ಕನ್ನಡ ಸುದ್ದಿ  /  ಜೀವನಶೈಲಿ  /  Tech Tips: ಎಷ್ಟು ದಿನಗಳಿಗೊಮ್ಮೆ ಸ್ಮಾರ್ಟ್‌ಫೋನ್ ರೀಸ್ಟಾರ್ಟ್ ಮಾಡದಿದ್ದರೆ ಏನಾಗುತ್ತದೆ? ಹ್ಯಾಂಗ್ ಆಗೋ ಫೋನ್‌ಗೆ ಸುಲಭದ ಪರಿಹಾರ

Tech Tips: ಎಷ್ಟು ದಿನಗಳಿಗೊಮ್ಮೆ ಸ್ಮಾರ್ಟ್‌ಫೋನ್ ರೀಸ್ಟಾರ್ಟ್ ಮಾಡದಿದ್ದರೆ ಏನಾಗುತ್ತದೆ? ಹ್ಯಾಂಗ್ ಆಗೋ ಫೋನ್‌ಗೆ ಸುಲಭದ ಪರಿಹಾರ

ಕೆಲವರು ಸ್ಮಾರ್ಟ್‌ಫೋನ್‌ಗಳನ್ನು ಬೇಕಾಬಿಟ್ಟು ಉಪಯೋಗಿಸುತ್ತಾರೆ. ಇದರಿಂದ ಹ್ಯಾಂಗ್ ಆಗುವುದು, ದಿಢೀರ್ ಸ್ವಿಚ್ ಆಫ್ ಆಗುವಂತಹ ತೊಂದರೆಗಳು ಕಾಣಿಸುತ್ತಿದೆ. ಹೀಗಾದಾಗ ಹೊಸ ಫೋನಿನ ಮೊರೆ ಹೋಗುವವರೂ ಇದ್ದಾರೆ. ಈ ಸಮಸ್ಯೆಗೆಲ್ಲ ಸುಲಭದ ಪರಿಹಾರವಿದೆ. ಅದುವೇ ರೀಸ್ಟಾರ್ಟ್. (ಬರಹ: ವಿನಯ್ ಭಟ್)

ಆಗಾಗ ಸ್ಮಾರ್ಟ್‌ಫೋನ್ ರಿಸ್ಟಾರ್ಟ್‌ ಮಾಡದಿದ್ದರೆ ಏನಾಗುತ್ತದೆ?
ಆಗಾಗ ಸ್ಮಾರ್ಟ್‌ಫೋನ್ ರಿಸ್ಟಾರ್ಟ್‌ ಮಾಡದಿದ್ದರೆ ಏನಾಗುತ್ತದೆ?

ಇಂದು ಪ್ರತಿಯೊಬ್ಬರ ಬಳಿಯೂ ಸ್ಮಾರ್ಟ್‌ಫೋನ್‌ಗಳಿವೆ. ಕೆಲವರು ಅಗ್ಗದ ಬಜೆಟ್ ಫೋನ್ ಬಳಸುತ್ತಿದ್ದರೆ, ಇನ್ನು ಕೆಲವರು ದುಬಾರಿ ಬೆಲೆಯ ಸ್ಮಾರ್ಟ್‌ಫೋನ್‌ಗಳನ್ನು ಉಪಯೋಗಿಸುತ್ತಿದ್ದಾರೆ. ಮೊಬೈಲ್ ಇಂದು ನಮ್ಮೆಲ್ಲರ ಜೀವನವನ್ನು ಸುಲಭಗೊಳಿಸಿದೆ. ಆದರೆ, ಕೆಲವು ಜನರು ಸ್ಮಾರ್ಟ್‌ಫೋನ್‌ಗೆ ಉಸಿರಾಡಲೂ ಸಮಯ ಕೊಡದೆ ಕೆಟ್ಟದಾಗಿ ಬಳಸುತ್ತಿದ್ದಾರೆ. ಇದರಿಂದ ಫೋನ್‌ನ ಕಾರ್ಯಕ್ಷಮತೆ ನಿಧಾನವಾಗುತ್ತದೆ. ಫೋನ್‌ನ ಕಾರ್ಯಕ್ಷಮತೆಯ ಬಗ್ಗೆ ನೀವು ಚಿಂತೆ ಮಾಡುತ್ತಿದ್ದರೆ, ಈ ಸಮಸ್ಯೆಯನ್ನು ತಪ್ಪಿಸಲು ಒಂದು ಮಾರ್ಗವಿದೆ. ಅದುವೇ ರೀಸ್ಟಾರ್ಟ್.

ನೀವು ನಿಮ್ಮ ಫೋನ್ ಅನ್ನು ರೀಸ್ಟಾರ್ಟ್ ಮಾಡುತ್ತೀರಾ? ಎಷ್ಟು ದಿನಗಳಿಗೊಮ್ಮೆ ಇದನ್ನು ರೀಸ್ಟಾರ್ಟ್ ಮಾಡಬೇಕು? ಮಾಡದಿದ್ದರೆ ಏನಾಗುತ್ತದೆ? ಈ ಕುರಿತ ಸಂಪೂರ್ಣ ಮಾಹಿತಿ ಇಲ್ಲಿದೆ.

ಟ್ರೆಂಡಿಂಗ್​ ಸುದ್ದಿ

ಎಷ್ಟು ದಿನಕ್ಕೊಮ್ಮೆ ರೀಸ್ಟಾರ್ಟ್ ಮಾಡಬೇಕು?

ಒಂದು ಫೋನಿನ ಒಟ್ಟಾರೆ ಕಾರ್ಯಕ್ಷಮತೆ ಅದು ಎಷ್ಟು ಹಳೆಯದು ಮತ್ತು ಫೋನ್ ಅನ್ನು ನೀವು ಹೇಗೆ ಬಳಸುತ್ತೀರಿ ಎಂಬುದರ ಮೇಲೆ ಅವಲಂಬಿತವಾಗಿರುತ್ತದೆ. ಉತ್ತಮ ಕಾರ್ಯಕ್ಷಮತೆಗಾಗಿ ವಾರಕ್ಕೊಮ್ಮೆಯಾದರೂ ಫೋನ್ ಅನ್ನು ರೀಸ್ಟಾರ್ಟ್ ಮಾಡುವುದು ಉತ್ತಮ ಎಂಬುದು ತಜ್ಞರ ಅಭಿಪ್ರಾಯ. ಸ್ವಿಚ್ ಆಫ್ ಮಾಡಿದರೂ ಒಳ್ಳೆಯದು. ಸ್ವಿಚ್ ಆಫ್ ಮಾಡಿ, ಒಂದು ನಿಮಿಷ ವಿಶ್ರಾಂತಿ ನೀಡಿ ನಂತರ ಆನ್ ಮಾಡಿ ಎನ್ನುತ್ತಾರೆ ಟೆಕ್ ಪಂಡಿತರು. ಇದು ಫೋನ್‌ನ ಪ್ರೊಸೆಸರ್, ಮೆಮೊರಿ ಸರಾಗವಾಗಿ ಕಾರ್ಯನಿರ್ವಹಿಸಲು ಸಹಾಯ ಮಾಡುತ್ತದೆ. ಅಲ್ಲದೆ ದಿಢೀರ್ ಸ್ವಿಪ್ ಆಫ್ ಆಗುವುದು, ಹ್ಯಾಂಗ್ ಆಗುವಂತಹ ತೊಂದರೆಯನ್ನು ಕಡಿಮೆ ಮಾಡುತ್ತದೆ.

ರೀಸ್ಟಾರ್ಟ್ ಮಾಡದಿದ್ದರೆ ಏನಾಗುತ್ತದೆ?

ನೀವು ನಿಮ್ಮ ಸ್ಮಾರ್ಟ್‌ಫೋನ್ ಅನ್ನು ಬಹಳ ಸಮಯದಿಂದ ರೀಸ್ಟಾರ್ಟ್ ಅಥವಾ ಒಮ್ಮೆಯೂ ಸ್ವಿಚ್ ಆಫ್ ಮಾಡಿದಿದ್ದರೆ ಅನೇಕ ಸಮಸ್ಯೆಗಳು ಉದ್ಭವಿಸುತ್ತವೆ. ಇದು ತಣ್ಣಗಾಗಲು ಸ್ವಲ್ಪ ಸಮಯ ಬೇಕಾಗುವ ಯಂತ್ರವೂ ಹೌದು. ಹೀಗಾಗಿ ಫೋನ್ ಉಪಯೋಗಿಸಲು ಸಾಧ್ಯವಾಗದಷ್ಟು ಹ್ಯಾಂಗ್ ಆಗುತ್ತಿದ್ದರೆ, ಅಪ್ಲಿಕೇಶನ್‌ಗಳು ಕ್ರ್ಯಾಶ್ ಆಗುತ್ತಿದ್ದರೆ, ಬ್ಯಾಟರಿ ಬ್ಯಾಕಪ್ ಕಡಿಮೆಯಾಗಿದ್ದರೆ ಮತ್ತು ಫೋನ್ ಹೆಚ್ಚು ಬಿಸಿಯಾಗುತ್ತಿದ್ದರೆ ತಕ್ಷಣ ರೀಸ್ಟಾರ್ಟ್ ಮಾಡಿ.

ರೀಸ್ಟಾರ್ಟ್ ಅಥವಾ ಸ್ವಿಚ್ ಆಫ್ ಯಾವುದು ಉತ್ತಮ?

ಫೋನ್‌ನಲ್ಲಿ ಸ್ವಿಚ್ ಆಫ್ ಮತ್ತು ರೀಸ್ಟಾರ್ಟ್ ಎಂಬ ಎರಡು ಆಯ್ಕೆ ಇರುತ್ತದೆ. ಇದರಲ್ಲಿ ಯಾವುದು ಉತ್ತಮ ಎಂಬುದನ್ನು ಪರಿಶೀಲಿಸೋಣ. ಫೋನ್ ಅನ್ನು ರೀಸ್ಟಾರ್ಟ್ ಮಾಡಿದಾಗ, ಅದರ ಸಿಸ್ಟಮ್ ಮತ್ತು ಹಾರ್ಡ್‌ವೇರ್‌ ಸಂಪೂರ್ಣವಾಗಿ ಸ್ಥಗಿತಗೊಳ್ಳುತ್ತದೆ. ನಂತರ ಫೋನ್ ಅನ್ನು ಆನ್ ಮಾಡಿದಾಗ ಎಲ್ಲಾ ಹಾರ್ಡ್‌ವೇರ್ ಮತ್ತು ಸಾಫ್ಟ್‌ವೇರ್ ಮತ್ತೊಮ್ಮೆ ಪ್ರಾರಂಭವಾಗಿ ಡೇಟಾವನ್ನು ಸಹ ರೀಲೋಡ್ ಮಾಡುತ್ತದೆ. ಇದಕ್ಕಿಂತ ಮುಖ್ಯವಾಗಿ, ಇದು ಫೋನ್‌ನ ಸಿಪಿಯು ಅನ್ನು ಮರುಪ್ರಾರಂಭಿಸುತ್ತದೆ. ಇದು ಹೆಚ್ಚಿನ ಶಕ್ತಿಯನ್ನು ಬಳಸುತ್ತದೆ. ಆದರೆ ಸ್ವಿಚ್ ಸಂದರ್ಭದಲ್ಲಿ ಇದು ಆಗುವುದಿಲ್ಲ. ಈ ವಿಧಾನವು ಸ್ವಯಂಚಾಲಿತವಾಗಿ ಕೆಲವು ಹಂತಗಳನ್ನು ಬಿಟ್ಟುಬಿಡುತ್ತದೆ. ಫೋನ್‌ನ ಆಪರೇಟಿಂಗ್ ಸಿಸ್ಟಮ್ ಇಂಟರ್ಫೇಸ್ ಅನ್ನು ನೇರವಾಗಿ ಪ್ರವೇಶಿಸುತ್ತದೆ.

ಫೋನ್ ಅನ್ನು ರೀಸ್ಟಾರ್ಟ್ ಕೊಟ್ಟಾಗ ಇದು ಸಿಸ್ಟಮ್ ಮತ್ತು ಹಾರ್ಡ್‌ವೇರ್ ಅನ್ನು ಪರೀಕ್ಷಿಸುತ್ತದೆ. ಮೊಬೈಲ್‌ನಿಂದ ಜಂಕ್ ಫೈಲ್‌ಗಳನ್ನು ಸಹ ತೆಗೆದುಹಾಕುತ್ತದೆ. ಮತ್ತೊಂದೆಡೆ ಫೋನ್ ಅನ್ನು ಸ್ವಿಚ್ ಆಫ್ ಮಾಡುವುದಕ್ಕೂ ಹಾರ್ಡ್‌ವೇರ್‌ಗೂ ಯಾವುದೇ ಸಂಬಂಧವಿಲ್ಲ. ಆದ್ದರಿಂದ ಯಾವುದೇ ಜಂಕ್ ಫೈಲ್‌ಗಳು ಅಥವಾ ಡೇಟಾವನ್ನು ಇದು ಅಳಿಸುವುದಿಲ್ಲ. ಫೋನ್ ಸ್ವಿಚ್ ಆಫ್ ಮಾಡುವುದು ಮತ್ತು ರೀಸ್ಟಾರ್ಟ್ ಮಾಡುವುದು ಎರಡೂ ಮುಖ್ಯ. ನಿಮ್ಮ ಫೋನ್‌ಗೆ ಯಾವ ಸಂದರ್ಭಗಳಲ್ಲಿ ಸ್ವಿಚ್ ಆಫ್ ಅಥವಾ ರೀಸ್ಟಾರ್ಟ್ ಅವಶ್ಯಕ ಎಂಬುದನ್ನು ನೀವು ಅರ್ಥಮಾಡಿಕೊಳ್ಳಬೇಕು.