Buttonless Smartphone: ಶಓಮಿಯಿಂದ ಜಗತ್ತಿನ ಮೊದಲ ಬಟನ್‌ರಹಿತ ಸ್ಮಾರ್ಟ್‌ಫೋನ್‌, ಪ್ರೊಟೋಟೈಪ್‌ ವಿನ್ಯಾಸ ಸೋರಿಕೆ-technology news worlds first button less smartphone coming soon more details about wangshu zhuque pcp ,ಜೀವನಶೈಲಿ ಸುದ್ದಿ
ಕನ್ನಡ ಸುದ್ದಿ  /  ಜೀವನಶೈಲಿ  /  Buttonless Smartphone: ಶಓಮಿಯಿಂದ ಜಗತ್ತಿನ ಮೊದಲ ಬಟನ್‌ರಹಿತ ಸ್ಮಾರ್ಟ್‌ಫೋನ್‌, ಪ್ರೊಟೋಟೈಪ್‌ ವಿನ್ಯಾಸ ಸೋರಿಕೆ

Buttonless Smartphone: ಶಓಮಿಯಿಂದ ಜಗತ್ತಿನ ಮೊದಲ ಬಟನ್‌ರಹಿತ ಸ್ಮಾರ್ಟ್‌ಫೋನ್‌, ಪ್ರೊಟೋಟೈಪ್‌ ವಿನ್ಯಾಸ ಸೋರಿಕೆ

Buttonless smartphone: ಬಟನ್‌ಗಳೇ ಇಲ್ಲದ ಜಗತ್ತಿನ ಮೊದಲ ಸ್ಮಾರ್ಟ್‌ಫೋನ್‌ ಆಗಮಿಸಲಿದೆ. ವರದಿಗಳ ಪ್ರಕಾರ, ಶಓಮಿ ಕಂಪನಿಯು ಜಗತ್ತಿನ ಮೊದಲ ಬಟನ್‌ಲೆಸ್‌ ಸ್ಮಾರ್ಟ್‌ಫೋನ್‌ ಅನ್ನು 2025ಕ್ಕೆ ಪರಿಚಯಿಸಲಿದೆ. ಈ ಕುರಿತು ಹೆಚ್ಚಿನ ವಿವರ ಇಲ್ಲಿದೆ.

Buttonless Smartphone: ಶಓಮಿಯಿಂದ ಜಗತ್ತಿನ ಮೊದಲ ಬಟನ್‌ರಹಿತ ಸ್ಮಾರ್ಟ್‌ಫೋನ್‌
Buttonless Smartphone: ಶಓಮಿಯಿಂದ ಜಗತ್ತಿನ ಮೊದಲ ಬಟನ್‌ರಹಿತ ಸ್ಮಾರ್ಟ್‌ಫೋನ್‌ (REUTERS)

Buttonless smartphone: ಸ್ಮಾರ್ಟ್‌ಫೋನ್‌ ಎಂದಾಗ ಅದರಲ್ಲಿ ಆನ್‌-ಆಫ್‌ ಬಟನ್‌, ವಾಲ್ಯೂಮ್‌ ಹೆಚ್ಚಿಸುವ ಮತ್ತು ವಾಲ್ಯೂಮ್‌ ಮಾಡುವ ಕಡಿಮೆ ಬಟನ್‌ಗಳೆಲ್ಲ ಇರುತ್ತವೆ. ಇಂತಹ ಫಿಸಿಕಲ್‌ ಬಟನ್‌ ಇಲ್ಲದ ಜಗತ್ತಿನ ಮೊದಲ ಸ್ಮಾರ್ಟ್‌ಫೋನ್‌ ಅನ್ನು ಪರಿಚಯಿಸುವ ಪ್ರಯತ್ನದಲ್ಲಿ ಶಓಮಿ ಕಂಪನಿ ಇದೆಯಂತೆ. ಕಂಪನಿಯು ಒಂದೂವರೆ ವರ್ಷಗಳ ಹಿಂದೆಯೇ ಇಂತಹ ಬಟನ್‌ರಹಿತ ಫೋನ್‌ ಮಾಡುವ ಪ್ರಯತ್ನ ಮಾಡಿತ್ತು. ಆದರೆ, Wangshu ಹೆಸರಿನ ಈ ಸ್ಮಾರ್ಟ್‌ಫೊನ್‌ ಅನ್ನು ಮಾರುಕಟ್ಟೆಗೆ ಲಾಂಚ್‌ ಮಾಡುವ ಕುರಿತು ಯಾವುದೇ ವಿವರ ನೀಡಿರಲಿಲ್ಲ. ಆದರೆ, ಇದೀಗ ಮತ್ತೆ ಈ ವಿಷಯ ಮುನ್ನೆಲೆಗೆ ಬಂದಿದೆ. ಕಂಪನಿಯು ಬಹುಶಃ ಈ ಫೋನ್‌ ಅನ್ನು ಮಾರುಕಟ್ಟೆಗೆ ತರುವ ಸಿದ್ಧತೆಯಲ್ಲಿದೆ. ಗಿಜ್ಮೊನಿಯಾ ವೆಬ್‌ಸೈಟ್‌ನ ಇತ್ತೀಚಿನ ವರದಿ ಪ್ರಕಾರ 2025ರಲ್ಲಿ ವಾಂಗ್ಸೂ ಸ್ಮಾರ್ಟ್‌ಫೋನ್‌ ಆಗಮಿಸಲಿದೆ. ಇದೇ ಸಮಯದಲ್ಲಿ ಈ ವೆಬ್‌ಸೈಟ್‌ನಲ್ಲಿ ಈ ಫೋನ್‌ನ ಸೋರಿಕೆಯಾದ ಫೋಟೋಗಳನ್ನು ಪ್ರಕಟಿಸಿದೆ. ಚೀನಾದ ಜನಪ್ರಿಯ ಟೆಕ್‌ ಚರ್ಚಾ ತಾಣ ಕೂಲ್‌ಎಪಿಕೆಯಲ್ಲಿ ಯಾರೋ ಹಂಚಿಕೊಂಡ ಪ್ರೋಟೋಟೈಪ್‌ ಫೋಟೋವನ್ನು ಗಿಜ್ಮೊನಿಯಾ ಹಂಚಿಕೊಂಡಿದೆ.

ಶಓಮಿ ವಾಂಗ್ಸೂ: ಜಗತ್ತಿನ ಮೊದಲ ಬಟನ್‌ಲೆಸ್‌ ಸ್ಮಾರ್ಟ್‌ಫೋನ್‌

ಶಓಮಿ ವಾಂಗ್ಸೂ ಎಂಬ ಸ್ಮಾರ್ಟ್‌ಫೋನ್‌ ಎಂಐಎಕ್ಸ್‌ ಸರಣಿಯಲ್ಲಿ ಆಗಮಿಸಲಿದೆ. ಇಲ್ಲಿಯವರೆಗೆ ಯಾವುದೇ ಕಂಪನಿಯು ಬಟನ್‌ ರಹಿತ ಸ್ಮಾರ್ಟ್‌ಫೋನ್‌ ಪರಿಚಯಿಸಿಲ್ಲ. ಈ ಲೀಕ್‌ ಆದ ಚಿತ್ರದಲ್ಲಿ ಎಂಐಎಕ್ಸ್‌ ಲೋಗೊ ಇದೆ. ಈ ಲೀಕ್ಡ್‌ ಫೋಟೋವನ್ನು ಕೂಲ್‌ ಎಪಿಕೆ ಫೋರಮ್‌ನಲ್ಲಿ ಹಂಚಿಕೊಂಡಿರುವ ಎನ್‌ವಿಲ್‌ ಎಂಬ ಬಳಕೆದಾರರ ಪ್ರಕಾರ ಈ ಸ್ಮಾರ್ಟ್‌ಫೋನ್‌ 2K 120Hz LTPO ಡಿಸ್‌ಪ್ಲೇ ಹೊಂದಿರಲಿದೆ. ಇದರಲ್ಲಿ 4500 ಎಂಎಎಚ್‌ ಬ್ಯಾಟರಿ ಇರಲಿದೆ. ಈ ಬ್ಯಾಟರಿಯು 200 ವ್ಯಾಟ್‌ ಮತ್ತು 50 ವೈರ್‌ಲೆಸ್‌ ಚಾರ್ಚಿಂಗ್‌ ಬೆಂಬಲ ಹೊಂದಿರಲಿದೆ.

ಆ ವರದಿಯ ಪ್ರಕಾರ ವಾಂಗ್ಸೂ ಸ್ಮಾರ್ಟ್‌ಫೋನ್‌ ಕ್ವಾಲ್‌ಕಾಂ ಸ್ನಾಪ್‌ಡ್ರಾಗನ್‌ 8 ಜನರೇಷನ್‌ 2 ಎಸ್‌ಒಸಿ ಹೊಂದಿರಲಿದೆ. ಅಂಡರ್‌ಡಿಸ್‌ಪ್ಲೇ ಕ್ಯಾಮೆರವೂ ಇದರಲ್ಲಿದೆ. ಸದ್ಯ ಈ ಕುರಿತು ನಡೆಯುತ್ತಿರುವ ಚರ್ಚೆಯನ್ನು ನಂಬೋದಾದ್ರೆ ಶಓಮಿ ಕಂಪನಿಯು ತನ್ನ ಮೊದಲ ಮತ್ತು ಜಗತ್ತಿನ ಮೊದಲ ಬಟನ್‌ಲೆಸ್‌ ಸ್ಮಾರ್ಟ್‌ಫೋನ್‌ ಅನ್ನು 2025ಕ್ಕೆ ಮಾರುಕಟ್ಟೆಗೆ ಪರಿಚಯಿಸಲಿದೆ. ಆದರೆ, ಮಾರುಕಟ್ಟೆಗೆ ಆಗಮಿಸುವ ಮಾಡೆಲ್‌ ಬೇರೆ ಆಗಿರಲಿದೆ.

ಚೀನಾದ ಕೆಲವು ಟೆಕ್‌ ಕಂಪನಿಗಳು ಕೂಡ ಎಂಐಎಕ್ಸ್‌ ಡಿವೈಸ್‌ನ ಪ್ರೋಟೋಟೈಪ್‌ ಮಾದರಿಗಳನ್ನು ಮಾಡಲು ಪ್ರಯತ್ನಿಸುತ್ತಿವೆ ಎಂದು ವರದಿ ತಿಳಿಸಿದೆ. ಇನ್ನು ಕೆಲವು ವರದಿಗಳ ಪ್ರಕಾರ ಶಓಮಿ ಕಂಪನಿಯು Zhuque ಹೆಸರಿನಲ್ಲಿ ಈ ಬಟನ್‌ಲೆಸ್‌ ಸ್ಮಾರ್ಟ್‌ಫೋನ್‌ ಅಭಿವೃದ್ಧಿಪಡಿಸುತ್ತಿದೆ.

ಒಟ್ಟಾರೆ ಸ್ಮಾರ್ಟ್‌ಫೋನ್‌ ಮಾರುಕಟ್ಟೆಯಲ್ಲಿ ಹೊಸ ಹೊಸ ಪ್ರಯೋಗಗಳು ನಡೆಯುತ್ತಿದೆ. ಶಓಮಿ ಕಂಪನಿಯ ಈ ಬಟನ್‌ಲೆಸ್‌ ಸ್ಮಾರ್ಟ್‌ಫೋನ್‌ ಮಾರುಕಟ್ಟೆಗೆ ಬಂದರೆ ಹೊಸ ಬದಲಾವಣೆಗೆ ನಾಂದಿಯಾಗಲಿದೆ. ಉಳಿದ ಕಂಪನಿಗಳೂ ಇದೇ ರೀತಿಯ ಫೋನ್‌ಗಳನ್ನು ಹೊರತರುವ ಸಾಧ್ಯತೆಗಳಿವೆ. ಮುಂದಿನ ದಿನಗಳಲ್ಲಿ ಪವರ್‌ ಬಟನ್‌, ವಾಲ್ಯೂಮ್‌ ಅಪ್‌ ಮತ್ತು ಡೌನ್‌ ಬಟನ್‌ಗಳು ಕಾಣೆಯಾಗುವ ಸಾಧ್ಯತೆಗಳಿವೆ.

mysore-dasara_Entry_Point