Second Hand Laptop: ಹಳೆ ಲ್ಯಾಪ್‌ಟಾಪ್‌ ಖರೀದಿಸುವಾಗ ತಪ್ಪದೇ ಈ 6 ಅಂಶಗಳನ್ನು ಗಮನಿಸಿ; ಸೆಕೆಂಡ್‌ ಹ್ಯಾಂಡ್‌ ಖರೀದಿ ತಪ್ಪಲ್ಲ!-technology news used refurbished laptops buying guide 6 things you should know before buying a second hand laptop pcp ,ಜೀವನಶೈಲಿ ಸುದ್ದಿ
ಕನ್ನಡ ಸುದ್ದಿ  /  ಜೀವನಶೈಲಿ  /  Second Hand Laptop: ಹಳೆ ಲ್ಯಾಪ್‌ಟಾಪ್‌ ಖರೀದಿಸುವಾಗ ತಪ್ಪದೇ ಈ 6 ಅಂಶಗಳನ್ನು ಗಮನಿಸಿ; ಸೆಕೆಂಡ್‌ ಹ್ಯಾಂಡ್‌ ಖರೀದಿ ತಪ್ಪಲ್ಲ!

Second Hand Laptop: ಹಳೆ ಲ್ಯಾಪ್‌ಟಾಪ್‌ ಖರೀದಿಸುವಾಗ ತಪ್ಪದೇ ಈ 6 ಅಂಶಗಳನ್ನು ಗಮನಿಸಿ; ಸೆಕೆಂಡ್‌ ಹ್ಯಾಂಡ್‌ ಖರೀದಿ ತಪ್ಪಲ್ಲ!

Second Hand Laptop Buying Guide: ಈಗ ಅತ್ಯುತ್ತಮ ಫೀಚರ್‌, ರಾಮ್‌, ಸ್ಥಳಾವಕಾಶ ಇರುವ ಲ್ಯಾಪ್‌ಟಾಪ್‌ ಖರೀದಿಸಲು ಐವತ್ತು ಲಕ್ಷ ರೂಪಾಯಿ ಆಸುಪಾಸಿನಲ್ಲಿ ಖರ್ಚು ಮಾಡಬೇಕಾಗುತ್ತದೆ. ಇಂತಹ ಸಮಯದಲ್ಲಿ ಸೆಕೆಂಡ್‌ ಹ್ಯಾಂಡ್‌ ಲ್ಯಾಪ್‌ಟಾಪ್‌ ಖರೀದಿಸಲು ಹೆಚ್ಚಿನವರು ಆದ್ಯತೆ ನೀಡುತ್ತಿದ್ದಾರೆ.

Second Hand Laptop: ಹಳೆ ಲ್ಯಾಪ್‌ಟಾಪ್‌ ಖರೀದಿಸುವಾಗ ತಪ್ಪದೇ ಈ 6 ಅಂಶಗಳನ್ನು ಗಮನಿಸಿ
Second Hand Laptop: ಹಳೆ ಲ್ಯಾಪ್‌ಟಾಪ್‌ ಖರೀದಿಸುವಾಗ ತಪ್ಪದೇ ಈ 6 ಅಂಶಗಳನ್ನು ಗಮನಿಸಿ

Second Hand Laptop Buying Guide: ಈಗ ಕಡಿಮೆ ದರಕ್ಕೆ ಒಳ್ಳೆಯ ಸೆಕೆಂಡ್‌ ಹ್ಯಾಂಡ್‌ ಆಫೀಸ್‌ ಲ್ಯಾಪ್‌ಟಾಪ್‌ ದೊರಕಬಹುದು. ಅದೇ ಫೀಚರ್‌ನ ಹೊಸ ಲ್ಯಾಪ್‌ಟಾಪ್‌ ಖರೀದಿಸಲು ಐವತ್ತು ಸಾವಿರ ರೂಪಾಯಿಗಿಂತ ಹೆಚ್ಚು ಹಣ ನೀಡಬೇಕಾಗಬಹುದು. 20-30 ಸಾವಿರ ರೂಪಾಯಿಯ ಹೊಸ ಲ್ಯಾಪ್‌ಟಾಪ್‌ ನಿಮ್ಮ ಅವಶ್ಯಕತೆ ಪೂರೈಸದೆ ಇರಬಹುದು. ಇಂತಹ ಸಮಯದಲ್ಲಿ ಹಳೆ ಲ್ಯಾಪ್‌ಟಾಪ್‌ ಖರೀದಿಸಲು ಸಾಕಷ್ಟು ಜನರು ಮುಂದಾಗುತ್ತಾರೆ. ಸೆಕೆಂಡ್‌ ಹ್ಯಾಂಡ್‌ ಲ್ಯಾಪ್‌ಟಾಪ್‌ ಖರೀದಿಸುವುದು ತಪ್ಪಲ್ಲ. ಆದರೆ, ಖರೀದಿ ಸಮಯದಲ್ಲಿ ತುಸು ಎಚ್ಚರಿಕೆವಹಿಸಿ ತೆಗೆದುಕೊಂಡರೆ ಒಳ್ಳೆಯದು. ಸೆಕೆಂಡ್‌ಹ್ಯಾಂಡ್‌ ಲ್ಯಾಪ್‌ಟಾಪ್‌ ಖರೀದಿಸುವಾಗ ಈ ಮುಂದಿನ ಅಂಶಗಳನ್ನು ಗಮನಿಸಿ.

ಲ್ಯಾಪ್‌ಟಾಪ್‌ ಬಾಡಿ ಗಮನಿಸಿ

ಲ್ಯಾಪ್‌ಟಾಪ್‌ನ ಬಾಡಿಯನ್ನು ಎಚ್ಚರಿಕೆಯಿಂದ ಗಮನಿಸಿ. ಗೀರುಗಳು, ಮಾರ್ಕ್‌ಗಳು ಇರೋದನ್ನು ಮಾತ್ರ ನೋಡಬೇಡಿ. ಏನಾದರೂ ಇನ್‌ಫೆಕ್ಷನ್‌ ಆದಂತೆ ಇದೆಯಾ ನೋಡಿ. ಎಲ್ಲಾದರೂ ಲ್ಯಾಪ್‌ಟಾಪ್‌ ಬಿದ್ದ ಗುರುತು ಇದೆಯೇ ನೋಡಿ. ಹೆಚ್ಚು ಎತ್ತರದಿಂದ ಬಿದ್ದು ಲ್ಯಾಪ್‌ಟಾಪ್‌ನ ಒಳಗೂ ಹಾನಿಯಾಗಿರಬಹುದು. ಎಲ್ಲಾ ಸ್ಕ್ರೂಗಳು ಸರಿಯಾಗಿ ಜೋಡಣೆಯಾಗಿವೆಯೇ ನೋಡಿ.

ಸ್ಕ್ರೀನ್‌ ಗುಣಮಟ್ಟ

 ಲ್ಯಾಪ್‌ಟಾಪ್‌ ಸ್ಕ್ರೀನ್‌ ಹೇಗಿದೆ ಎಂದು ಲ್ಯಾಪ್‌ಟಾಪ್‌ ಆನ್‌ ಮಾಡಿ ನೋಡಿ. ಫ್ಲಾಷಿಂಗ್‌, ಬಣ್ಣ ಮಾಸಿರುವುದು, ಬ್ರೈಟ್‌ನೆಸ್‌ ತೊಂದರೆಗಳು ಇವೆಯೇ ಎಂದು ನೋಡಿ. ಯಾವುದಾದರೂ ವಿಡಿಯೋ ಪ್ಲೇ ಮಾಡಿ ನೋಡಿದ್ರೆ ಪರದೆಯಲ್ಲಿರುವ ತೊಂದರೆಗಳನ್ನು ಸರಿಯಾಗಿ ಗುರುತಿಸಬಹುದು.

ಬ್ಯಾಟರಿ ಲೈಫ್‌

 ಬ್ಯಾಟರಿ ಗುಣಮಟ್ಟ ಉತ್ತಮ ಇದ್ದರೆ ನಿಮಗೆ ಲ್ಯಾಪ್‌ಟಾಪ್‌ ಹೆಚ್ಚು ಅನುಕೂಲಕರ. ಅಂಗಡಿಯಲ್ಲಿ ಸೆಕೆಂಡ್‌ ಹ್ಯಾಂಡ್‌ ಲ್ಯಾಪ್‌ಟಾಪ್‌ ಖರೀದಿಸುವ ಮುನ್ನ ಫುಲ್‌ ಚಾರ್ಜ್‌ ಮಾಡಿ ಒಂದಿಷ್ಟು ಹೊತ್ತು ಆನ್‌ ಮಾಡಿಡಿ, ಅವಕಾಶ ದೊರಕಿದರೆ ಕೊಂಚ ಬಳಸಿ. ಬ್ಯಾಟರಿ ಎಷ್ಟು ಬೇಗ ಖಾಲಿಯಾಗುತ್ತದೆ ಎಂದು ನೋಡಿ. ಬ್ಯಾಟರಿ ಚಾರ್ಜ್‌ ಸಮರ್ಪಕವಾಗುವುದೇ ನೋಡಿ. ಬ್ಯಾಟರಿ ಗುಣಮಟ್ಟ ಚೆನ್ನಾಗಿಲ್ಲದಿದ್ದರೆ ಖರೀದಿಸಬೇಡಿ ಅಥವಾ ದರ ಇನ್ನಷ್ಟು ಕಡಿಮೆ ಮಾಡುವಂತೆ ಚೌಕಾಶಿ ಮಾಡಿ.

ಕೀಬೋರ್ಡ್‌ ಮತ್ತು ಟ್ರ್ಯಾಕ್‌ಪ್ಯಾಡ್‌

ಲ್ಯಾಪ್‌ಟಾಪ್‌ನ ಎಲ್ಲಾ ಕೀಲಿಗಳು ಸರಿಯಾಗಿ ಕೆಲಸ ಮಾಡುವುದೇ ಎಂದು ನೋಡಿ. ನೋಟ್‌ಪ್ಯಾಡ್‌ ಅಥವಾ ಎಂಎಸ್‌ ವರ್ಡ್‌ ತೆರೆದು ಟೈಪ್‌ ಮಾಡಿ. ಪ್ರತಿಯೊಂದು ಕೀಗಳನ್ನು ಪರಿಶೀಲಿಸಿ. ಯೂಸ್ಡ್‌ ಲ್ಯಾಪ್‌ಟಾಪ್‌ ಮಾರೋರು ಕೀಬರ್ಡ್‌ ಎಲ್ಲಾ ಕ್ಲೀನ್‌ ಮಾಡಿಟ್ಟಿರುತ್ತಾರೆ. ಹೀಗಾಗಿ, ತುಸು ಸೂಕ್ಷ್ಮವಾಗಿ ಗಮನಿಸಿ.

ಪೋರ್ಟ್‌ಗಳು, ಸಿಡಿ, ಡಿವಿಡಿ ಡ್ರೈವ್‌ಗಳು

 ಈಗ ಸಿಡಿ, ಡಿವಿಡಿಯ ಲ್ಯಾಪ್‌ಟಾಪ್‌ ಬರೋದು ಕಡಿಮೆ. ಪೆನ್‌ಡ್ರೈವ್‌ ಹಾಕುವ ಪೋರ್ಟ್‌ಗಳು, ಎಚ್‌ಡಿಎಂಐ ಪೋರ್ಟ್‌, ಯುಎಸ್‌ಬಿ ಪೋರ್ಟ್‌ಗಳನ್ನು ಪರಿಶೀಲಿಸಿ. ಹೆಡ್‌ಫೋನ್‌ ಜಾಕ್‌ ಹಾಕಿ ಹಾಡು ಕೇಳಲು ಮರೆಯಬೇಡಿ.

ಸ್ಪೀಕರ್‌ ಮತ್ತು ವೆಬ್‌ ಕ್ಯಾಮ್‌ ಪರಿಶೀಲಿಸಿ

 ಲ್ಯಾಪ್‌ಟಾಪ್‌ನಲ್ಲಿ ಸ್ಪೀಕರ್‌ ಮತ್ತು ವೆಬ್‌ ಕ್ಯಾಮ್‌ ಉತ್ತಮವಾಗಿರಬೇಕು. ಮುಂದೊಮ್ಮೆ ನೀವು ಉದ್ಯೋಗ ಸಂದರ್ಶನಕ್ಕೆ ವೆಬ್‌ ಕ್ಯಾಮ್‌ನಲ್ಲಿ ಇಂಟರ್‌ವ್ಯೂ ಎದುರಿಸಬೇಕಾಗಬಹುದು. ಸ್ಪೀಕರ್‌ ಗುಣಮಟ್ಟವನ್ನೂ ಪರಿಶೀಲಿಸಿ.

mysore-dasara_Entry_Point