ಕನ್ನಡ ಸುದ್ದಿ  /  Lifestyle  /  Technology News Tech Tips Air Cooler Buying Guide How To Select The Best Cooler For Home Air Cooler Guidelines Rst

Air Cooler: ಬಿಸಿಲ ಬೇಗೆ ತಡೀತಾ ಇಲ್ವ? ಮನೆಗೆ ಏರ್‌ಕೂಲರ್‌ ಹಾಕಿ ತಣ್ಣಗಿರಿ, ಇಲ್ಲಿದೆ ಏರ್‌ ಕೂಲರ್‌ ಖರೀದಿ ಟಿಪ್ಸ್‌

ಬೇಸಿಗೆಯ ದಾಹ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಈ ಸಮಯದಲ್ಲಿ ಫ್ಯಾನ್‌, ಏಸಿ, ಏರ್‌ ಕೂಲರ್‌ಗಳ ಖರೀದಿಗೆ ಜನ ಮನಸ್ಸು ಮಾಡುವುದು ಸಹಜ. ನೀವು ಮನೆಗೆ ಬೆಸ್ಟ್‌ ಏರ್‌ ಕೂಲರ್‌ ಖರೀದಿ ಮಾಡಬೇಕು ಅಂತಿದ್ರೆ ನಿಮಗಾಗಿ ಇಲ್ಲಿದೆ ಬೆಸ್ಟ್‌ ಗೈಡ್‌ಲೈನ್ಸ್‌. ಇದು ಕಡಿಮೆ ಬಜೆಟ್‌ ಜೊತೆಗೆ ವಿದ್ಯುತ್‌ ಉಳಿತಾಯಕ್ಕೂ ನೆರವಾಗುವ ಟಿಪ್ಸ್‌.

 ಮನೆಗೆ ಏರ್‌ಕೂಲರ್‌ ಹಾಕಿ ತಣ್ಣಗಿರಿ, ಇಲ್ಲಿದೆ ಏರ್‌ ಕೂಲರ್‌ ಖರೀದಿ ಟಿಪ್ಸ್‌
ಮನೆಗೆ ಏರ್‌ಕೂಲರ್‌ ಹಾಕಿ ತಣ್ಣಗಿರಿ, ಇಲ್ಲಿದೆ ಏರ್‌ ಕೂಲರ್‌ ಖರೀದಿ ಟಿಪ್ಸ್‌

ಭಾರತದಲ್ಲಿ ವರ್ಷದಿಂದ ವರ್ಷಕ್ಕೆ ಬಿಸಿಲಿನ ತಾಪ ಜೋರಾಗುತ್ತಿದೆ. ಹಿಂದಿನ ವರ್ಷಕ್ಕಿಂತ ಈ ವರ್ಷ ಬಿಸಿಲು ಜೋರಾಗಿದೆ. ಮನೆ, ಕಚೇರಿಗಳಲ್ಲಿ ಬಿಸಿಲಿನ ದಾಹ ತಣಿಸಲು ಜನರು ಫ್ಯಾನ್‌, ಏಸಿ, ಕೂಲರ್‌ನಂತಹ ಎಲೆಕ್ಟ್ರಾನಿಕ್‌ ಉಪಕರಣಗಳ ಖರೀದಿಗೆ ಮನಸ್ಸು ಮಾಡುವುದು ಸಹಜ. ಇತ್ತೀಚಿನ ದಿನಗಳಲ್ಲಿ ಕೂಲರ್‌ ಖರೀದಿ ಜನರು ಹೆಚ್ಚು ಮನಸ್ಸು ಮಾಡುತ್ತಿದ್ದಾರೆ. ಇದು ಎಲ್ಲ ವರ್ಗದವರಿಗೂ ದಕ್ಕುವ ಬೆಲೆ ಹೊಂದಿದ್ದು, ಹೊರಾಂಗಣ ಹಾಗೂ ಒಳಾಂಗಣ ಬಳಕೆಗೂ ಯೋಗ್ಯವಾಗಿದೆ. ಇದರ ನಿರ್ವಹಣೆಯೂ ಸುಲಭ. ಇದು ತಾಜಾ ಗಾಳಿಯನ್ನು ಹೊರ ಸೂಸುತ್ತದೆ. ನೀರಿನ ಮೇಲೆ ಕಾರ್ಯನಿರ್ವಹಿಸುವ ಉಪಕರಣ ಇದಾಗಿದೆ. ಇದು ಪರಿಸರ ಸ್ನೇಹಿ ಕೂಡ ಹೌದು. ನಿಮ್ಮ ಮನೆ ಬಳಕೆಗೆ ಏರ್‌ ಕೂಲರ್‌ ಖರೀದಿಸುವ ಯೋಜನೆ ಇದ್ದರೆ, ಇದರ ವೈಶಿಷ್ಟ್ಯ, ಬೆಲೆ, ಸಾಮರ್ಥ್ಯ, ಕೂಲಿಂಗ್‌ ಪ್ರದೇಶ ಈ ಎಲ್ಲವನ್ನೂ ವಿವರಿಸುವ ಮಾರ್ಗದರ್ಶಿ ಇಲ್ಲಿದೆ.

ಏರ್‌ ಕೂಲರ್‌ ಖರೀದಿಗೆ ಅತ್ಯುತ್ತಮ ಎನ್ನಿಸುವ ಹಾಗೂ ಕೊಂಚ ದುಬಾರಿ ಎನ್ನಿಸುವ ಏರ್‌ಕೂಲರ್‌ಗಳ ಪಟ್ಟಿ ಇಲ್ಲಿದೆ. ಇದು ಮನೆ ಹಾಗೂ ಕೆಲಸ ಸ್ಥಳಗಳಿಗೆ ಅಗತ್ಯವಾಗಿದೆ. ಇವುಗಳಲ್ಲಿ ನಿಮಗೆ ಬೆಸ್ಟ್‌ ಎನ್ನಿಸಿದ್ದನ್ನು ನೀವು ಆಯ್ಕೆ ಮಾಡಬಹುದು.

* ಬಜಾಜ್‌ ಪಿಎಂಚ್‌ 25 ಡಿಎಲ್‌ಎಕ್ಸ್‌ ಪರ್ಸನಲ್‌ ಏರ್‌ಕೂಲರ್‌ ಫಾರ್‌ ಹೋಮ್‌: 4,659 ರೂ.

ಹಾವೆಲ್ಸ್‌ ಅಲ್ಟಿಮಾ ಡೆಸರ್ಟ್‌ ಏರ್‌ ಕೂಲರ್‌: 9,998 ರೂ.

* ಸಿಂಫೋನಿ ಟಚ್‌ 55 ಪರ್ಸನಲ್‌ ಏರ್‌ ಕೂಲರ್‌ ಫಾರ್‌ ಹೋಮ್‌: 12,190 ರೂ.

* ಸಿಂಫೋನಿ ಐಸ್‌ಕ್ಯೂಬ್‌ 27 ಪರ್ಸನಲ್‌ ಏರ್‌ ಕೂಲರ್‌ ಫಾರ್‌ ಹೋಮ್‌: 5,899 ರೂ.

* ಲೈಫ್‌ಲಾಂಗ್‌ ಎಲ್‌ಎಲ್‌ಎಸಿ965 ಏರ್‌ ಕೂಲರ್‌ 45% ಆಫ್‌: 6,099 ರೂ.

* ಸಿಂಫೋನಿ ಡಿಯೆಟ್‌ 3ಡಿ 55i + ಟವರ್‌ ಏರ್‌ ಕೂಲರ್‌ ಫಾರ್‌ ಹೋಮ್‌: 11,490 ರೂ.

ಬಜಾಜ್‌ ಪಿಎಕ್ಸ್‌ 97 36ಎಲ್‌ ಏರ್‌ ಕೂಲರ್‌ ಫಾರ್‌ ಹೋಮ್‌: 5,779 ರೂ.

ಕ್ರಾಂಪಟನ್‌ ಓಝೋನ್‌ ಡೆಸರ್ಟ್‌ ಏರ್‌ ಕೂಲರ್‌ - 75ಎಲ್‌: 9,999 ರೂ.

ಸಿಂಫೋನಿ ಡಯೆಟ್‌ 12T ಟವರ್‌ ಏರ್‌ ಕೂಲರ್‌ ಫಾರ್‌ ಹೋಮ್‌: 5,899 ರೂ.

ಕ್ರಾಂಪಟನ್‌ ಆಪ್ಟಿಮನ್‌ 100 ಲೀಟರ್‌: 13,419 ರೂ.

ಏರ್‌ ಕೂಲರ್‌ ಖರೀದಿಗೂ ಮುನ್ನ ಈ ಅಂಶ ಗಮನದಲ್ಲಿರಲಿ: ಮನೆಗೆ ಏರ್‌ ಕೂಲರ್‌ ಖರೀದಿ ಮಾಡುವ ಮುನ್ನ ಈ ಅಂಶಗಳನ್ನು ಮರೆಯದೇ ಗಮನಿಸಬೇಕು. ಇದು ನಿಮ್ಮ ಬಜೆಟ್‌ ಉಳಿಸಲು ಕೂಡ ಸಹಕಾರಿ.

* ಯಾವ ರೀತಿಯ ಕೂಲರ್‌

* ಕೂಲಿಂಗ್‌ ಪ್ಯಾಡ್‌ ಯಾವ ವಿಧದ್ದು

* ವಿನ್ಯಾಸ

* ಇನ್ವರ್ಟರ್‌ನಲ್ಲಿ ಚಾಲು ಆಗುವಂಥದ್ದು 

* ರಿಮೋಟ್‌ ಕಂಟ್ರೋಲ್‌ ಆಯ್ಕೆ

* ಸೊಳ್ಳೆ ವಿರೋಧಿ ವೈಶಿಷ್ಟ್ಯ

* ಡಸ್ಟ್‌ ಫಿಲ್ಟರ್‌

* ಐಸ್‌ ಛೇಂಬರ್‌

* ಶಬ್ದ ಮಟ್ಟ

* ಆಟೊ ಫಿಲ್ಲಿಂಗ್‌

* ವಿದ್ಯುತ್‌ ಬಳಕೆಯ ಸಾಮರ್ಥ್ಯ

ಏರ್‌ಕೂಲರ್‌
ಏರ್‌ಕೂಲರ್‌

ಕೂಲರ್‌ ವಿಧಗಳು

ಮಾರುಕಟ್ಟೆಯಲ್ಲಿ 4 ವಿಧದ ಏರ್‌ಕೂಲರ್‌ಗಳು ಲಭ್ಯವಿದ್ದು, ನೀವು ಅದರಲ್ಲಿ ಯಾವುದನ್ನು ಆಯ್ಕೆ ಮಾಡುತ್ತೀರಿ ಎಂಬುದನ್ನು ಮೊದಲೇ ನಿರ್ಧರಿಸಿಕೊಳ್ಳಿ.

ಪರ್ಸನಲ್‌ ಕೂಲರ್‌: ಇವು ಸಾಮಾನ್ಯವಾಗಿ ಬಳಕೆಯಲ್ಲಿರುವ ಕೂಲರ್‌ಗಳಾಗಿದ್ದು ಸಣ್ಣ ಕೊಠಡಿಯಿಂದ ಮಧ್ಯಮ ಕೊಠಡಿಗಳವರೆಗೆ ಇದನ್ನು ಬಳಸಬಹುದು. ಇದನ್ನು ಸುಲಭವಾಗಿ ಒಂದೆಡೆಯಿಂದ ಇನ್ನೊಂದು ಕಡೆಗೆ ಸಾಗಿಸಬಹುದು, ಇದರ ನಿರ್ವಹಣೆಯೂ ಸುಲಭ. ಇದಕ್ಕೆ 12 ರಿಂದ 40 ಲೀಟರ್‌ ನೀರಿನ ಅಗತ್ಯವಿರುತ್ತದೆ.

ಟವರ್‌ ಕೂಲರ್: ಮನೆಗಳಲ್ಲಿ ಟವರ್‌ ಕೂಲರ್‌ ಬಳಕೆ ಇತ್ತೀಚಿನ ಆವೃತ್ತಿಯಾಗಿದೆ. ಮಧ್ಯಮ ಗಾತ್ರದ ಕೋಣೆ ಹೊಂದಿದ್ದರೆ, ಇದು ಸ್ಮಾರ್ಟ್‌ ಆಯ್ಕೆಯಾಗಿದೆ. ಇದು ಕಡಿಮೆ ಅವಧಿಯಲ್ಲಿ ಕೋಣೆಯನ್ನು ತಂಪಾಗಿಸುತ್ತದೆ.

ವಿಂಡೋ ಕೂಲರ್‌: ಹೆಚ್ಚು ಸಾಮರ್ಥ್ಯದ ಕೂಲರ್‌ ಹುಡುಕುತ್ತಿರುವವರಿಗೆ ಇದು ಉತ್ತಮ ಆಯ್ಕೆಯಾಗಿದೆ. ಆದರೆ ಇದರ ನಿರ್ವಹಣಾ ಸಾಮರ್ಥ್ಯ ಹೆಚ್ಚು.

ಡಸರ್ಟ್‌ ಕೂಲರ್‌: ಅಗಲವಾದ ದೊಡ್ಡ ಕೋಣೆಗಳಿಗೆ ಇದು ಉತ್ತಮ ಆಯ್ಕೆಯಾಗಿದೆ. ಮನೆಗಾಗಿ 40 ರಿಂದ 100 ಲೀಟರ್‌ ಸಾಮರ್ಥ್ಯದ ಏರ್‌ ಕೂಲರ್‌ ಕೂಡ ಲಭ್ಯವಿರುತ್ತದೆ. ಇದು 400 ಚದರ ಅಡಿಯಿಂದ 70 ಚದರ ಅಡಿವರೆಗೆ ತಂಪಾಗಿಸುವ ಸಾಮರ್ಥ್ಯ ಹೊಂದಿದೆ.

ಯಾವ ವಿಧದ ಕೂಲಿಂಗ್‌ ಪ್ಯಾಡ್‌ ಬೆಸ್ಟ್‌?

ಕೂಲರ್‌ನಲ್ಲಿರುವ ಕೂಲಿಂಗ್‌ ಪ್ಯಾಡ್‌ ಕೋಣೆಯನ್ನು ತಂಪಾಗಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಕೂಲಿಂಗ್‌ ಪ್ಯಾಡ್‌ಗಳನ್ನು ಸಾಮಾನ್ಯವಾಗಿ ಆಸ್ಪೆನ್‌ (ಮರದ ಸಿಪ್ಪೆ ಅಥವಾ ಸಿಂಥೆಟಿಕ್‌ ಫೈಬರ್‌) ಅಥವಾ ಸೆಲ್ಯುಲೋಸ್‌ ವಸ್ತುಗಳಿಂದ ತಯಾರಿಸಲಾಗುತ್ತದೆ. ಆಸ್ಪೆನ್‌ ಅಗ್ಗವಾಗಿದ್ದರೂ ಹೆಚ್ಚಿನ ನಿರ್ವಹಣೆ ಅಗತ್ಯವಿರುತ್ತದೆ. ಇದರ ಬಾಳಿಕೆಯೂ ಕಡಿಮೆ ಇರುತ್ತದೆ. ಹನಿ ಪ್ಯಾಡ್‌ಗಳು ಕೊಂಚ ದುಬಾರಿ ಎನ್ನಿಸಿದರೂ ಹೆಚ್ಚು ಪರಿಣಾಮಕಾರಿ. ಇದರ ಬಾಳಿಕೆಯೂ ಉತ್ತಮವಾಗಿರುತ್ತದೆ.

ವಿನ್ಯಾಸ

ಬೇರೆ ಬೇರೆ ಕೋಣೆಗಳಿಗೆ ಹೊಂದುವಂತೆ ಏರ್‌ಕೂಲರ್‌ ಖರೀದಿ ಮಾಡಲು ಬಯಸುತ್ತಿದ್ದರೆ, ಕ್ಯಾಸ್ಟರ್‌ ಚಕ್ರ ಇರುವ ಏರ್‌ಕೂಲರ್‌ ಖರೀದಿ ಮಾಡುವುದು ಉತ್ತಮ. ಇದನ್ನು ನಿಮಗೆ ಬೇಕಿನ್ನಿಸಿದ ಜಾಗದಲ್ಲಿ ಇಡಲು ಸುಲಭವಾಗುತ್ತದೆ.

ಇನ್ವರ್ಟರ್‌ ಸಹಾಯದಿಂದ ಬಳಸುವುದು

ಮನೆಗಾಗಿ ಇನ್ವರ್ಟರ್‌ ಮೂಲಕ ಚಾಲನೆಯಾಗುವ ಕೂಲರ್‌ ಸ್ಟ್ಯಾಂಡರ್ಡ್‌ ಏರ್‌ಕೂಲರ್‌ಗಿಂತ ಶೇ 50 ರಷ್ಟು ಕಡಿಮೆ ಶಕ್ತಿಯನ್ನು ಬಳಸುತ್ತದೆ. ನಿಮ್ಮ ಮನೆಯಲ್ಲಿ ನಿರಂತರ ವಿದ್ಯುತ್‌ ಕಡಿತದ ಸಮಸ್ಯೆ ಇದ್ದರೆ ನೀವು ಇದನ್ನು ಬಳಸಬಹುದು.

ರಿಮೋಟ್‌ ಕಂಟ್ರೋಲ್‌ ಆಯ್ಕೆ

ರಿಮೋಟ್‌ ಕಂಟ್ರೋಲ್‌ ಆಯ್ಕೆ ಏರ್‌ಕೂಲರ್‌ಗಳು ಬೆಸ್ಟ್‌ ಯಾಕೆಂದರೆ ನಿಮಗೆ ಕುಳಿತ ಜಾಗದಲ್ಲಿ ಇದರ ನಿರ್ವಹಣೆ ಸಾಧ್ಯ. ಕೋಟೆಯ ಕೂಲರ್‌ನ ಸೆಟ್ಟಿಂಗ್‌ ಬದಲಿಸಲು ಪದೇ ಪದೇ ಎದ್ದೇಳಬೇಕು ಎಂದಿಲ್ಲ. ಏರ್‌ಕೂಲರ್‌ ರಿಮೋಟ್‌ನೊಂದಿಗೆ ಫ್ಯಾನ್‌ ವೇಗವನ್ನೂ ನಿಯಂತ್ರಿಸಬಹುದು.

ಏರ್‌ಕೂಲರ್‌
ಏರ್‌ಕೂಲರ್‌

ಡಸ್ಟ್‌ ಫಿಲ್ಟರ್‌

ಇತ್ತೀಚಿನ ದಿನಗಳಲ್ಲಿ ಗಾಳಿಯ ಗುಣಮಟ್ಟವು ದಿನೇದಿನೇ ಹದಗೆಡುತ್ತಿದೆ. ಮನೆಯೊಳಗಿನ ಗಾಳಿಯನ್ನು ಸಚ್ಛವಾಗಿಡಲು ನೆರವಾಗುವ ಡಸ್ಟ್‌ ಫಿಲ್ಟರ್‌ ಏರ್‌ಕೂಲರ್‌ ಖರೀದಿ ಮಾಡುವುದು ಉತ್ತಮ. ಡಸ್ಟ್‌ ಫಿಲ್ಟರ್‌ ಕೂಲರ್‌ಗಳು ವಾತಾವರಣದ ಧೂಳು ಹಾಗೂ ಮಣ್ಣನ್ನು ಫಿಲ್ಟರ್‌ ಮಾಡುವ ಸಾಮರ್ಥ್ಯ ಹೊಂದಿರುತ್ತದೆ.

ಐಸ್‌ ಚೇಂಬರ್‌

ನೀವು ವೇಗ ಹಾಗೂ ವರ್ಧಿತ ಕೂಲಿಂಗ್‌ ಏರ್‌ಕೂಲರ್‌ ಖರೀದಿಸಲು ಬಯಸಿದರೆ ಐಸ್‌ ಚೇಂಬರ್‌ ಇರುವ ಕೂಲರ್‌ ಖರೀದಿ ಮಾಡುವುದು ಉತ್ತಮ. ಇದು ನೀರನ್ನು ತ್ವರಿತವಾಗಿ ತಣ್ಣಗಾಗಲು ಹಾಗೂ ಕೋಣೆಯನ್ನು ಹೆಚ್ಚು ತಂಪಾಗಿಸಲು ಸಹಾಯ ಮಾಡುತ್ತದೆ.

ಶಬ್ದದ ಮಟ್ಟ

ಕೆಲವು ಕೂಲರ್‌ಗಳು ಅತಿಯಾಗಿ ಶಬ್ದ ಮಾಡುವ ಮೂಲಕ ಕಿರಿಕಿರಿ ಉಂಟು ಮಾಡುತ್ತವೆ. ಹಾಗಾಗಿ ಖರೀದಿಗೂ ಮುನ್ನ ಕೂಲರ್‌ ಶಬ್ದ ಗುರುತಿಸುವುದು ಬಹಳ ಮುಖ್ಯ. ಗರಿಷ್ಠ ಫ್ಯಾನ್‌ ವೇಗದೊಂದಿಗೆ ಶಬ್ದ ಮಟ್ಟವನ್ನು ಪರೀಕ್ಷಿಸುವುದು ಅವಶ್ಯ.

ಆಟೊ ಫಿಲ್‌ ಫಂಕ್ಷನ್‌

ಆಟೊ ಫಿಲ್ಲಿಂಗ್‌ ಆಯ್ಕೆ ಹೊಂದಿರುವ ಏರ್‌ಕೂಲರ್‌ ನಿರ್ವಹಣೆ ಸುಲಭ ಹಾಗೂ ಇದು ಹೆಚ್ಚು ಕೂಲಿಂಗ್‌ ಪರಿಣಾಮವನ್ನು ನೀಡುತ್ತದೆ. ಇದು ಸಂಪೂರ್ಣವಾಗಿ ಟ್ಯಾಂಕ್‌ ಒಣಗುವುದನ್ನು ತಡೆಯುತ್ತದೆ ಹಾಗೂ ಮೋಟರ್‌ಗೆ ಹಾನಿಯಾಗದಂತೆ ತಡೆಯುತ್ತದೆ.

ವಿದ್ಯುತ್‌ ಬಳಕೆ

ಮನೆ ಬಳಕೆಯ ಕೂಲರ್‌ ಖರೀದಿ ಮುನ್ನ ವ್ಯಾಟ್‌ ನೋಡಿಕೊಳ್ಳುವುದು ಮುಖ್ಯ. ಅತಿಯಾಗಿ ವಿದ್ಯುತ್‌ ಕಳಬಳಿಸುವ ಕೂಲರ್‌ಗಳು ಕರೆಂಟ್‌ ಬಿಲ್‌ ಅತಿಯಾಗಿ ಬರುವಂತೆ ಮಾಡಬಹುದು. ಇತ್ತೀಚಿನ ಕೂಲರ್‌ಗಳು ಇನ್ವರ್ಟರ್‌ ತಂತ್ರಜ್ಞಾನಕ್ಕೆ ಹೊಂದಿಕೊಳ್ಳುವಂತಿದ್ದು, ಅವು ಕಡಿಮೆ ವಿದ್ಯುತ್‌ ಬಳಕೆಗೂ ಸಹಾಯ ಮಾಡುತ್ತವೆ.

ನೀವು ಈ ವರ್ಷ ಬೇಸಿಗೆಗೆ ಮನೆಗೆ ಏರ್‌ಕೂಲರ್‌ ಖರೀದಿ ಮಾಡಬೇಕು ಅಂತಿದ್ದರೆ ಈ ಮೇಲಿನ ಸಲಹೆಗಳನ್ನು ಪಾಲಿಸಿ, ಇದರಿಂದ ನಿಮ್ಮ ಬಜೆಟ್‌ ಉಳಿತಾಯವಾಗುವುದು ಮಾತ್ರವಲ್ಲ, ಬಿಸಿಲಿನ ತಾಪ ನೀಗಿಸಿಕೊಳ್ಳಲು ಉತ್ತಮ ರೀತಿಯಲ್ಲಿ ನೆರವಾಗುತ್ತವೆ.

(This copy first appeared in Hindustan Times Kannada website. To read more like this please logon to kannada.hindustantimes.com)