ವಾರೇವ್ಹಾ ವಾಟ್ಸಪ್‌, 10 ಬ್ಯಾಕ್‌ಗ್ರೌಂಡ್‌ಗಳು, 10 ಫಿಲ್ಟರ್‌ಗಳು; ವಾಟ್ಸಪ್‌ ವಿಡಿಯೋ ಕಾಲ್‌ ಅನುಭವ ಇನ್ನಷ್ಟು ಸೊಗಸು
ಕನ್ನಡ ಸುದ್ದಿ  /  ಜೀವನಶೈಲಿ  /  ವಾರೇವ್ಹಾ ವಾಟ್ಸಪ್‌, 10 ಬ್ಯಾಕ್‌ಗ್ರೌಂಡ್‌ಗಳು, 10 ಫಿಲ್ಟರ್‌ಗಳು; ವಾಟ್ಸಪ್‌ ವಿಡಿಯೋ ಕಾಲ್‌ ಅನುಭವ ಇನ್ನಷ್ಟು ಸೊಗಸು

ವಾರೇವ್ಹಾ ವಾಟ್ಸಪ್‌, 10 ಬ್ಯಾಕ್‌ಗ್ರೌಂಡ್‌ಗಳು, 10 ಫಿಲ್ಟರ್‌ಗಳು; ವಾಟ್ಸಪ್‌ ವಿಡಿಯೋ ಕಾಲ್‌ ಅನುಭವ ಇನ್ನಷ್ಟು ಸೊಗಸು

ವಾಟ್ಸಪ್‌ನಲ್ಲಿ ವಿಡಿಯೋ ಕಾಲ್‌ ಅನುಭವ ಇನ್ನಷ್ಟು ಸೊಗಸಾಗಲಿದೆ. 10 ಬ್ಯಾಕ್‌ಗ್ರೌಂಡ್‌ಗಳು, 10 ಫಿಲ್ಟರ್‌ಗಳು ಮತ್ತು ವೈವಿಧ್ಯಮಯ ಆಯ್ಕೆಗಳ ಮೂಲಕ ವಿಡಿಯೋ ಕಾಲ್‌ನಲ್ಲಿ ಹೊಸ ಅನುಭವ ಪಡೆಯಬಹುದು. ವಾಟ್ಸಪ್‌ ಲೇಟೆಸ್ಟ್‌ ಅಪ್‌ಡೇಟ್‌ ಕುರಿತು ಇಲ್ಲಿದೆ ವಿವರ.

ವಾಟ್ಸಪ್‌ ವಿಡಿಯೋ ಕಾಲ್‌ಗೆ ಹೊಸ ಬ್ಯಾಕ್‌ಗ್ರೌಂಡ್‌, ಫಿಲ್ಟರ್‌ಗಳು ಸೇರ್ಪಡೆಗೊಳ್ಳಲಿವೆ.
ವಾಟ್ಸಪ್‌ ವಿಡಿಯೋ ಕಾಲ್‌ಗೆ ಹೊಸ ಬ್ಯಾಕ್‌ಗ್ರೌಂಡ್‌, ಫಿಲ್ಟರ್‌ಗಳು ಸೇರ್ಪಡೆಗೊಳ್ಳಲಿವೆ. (PIXABAY)

ವಾಟ್ಸಪ್‌ ಬಳಕೆದಾರರಿಗೆ ಖುಷಿಯ ಸುದ್ದಿ. ವಾಟ್ಸಪ್‌ ವಿಡಿಯೋ ಕಾಲ್‌ ಅನುಭವವನ್ನು ಇನ್ನಷ್ಟು ಸೊಗಸಾಗಿಸಲು ಮೆಟಾ ಕಂಪನಿಯು ಕಳೆದ ಹಲವು ತಿಂಗಳಿನಿಂದ ಪ್ರಯತ್ನಿಸುತ್ತಿದೆ. ಇದೀಗ ಬೀಟಾ ಅಪ್‌ಡೇಟ್‌ನಲ್ಲಿ ಹೊಸ ಫೀಚರ್‌ಗಳು ಕಾಣಿಸಿವೆ. . ಮೆಟಾ ಮಾಲೀಕತ್ವದ ವಾಟ್ಸಪ್‌ನಲ್ಲಿ ವಿಡಿಯೋ ಕಾಲ್‌ಗಳಿಗೆ ಫಿಲ್ಟರ್‌ಗಳು ಮತ್ತು ಬ್ಯಾಕ್‌ಗ್ರೌಂಡ್‌ಗಳನ್ನು ಹಾಕುವಂತಹ ಅವಕಾಶ ನೀಡಲಾಗುತ್ತಿದೆ. ಈ ಫೀಚರ್‌ಗಳನ್ನು ಬಹುಕಾಲದಿಂದ ಟೆಸ್ಟಿಂಗ್‌ ಮಾಡಲಾಗುತ್ತದೆ. ಇದೀಗ ವಾಟ್ಸಪ್‌ ಅಂತಿಮವಾಗಿ ಈ ಫಿಲ್ಟರ್‌ಗಳು ಮತ್ತು ಬ್ಯಾಕ್‌ಗ್ರೌಂಡ್‌ಗಳನ್ನು ಲಾಂಚ್‌ ಮಾಡುವ ಕುರಿತು ಘೋಷಿಸಿದೆ. ಈ ಎಫೆಕ್ಟ್‌ಗಳ ಪರಿಣಾಮವಾಗಿ ವಿಡಿಯೋ ಕಾಲ್‌ ಸಮಯದಲ್ಲಿ ಬ್ಯಾಕ್‌ಗ್ರೌಂಡ್‌ ಬದಲಾಯಿಸಬಹುದು, ಫಿಲ್ಟರ್‌ಗಳನ್ನು ಅಳವಡಿಸಬಹುದು. ಈ ಮೂಲಕ ವಿಡಿಯೋ ಕಾಲ್‌ಗೆ ಪರ್ಸನಲ್‌ ಟಚ್‌ ನೀಡಬಹುದು.

ಫಿಲ್ಟರ್‌ಗಳ ಮೂಲಕ ನೀವು ವಾಟ್ಸಪ್‌ನಲ್ಲಿ ಹೊಸ ಅನುಭವ ಪಡೆಯಬಹುದು. ಹೊಸ ಬಣ್ಣಗಳನ್ನು ಹಾಕಿ ವಿಡಿಯ ಕಾಲ್‌ ಸಂದರ್ಭದಲ್ಲಿ ಕಲಾತ್ಮಕ ಫೀಲ್‌ ಪಡೆಯಬಹುದು. ವಿಡಿಯೋ ಕಾಲ್‌ಗೆ ಬ್ಯಾಕ್‌ಗ್ರೌಂಡ್‌ ಹಾಕುವ ಮೂಲಕ ಹೊಸ ಅನುಭವ ಪಡೆಯಬಹುದು. ಕಾಫಿ ಶಾಪ್‌ ಅಥವಾ ಲಿವಿಂಗ್‌ ಕೊಠಡಿ ಅಥವಾ ಬೇರೆ ಬ್ಯಾಕ್‌ ಗ್ರೌಂಡ್‌ಗಳನ್ನು ಹಾಕಬಹುದು.

ಯಾವೆಲ್ಲ ಫಿಲ್ಟರ್‌ಗಳು, ಬ್ಯಾಕ್‌ಗ್ರೌಂಡ್‌ಗಳು ಇರಲಿವೆ?

ವಾಟ್ಸಪ್‌ನಲ್ಲಿ 10 ಫಿಲ್ಟರ್‌ಗಳು , 10 ಬ್ಯಾಕ್‌ಗ್ರೌಂಡ್‌ಗಳು ಲಭ್ಯವಿರಲಿದೆ. ವಿಶಿಷ್ಟ ಲುಕ್‌ ಪಡೆಯಲು ಮಿಕ್ಸಿಂಗ್‌ ಮಾಡಬಹುದು. ವಾರ್ಮ್‌, ಕೂಲ್‌, ಕಪ್ಪು ಮತ್ತು ಬಿಳುಪು, ಲೈಟ್‌ ವೀಕ್‌, ಡ್ರೀಮಿ, ಪ್ರಿಸಮ್‌ ಲೈಟ್‌, ಫಿಶಿ, ವಿಂಟೇಜ್‌ಟಿವಿ, ಫ್ರೊಸ್ಟೆಡ್‌ ಗ್ಲಾಸ್‌, ಡ್ಯೂಯೊ ಟೋನ್‌ ಫಿಲ್ಟರ್‌ಗಳು ಲಭ್ಯ ಇವೆ. ಬ್ಲರ್‌, ಲಿವಿಂಗ್‌ ರೂಂ, ಆಫೀಸ್‌, ಕಾಫಿ, ಪೆಬ್ಲಸ್‌, ಫುಡ್ಡಿ, ಸ್ಮೂಸ್‌, ಬೀಚ್‌, ಸನ್‌ಸೆಟ್‌, ಸೆಲೆಬ್ರೆಷನ್‌ ಮತ್ತು ಫಾರೆಸ್ಟ್‌ ಬ್ಯಾಕ್‌ಗ್ರೌಂಡ್‌ಗಳನ್ನು ಹಾಕಿಕೊಳ್ಳಬಹುದು.

ಇಷ್ಟು ಮಾತ್ರವಲ್ಲದೆ ಕಂಪನಿಯು ಟಚ್‌ ಅಪ್‌ ಮತ್ತು ಲೋ ಲೈಟ್‌ ಆಯ್ಕೆಯನ್ನು ವಿಡಿಯೋ ಕಾಲ್‌ಗೆ ನೀಡುತ್ತದೆ. ವಿಡಿಯೋ ಕಾಲ್‌ ಇದರಿಂದ ಇನ್ನಷ್ಟು ಸೊಗಸಾಗಿರಲಿದೆ.

ಈ ಫೀಚರ್‌ಗಳನ್ನು ಬಳಸುವುದು ಹೇಗೆ?

ವಾಟ್ಸಪ್‌ ವಿಡಿಯೋ ಕಾಲ್‌ ಫಿಲ್ಟರ್‌ಗಳು ಮತ್ತು ಬ್ಯಾಕ್‌ಗ್ರೌಂಡ್‌ಗಳನ್ನು ವಿಡಿಯೋ ಕಾಲ್‌ ಸಂದರ್ಭದಲ್ಲಿ ಬಳಕೆ ಮಾಡಬಹುದು.

1:1 ಅಥವಾ ಗ್ರೂಪ್‌ ವಿಡಿಯೋ ಕಾಲ್‌ ಸಂದರ್ಭದಲ್ಲಿ ಸ್ಕ್ರೀನ್‌ನಲ್ಲಿರುವ ಮೇಲ್ಭಾಗದ ಬಲಭಾಗದಲ್ಲಿರುವ ಫಿಲ್ಟರ್‌ಗಳು ಮತ್ತು ಬ್ಯಾಕ್‌ಗ್ರೌಂಡ್‌ಗಳು ಆಯ್ಕೆಯನ್ನು ಟಿಕ್‌ ಮಾಡಬಹುದು. ಬಳಿಕ ನಿಮ್ಮ ಮೂಡ್‌ಗೆ ತಕ್ಕಂತೆ ಬ್ಯಾಕ್‌ಗ್ರೌಂಡ್‌ ಬದಲಾಯಿಸಿಕೊಳ್ಳಬೇಕು. ಫಿಲ್ಟರ್‌ಗಳನ್ನು ಹಾಕಿಕೊಳ್ಳಬಹುದು.

ಸದ್ಯ ಈ ಫೀಚರ್‌ ವಾಟ್ಸಪ್‌ ಬೀಟಾ ವರ್ಷನ್‌ಗಳಲ್ಲಿ ಕಾಣಿಸುತ್ತಿದೆ. ಮುಂಬರುವ ವಾರಗಳಲ್ಲಿ ಎಲ್ಲರ ವಾಟ್ಸಪ್‌ಗಳಲ್ಲಿಯೂ ಕಾಣಿಸಿಕೊಳ್ಳಲಿದೆ.