Infinix Laptop: ಭಾರತಕ್ಕೆ ಬಂತು ಹೊಸ ಇನ್‌ಫಿನಿಕ್ಸ್ ಲ್ಯಾಪ್‌ಟಾಪ್, ಟೆಕ್ ಮಾರುಕಟ್ಟೆಯಲ್ಲಿ ಸಂಚಲನ; ಬೆಲೆ, ವೈಶಿಷ್ಟ್ಯಗಳ ವಿವರ ಇಲ್ಲಿದೆ
ಕನ್ನಡ ಸುದ್ದಿ  /  ಜೀವನಶೈಲಿ  /  Infinix Laptop: ಭಾರತಕ್ಕೆ ಬಂತು ಹೊಸ ಇನ್‌ಫಿನಿಕ್ಸ್ ಲ್ಯಾಪ್‌ಟಾಪ್, ಟೆಕ್ ಮಾರುಕಟ್ಟೆಯಲ್ಲಿ ಸಂಚಲನ; ಬೆಲೆ, ವೈಶಿಷ್ಟ್ಯಗಳ ವಿವರ ಇಲ್ಲಿದೆ

Infinix Laptop: ಭಾರತಕ್ಕೆ ಬಂತು ಹೊಸ ಇನ್‌ಫಿನಿಕ್ಸ್ ಲ್ಯಾಪ್‌ಟಾಪ್, ಟೆಕ್ ಮಾರುಕಟ್ಟೆಯಲ್ಲಿ ಸಂಚಲನ; ಬೆಲೆ, ವೈಶಿಷ್ಟ್ಯಗಳ ವಿವರ ಇಲ್ಲಿದೆ

ಟೆಕ್ ಮಾರುಕಟ್ಟೆಗೆ ಹೊಸದಾಗಿ ಸ್ಮಾರ್ಟ್‌ಫೋನ್‌ಗಳನ್ನು ಪರಿಚಯಿಸುವ ಇನ್‌ಫಿನಿಕ್ಸ್ ಕಂಪನಿ ಇದೀಗ ಅಚ್ಚರಿ ಎಂಬಂತೆ 'ಇನ್‌ಫಿನಿಕ್ಸ್ ಜೀರೋಬುಕ್ ಆಲ್ಟ್ರಾ ಲ್ಯಾಪ್‌ಟಾಪ್‌' ಬಿಡುಗಡೆ ಮಾಡಿದೆ. ಹುಬ್ಬೇರಿಸುವಂಥ ಫೀಚರ್ಸ್ ಇದರಲ್ಲಿ ಅಡಕವಾಗಿದ್ದು ಟೆಕ್ ಜಗತ್ತನ್ನು ದಂಗಾಗಿಸಿದೆ. ಇದರ ಬೆಲೆ, ವೈಶಿಷ್ಟ್ಯಗಳ ಸಂಪೂರ್ಣ ಮಾಹಿತಿ ಇಲ್ಲಿದೆ. (ಬರಹ: ವಿನಯ್ ಭಟ್)

ಭಾರತಕ್ಕೆ ಬಂತು ಹೊಸ ಇನ್‌ಫಿನಿಕ್ಸ್ ಲ್ಯಾಪ್‌ಟಾಪ್
ಭಾರತಕ್ಕೆ ಬಂತು ಹೊಸ ಇನ್‌ಫಿನಿಕ್ಸ್ ಲ್ಯಾಪ್‌ಟಾಪ್

ಭಾರತದಲ್ಲಿ ಹೆಚ್ಚಾಗಿ ಬಜೆಟ್ ಬೆಲೆಗೆ ಆಕರ್ಷಕ ಸ್ಮಾರ್ಟ್‌ಫೋನ್‌ಗಳನ್ನು ಬಿಡುಗಡೆ ಮಾಡುವ ಪ್ರಸಿದ್ಧ ಇನ್‌ಫಿನಿಕ್ಸ್ ಕಂಪನಿ ಇದೀಗ 'ಇನ್‌ಫಿನಿಕ್ಸ್ ಜೀರೋಬುಕ್ ಆಲ್ಟ್ರಾ' (Infinix ZeroBook Ultra) ಲ್ಯಾಪ್‌ಟಾಪ್ ಅನಾವರಣ ಮಾಡಿದೆ. ಟೆಕ್ ಲೋಕದಲ್ಲಿ ಸಂಚಲನ ಸೃಷ್ಟಿಸಿರುವ ಈ ಹೊಸ ಲ್ಯಾಪ್‌ಟಾಪ್ ಕೃತಕ ಬುದ್ಧಿಮತ್ತೆ (AI) ಸಾಮರ್ಥ್ಯಗಳೊಂದಿಗೆ ಬಿಡುಗಡೆ ಆಗಿದೆ. ಇದು ಇಂಟೆಲ್ ಕೋರ್ ಅಲ್ಟ್ರಾ 9 ಪ್ರೊಸೆಸರ್‌ಗಳನ್ನು ಹೊಂದಿದೆ. ವಿಂಡೋಸ್ 11 ಹೋಮ್ ಔಟ್-ಆಫ್-ದಿ-ಬಾಕ್ಸ್‌ನಲ್ಲಿ ಕಾರ್ಯನಿರ್ವಹಿಸುತ್ತದೆ. ಇನ್‌ಫಿನಿಕ್ಸ್ ಜೀರೋಬುಕ್ ಆಲ್ಟ್ರಾ ಲ್ಯಾಪ್‌ಟಾಪ್‌ನ ಬೆಲೆ ಎಷ್ಟು, ಏನೆಲ್ಲ ಫೀಚರ್ಸ್ ಇವೆ? ನೋಡೋಣ.

ಭಾರತದಲ್ಲಿ ಇನ್‌ಫಿನಿಕ್ಸ್ ಜೀರೋಬುಕ್ ಆಲ್ಟ್ರಾ ಬೆಲೆ ಎಷ್ಟಿದೆ?

ಇನ್‌ಫಿನಿಕ್ಸ್ ಜೀರೋಬುಕ್ ಆಲ್ಟ್ರಾ ಭಾರತದಲ್ಲಿ ಮೂರು ಬೆಲೆಗಳಲ್ಲಿ ಲಭ್ಯವಿದೆ. ಇದರ ಕೋರ್ ಅಲ್ಟ್ರಾ 5 ಪ್ರೊಸೆಸರ್ ಹೊಂದಿರುವ ಮಾದರಿಗೆ 59,990 ರೂ., ಕೋರ್ ಅಲ್ಟ್ರಾ 7 ಮತ್ತು ಕೋರ್ ಅಲ್ಟ್ರಾ 9 ರೂಪಾಂತರಗಳು ಕ್ರಮವಾಗಿ ರೂ. 69,990 ಮತ್ತು 84,990 ರೂಪಾಯಿಗೆ ಮಾರಾಟವಾಗಲಿದೆ. ಇದು ಜುಲೈ 10 ರಂದು ಪ್ರಸಿದ್ಧ ಇ ಕಾಮರ್ಸ್ ತಾಣವಾದ ಫ್ಲಿಪ್‌ಕಾರ್ಟ್ ಮೂಲಕ ಖರೀದಿಗೆ ಲಭ್ಯವಿರುತ್ತದೆ.

ಫ್ಲಿಪ್‌ಕಾರ್ಟ್‌ನಲ್ಲಿ HDFC ಬ್ಯಾಂಕ್ ಕಾರ್ಡ್‌ಗಳನ್ನು ಬಳಸಿಕೊಂಡು ಖರೀದಿ ಮಾಡಿದರೆ 2,000 ರೂಪಾಯಿ ರಿಯಾಯಿತಿ ಇದೆ.

ಇನ್‌ಫಿನಿಕ್ಸ್ ಜೀರೋಬುಕ್ ಆಲ್ಟ್ರಾದ ಮುಖ್ಯ ಫೀಚರ್ಸ್ ಏನು?

ಇನ್‌ಫಿನಿಕ್ಸ್ ಜೀರೋಬುಕ್ ಆಲ್ಟ್ರಾ ವಿಂಡೋಸ್ 11 ಹೋಮ್‌ನಲ್ಲಿ ಕಾರ್ಯನಿರ್ವಹಿಸುತ್ತದೆ. ಇದು 15.6-ಇಂಚಿನ ಪೂರ್ಣ-ಎಚ್‌ಡಿ (1,080x1,920 ಪಿಕ್ಸೆಲ್‌ಗಳು) IPS ಡಿಸ್‌ಪ್ಲೇ ಹೊಂದಿದೆ. 400 nits ಗರಿಷ್ಠ ಬ್ರೈಟ್‌ನೆಸ್ ಮತ್ತು 100 ಪ್ರತಿಶತ sRGB ಬಣ್ಣದಿಂದ ಕೂಡಿದೆ. ಇಂಟೆಲ್ ಆರ್ಕ್ ಗ್ರಾಫಿಕ್ಸ್‌ನೊಂದಿಗೆ ಇಂಟೆಲ್ ಕೋರ್ ಅಲ್ಟ್ರಾ 9 ಪ್ರೊಸೆಸರ್‌ಗಳಿಂದ ಚಾಲಿತವಾಗಿದೆ. CPU ಅನ್ನು 32GB ವರೆಗಿನ LPDDR5X RAM ನೊಂದಿಗೆ ಜೋಡಿಸಲಾಗಿದೆ. AI ಆಧಾರಿತ ಕಾರ್ಯಗಳನ್ನು ನಿರ್ವಹಿಸಲು ಇಂಟೆಲ್ AI ಬೂಸ್ಟ್ ನ್ಯೂರಲ್ ಪ್ರೊಸೆಸಿಂಗ್ ಯುನಿಟ್‌ಗಳನ್ನು (NPU) ಹೊಂದಿದೆ. ವಿಶೇಷವಾಗಿ ಈ ಲ್ಯಾಪ್‌ಟಾಪ್ನಲ್ಲಿ ಗೇಮಿಂಗ್‌ಗಾಗಿ 60fps ಅನ್ನು ನೀಡಲಾಗಿದೆ.

ಬಿಸಿ ಆಗುವುದನ್ನು ತಡೆಗಟ್ಟಲು ಐಸ್ ಸ್ಟೋರ್ಮ್ 2.0 ಕೂಲಿಂಗ್ ವ್ಯವಸ್ಥೆ ಇದೆ. ಇದು ಎರಡು USB 3.0 ಪೋರ್ಟ್‌ಗಳು, ಎರಡು ಯುಎಸ್‌ಬಿ ಟೈಪ್-C ಪೋರ್ಟ್‌ಗಳು, ಎಸ್‌ಡಿ ಕಾರ್ಡ್ ಸ್ಲಾಟ್, 3.5mm ಆಡಿಯೋ ಜ್ಯಾಕ್ ಮತ್ತು HDMI 1.4 ಪೋರ್ಟ್ ಅನ್ನು ಒಳಗೊಂಡಿದೆ. ಲ್ಯಾಪ್‌ಟಾಪ್ ಬ್ಲೂಟೂತ್ 5.3 ಮತ್ತು ವೈ-ಫೈ 6E ಸಂಪರ್ಕವನ್ನು ನೀಡುತ್ತದೆ.

ವಿಡಿಯೋ ಕರೆಗಳಿಗಾಗಿ ಪೂರ್ಣ-ಹೆಚ್‌ಡಿ ವೆಬ್‌ಕ್ಯಾಮ್‌ನೊಂದಿಗೆ ಬಿಡುಗಡೆ ಆಗಿದೆ. ಈ ಕ್ಯಾಮೆರಾ Mi-Pi ಪ್ರೋಟೋಕಾಲ್ ಸಹಾಯದಿಂದ AI-ಆಧಾರಿತ BeautyCam ಫಿಲ್ಟರ್‌ನೊಂದಿಗೆ ಇರುತ್ತದೆ. ಎರಡು ಮೈಕ್ರೊಫೋನ್‌ಗಳನ್ನು ಹೊಂದಿದೆ ಮತ್ತು DTS ಆಡಿಯೋ ಪ್ರಕ್ರಿಯೆಯೊಂದಿಗೆ ಡ್ಯುಯಲ್ 2W ಮೈಕ್ರೊಫೋನ್‌ಗಳನ್ನು ಸಹ ಒಳಗೊಂಡಿದೆ.

ಇನ್‌ಫಿನಿಕ್ಸ್ ಜೀರೋಬುಕ್ ಬ್ಯಾಟರಿ ಹೇಗಿದೆ?

ಇನ್‌ಫಿನಿಕ್ಸ್ ಜೀರೋಬುಕ್ ಆಲ್ಟ್ರಾ 70Wh ಬ್ಯಾಟರಿಯನ್ನು ಹೊಂದಿದ್ದು, ಇದು 100W ಅಡಾಪ್ಟರ್ ಅನ್ನು ಬಳಸಿಕೊಂಡು ವೇಗದ ಚಾರ್ಜಿಂಗ್ ಬೆಂಬಲವನ್ನು ಒದಗಿಸುತ್ತದೆ. ಈ ಬ್ಯಾಟರಿಯ ಮೂಲಕ ಬರೋಬ್ಬರಿ 13 ಗಂಟೆಗಳವರೆಗೆ 1080p ವಿಡಿಯೋ ಪ್ಲೇಬ್ಯಾಕ್ ಅಥವಾ 10 ಗಂಟೆಗಳವರೆಗೆ ವೆಬ್ ಬ್ರೌಸಿಂಗ್ ಮಾಡಬಹುದು ಎಂದು ಕಂಪನಿ ಹೇಳಿದೆ.

Whats_app_banner