗೆ ಪ್ರವೇಶಿಸುತ್ತಿದೆ ಪ್ರಖ್ಯಾತ ಆನ್ಲೈನ್ ಆಹಾರ ವಿತರಣಾ ಸಂಸ್ಥೆ ಸ್ವಿಗ್ಗಿ: ಇನ್ಮುಂದೆ ನೀವು ಈ ರೀತಿ ಪ್ರಯೋಜನ ಪಡೆಯುವಿರಿ
ಕನ್ನಡ ಸುದ್ದಿ  /  ಜೀವನಶೈಲಿ  /  Upi ಮಾರುಕಟ್ಟೆಗೆ ಪ್ರವೇಶಿಸುತ್ತಿದೆ ಪ್ರಖ್ಯಾತ ಆನ್ಲೈನ್ ಆಹಾರ ವಿತರಣಾ ಸಂಸ್ಥೆ ಸ್ವಿಗ್ಗಿ: ಇನ್ಮುಂದೆ ನೀವು ಈ ರೀತಿ ಪ್ರಯೋಜನ ಪಡೆಯುವಿರಿ

UPI ಮಾರುಕಟ್ಟೆಗೆ ಪ್ರವೇಶಿಸುತ್ತಿದೆ ಪ್ರಖ್ಯಾತ ಆನ್ಲೈನ್ ಆಹಾರ ವಿತರಣಾ ಸಂಸ್ಥೆ ಸ್ವಿಗ್ಗಿ: ಇನ್ಮುಂದೆ ನೀವು ಈ ರೀತಿ ಪ್ರಯೋಜನ ಪಡೆಯುವಿರಿ

ಸ್ವಿಗ್ಗಿ ನೀಡಿರುವ ಈ ಆಯ್ಕೆಯು ವಹಿವಾಟಿನ ಸಮಯವನ್ನು ಕಡಿಮೆ ಮಾಡಲು ಮತ್ತು ದಕ್ಷತೆಯನ್ನು ಹೆಚ್ಚಿಸಲು ವಿನ್ಯಾಸಗೊಳಿಸಲಾಗಿದೆ.ಸ್ವಿಗ್ಗಿ ಯುಪಿಐ ವಹಿವಾಟಿನ ಸಮಯವನ್ನು15 ಸೆಕೆಂಡುಗಳಿಂದ ಕೇವಲ5 ಸೆಕೆಂಡುಗಳಿಗೆ ಕಡಿಮೆ ಮಾಡುತ್ತದೆ. (ಬರಹ:ವಿನಯ್ ಭಟ್)

ಪ್ರಸಿದ್ಧ ಫುಡ್ ಡೆಲಿವರಿ ಕಂಪನಿ ಸ್ವಿಗ್ಗಿ ತನ್ನ ಆ್ಯಪ್ನಲ್ಲಿ ಯುಪಿಐ ಸೇವೆಯನ್ನು ಪ್ರಾರಂಭಿಸುವುದಾಗಿ ಘೋಷಿಸಿದೆ.
ಪ್ರಸಿದ್ಧ ಫುಡ್ ಡೆಲಿವರಿ ಕಂಪನಿ ಸ್ವಿಗ್ಗಿ ತನ್ನ ಆ್ಯಪ್ನಲ್ಲಿ ಯುಪಿಐ ಸೇವೆಯನ್ನು ಪ್ರಾರಂಭಿಸುವುದಾಗಿ ಘೋಷಿಸಿದೆ.

ಪ್ರಸಿದ್ಧ ಫುಡ್ ಡೆಲಿವರಿ ಕಂಪನಿ ಸ್ವಿಗ್ಗಿ ತನ್ನ ಆ್ಯಪ್​ನಲ್ಲಿ ಯುಪಿಐ ಸೇವೆಯನ್ನು ಪ್ರಾರಂಭಿಸುವುದಾಗಿ ಘೋಷಿಸಿದೆ. ಗ್ರಾಹಕರಿಗೆ ಸುಲಭ ಮತ್ತಮ ಉತ್ತಮ ಪಾವತಿ ಅನುಭವವನ್ನು ಒದಗಿಸಲು ಕಂಪನಿಯು ನ್ಯಾಷನಲ್ ಪೇಮೆಂಟ್ಸ್ ಕಾರ್ಪೊರೇಷನ್ ಆಫ್ ಇಂಡಿಯಾದ (NPCI) ಯುಪಿಐ ಜೊತೆ ಟೈ-ಅಪ್ ಮಾಡಿಕೊಂಡಿದೆ. ಈ ಮೂಲಕ ಬಳಕೆದಾರರು ಸ್ವಿಗ್ಗಿ ಅಪ್ಲಿಕೇಶನ್​ನಿಂದ ಹೊರಬರದೆಯೇ ಹಣ ಪಾವತಿಯನ್ನು ಪೂರ್ಣಗೊಳಿಸಬಹುದು. ಇದು ಪಾವತಿ ಪ್ರಕ್ರಿಯೆಯನ್ನು ಸುಲಭಗೊಳಿಸಿದೆ. ಇದಕ್ಕಾಗಿ, ಬಳಕೆದಾರರು ಈಗ ಐದು ಹಂತಗಳ ಬದಲಿಗೆ ಕೇವಲ ಒಂದು ಹಂತವನ್ನು ಮುಗಿಸಿದರೆ ಸಾಕು.

ಜುಸ್ಪೇಯ ಹೈಪರ್ ಯುಪಿಐ ಪ್ಲಗಿನ್‌ನಿಂದ ನಡೆಸಲ್ಪಡುವ ಈ ಹೊಸ ವೈಶಿಷ್ಟ್ಯವು ಥರ್ಡ್ ಪಾರ್ಟಿ ಯುಪಿಐ ಅಪ್ಲಿಕೇಶನ್‌ಗಳಿಗೆ ಹೋಗುವ ಅಗತ್ಯವನ್ನು ನಿವಾರಿಸುತ್ತದೆ. ಇದು ಬಳಕೆದಾರರಿಗೆ ಪಾವತಿಯ ಅನುಭವವನ್ನು ಸಂಪೂರ್ಣವಾಗಿ ಸುಲಭಗೊಳಿಸುತ್ತದೆ.

ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಏಪ್ರಿಲ್ 2024 ರಲ್ಲಿ ಭಾರತವು ಸುಮಾರು 131 ಬಿಲಿಯನ್ ಯುಪಿಐ ವಹಿವಾಟುಗಳನ್ನು ದಾಖಲಿಸಿದೆ ಎಂದು ಹೇಳಿದ್ದರು. ಯುಪಿಐಯ ಜನಪ್ರಿಯತೆಯು ಬೆಳೆಯುತ್ತಲೇ ಇರುವುದರಿಂದ, ರಾಷ್ಟ್ರೀಯ ಪಾವತಿಗಳ ನಿಗಮವು (NPCI) UPI ಸೇವೆಗಳನ್ನು ಸಂಯೋಜಿಸಲು ಹೆಚ್ಚು ಹೆಚ್ಚು ಘಟಕಗಳನ್ನು ಪ್ರೋತ್ಸಾಹಿಸುತ್ತಿದೆ.

ಸ್ವಿಗ್ಗಿ ನೀಡಿರುವ ಈ ಆಯ್ಕೆಯು ವಹಿವಾಟಿನ ಸಮಯವನ್ನು ಕಡಿಮೆ ಮಾಡಲು ಮತ್ತು ದಕ್ಷತೆಯನ್ನು ಹೆಚ್ಚಿಸಲು ವಿನ್ಯಾಸಗೊಳಿಸಲಾಗಿದೆ. ಸ್ವಿಗ್ಗಿ ಯುಪಿಐ ವಹಿವಾಟಿನ ಸಮಯವನ್ನು 15 ಸೆಕೆಂಡುಗಳಿಂದ ಕೇವಲ 5 ಸೆಕೆಂಡುಗಳಿಗೆ ಕಡಿಮೆ ಮಾಡುತ್ತದೆ.

‘ನಮ್ಮ ಗ್ರಾಹಕರಿಗೆ ಯುಪಿಐ ಸೇವೆಯನ್ನು ಪರಿಚಯಿಸಲು ನಾವು ತುಂಬಾ ಸಂತೋಷಪಡುತ್ತೇವೆ. UPI ಅತ್ಯಂತ ಆದ್ಯತೆಯ ಪಾವತಿ ಆಯ್ಕೆಗಳಲ್ಲಿ ಒಂದಾಗಿದೆ. ಇಂತಹ ಪರಿಸ್ಥಿತಿಯಲ್ಲಿ ಈ ಆಯ್ಕೆಯು ಗ್ರಾಹಕರಿಗೆ ಉತ್ತಮ ಸೌಲಭ್ಯಗಳನ್ನು ಒದಗಿಸುವ ಸ್ವಿಗ್ಗಿಯ ಧ್ಯೇಯಕ್ಕೆ ಅನುಗುಣವಾಗಿದೆ. ವ್ಯವಹಾರಗಳನ್ನು ಸರಳಗೊಳಿಸುವ ಮೂಲಕ ಈ ವೈಶಿಷ್ಟ್ಯವು ಸ್ವಿಗ್ಗಿನಲ್ಲಿ ಗ್ರಾಹಕರ ಅನುಭವವನ್ನು ಹೆಚ್ಚಿಸುತ್ತದೆ ಎಂದು ನಾವು ನಂಬುತ್ತೇವೆ’ ಎಂದು ಸ್ವಿಗ್ಗಿಯ ಆದಾಯ ಮತ್ತು ಡೆವಲಂಪ್ಮೆಂಟ್ ಮುಖ್ಯಸ್ಥ ಅನುರಾಗ್ ಪಂಗನಾಮಮೂಲ ಅವರು ಹೇಳಿದ್ದಾರೆ.

ಸ್ವಿಗ್ಗಿ ಯುಪಿಐ ಬಳಕೆ ಹೇಗೆ?

ಸ್ವಿಗ್ಗಿ ಅಪ್ಲಿಕೇಶನ್‌ನ ಪಾವತಿ ಪೇಜ್​ಗೆ ಭೇಟಿ ನೀಡುವ ಮೂಲಕ ಈ ಪ್ರಕ್ರಿಯೆಯನ್ನು ಪೂರ್ಣ ಮಾಡಬಹುದು. ಇಲ್ಲಿ ಸ್ವಿಗ್ಗಿ ಯುಪಿಐ ಅನ್ನು ಆಯ್ಕೆ ಮಾಡುವ ಮೂಲಕ ಗ್ರಾಹಕರು ತಮ್ಮ ಬ್ಯಾಂಕ್ ಖಾತೆಯನ್ನು ಲಿಂಕ್ ಮಾಡಬೇಕು. ಬಳಿಕ ಒಂದು-ಬಾರಿಯ ಸೆಟಪ್ ಪ್ರಕ್ರಿಯೆಯನ್ನು ಪೂರ್ಣಗೊಳಿಸಬಹುದು. ಈ ಸೆಟಪ್ ನಂತರ ಪ್ರತಿ ವಹಿವಾಟಿಗೆ, ಅವರು ತಮ್ಮ ಯುಪಿಐ ಪಿನ್ ಅನ್ನು ಮಾತ್ರ ನಮೂದಿಸಬೇಕಾಗುತ್ತದೆ.

Whats_app_banner