Gmail Storage Tips: ಹಣ ಪಾವತಿಸುವ ಅಗತ್ಯವಿಲ್ಲ, ಜಿಮೇಲ್ ಸ್ಟೋರೇಜ್ ಫುಲ್ ಆಗಿದ್ದರೆ ಟೆನ್ಶನ್ ಬೇಡ, ಈ ಟ್ರಿಕ್ ಫಾಲೋ ಮಾಡಿ
Gmail Storage Tips: ಜಿಮೇಲ್ ಸ್ಟೋರೇಜ್ ಫುಲ್ ಆಗಿರುವ ಸಮಸ್ಯೆಯನ್ನು ಎದುರಿಸುತ್ತಿದ್ದರೆ, ಈ ಮಾಹಿತಿ ನಿಮಗೆ ಖಂಡಿತ ಉಪಯುಕ್ತ. ಈ ಸಣ್ಣ ಟ್ರಿಕ್ ಅನುಸರಿಸುವ ಮೂಲಕ, ಜಿಮೇಲ್‌ನ ಎಲ್ಲ ಸ್ಪ್ಯಾಮ್ ಮೇಲ್, ಅನಗತ್ಯ ಫೋಟೊ, ವಿಡಿಯೊಗಳನ್ನು ಒಂದೇ ಬಾರಿಗೆ ಡಿಲೀಟ್ ಮಾಡಬಹುದು. ಈ ಮೂಲಕ ಹೆಚ್ಚಿನ ಸ್ಟೋರೇಜ್‌ಗಾಗಿ ಹಣ ಪಾವತಿಸುವ ಅಗತ್ಯ ಇರುವುದಿಲ್ಲ. (ಬರಹ: ವಿನಯ್ ಭಟ್)
ಗೂಗಲ್ ಒಡೆತನದ ಜಿಮೇಲ್ ಇಂದು ಬಹುತೇಕ ಎಲ್ಲರೂ ಬಳಸುವ ಪ್ರಮುಖ ಅಪ್ಲಿಕೇಶನ್ ಆಗಿದೆ. ಅಧಿಕೃತವಾಗಿ ಮೇಲ್ ಕಳುಹಿಸಲು ಜಿಮೇಲ್ ಅನ್ನು ಹೆಚ್ಚಾಗಿ ಬಳಸಲಾಗುತ್ತದೆ. ಇಷ್ಟು ಮಾತ್ರವಲ್ಲದೆ, ನಿಮ್ಮ, ಫೋಟೋ, ಡ್ರೈವ್, ಜಿಮೇಲ್ ಮತ್ತು ಇತರ ಫೈಲ್‌ಗಳನ್ನು ಉಳಿಸಲು ಗೂಗಲ್ 15GB ಉಚಿತ ಸಂಗ್ರಹವನ್ನು ಕೂಡ ನೀಡುತ್ತದೆ. ಅಂದರೆ ನೀವು ಇದರಲ್ಲಿ 15GB ವರೆಗೆ ಫೈಲ್‌ಗಳನ್ನು ಸೇವ್ ಮಾಡಿಡಬಹುದು. ಆದರೆ, ಇತ್ತೀಚಿನ ದಿನಗಳಲ್ಲಿ ಅನಗತ್ಯ ಇಮೇಲ್‌ಗಳ ಹೊರೆಯಿಂದಾಗಿ ಹಲವರು ಹೊಸ ಮೇಲ್‌ಗಳನ್ನು ಸ್ವೀಕರಿಸುವಲ್ಲಿ ತೊಂದರೆ ಎದುರಿಸುತ್ತಿದ್ದಾರೆ. ಹೀಗಾಗಿ ಪಾವತಿ ಮಾಡಿ ಸ್ಟೋರೇಜ್ ಪಡೆದುಕೊಳ್ಳುವ ಅನಿವಾರ್ಯಕ್ಕೆ ಸಿಲುಕಿದ್ದಾರೆ. ನಿಮಗೂ ಇಂಥದ್ದೇ ಪರಿಸ್ಥಿತಿ ಎದುರಾಗಿದ್ದರೆ, ಹಣ ಪಾವತಿಸುವ ಮೊದಲು ಈ ಸ್ಟೋರಿ ಓದಿ.
ಜಿಮೇಲ್‌ನಲ್ಲಿ ಹೆಚ್ಚಿನ ಸ್ಥಳಾವಕಾಶವನ್ನು ಪಡೆಯಲು ಗೂಗಲ್ ತನ್ನ ಬಳಕೆದಾರರಿಗೆ 130 ರೂಪಾಯಿ ಕೊಟ್ಟು 100GB ಸ್ಟೋರೇಜ್ ಖರೀದಿಸುವ ಅವಕಾಶ ನೀಡಿದೆ. ಇಂದು ಅನೇಕರು ಇದರ ಮೊರೆ ಹೋಗುತ್ತಿದ್ದಾರೆ. ಆದರೆ, ಕೆಲವೊಂದು ಟ್ರಿಕ್‌ಗಳ ಮೂಲಕ ನಿಮ್ಮ ಜಿಮೇಲ್ ಅನ್ನು ಶುದ್ಧಗೊಳಿಸಿ ಯಾವುದೇ ಹಣ ಪಾವತಿಸದೆ ಸ್ಟೋರೇಜ್ ಉಳಿಸಿಕೊಳ್ಳಬಹುದು. ಅದು ಹೇಗೆ ಎಂಬ ಟ್ರಿಕ್ ಇಲ್ಲಿದೆ.
ಜಿಮೇಲ್ ಖಾತೆಯು ತುಂಬಿದಾಗ, ಹೊಸ ಮೇಲ್ ಬರುವುದು ನಿಲ್ಲುತ್ತದೆ. ಇದಕ್ಕಾಗಿ ಅಗತ್ಯವಿಲ್ಲದ ಮೇಲ್‌ಗಳನ್ನು ಇನ್‌ಬಾಕ್ಸ್‌ನಿಂದ ತೆಗೆದುಹಾಕಬೇಕು. ಒಂದೊಂದಾಗಿ ಮೇಲ್‌ಗಳನ್ನು ಅಳಿಸಲು ಸಾಕಷ್ಟು ಸಮಯ ತೆಗೆದುಕೊಳ್ಳುತ್ತದೆ. ಆದಾಗ್ಯೂ ನೀವು ಕೇವಲ 30 ಸೆಕೆಂಡುಗಳಲ್ಲಿ 10 MB ವರೆಗಿನ ಸಂಗ್ರಹಣೆ ಒಂದೇ ಬಾರಿಗೆ ಡಿಲೀಟ್ ಮಾಡಬಹುದು.
ಟ್ರಿಕ್-1: ದೊಡ್ಡ ಅಟ್ಯಾಚ್‌ಮೆಂಟ್ ಡಿಲೀಟ್ ಮಾಡಿ
ಮೊದಲಿಗೆ ನೀವು ನಿಮ್ಮ ಜಿಮೇಲ್ ಖಾತೆಗೆ ಲಾಗಿನ್ ಆಗಿ. ಸರ್ಚ್ ಬಾಕ್ಸ್‌ನಲ್ಲಿ ಎಂಜಿನ್‌ನಲ್ಲಿ 'has:attachment larger:10MB' ಎಂದು ಬರೆಯುವ ಮೂಲಕ ಹುಡುಕಿ. ಈಗ ನೀವು 10MB ಗಿಂತ ಹೆಚ್ಚಿನ ಗಾತ್ರದ ಮೇಲ್‌ಗಳ ಪಟ್ಟಿಯನ್ನು ನೋಡುತ್ತೀರಿ. ಅದರಲ್ಲಿ ಅಗತ್ಯ ಇಲ್ಲದ ಮೇಲ್‌ಗಳನ್ನು ಡಿಲೀಟ್ ಮಾಡಬಹುದು, ಸ್ಟೋರೇಜ್ ಹೆಚ್ಚಿಸಬಹುದು.
ಟ್ರಿಕ್-2: ಡ್ರೈವ್‌ನಲ್ಲಿ ಫೈಲ್ ಡಿಲೀಟ್ ಮಾಡಿ
ಜಿಮೇಲ್‌ಗೆ ಲಾಗಿನ್ ಮಾಡಿ ಮತ್ತು ಗೂಗಲ್ ಸರ್ಚ್‌ನಲ್ಲಿ drive.google.com/#quota ಎಂದು ಟೈಪ್ ಮಾಡಿ. ಹೀಗೆ ಮಾಡಿದಾಗ ಡಿಸ್‌ಪ್ಲೇ ಮೇಲೆ ದೊಡ್ಡ ಗಾತ್ರದ ಇ-ಮೇಲ್‌ಗಳು ತೆರೆದುಕೊಳ್ಳುತ್ತವೆ. ಇದರಲ್ಲಿರುವ ಅನಗತ್ಯ ಇಮೇಲ್‌ಗಳನ್ನು ಡಿಲೀಟ್ ಮಾಡುವ ಮೂಲಕ ಜಿಮೇಲ್ ಸಂಗ್ರಹವನ್ನು ಹೆಚ್ಚಿಸಬಹುದು.
ಟ್ರಿಕ್-3: ಸೋಷಿಯಲ್ ಮೀಡಿಯಾ ಇಮೇಲ್ ಡಿಲೀಟ್ ಮಾಡಿ
ಇನ್‌ಬಾಕ್ಸ್‌ನಲ್ಲಿ ಓದದಿರುವ ಇ-ಮೇಲ್ ಒಮ್ಮೆಲೆ ಡಿಲೀಟ್ ಮಾಡಿ. ಇನ್‌ಬಾಕ್ಸ್‌ನಲ್ಲಿ ನೀವು ಓದದಿರುವ ಇ-ಮೇಲ್ ಇದ್ದರೆ ಅದನ್ನು ಒಂದೇ ಬಾರಿಗೆ ಡಿಲೀಟ್ ಮಾಡಲು ಜಿಮೇಲ್‌ನಲ್ಲಿ ಕೆಟಗರಿ ಆಯ್ಕೆಯ ಮೇಲೆ ಕ್ಲಿಕ್ ಮಾಡಿ. ಸಾಮಾನ್ಯವಾಗಿ ಸೋಷಿಯಲ್ ಆಯ್ಕೆಯಲ್ಲಿರುವ ಮೆಸೇಜ್ ಹೆಚ್ಚಿನವರಿಗೆ ಅಗತ್ಯವಿರುವುದಿಲ್ಲ. ಇದರ ಮೇಲೆ ಕ್ಲಿಕ್ ಮಾಡಿ.
ನಂತರ, ಜಿಮೇಲ್‌ನಲ್ಲಿ ಓದದಿರುವ ಅಥವಾ ಓದಿದ ಎಲ್ಲ ಇಮೇಲ್‌ಗಳನ್ನು ನಿಮಗೆ ತೋರಿಸಲಾಗುತ್ತದೆ. ಈಗ ಈ ಎಲ್ಲಾ ಮೇಲ್‌ಗಳನ್ನು ಒಂದೇ ಬಾರಿಗೆ ಅಳಿಸಲು, ಮೇಲ್ಭಾಗದಲ್ಲಿ ನೀಡಲಾದ ಆಲ್ ಸೆಲೆಕ್ಟ್ ಐಕಾನ್ ಮೇಲೆ ಕ್ಲಿಕ್ ಮಾಡಿ ಮತ್ತು ಡಿಲೀಟ್ ಆಯ್ಕೆಯನ್ನು ಒತ್ತಿರಿ. ಇದಾದ ನಂತರ, ನಿಮ್ಮ ಜಿಮೇಲ್ ಸ್ಟೋರೇಜ್ ಹೆಚ್ಚಾಗುತ್ತದೆ.
ಈ ಮೂರು ವಿಧಾನಗಳೊಂದಿಗೆ, ನಿಮ್ಮ ಜಿಮೇಲ್‌ನಲ್ಲಿ ಸಂಗ್ರಹಣೆಯ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬಹುದು. ಒಮ್ಮೆ ಜಿಮೇಲ್‌ನಲ್ಲಿ ಸಂಗ್ರಹ ಹೆಚ್ಚಾದರೆ ಹೊಸದಾಗಿ ಸ್ಟೋರೇಜ್ ಖರೀದಿಸುವ ಅಗತ್ಯ ಬರುವುದಿಲ್ಲ. ಯಾವುದೇ ಹೆಚ್ಚಿನ ವೆಚ್ಚವಿಲ್ಲದೆ ನಿಮ್ಮ ಜಿಮೇಲ್ ಸಂಗ್ರಹವನ್ನು ನೀವು ನಿರ್ವಹಿಸಬಹುದು. ನಿಮಗೆ ಎಂದಿನಂತೆ ಇಮೇಲ್‌ಗಳು ಬರುತ್ತಲೇ ಇರುತ್ತವೆ.