Nubia Z60 Ultra: ನುಬಿಯಾ Z60 ಅಲ್ಟ್ರಾ ಫೋನ್‌ ಅನಾವರಣ; 6000mAh ಬ್ಯಾಟರಿ, ಟ್ರಿಪಲ್‌ ಕ್ಯಾಮೆರಾ; ಹೀಗಿದೆ ವೈಶಿಷ್ಟ್ಯ
ಕನ್ನಡ ಸುದ್ದಿ  /  ಜೀವನಶೈಲಿ  /  Nubia Z60 Ultra: ನುಬಿಯಾ Z60 ಅಲ್ಟ್ರಾ ಫೋನ್‌ ಅನಾವರಣ; 6000mah ಬ್ಯಾಟರಿ, ಟ್ರಿಪಲ್‌ ಕ್ಯಾಮೆರಾ; ಹೀಗಿದೆ ವೈಶಿಷ್ಟ್ಯ

Nubia Z60 Ultra: ನುಬಿಯಾ Z60 ಅಲ್ಟ್ರಾ ಫೋನ್‌ ಅನಾವರಣ; 6000mAh ಬ್ಯಾಟರಿ, ಟ್ರಿಪಲ್‌ ಕ್ಯಾಮೆರಾ; ಹೀಗಿದೆ ವೈಶಿಷ್ಟ್ಯ

ಸ್ಮಾರ್ಟ್‌ಫೋನ್‌ಗಳ ದುನಿಯಾದಲ್ಲಿ ಭಾರಿ ಬೇಡಿಕೆಯ ಬ್ರ್ಯಾಂಡ್‌ ಆಗಿರುವ ನುಬಿಯಾ ಈಗ ನುಬಿಯಾ Z60 ಅಲ್ಟ್ರಾ ಸ್ಮಾರ್ಟ್‌ಫೋನ್‌ ಅನ್ನು ಬಿಡುಗಡೆ ಮಾಡಿದೆ. 6000mAh ಬ್ಯಾಟರಿ ಮತ್ತು ಜಬರ್ದಸ್ತ್‌ ಕ್ಯಾಮೆರಾದೊಂದಿಗೆ ಅನಾವರಣಗೊಂಡಿರುವ ಈ ಫೋನ್‌ನ ಬೆಲೆ, ವೈಶಿಷ್ಟ್ಯಗಳು ಹೀಗಿವೆ.

ನುಬಿಯಾ Z60 ಅಲ್ಟ್ರಾ ಸ್ಮಾರ್ಟ್‌ಫೋನ್‌ (PC: intl.nubia.com)
ನುಬಿಯಾ Z60 ಅಲ್ಟ್ರಾ ಸ್ಮಾರ್ಟ್‌ಫೋನ್‌ (PC: intl.nubia.com)

ಗೇಮಿಂಗ್‌ ಸ್ಮಾರ್ಟ್‌ಫೋನ್‌ ತಯಾರಿಕೆಗೆ ಹೆಸರುವಾಸಿಯಾದ ನುಬಿಯಾ ಕಂಪನಿ ಈಗ ಹೊಸ ಪೋನ್‌ ಲಾಂಚ್‌ ಮಾಡಿದೆ. ಸ್ಮಾರ್ಟ್‌ಫೋನ್‌ಗಳ ದುನಿಯಾದಲ್ಲಿ ಭಾರಿ ಬೇಡಿಕೆಯ ಬ್ರ್ಯಾಂಡ್‌ ಆಗಿರುವ ನುಬಿಯಾ ಈಗ ನುಬಿಯಾ Z60 ಅಲ್ಟ್ರಾ ಸ್ಮಾರ್ಟ್‌ಫೋನ್‌ ಅನ್ನು ಬಿಡುಗಡೆ ಮಾಡಿದೆ. 6000mAh ಬ್ಯಾಟರಿ ಮತ್ತು ಜಬರ್ದಸ್ತ್‌ ಕ್ಯಾಮೆರಾದೊಂದಿಗೆ ಅನಾವರಣಗೊಂಡಿದೆ. ಈ ಪವರ್‌ಫುಲ್‌ ಹ್ಯಾಂಡ್‌ಸೆಟ್‌ ಸ್ನಾಪ್‌ಡ್ರ್ಯಾಗನ್‌ 8 ಜೆನ್‌ SoC ಪ್ರೊಸೆಸ್ಸರ್‌ ಹೊಂದಿದ್ದು, ಝಡ್‌ಟಿಇ ಸಬ್‌–ಬ್ರ್ಯಾಂಡ್‌ನ ಫ್ಲಾಗ್‌ಶಿಪ್‌ನಲ್ಲಿ ಬಿಡುಗಡೆ ಮಾಡಲಾಗಿದೆ. 6.8 ಇಂಚಿನ ದೊಡ್ಡದಾದ OLED ಡಿಸ್ಪ್ಲೇ ಹೊಂದಿರುವ ಈ ಫೋನ್‌ 120Hz ರಿಫ್ರೆಶ್‌ ದರ ಹೊಂದಿದೆ. ನೀರು ಮತ್ತು ಧೂಳ ಅನ್ನು ಪ್ರತಿರೋಧಿಸಲು IP68 ಅನ್ನು ಹೊಂದಿದೆ. 50 ಮೆಗಾಪಿಕ್ಸಲ್‌ ಪ್ರೈಮರಿ ಕ್ಯಾಮರಾದೊಂದಿಗೆ ಹಿಂಬದಿಯಲ್ಲಿ ಟ್ರಿಪಲ್‌ ಕ್ಯಾಮರಾ ಸೆಟ್‌ಅಪ್‌ ಅನ್ನು ಹೊಂದಿದೆ. ಎರಡು ಬಣ್ಣಗಳ ಆಯ್ಕೆಯಲ್ಲಿ ಬಿಡುಗಡೆಯಾದ ನುಬಿಯಾ Z60 ಅಲ್ಟ್ರಾ ಸ್ಮಾರ್ಟ್‌ಫೋನ್‌, ಮೂರು ರೀತಿಯ RAM ಮತ್ತು 1TB ಸ್ಟೊರೇಜ್‌ ಆಯ್ಕೆಯಲ್ಲಿ ಬರಲಿದೆ.

ನುಬಿಯಾ Z60 ಅಲ್ಟ್ರಾ ಫೋನ್‌ನ ಬೆಲೆ

ನುಬಿಯಾ Z60ಅಲ್ಟ್ರಾ ಫೋನ್‌ನ ಆರಂಭಿಕ ಬೆಲೆಯು 599 ಡಾಲರ್‌ (ಅಂದಾಜು 49,000 ರೂ.) ಆಗಿದ್ದು, 8GB RAM ಮತ್ತು 256GB ಸಂಗ್ರಹಣೆಯೊಂದಿಗೆ ಬರಲಿದೆ. ಇದೇ ಮಾಡಲ್‌ನ 12GB RAM ಮತ್ತು 256GB ಸಂಗ್ರಹಣೆಯಿರುವ ಫೋನ್‌ ದರವು 649 ಡಾಲರ್‌ (ಅಂದಾಜು 54,000 ರೂ.) ಆಗಿದೆ. ಇದರ ಟಾಪ್‌ ಎಂಡ್‌ ಆವೃತ್ತಿಯ 12GB RAM ಮತ್ತು 512GB ಸಂಗ್ರಹಣೆಯಿರುವ ಫೋನ್‌ ದರವು 779 ಡಾಲರ್‌ (ಅಂದಾಜು 65,000 ರೂ.) ಆಗಿದೆ. ನುಬಿಯಾ Z60ಅಲ್ಟ್ರಾ ಸಾರ್ಟ್‌ಫೋನ್‌ ಅನ್ನು ಬ್ಲಾಕ್‌ ಮತ್ತು ಸಿಲ್ವರ್‌ ಬಣ್ಣಗಳ ಆಯ್ಕೆಯಲ್ಲಿ ಖರೀದಿಸಬಹುದಾಗಿದೆ.

ನುಬಿಯಾ Z60 ಅಲ್ಟ್ರಾ ಸ್ಮಾರ್ಟ್‌ಫೋನ್‌ ವೈಶಿಷ್ಟ್ಯಗಳು

ವಿನ್ಯಾಸ ಮತ್ತು ಪ್ರೊಸೆಸ್ಸರ್‌

ನ್ಯಾನೊ ಡ್ಯುಯಲ್‌ ಸಿಮ್‌ ಅಳವಡಿಸಬಹುದಾದ ನುಬಿಯಾ Z60 ಅಲ್ಟ್ರಾ ಫೋನ್‌ ಆಂಡ್ರಾಯ್ಡ್‌ 14 ಆಧಾರಿತ ಮೈಒಸ್‌14 ನಲ್ಲಿ ಕಾರ್ಯನಿರ್ವಹಿಸುತ್ತದೆ. ಇದು ದೊಡ್ಡದಾದ 6.8 ಇಂಚಿನ ಫುಲ್‌ ಹೆಚ್‌ಡಿ+ AMOLED ಡಿಸ್ಪ್ಲೇ ಹೊಂದಿದೆ. ಈ ಡಿಸ್ಪ್ಲೇಯು 1,160X2,480 ಪಿಕ್ಸಲ್‌ಗಳ ರೆಸಲ್ಯೂಷನ್‌ ಸಾಮರ್ಥ್ಯ ಹೊಂದಿದೆ. ಇದರ ರಿಫ್ರೆಶ್‌ ದರವು 120Hz ಆಗಿದ್ದು, 400 ppi ಪಿಕ್ಸೆಲ್‌ ಸಾಂದ್ರತೆಯನ್ನು ಹೊಂದಿದೆ. ಜೊತೆಗೆ ಶೇಕಡಾ 100 ರಷ್ಟು DCI -P3 ಕಲರ್‌ ಗ್ಯಾಮಟ್‌ ಹೊಂದಿದೆ. ಈ ಹ್ಯಾಂಡ್ಸೆಟ್ 163.98x76.35x8.78mm ಅಳತೆ ಮತ್ತು 246 ಗ್ರಾಂ ತೂಕ ಹೊಂದಿದೆ. ಇದು ಧೂಳು ಮತ್ತು ನೀರಿನ ಪ್ರತಿರೋಧಕ್ಕಾಗಿ IP68 ರೇಟಿಂಗ್ ಅನ್ನು ಪಡದುಕೊಂಡಿದೆ. ಸ್ನಾಪ್‌ಡ್ರಾಗನ್ 8 Gen 3 SoC ಪ್ರೊಸೆಸ್ಸರ್‌ನಿಂದ ಚಲಿಸುವ ಈ ಸ್ಮಾರ್ಟ್‌ಫೋನ್‌ ಅನ್ನು12GB ವರೆಗಿನ LPDDR5X RAM ನೊಂದಿಗೆ ಜೋಡಿಸಲಾಗಿದೆ.

ಕ್ಯಾಮೆರಾ

ನುಬಿಯಾ Z60 ಅಲ್ಟ್ರಾ ಫೋನ್‌ ಹಿಂಬದಿಯಲ್ಲಿ ಟ್ರಿಪಲ್‌ ಕ್ಯಾಮೆರಾ ಸೆಟಪ್‌ ಅನ್ನು ಹೊಂದಿದೆ. OIS ಮತ್ತು f/1.59 ಅಪಾರ್ಚರ್‌ನ 35mm Sony IMX800 ಸಂವೇದಕ ಹೊಂದಿರುವ 50-ಮೆಗಾಪಿಕ್ಸೆಲ್ ಮುಖ್ಯ ಕ್ಯಾಮೆರಾ ಹೊಂದಿದೆ. ಎರಡನೇ ಕ್ಯಾಮರಾವು 50 ಮೆಗಾಪಿಕ್ಸೆಲ್‌ ಆಗಿದ್ದು 18mm ವೈಡ್-ಆಂಗಲ್ ಕ್ಯಾಮೆರಾ ಸಂವೇದಕವನ್ನು OIS ಮತ್ತು f/1.8 ಅಪಾರ್ಚರ್‌ ಇರುವ ಆಟೋಫೋಕಸ್‌ ಹೊಂದಿದೆ. ಇದರ ಮೂರನೆ ಕ್ಯಾಮೆರಾವು 64-ಮೆಗಾಪಿಕ್ಸೆಲ್ 85mm ಟೆಲಿಫೋಟೋ ಲೆನ್ಸ್‌ ಒಳಗೊಂಡಿದೆ. ಸೆಲ್ಫಿ ಮತ್ತು ವೀಡಿಯೊ ಕರೆಗಳನ್ನು ನಿರ್ವಹಿಸಲು 12-ಮೆಗಾಪಿಕ್ಸೆಲ್‌ನ ಅಂಡರ್‌ ಡಿಸ್‌ಪ್ಲೇ ಕ್ಯಾಮೆರಾವನ್ನು ಮುಂಭಾಗದಲ್ಲಿ ಅಳವಡಿಸಲಾಗಿದೆ.

ಬ್ಯಾಟರಿ ಮತ್ತು ಕನೆಕ್ಟಿವಿಟಿ ಆಯ್ಕೆಗಳು

ನುಬಿಯಾ Z60 ಅಲ್ಟ್ರಾ ಸ್ಮಾರ್ಟ್‌ಫೋನ್‌6,000mAh ಬ್ಯಾಟರಿಯೊಂದಿಗೆ ಬರಲಿದೆ. ಇನ್ನು ಇದು 4G LTE, Wi-Fi 802.11b/g/n/ac/ax, ಬ್ಲೂಟೂತ್ 5.4, ಡ್ಯುಯಲ್ GPS, GLONASS, BDS, GALILEO, ಮತ್ತು QZSS ಕನೆಕ್ಟಿವಿಟಿ ಆಯ್ಕೆಗಳನ್ನು ಬೆಂಬಲಿಸಲಿದೆ. ಇದು DTS HD ಧ್ವನಿಯೊಂದಿಗೆ ಸ್ಪೀಕರ್‌ಗಳನ್ನು ಸಹ ಹೊಂದಿದೆ. ಇದು ಏಂಬಿಯಂಟ್‌ ಲೈಟ್‌ ಸೆನ್ಸಾರ್‌, ಇ-ದಿಕ್ಸೂಚಿ, ಸಂವೇದಕ, ಗೈರೊಸ್ಕೋಪ್, ಇನ್ಪ್ರಾರೆಡ್‌ ರಿಮೋಟ್ ಕಂಟ್ರೋಲ್ ಮತ್ತು ಸಾಮೀಪ್ಯ ಸಂವೇದಕಗಳನ್ನು ಒಳಗೊಂಡಿದೆ. ಫೋನ್‌ನ ದೃಢೀಕರಣಕ್ಕಾಗಿ ಇನ್-ಡಿಸ್ಪ್ಲೇ ಫಿಂಗರ್‌ಪ್ರಿಂಟ್ ಸಂವೇದಕವನ್ನು ಸಹ ಒಳಗೊಂಡಿದೆ.

Whats_app_banner