ಇಂದಿನಿಂದ ಭಾರತದಲ್ಲಿ ವಿವೋ ವಿ40 ಪ್ರೊ ಮಾರಾಟ; ಐಫೋನ್‌ಗೆ ಸಮನಾದ ಈ ಫೋನ್ ಬೆಲೆ ಹಾಗೂ ವೈಶಿಷ್ಟ್ಯ ತಿಳಿಯಿರಿ
ವಿವೋ ವಿ40 ಪ್ರೊ ಸ್ಮಾರ್ಟ್‌ಫೋನ್ ಭಾರತದಲ್ಲಿ ಇಂದಿನಿಂದ ಮಾರಾಟವಾಗುತ್ತಿದೆ. ಫಾಸ್ಟ್ ಚಾರ್ಜಿಂಗ್, ಗುಣಮಟ್ಟದ ಕ್ಯಾಮೆರಾ, 6.78 ಡಿಸ್ಪ್ಲೇ ಸೇರಿದಂತೆ ಹಲವು ಫೀಚರ್‌ಗಳನ್ನು ಹೊಂದಿವೆ. ಐಫೋನ್ ಪೀಚರ್‌ಗಳಿಗಿಂತಲೂ ಹೆಚ್ಚಿನ ವೈಶಿಷ್ಟ್ಯಗಳು ಇದರಲ್ಲಿವೆ.
ವಿವೋ ಕಂಪನಿಯು ಇತ್ತೀಚೆಗಷ್ಟೇ ಭಾರತದಲ್ಲಿ ವಿ40 ಸರಣಿಯನ್ನು ಬಿಡುಗಡೆ ಮಾಡಿದೆ. ಇದರಲ್ಲಿ ವಿವೋ ವಿ40 ಮತ್ತು ವಿ40 ಪ್ರೊ ಮಾದರಿಗಳು (Vivo V40 and V40 Pro) ಸೇರಿವೆ. ರಿಲೀಸ್ ಆದ ಬಳಿಕ ವಿವೋ ವಿ40 ಪ್ರೊ ಮೊಬೈಲ್ ಫೋನ್‌ಗಳು ಭಾರತದಲ್ಲಿ ಇಂದಿನಿಂದ ಖರೀದಿಗೆ ಲಭ್ಯವಿದೆ. ಕಂಪನಿಯು ಇಂದಿನಿಂದ ಭಾರತದಲ್ಲಿ ಮಾರಾಟವನ್ನು ಆರಂಭಿಸಿದೆ. ಪ್ರೊ ಮಾದರಿಯು ಮೀಡಿಯಾಟೆಕ್ 9200+ ಪ್ರೊಸೆಸರ್ ಇದ್ದು, ವೇಗದ ಸಂಪರ್ಕವನ್ನು ನೀಡುತ್ತದೆ. ಜೊತೆಗೆ 80 ವ್ಯಾಟ್ ಫಾಸ್ಟ್ ಚಾರ್ಜಿಂಗ್ ಬೆಂಬಲಿಸುತ್ತದೆ. ಆಕರ್ಷಕ ಡಿಸೈನ್ ಕೂಡಾ ಹೊಂದಿರುವ ಫೋನ್‌ನ ಬೆಲೆ, ಫೀಚರ್‌ಗಳು ಸೇರಿದಂತೆ ವಿವಿಧ ಆಫರ್‌ಗಳ ಕುರಿತು ನೋಡೋಣ.
ಭಾರತದಲ್ಲಿ ಇಂದಿನಿಂದ ಫ್ಲಿಪ್ಕಾರ್ಟ್, ವಿವೋ ಇಂಡಿಯಾ ಇ-ಸ್ಟೋರ್ ಮತ್ತು ವಿವಿಧ ಚಿಲ್ಲರೆ ವ್ಯಾಪಾರಿಗಳಿಂದ ಈ ಫೋನ್ ಖರೀದಿಸಬಹುದು.
ಏನೆಲ್ಲಾ ಆಫರ್‌ಗಳಿವೆ?
ಖರೀದಿದಾರರು 6 ತಿಂಗಳ ಉಚಿತ ಅಪಘಾತ ಮತ್ತು ದ್ರವ ಹಾನಿ ರಕ್ಷಣೆ ಪಡೆಯಬಹುದು. ಇದರ ಜೊತೆಗೆ 10 ಪ್ರತಿಶತದಷ್ಟು ತ್ವರಿತ ಕ್ಯಾಶ್‌ಬ್ಯಾಕ್ ಮಾತ್ರವಲ್ಲದೆ, ಶೂನ್ಯ ಡೌನ್ ಪೇಮೆಂಟ್‌ನೊಂದಿಗೆ 12 ತಿಂಗಳ ಇಎಂಐ ಯೋಜನೆ ಕೂಡಾ ಲಭ್ಯವಿದೆ. ಇದಕ್ಕೆ ಹೆಚ್ಚುವರಿಯಾಗಿ, ವಿವೋ ವಿ-ಶೀಲ್ಡ್‌ನಲ್ಲಿ 40 ಪ್ರತಿಶತದಷ್ಟು ರಿಯಾಯಿತಿ ಮತ್ತು ಎಸ್‌ಬಿಐ, ಎಚ್‌ಡಿಎಫ್‌ಸಿ, ಕೋಟಕ್ ಮಹೀಂದ್ರಾ ಮತ್ತು ಐಡಿಎಫ್‌ಸಿ ಫಸ್ಟ್ ಬ್ಯಾಂಕ್‌ನಂಥ ಬ್ಯಾಂಕುಗಳೊಂದಿಗೆ ವಿವೋ ಅಪ್‌ಗ್ರೇಡ್ ಮೂಲಕ 10 ಪ್ರತಿಶತದಷ್ಟು ವಿನಿಮಯ ಬೋನಸ್ ಪಡೆಯಬಹುದು.
ವಿವೋ ವಿ 40 ಪ್ರೊ ವೈಶಿಷ್ಟ್ಯಗಳು
ವಿವೋ ವಿ 40 ಪ್ರೊ ಮಾದರಿಯು 6.78 ಇಂಚಿನ ಅಮೋಲೆಡ್ (AMOLED)ಡಿಸ್ಪ್ಲೇ ಹೊಂದಿದ್ದು, 1260 x 2800 ಪಿಕ್ಸೆಲ್‌ಗಳ ರೆಸಲ್ಯೂಶನ್ ಹೊಂದಿದೆ. ಎಚ್‌ಡಿಆರ್ 10+ ಮತ್ತು 120 ಹೆರ್ಟ್ಜ್ ರಿಫ್ರೆಶ್ ರೇಟ್ ಬೆಂಬಲಿಸುತ್ತದೆ. ಈ ಫೋನ್ 164.2 x 74.9 x 7.6 ಎಂಎಂ ಅಳತೆ ಮತ್ತು 192 ಗ್ರಾಂ ತೂಕ ಹೊಂದಿದೆ. ಡ್ಯುಯಲ್ ಸಿಮ್ (ನ್ಯಾನೋ-ಸಿಮ್, ಡ್ಯುಯಲ್ ಸ್ಟ್ಯಾಂಡ್-ಬೈ) ಮತ್ತು ಇ-ಸಿಮ್ ಬೆಂಬಲಿಸುತ್ತದೆ. ಇಷ್ಟೇ ಅಲ್ಲದೆ ಧೂಳು ಮತ್ತು ನೀರಿನ ಪ್ರತಿರೋಧಕ್ಕಾಗಿ ಐಪಿ 68-ರೇಟಿಂಗ್ ಹೊಂದಿದೆ. ವಿವೋ ವಿ 40 ಪ್ರೊ 80 ವ್ಯಾಟ್ ವೈರ್ಡ್ ಮತ್ತು ರಿವರ್ಸ್ ವೈರ್ಡ್ ಚಾರ್ಜಿಂಗ್ ಸಾಮರ್ಥ್ಯಗಳೊಂದಿಗೆ 5500 ಎಂಎಎಚ್ ಬ್ಯಾಟರಿಯಿಂದ ನಿಯಂತ್ರಿಸಲ್ಪಡುತ್ತದೆ.
50mp ಕ್ಯಾಮೆರಾ ಸೆಟಪ್
ಈ ಫೋನ್ ಟ್ರಿಪಲ್ ರಿಯರ್ ಕ್ಯಾಮೆರಾ ಸೆಟಪ್ ಹೊಂದಿದೆ. 50 ಎಂಪಿ ವೈಡ್ ಲೆನ್ಸ್, 2 ಎಕ್ಸ್ ಆಪ್ಟಿಕಲ್ ಜೂಮ್ ಹೊಂದಿರುವ 50 ಮೆಗಾಪಿಕ್ಸೆಲ್ ಟೆಲಿಫೋಟೋ ಲೆನ್ಸ್ ಮತ್ತು 50 ಮೆಗಾಪಿಕ್ಸೆಲ್ ಅಲ್ಟ್ರಾವೈಡ್ ಲೆನ್ಸ್, ಎಲ್ಇಡಿ ಫ್ಲ್ಯಾಶ್‌ಲೈಟ್‌ನೊಂದಿಗೆ ಸೆಟಪ್ ಮಾಡಲಾಗಿದೆ. ಹೆಚ್ಚುವರಿಯಾಗಿ, ಇದು ಗೈರೊ-ಇಐಎಸ್ ಮತ್ತು ಒಐಎಸ್ ಬಳಸಿ ಸೆಕೆಂಡಿಗೆ 30 ಫ್ರೇಮ್‌ಗಳಲ್ಲಿ 4ಕೆ ವಿಡಿಯೋ ರೆಕಾರ್ಡ್ ಮಾಡಬಹುದು. ಸೆಲ್ಫಿ ಪ್ರಿಯರಿಗಾಗಿಯೂ ವಿಶೇಷ ಆಯ್ಕೆ ಇದರಲ್ಲಿದೆ. 50 ಎಂಪಿ ಫ್ರಂಟ್ ಫೇಸಿಂಗ್ ಕ್ಯಾಮೆರಾ ಇದರಲ್ಲಿದೆ.
ವಿವೋ ವಿ40 ಪ್ರೊ ಬೆಲೆ
ವಿವೋ ವಿ40 ಪ್ರೊ ಮಾದರಿಯ 8 ಜಿಬಿ ರ್ಯಾಮ್ + 256 ಜಿಬಿ ಸ್ಟೋರೇಜ್ ವೇರಿಯಂಟ್ ಬೆಲೆ 49,999 ರೂಪಾಯಿಗಳಿಂದ ಆರಂಭವಾಗುತ್ತದೆ. ಇದೇ ವೇಳೆ 12 ಜಿಬಿ ರಾಮ್ + 512 ಜಿಬಿ ಮಾದರಿಗೆ 55,999 ರೂಪಾಯಿ ನಿಗದಿಪಡಿಸಲಾಗಿದೆ. ಈ ಫೋನ್ ಗಂಗಾ ಬ್ಲೂ ಮತ್ತು ಟೈಟಾನಿಯಂ ಗ್ರೇ ಬಣ್ಣಗಳಲ್ಲಿ ಲಭ್ಯವಿದೆ.
ಇನ್ನಷ್ಟು ಟೆಕ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಒದಿ | ಆಕರ್ಷಕ ಫೀಚರ್ವುಳ್ಳ ಅತಿ ಕಡಿಮೆ ಬೆಲೆಯ ಸ್ಮಾರ್ಟ್‌ಫೋನ್ ಬಿಡುಗಡೆಗೊಳಿಸಿದ ರೆಡ್ಮಿ: ಹೆಚ್ಚಿನ ಮಾಹಿತಿಗಾಗಿ ಇಲ್ಲಿ ಓದಿ