UPI transaction limit: ಸೆ 16ರಿಂದ ಯುಪಿಐ ಹಣ ವರ್ಗಾವಣೆ ಮಿತಿಯಲ್ಲಿ ಮಹತ್ತರ ಬದಲಾವಣೆ, 5 ಲಕ್ಷ ರೂವರೆಗೆ ಹಣ ಕಳುಹಿಸಲು ಅವಕಾಶ-technology news upi transaction limit increased to 5 lakh for some types of payments from september 16 pcp ,ಜೀವನಶೈಲಿ ಸುದ್ದಿ
ಕನ್ನಡ ಸುದ್ದಿ  /  ಜೀವನಶೈಲಿ  /  Upi Transaction Limit: ಸೆ 16ರಿಂದ ಯುಪಿಐ ಹಣ ವರ್ಗಾವಣೆ ಮಿತಿಯಲ್ಲಿ ಮಹತ್ತರ ಬದಲಾವಣೆ, 5 ಲಕ್ಷ ರೂವರೆಗೆ ಹಣ ಕಳುಹಿಸಲು ಅವಕಾಶ

UPI transaction limit: ಸೆ 16ರಿಂದ ಯುಪಿಐ ಹಣ ವರ್ಗಾವಣೆ ಮಿತಿಯಲ್ಲಿ ಮಹತ್ತರ ಬದಲಾವಣೆ, 5 ಲಕ್ಷ ರೂವರೆಗೆ ಹಣ ಕಳುಹಿಸಲು ಅವಕಾಶ

UPI transaction limit: ಸೆಪ್ಟೆಂಬರ್‌ 16 ಅಂದರೆ ಇಂದಿನಿಂದ ಯುಪಿಐ ಹಣ ವರ್ಗಾವಣೆ ಮಿತಿಯಲ್ಲಿ ಮಹತ್ತರ ಬದಲಾವಣೆಯಾಗಿದೆ. ನಿರ್ದಿಷ್ಟ ಹಣ ವರ್ಗಾವಣೆಯ ಮಿತಿ ಹೆಚ್ಚಿಸಲಾಗಿದೆ. ತೆರಿಗೆ ಪಾವತಿ, ಐಪಿಒ, ಆಸ್ಪತ್ರೆ, ಶಿಕ್ಷಣ ಸಂಸ್ಥೆಗಳಿಗೆ ಯುಪಿಐ ಪಾವತಿ ಮಿತಿಯನ್ನು ಹೆಚ್ಚಿಸಲಾಗಿದೆ.

ಸೆ 16ರಿಂದ ಯುಪಿಐ ಹಣ ವರ್ಗಾವಣೆ ಮಿತಿಯಲ್ಲಿ ಮಹತ್ತರ ಬದಲಾವಣೆ ಘೋಷಣೆ ಮಾಡಲಾಗಿದೆ
ಸೆ 16ರಿಂದ ಯುಪಿಐ ಹಣ ವರ್ಗಾವಣೆ ಮಿತಿಯಲ್ಲಿ ಮಹತ್ತರ ಬದಲಾವಣೆ ಘೋಷಣೆ ಮಾಡಲಾಗಿದೆ

UPI transaction limit: ನಿರ್ದಿಷ್ಟ ಸೇವೆ ಮತ್ತು ವ್ಯವಹಾರಗಳಿಗೆ ಗೂಗಲ್‌ ಪೇ, ಫೋನ್‌ ಪೇ ಮುಂತಾದ ಯುಪಿಐ ಪಾವತಿ ವಿಧಾನಗಳ ಮೂಲಕ ಹಣ ವರ್ಗಾವಣೆ ಮಾಡುವ ಮಿತಿಯನ್ನು ಹೆಚ್ಚಿಸಲಾಗಿದೆ. ನ್ಯಾಷನಲ್‌ ಪೇಮೆಂಟ್‌ ಕಾರ್ಪೊರೇಷನ್‌ ಆಫ್‌ ಇಂಡಿಯಾವು (ಎನ್‌ಪಿಸಿಐ) ತನ್ನ ಪಾವತಿ ಮಿತಿಯಲ್ಲಿ ಮಹತ್ತರ ಬದಲಾವಣೆ ಮಾಡಿದ್ದು, ಲಕ್ಷಾಂತರ ತೆರಿಗೆ ಪಾವತಿದಾರರಿಗೆ ಪ್ರಯೋಜನಕಾರಿಯಾಗಲಿದೆ. ವರದಿಗಳ ಪ್ರಕಾರ ವ್ಯಕ್ತಿಯೊಬ್ಬರು ಯೂನಿಫೈಡ್‌ ಪೇಮೆಂಟ್‌ ಇಂಟರ್‌ಫೇಸ್‌ ಅಥವಾ ಯುಪಿಐ ಐಡಿಯೊಂದರ ಮೂಲಕ ಒಂದೇ ಬಾರಿ 5 ಲಕ್ಷ ರೂಪಾಯಿ ತೆರಿಗೆ ಪಾವತಿಸಬಹುದು.

ತೆರಿಗೆ ಪಾವತಿಗೆ ಮಾತ್ರ ಈ ಯುಪಿಐ ಮಿತಿ ಹೆಚ್ಚಳವಿರುವುದಿಲ್ಲ. ಇನ್ನೂ ಹಲವು ಸೇವೆ ಮತ್ತು ವಹಿವಾಟುಗಳಿಗೆ ಯುಪಿಐ ಪಾವತಿ ಮಿತಿ ಹೆಚ್ಚಿಸಲಾಗಿದೆ. ಇದಕ್ಕೆ ಸಂಬಂಧಪಟ್ಟಂತೆ ಆಗಸ್ಟ್‌ 24ರಂದು ಎನ್‌ಪಿಸಿಐಯು ಸುತ್ತೋಲೆ ಹೊರಡಿಸಿತ್ತು. ಭಾರತದಲ್ಲಿ ತೆರಿಗೆ ಪಾವತಿದಾರರಿಗೆ ತೆರಿಗೆ ಪಾವತಿಯನ್ನು ಸರಳೀಕೃತಗೊಳಿಸುವ ಸಲುವಾಗಿ ತೆರಿಗೆ ಪಾವತಿ ಮಿತಿಯನ್ನು ಹೆಚ್ಚಿಸಲಾಗಿದೆ. ನೀವು ಐದು ಲಕ್ಷ ರೂಪಾಯಿ ತೆರಿಗೆ ಪಾವತಿಸಬೇಕಿದ್ದರೆ ಗೂಗಲ್‌ ಪೇ, ಫೋನ್‌ ಪೇ ಮುಂತಾದ ಯುಪಿಐ ಮೂಲಕವೇ ಪಾವತಿಸಬಹುದು.

ತೆರಿಗೆ ಮಾತ್ರವಲ್ಲದೆ ಇನ್ನಿತರ ಹಣ ವರ್ಗಾವಣೆಗೂ ನೂತನ ಯುಪಿಐ ಹಣ ವರ್ಗಾವಣೆ ಮಿತಿ ಹೆಚ್ಚಿಸಲಾಗಿದೆ. ಆಸ್ಪತ್ರೆಗಳಿಗೆ, ಶೈಕ್ಷಣಿಕ ಸಂಸ್ಥೆಗಳಿಗೆ, ಐಪಿಒಗಳಿಗೆ ಮತ್ತು ಆರ್‌ಬಿಐ ರಿಟೇಲ್‌ ಡೈರೆಕ್ಟ್‌ ಸ್ಮೀಮ್‌ಗಳಿಗೆ ಯುಪಿಐ ಐಡಿ ಮೂಲಕ ಹಣ ವರ್ಗಾವಣೆ ಮಿತಿ ಹೆಚ್ಚಿಸಲಾಗಿದೆ. ಹೊಸ ಮಿತಿಗೆ ಸಂಬಂಧಪಟ್ಟಂತೆ ಬ್ಯಾಂಕ್‌ಗಳು ಮತ್ತು ಯುಪಿಐ ಆಪ್‌ಗಳ ನಡುವೆ ಸಮನ್ವಯತೆ ಕಾಪಾಡಿಕೊಳ್ಳುವಂತೆ ಸೂಚಿಸಲಾಗಿದೆ.

ನೆನಪಿಡಿ, ನಿರ್ದಿಷ್ಟು ಯುಪಿಐ ವ್ಯವಹಾರಗಳಿಗೆ ಮಾತ್ರ ಈ ರೀತಿ ಹಣ ವರ್ಗಾವಣೆ ಮಿತಿ ಹೆಚ್ಚಿಸಲಾಗಿದೆ. ಈ ಫೀಚರ್‌ ಲಭ್ಯವಿರುವುದೇ ಎಂದು ಯುಪಿಐ ಆಪ್‌ ಬಳಕೆದಾರರು ಪರಿಶೀಲಿಸಿಕೊಳ್ಳಬಹುದು. "ಬ್ಯಾಂಕ್‌ಗಳು, ಹಣಕಾಸು ಸೇವಾ ಪೂರೈಕೆದಾರರು ಮತ್ತು ಯುಪಿಐ ಆಪ್‌ಗಳು ತಮ್ಮ ಸಿಸ್ಟಮ್‌ಗಳನ್ನು ನೂತನ ನಿಯಮಕ್ಕೆ ತಕ್ಕಂತೆ ಬದಲಾಯಿಸಿಕೊಳ್ಳಬೇಕು" ಎಂದು ಸೂಚಿಸಿಸಲಾಗಿದೆ. ಈ ಹಿಂದೆ ಯುಪಿಐ ಮೂಲಕ ತೆರಿಗೆ ಪಾವತಿಸುವ ಮಿತಿ 1 ಲಕ್ಷ ರೂಪಾಯಿ ಇತ್ತು.

ವ್ಯಕ್ತಿಯಿಂದ ವ್ಯಕ್ತಿಗೆ ಯುಪಿಐ ಹಣ ವರ್ಗಾವಣೆ ಮಿತಿ 1 ಲಕ್ಷ ರೂ.ವರೆಗೆ ಇದೆ. ಆದರೆ, ಬ್ಯಾಂಕ್‌ಗಳು ಯುಪಿಐ ಪಾವತಿಗೆ ಸಂಬಂಧಪಟ್ಟಂತೆ ತಮ್ಮ ಸ್ವಂತ ಮಿತಿಯನ್ನು ಹಾಕಲು ಅವಕಾಶವಿದೆ. ಕೆಲವೊಂದು ಬ್ಯಾಂಕ್‌ಗಳು ದಿನಕ್ಕೆ 25 ಸಾವಿರ ರೂಪಾಯಿಗಿಂತ ಹೆಚ್ಚು ಮೊತ್ತವನ್ನು ಯುಪಿಐ ಖಾತೆಯಿಂದ ವರ್ಗಾಯಿಸಲು ಅವಕಾಶ ನೀಡುವುದಿಲ್ಲ. ಅಲಹಾಬಾದ್‌ ಬ್ಯಾಂಕ್‌ 25 ಸಾವಿರ ಯುಪಿಐ ಮಿತಿ ಹಾಕಿಕೊಂಡಿದ್ದರೆ, ಎಚ್‌ಡಿಎಫ್‌ಸಿ, ಐಸಿಐಸಿಐನಂತಹ ಬ್ಯಾಂಕ್‌ಗಳು ವ್ಯಕ್ತಿಯಿಂದ ವ್ಯಕ್ತಿಗೆ 1 ಲಕ್ಷ ರೂಪಾಯಿವರೆಗೆ ಯುಪಿಐ ಹಣ ವರ್ಗಾವಣೆಗೆ ಅನುಮತಿಸುತ್ತವೆ.

mysore-dasara_Entry_Point