ಕನ್ನಡ ಸುದ್ದಿ  /  ಜೀವನಶೈಲಿ  /  ಸ್ಮಾರ್ಟ್‌ಫೋನ್ ಕೈಲಿದ್ರೆ ಈ ವಿಷ್ಯ ನೆಗ್ಲೆಕ್ಟ್ ಮಾಡ್ಬೇಡಿ, ಬ್ಲಾಸ್ಟ್ ಆಗುವ ಮುನ್ನ ಈ ಸಿಗ್ನಲ್ ಕೊಡುತ್ತೆ ಫೋನ್ ಅರ್ಥ ಮಾಡ್ಕೊಳಿ

ಸ್ಮಾರ್ಟ್‌ಫೋನ್ ಕೈಲಿದ್ರೆ ಈ ವಿಷ್ಯ ನೆಗ್ಲೆಕ್ಟ್ ಮಾಡ್ಬೇಡಿ, ಬ್ಲಾಸ್ಟ್ ಆಗುವ ಮುನ್ನ ಈ ಸಿಗ್ನಲ್ ಕೊಡುತ್ತೆ ಫೋನ್ ಅರ್ಥ ಮಾಡ್ಕೊಳಿ

ಇತ್ತೀಚಿನ ದಿನಗಳಲ್ಲಿ ಸ್ಮಾರ್ಟ್‌ಫೋನ್ ಸ್ಫೋಟಗೊಳ್ಳುವುದು ಸಾಮಾನ್ಯವಾಗಿದೆ. ಹಾಗೆಂದು ಫೋನ್ ಇದ್ದಕ್ಕಿದ್ದಂತೆ ಸ್ಫೋಟಗೊಳ್ಳುವುದಿಲ್ಲ. ಇದು ಬ್ಲಾಸ್ಟ್ ಆಗುವ ಮೊದಲು ನಿಮಗೆ ಹಲವಾರು ಸೂಚನೆಗಳನ್ನು ನೀಡುತ್ತದೆ. ಆದರೆ ಜನರು ಇದನ್ನು ನಿರ್ಲಕ್ಷಿಸಿಸುತ್ತಾರೆ. ಫೋನ್ ಸ್ಫೋಟವಾಗುವ ಮೊದಲು ಏನೆಲ್ಲ ಸೂಚನೆ ನೀಡುತ್ತದೆ ಎನ್ನುವ ವಿವರ ಇಲ್ಲಿದೆ. (ಬರಹ: ವಿನಯ್ ಭಟ್)

ಸ್ಮಾರ್ಟ್‌ಫೋನ್ ಕೈಲಿದ್ರೆ ಈ ವಿಷ್ಯ ನೆಗ್ಲೆಕ್ಟ್ ಮಾಡ್ಬೇಡಿ: ಸ್ಮಾರ್ಟ್‌ಫೋನ್ ಸ್ಫೋಟಗೊಳ್ಳುವ ಅಪಾಯಕ್ಕೆ ಮುನ್ನೆಚ್ಚರಿಕೆಯೇ ಮದ್ದು.
ಸ್ಮಾರ್ಟ್‌ಫೋನ್ ಕೈಲಿದ್ರೆ ಈ ವಿಷ್ಯ ನೆಗ್ಲೆಕ್ಟ್ ಮಾಡ್ಬೇಡಿ: ಸ್ಮಾರ್ಟ್‌ಫೋನ್ ಸ್ಫೋಟಗೊಳ್ಳುವ ಅಪಾಯಕ್ಕೆ ಮುನ್ನೆಚ್ಚರಿಕೆಯೇ ಮದ್ದು.

ಇಂದಿನ ಹೈ-ಫೈ ಯುಗದಲ್ಲಿ ಸ್ಮಾರ್ಟ್‌ಫೋನ್ ಬಳಸದಿರುವವರು ಯಾರೂ ಇಲ್ಲ. ಕಿರಿಯರಿಂದ ಹಿಡಿದು-ಹಿರಿಯರವರೆಗೆ ಪ್ರತಿಯೊಂದು ಸಣ್ಣ ಕೆಲಸದಿಂದ ಹಿಡಿದು ದೊಡ್ಡ ಕೆಲಸಕ್ಕೂ ಫೋನ್ ಉಪಯೋಗವಾಗುತ್ತಿದೆ. ಕಡಿಮೆ ಬೆಲೆಗೆ ಆಕರ್ಷಕ ಸ್ಮಾರ್ಟ್‌ಫೋನ್‌ಗಳು ಸಿಗುತ್ತಿರುವುದರಿಂದ ಕೆಲವರು ಎರಡೆರಡು ಫೋನುಗಳನ್ನು ಕೂಡ ಬಳಸುತ್ತಿದ್ದಾರೆ. ಆದರೆ, ಇತ್ತೀಚಿನ ದಿನಗಳಲ್ಲಿ ಫೋನ್ ಬಳಸುವಾಗ ಸಾಕಷ್ಟು ಜಾಗರೂಕರಾಗಿರಬೇಕು. ಇಲ್ಲದಿದ್ದರೆ ನಿಮ್ಮ ಫೋನ್ ಸ್ಫೋಟಗೊಳ್ಳಬಹುದು. ಇಂದು ಸ್ಮಾರ್ಟ್‌ಫೋನ್‌ ಬ್ಲಾಸ್ಟ್ ಆಗುವುದು ಸಾಮಾನ್ಯವಾಗಿದೆ. ಇಂತಹ ಘಟನೆಗಳಲ್ಲಿ ಜನರು ಪ್ರಾಣವನ್ನೂ ಕಳೆದುಕೊಳ್ಳುತ್ತಾರೆ.

ಹಾಗಂತ ಫೋನ್ ಇದ್ದಕ್ಕಿದ್ದಂತೆ ಸ್ಫೋಟಗೊಳ್ಳುವುದಿಲ್ಲ. ಸ್ಫೋಟಗೊಳ್ಳುವ ಮೊದಲು ನಿಮಗೆ ಹಲವಾರು ಸೂಚನೆಗಳನ್ನು ನೀಡುತ್ತದೆ. ಆದರೆ, ಜನರು ಈ ಚಿಹ್ನೆಗಳನ್ನು ನಿರ್ಲಕ್ಷಿಸುತ್ತಾರೆ. ಇದರಿಂದ ದೊಡ್ಡ ತೊಂದರೆ ಅನುಭವಿಸಬೇಕಾಗುತ್ತದೆ. ಫೋನ್ ಸ್ಫೋಟಗೊಳ್ಳುವ ಮೊದಲು ಏನೆಲ್ಲ ಸೂಚನೆ ನೀಡುತ್ತದೆ ಎಂಬ ಬಗ್ಗೆ ಹೇಳುತ್ತೇವೆ. ಇದನ್ನು ತಿಳಿದುಕೊಳ್ಳುವುದರಿಂದ ದೊಡ್ಡ ನಷ್ಟವನ್ನು ತಪ್ಪಿಸಬಹುದು.

ಟ್ರೆಂಡಿಂಗ್​ ಸುದ್ದಿ

ಬ್ಲಾಸ್ಟ್ ಆಗುವ ಮೊದಲು ಫೋನ್ ಬಿಸಿಯಾಗುತ್ತೆ

ಸಾಮಾನ್ಯವಾಗಿ ನೀವು ಫೋನ್ ಬಳಸುತ್ತಿರುವಾಗ ಅದು ಹೆಚ್ಚು ಬಿಸಿಯಾಗುವುದಿಲ್ಲ. ಆದರೆ ಫೋನ್ ಬಿಸಿಯಾಗುವ ಅನುಭವ ನಿಮಗೆ ಆಗುತ್ತಿದ್ದರೆ ಅದನ್ನು ಕಡೆಗಣಿಸಬೇಡಿ. ಫೋನ್ ಹೆಚ್ಚು ಬಿಸಿಯಾಗುತ್ತಿದೆ ಎಂದಾದರೆ ಸಮಸ್ಯೆ ಉಂಟಾಗಲಿದೆ ಎಂದು ಅರ್ಥಮಾಡಿಕೊಳ್ಳಿ. ಹೆಚ್ಚಿನ ಜನರು ಚಾರ್ಜ್ ಮಾಡುವಾಗ ಫೋನ್ ಅನ್ನು ಬಳಸುತ್ತಾರೆ, ಇದರಿಂದಾಗಿ ಫೋನ್‌ನ ಬ್ಯಾಟರಿಗೆ ತೊಂದರೆಯಾಗುತ್ತದೆ.

ಚಾರ್ಜ್‌ ಹಾಕಿ ಮಾತನಾಡುವಾಗ ಫೋನ್ ಬಿಸಿಯಾಗಲು ಆರಂಭಿಸಿದರೆ ನಿರ್ಲಕ್ಷಿಸಬೇಡಿ. ಅಪಾಯದ ಸೂಚನೆ ನಿರ್ಲಕ್ಷಿಸಿ ಫೋನ್ ಅನ್ನು ನಿರಂತರವಾಗಿ ಬಳಸಿದರೆ, ನಿಮ್ಮ ಫೋನ್ ಬ್ಲಾಸ್ಟ್ ಆಗಬಹುದು. ಹೀಗಾಗಿ ನಿಮ್ಮ ಫೋನ್ ಬಿಸಿಯಾಗಲು ಪ್ರಾರಂಭಿಸಿದಾಗ ಅದಕ್ಕೆ ಸ್ವಲ್ಪ ವಿಶ್ರಾಂತಿ ನೀಡಿ. ಚಾರ್ಜಿಂಗ್ ಸಮಯದಲ್ಲಿ ಎಂದಿಗೂ ಫೋನ್ ಬಳಸಬೇಡಿ.

ಬ್ಯಾಟರಿ ಊದಿಕೊಳ್ಳುತ್ತದೆ

ನಾವೆಲ್ಲ ಫೋನ್ ಸ್ಫೋಟಗೊಂಡಿತು ಎಂಬ ಪದವನ್ನು ಉಪಯೋಗಿಸುತ್ತೇವೆ. ಆದರೆ, ಇಲ್ಲಿ ನಿಜವಾಗಿ ಫೋನ್ ಸ್ಫೋಟಗೊಳ್ಳುವುದಿಲ್ಲ ಬದಲಿಗೆ ಫೋನ್‌ನ ಬ್ಯಾಟರಿ ಸ್ಫೋಟಗೊಳ್ಳುತ್ತದೆ. ಹೆಚ್ಚಿನ ಫೋನ್‌ನ ಬ್ಯಾಟರಿಯು ಲಿಥಿಯಂ ಐಯಾನ್ ಬ್ಯಾಟರಿಯಾಗಿದೆ. ಇದು ಕ್ಯಾಥೋಡ್, ಆನೋಡ್ ಮತ್ತು ಎಲೆಕ್ಟ್ರೋಲೈಟ್‌ನಿಂದ ಮಾಡಲ್ಪಟ್ಟಿದೆ. ಆದರೆ, ನೀವು ಫೋನ್ ಅನ್ನು ಸರಿಯಾಗಿ ನೋಡಿಕೊಳ್ಳದಿದ್ದರೆ, ಸರಿಯಾದ ಕ್ರಮದಲ್ಲಿ ಚಾರ್ಜ್ ಮಾಡದಿದ್ದರೆ, ಗಂಟೆಗಟ್ಟಲೆ ಚಾರ್ಜ್ ಮಾಡಲು ಬಿಟ್ಟರೆ ಫೋನ್‌ನ ಬ್ಯಾಟರಿ ಹಾಳಾಗುತ್ತದೆ.

ಹೀಗೆ ಮಾಡಿದಾಗ ಈ ಕಾರಣದಿಂದಾಗಿ ಬ್ಯಾಟರಿಯು ಆಂತರಿಕವಾಗಿ ಉಬ್ಬುತ್ತದೆ. ದಿನದಿಂದ ದಿನಕ್ಕೆ ಅದರ ಸಾಮರ್ಥ್ಯವು ಕಡಿಮೆಯಾಗುತ್ತದೆ. ಕೆಲ ಟೆಕ್ ಪಂಡಿತರ ಪ್ರಕಾರ, ಆಂಡ್ರಾಯ್ಡ್ ಫೋನ್ ಅನ್ನು ಶೇ 90 ಕ್ಕಿಂತ ಹೆಚ್ಚು ಚಾರ್ಜ್ ಮಾಡಬಾರದು. ಆ್ಯಪಲ್ ಐಫೋನ್ ಅನ್ನು ಶೇ 80 ರಷ್ಟು ಚಾರ್ಜ್ ಮಾಡಿದರೆ ಒಳ್ಳೆಯದು. ಹೆಚ್ಚು ಸಮಯ ಚಾರ್ಜ್ ಮಾಡುವುದರಿಂದ ಚಾರ್ಜ್‌ ವೇಗವಾಗಿ ಬರಿದಾಗುತ್ತದೆ, ಫೋನ್ ಹಾಳಾಗುತ್ತದೆ. ಇದನ್ನೆಲ್ಲ ಅನೇಕ ಜನರು ನಿರ್ಲಕ್ಷಿಸುತ್ತಾರೆ ಮುಂದೊಂದು ದಿನ ಫೋನ್ ಸ್ಫೋಟಗೊಳ್ಳುತ್ತದೆ.

ಈ ರೀತಿ ಮಾಡುತ್ತಿದ್ದರೆ ಇಂದೇ ನಿಲ್ಲಿಸಿ

1) ರಾತ್ರಿಯ ಹೊತ್ತು ಫೋನ್ ಅನ್ನು ನಿಮ್ಮ ದಿಂಬಿನ ಕೆಳಗೆ ಅಥವಾ ನಿಮ್ಮ ಜೇಬಿನಲ್ಲಿ ಇಟ್ಟುಕೊಂಡು ಮಲಗುವುದನ್ನು ತಪ್ಪಿಸಿ.

2) ಮೊಬೈಲ್ ಅನ್ನು ಯಾವಾಗಲೂ ತಂಪಾದ ಸ್ಥಳದಲ್ಲಿ ಇರಿಸಿ, ದೀರ್ಘಕಾಲದವರೆಗೆ ಸೂರ್ಯನ ಬೆಳಕಿಗೆ ಒಡ್ಡಬೇಡಿ.

3) ರಾತ್ರಿಯಿಡೀ ಫೋನ್ ಚಾರ್ಜ್ ಮಾಡುವ ಅಭ್ಯಾಸ ಫೋನ್‌ನ ಬ್ಯಾಟರಿಯನ್ನು ಹಾಳು ಮಾಡುತ್ತದೆ.

4) ಚಾರ್ಜ್ ಮಾಡುವಾಗ ಫೋನ್ ಬಳಸಬೇಡಿ.

5) ಹೆಚ್ಚು ಬ್ಯಾಟರಿಯನ್ನು ಬಳಸುವ ಅಪ್ಲಿಕೇಶನ್‌ಗಳನ್ನು ಅನ್ಇನ್ಸ್ಟಾಲ್ ಮಾಡಿ.

6) ನಿಮ್ಮ ಫೋನ್‌ನೊಂದಿಗೆ ಬಂದಿರುವ ಚಾರ್ಜರ್‌ನೊಂದಿಗೆ ಚಾರ್ಜ್ ಮಾಡಿ. ಡುಪ್ಲಿಕೇಟ್ ಚಾರ್ಜರ್ ಬಳಸಬೇಡಿ.

7) ಯಾವಾಗಲೂ ಒರಿಜಿನಲ್ ಮತ್ತು ಉತ್ತಮ ಕಂಪನಿಯ ಬ್ಯಾಟರಿಗಳನ್ನೇ ಬಳಸಿ. ನಕಲಿ ಬ್ಯಾಟರಿಗಳು ಯಾವುದೇ ಸಮಯದಲ್ಲಿ ಸ್ಫೋಟಗೊಳ್ಳಬಹುದು.