ಕನ್ನಡ ಸುದ್ದಿ  /  ಜೀವನಶೈಲಿ  /  ನಿಮ್ಮ ಹಳೆಯ ಸ್ಮಾರ್ಟ್‌ಫೋನ್ ನಿಧಾನವಾಗಿದೆಯೇ? ಹೊಸ ಫೋನ್ ಖರೀದಿಸಬೇಡಿ, ಹೀಗೆ ಮಾಡಿದ್ರೆ ಫೋನ್ ಸೂಪರ್‌ಫಾಸ್ಟ್ ಆಗುತ್ತೆ

ನಿಮ್ಮ ಹಳೆಯ ಸ್ಮಾರ್ಟ್‌ಫೋನ್ ನಿಧಾನವಾಗಿದೆಯೇ? ಹೊಸ ಫೋನ್ ಖರೀದಿಸಬೇಡಿ, ಹೀಗೆ ಮಾಡಿದ್ರೆ ಫೋನ್ ಸೂಪರ್‌ಫಾಸ್ಟ್ ಆಗುತ್ತೆ

ಇತ್ತೀಚಿನ ದಿನಗಳಲ್ಲಿ ಜನರು ಫೋನ್‌ಗಳಲ್ಲಿ ಎಲ್ಲ ಫೋಟೋಗಳು-ವೀಡಿಯೊ ಫೈಲ್​ಗಳನ್ನು ಸೇವ್ ಮಾಡಿರುತ್ತಾರೆ. ಅದು ಜಿಬಿಗಟ್ಟಲೆ ಇರುತ್ತದೆ. ಫೋನ್ ಕೊಂಚ ಹಳೆಯದಾದಾಗ ಅದರಲ್ಲಿ ಸ್ಲೋ ಆಗುವ ಸಮಸ್ಯೆ ಕೂಡ ಕಾಣಿಸುತ್ತದೆ. ಹೀಗಾದಾಗ ಹೊಸ ಸ್ಮಾರ್ಟ್​ಫೋನ್ ಖರೀದಿಸಲು ಮುಂದಾಗುತ್ತಾರೆ. ಆದರೆ, ಈ ಟ್ರಿಕ್​​ನಿಂದ ನಿಮ್ಮ ಆ ಹಳೆಯ ಫೋನನ್ನೇ ಹೊಸದರಂತೆ ಸೂಪರ್ ಸ್ಪೀಡ್ ಮಾಡಬಹುದು.

ಸ್ಮಾರ್ಟ್‌ಫೋನ್ ಸ್ಲೋ ಆಗಿದ್ರೆ ಹೀಗೆ ಮಾಡಿ, ಸೂಪರ್‌ಫಾಸ್ಟ್‌ ಆಗುತ್ತೆ. (ಪ್ರಾತಿನಿಧಿಕ ಚಿತ್ರ)
ಸ್ಮಾರ್ಟ್‌ಫೋನ್ ಸ್ಲೋ ಆಗಿದ್ರೆ ಹೀಗೆ ಮಾಡಿ, ಸೂಪರ್‌ಫಾಸ್ಟ್‌ ಆಗುತ್ತೆ. (ಪ್ರಾತಿನಿಧಿಕ ಚಿತ್ರ) (Bloomberg)

ಸ್ಮಾರ್ಟ್‌ಫೋನ್‌ನ ದೊಡ್ಡ ಸಮಸ್ಯೆ ಎಂದರೆ ಅದರ ನಿಧಾನಗತಿ. ಫೋನ್‌ನ ವೇಗ ಕಡಿಮೆಯಾದರೆ ಅದನ್ನು ಬಳಸಲು ಮಜವಿಲ್ಲ. ಕೆಲವೊಮ್ಮೆ ಇದು ಫೋನ್‌ನ ಸ್ಟೋರೇಜ್ ಫುಲ್ ಆಗಿರುವ ಕಾರಣದಿಂದ ಸಂಭವಿಸುತ್ತದೆ. ನೀವು ಸ್ಟೋರೇಜ್ ಸಮಸ್ಯೆಗಳನ್ನು ಎದುರಿಸುತ್ತಿದ್ದರೆ ಇದರಿಂದ ಸುಲಭವಾಗಿ ಪಾರಾಗಬಹುದು. ಫೋನ್‌ ಸ್ಟೋರೇಜ್ ಫುಲ್ ಆಗುವುದನ್ನು ತಡೆಯಲು ಮಾರ್ಗವಿದೆ. ಇದಕ್ಕಾಗಿ ನಿಮ್ಮ ಫೋನ್‌ನಲ್ಲಿ ಯಾವ ಅಪ್ಲಿಕೇಶನ್‌ಗಳು ಹೆಚ್ಚು ಜಾಗವನ್ನು ತೆಗೆದುಕೊಳ್ಳುತ್ತಿವೆ ಎಂಬುದನ್ನು ನೀವು ಕಂಡುಹಿಡಿಯಬೇಕು. ಆಂಡ್ರಾಯ್ಡ್ ಮತ್ತು ಐಒಎಸ್ ಫೋನ್‌ಗಳಲ್ಲಿ ಇದನ್ನು ಹೇಗೆ ಮಾಡಬೇಕೆಂದು ನಾವು ಹೇಳುತ್ತೇವೆ.

ನಿಮ್ಮ ಫೋನ್‌ನಲ್ಲಿ ಯಾವ ಅಪ್ಲಿಕೇಶನ್ ಹೆಚ್ಚು ಜಾಗವನ್ನು ತೆಗೆದುಕೊಳ್ಳುತ್ತದೆ

ನಿಮ್ಮ ಐಫೋನ್ ಅಥವಾ ಆಂಡ್ರಾಯ್ಡ್ ಸ್ಮಾರ್ಟ್‌ಫೋನ್‌ನ ಸೆಟ್ಟಿಂಗ್‌ಗಳಿಗೆ ಹೋಗುವ ಮೂಲಕ ನೀವು ಇದನ್ನು ಕಂಡುಹಿಡಿಯಬಹುದು. ಕೆಳಗಿನ ಹಂತಗಳನ್ನು ಅನುಸರಿಸುವ ಮೂಲಕ ನಿಮ್ಮ ಐಫೋನ್​ನಲ್ಲಿ ಯಾವ ಅಪ್ಲಿಕೇಶನ್‌ಗಳು ಹೆಚ್ಚು ಸ್ಟೋರೇಜ್ ಬಳಸುತ್ತವೆ ಎಂಬುದನ್ನು ಕಂಡುಹಿಡಿಯಿರಿ:

1) ನಿಮ್ಮ ಫೋನ್​ನಲ್ಲಿ ಸೆಟ್ಟಿಂಗ್ಸ್ ಅಪ್ಲಿಕೇಶನ್‌ಗೆ ಹೋಗಿ.

ಟ್ರೆಂಡಿಂಗ್​ ಸುದ್ದಿ

2) ಜನೆರಲ್ ವಿಭಾಗದ ಮೇಲೆ ಟ್ಯಾಪ್ ಮಾಡಿ.

3) ಈಗ, ಐಫೋನ್ ಸ್ಟೋರೇಜ್ ಆಯ್ಕೆಯನ್ನು ಕ್ಲಿಕ್ ಮಾಡಿ.

4) ಇಲ್ಲಿ ನೀವು ಹೆಚ್ಚು ಸ್ಟೋರೇಜ್ ಹೊಂದಿರುವ ಅಪ್ಲಿಕೇಶನ್‌ಗಳನ್ನು ಕಾಣುತ್ತೀರಿ.

5) ಈಗ ನಿಮಗೆ ಅಗತ್ಯವಿಲ್ಲದ ಅಪ್ಲಿಕೇಶನ್‌ಗಳನ್ನು ಡಿಲೀಟ್ ಮಾಡಿ.

ಆಂಡ್ರಾಯ್ಡ್ ಸ್ಮಾರ್ಟ್‌ಫೋನ್‌ನಲ್ಲಿ ಈ ಹಂತಗಳನ್ನು ಅನುಸರಿಸಿ

1) ಗೂಗಲ್ ಪ್ಲೇ ಸ್ಟೋರ್ ಅಪ್ಲಿಕೇಶನ್‌ಗೆ ಹೋಗಿ ಮತ್ತು ಪ್ರೊಫೈಲ್ ಐಕಾನ್ ಅನ್ನು ಟ್ಯಾಪ್ ಮಾಡಿ.

2) ಇಲ್ಲಿ ಮ್ಯಾನೇಜ್ ಆ್ಯಪ್ಸ್ ಮತ್ತು ಡಿವೈಸ್ ಮೇಲೆ ಕ್ಲಿಕ್ ಮಾಡಿ.

3) ಇಲ್ಲಿ ನೀವು ಹೆಚ್ಚು ಸ್ಟೋರೇಜ್ ಇರುವ ಅಪ್ಲಿಕೇಶನ್‌ಗಳನ್ನು ನೋಡುತ್ತೀರಿ.

4) ಇಲ್ಲಿ ನೀವು ಉಪಯೋಗಿಸದ ಆ್ಯಪ್ ಇದ್ದರೆ ಅದನ್ನು ಅಳಿಸಿ. ಆಗ ಸ್ಟೋರೇಜ್ ಹೆಚ್ಚಾಗುತ್ತದೆ.

ಫೋನ್‌ನ ಹೆಚ್ಚಿನ ಸಂಗ್ರಹಣೆಯು ಸಾಮಾಜಿಕ ಮಾಧ್ಯಮದಿಂದ ತುಂಬಿರುವುದು ಹೆಚ್ಚಾಗಿ ಕಂಡುಬರುತ್ತದೆ. ವಾಟ್ಸ್​ಆ್ಯಪ್, ಫೇಸ್​ಬುಕ್, ಇನ್​ಸ್ಟಾಗ್ರಾಮ್​ನ ಅನಗತ್ಯ ಫೈಲ್‌ಗಳು, ವೀಡಿಯೊಗಳು, ಫೋಟೋಗಳು ನಿಮ್ಮ ಫೋನ್‌ನಲ್ಲಿ ಡೌನ್‌ಲೋಡ್ ಆಗುತ್ತದೆ. ಇವುಗಳನ್ನು ನಿಷ್ಕ್ರಿಯಗೊಳಿಸಿ. ಫೋನ್‌ನಲ್ಲಿ ಅಗತ್ಯವಿಲ್ಲದ ದೊಡ್ಡ ಗಾತ್ರದ ವೀಡಿಯೊಗಳನ್ನು ಸಹ ಅಳಿಸಿ. ಅಪ್ಲಿಕೇಶನ್‌ಗಳ ಸೆಟ್ಟಿಂಗ್‌ಗಳಿಗೆ ತೆರಳಿ ಅಟೋ ಡೌನ್‌ಲೋಡ್ ಸೆಟ್ಟಿಂಗ್ ಆನ್ ಆಗಿದ್ದರೆ ಅದನ್ನು ಆಫ್ ಮಾಡಿ.

ಗೂಗಲ್ ಕ್ಲೌಡ್ ಸಹಾಯ ಪಡೆದುಕೊಳ್ಳಿ

ಫೋನ್ ಸ್ಟೋರೇಜ್ ಫುಲ್ ಆಗಿದೆ. ಆದರೆ, ಡಿಲೀಟ್ ಮಾಡುವಂತಹ ಯಾವ ಫೈಲ್ ಕೂಡ ಇಲ್ಲ, ಇರುವುದೆಲ್ಲ ಅಗತ್ಯ ಫೈಲ್​ಗಳೆ. ಹೀಗಿರುವಾಗ ನೀವು ನೀವು ಆಂಡ್ರಾಯ್ಡ್ ಬಳಕೆದಾರರಾಗಿದ್ದರೆ, ಗೂಗಲ್ ಕ್ಲೌಡ್ ಸೇವೆಯ ಸಹಾಯದಿಂದ ಸಂಗ್ರಹಣೆಯನ್ನು ಹೆಚ್ಚಿಸಬಹುದು. ಆದಾಗ್ಯೂ, ಇದಕ್ಕಾಗಿ ನೀವು ಹಣವನ್ನು ಖರ್ಚು ಮಾಡಬೇಕಾಗುತ್ತದೆ. one.google.com ಗೆ ಹೋಗಬೇಕು. ಇಲ್ಲಿ ನೀವು 15GB ಯೋಜನೆಯನ್ನು ಡಿಫಾಲ್ಟ್ ಆಗಿ ಪಡೆದುಕೊಳ್ಳಬಹುದು. ಇದು ಸಂಪೂರ್ಣವಾಗಿ ಉಚಿತವಾಗಿದೆ. ಇದಾದ ನಂತರ ತಿಂಗಳಿಗೆ ರೂ. 130- 100ಜಿಬಿ, ವರ್ಷಕ್ಕೆ ರೂ. 210- 200ಜಿಬಿ, ರೂ. 2100- 2TB ಯಿಂದ ಹಿಡಿದು 30TB ವರೆಗಿನ ಯೋಜನೆಯನ್ನು ತೆಗೆದುಕೊಳ್ಳಬಹುದು.

ಬರಹ: ವಿನಯ್ ಭಟ್