ಭಾರತದಲ್ಲಿ ಒಂದೇ ದಿನ ಭರ್ಜರಿ ಫೀಚರ್ಸ್ನ ಎರಡು ಸ್ಮಾರ್ಟ್ಫೋನ್ ಬಿಡುಗಡೆ ಮಾಡಿದ ರಿಯಲ್ ಮಿ: ರಿಯಲ್ ಮಿ ಪ್ರೊ+ ಮತ್ತು ರಿಯಲ್ ಮಿ 13 ಪ್ರೊ
Realme: ರಿಯಲ್ ಮಿ ಕಂಪನಿಯ ಎರಡು ಹೊಸ ಫೋನುಗಳಾದ ರಿಯಲ್ ಮಿ ಪ್ರೊ+ ಮತ್ತು ರಿಯಲ್ ಮಿ 13 ಪ್ರೊ ಇದೀಗ ಭಾರತೀಯ ಮಾರುಕಟ್ಟೆಗೆ ಅಪ್ಪಳಿಸಿದೆ. ಬೆರಗುಗೊಳಿಸುವ ಫೀಚರ್ಗಳು ಇದರಲ್ಲಿ ನೀಡಲಾಗಿದೆ. ವಿಶೇಷವಾಗಿ AI ಸ್ಮಾರ್ಟ್ ರಿಮೂವಲ್ ಅನ್ನು ಅಳವಡಿಸಲಾಗಿದೆ. (ಬರಹ: ವಿನಯ್ ಭಟ್)
ಪ್ರಸಿದ್ಧ ರಿಯಲ್ ಮಿ (Realme) ಕಂಪನಿ ತನ್ನ ಬಹುನಿರೀಕ್ಷಿತ ರಿಯಲ್ ಮಿ 13 ಪ್ರೊ ಸರಣಿಯಲ್ಲಿ ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡಿದೆ. ಇದರಲ್ಲಿ ರಿಯಲ್ ಮಿ ಪ್ರೊ+ ಮತ್ತು ರಿಯಲ್ ಮಿ 13 ಪ್ರೊ ಎಂಬ ಎರಡು ಫೋನುಗಳಿವೆ. ಈ ಎರಡೂ ಫೋನುಗಳು ಕ್ವಾಲ್ಕಂ ಸ್ನಾಪ್ಡ್ರಾಗನ್ 7s Gen 2 SoC ನಲ್ಲಿ ಕಾರ್ಯನಿರ್ವಹಿಸುತ್ತದೆ. 50-ಮೆಗಾಪಿಕ್ಸೆಲ್ ಸೋನಿ LYT-701 ಪ್ರಾಥಮಿಕ ಹಿಂಬದಿಯ ಕ್ಯಾಮೆರಾ ಇದೆ. ವಿಶೇಷ ಎಂದರೆ ಈ ಫೋನ್ನಲ್ಲಿ ಫೋಟೋಗಳಲ್ಲಿರುವ ಅನಗತ್ಯ ವಸ್ತುಗಳನ್ನು ತೆಗೆದುಹಾಕುವ 'AI ಸ್ಮಾರ್ಟ್ ರಿಮೂವಲ್' ಅನ್ನು ಅಳವಡಿಸಲಾಗಿದೆ. ಇದರ ಜೊತೆಗೆ ಇನ್ನೂ ಅನೇಕ ಫೀಚರ್ಗಳು ಇದರಲ್ಲಿವೆ.
ಭಾರತದಲ್ಲಿ ರಿಯಲ್ ಮಿ 13 ಪ್ರೊ+, ರಿಯಲ್ ಮಿ 13 ಪ್ರೊ ಬೆಲೆ
ರಿಯಲ್ ಮಿ 13 ಪ್ರೊ + ಬೆಲೆ 8GB + 256GB ಗೆ 29,999 ರೂ., 12GB RAM + 256GB ಸ್ಟೋರೇಜ್ ಆವೃತ್ತಿಗಳಿಗೆ 31,999 ರೂ. ಮತ್ತು 12GB RAM + 512GB ಸ್ಟೋರೇಜ್ ಹೊಂದಿರುವ ಟಾಪ್ ಎಂಡ್ ಮಾಡೆಲ್ಗೆ ರೂ. 33,999 ನಿಗದಿ ಮಾಡಲಾಗಿದೆ. ಇದು ಎಮರಾಲ್ಡ್ ಗ್ರೀನ್ ಮತ್ತು ಮೊನೆಟ್ ಗೋಲ್ಡ್ ಬಣ್ಣಗಳಲ್ಲಿ ಲಭ್ಯವಿದೆ.
ರಿಯಲ್ ಮಿ 13 ಪ್ರೊನ ಆರಂಭಿಕ ಬೆಲೆ 8GB RAM + 128GB ಸ್ಟೋರೇಜ್ ಆವೃತ್ತಿಗೆ 23,999 ರೂ., 8GB + 256GB ಮತ್ತು 12GB + 512GB RAM ಮತ್ತು ಸ್ಟೋರೇಜ್ ರೂಪಾಂತರಗಳ ಬೆಲೆ ಕ್ರಮವಾಗಿ 25,999 ಮತ್ತು 28,999 ರೂ. ಆಗಿದೆ. ಇದನ್ನು ಎಮರಾಲ್ಡ್ ಗ್ರೀನ್, ಮೊನೆಟ್ ಪರ್ಪಲ್ ಮತ್ತು ಮೊನೆಟ್ ಗೋಲ್ಡ್ ಶೇಡ್‌ಗಳಲ್ಲಿ ನೀಡಲಾಗುತ್ತದೆ. ಈ ಫೋನ್ ರಿಯಲ್ ಮಿ.ಕಾಮ್ ಮತ್ತು ಫ್ಲಿಪ್ಕಾರ್ಟ್ ಮೂಲಕ ಆಗಸ್ಟ್ 6 ರಂದು ಮಧ್ಯಾಹ್ನ 12 ಗಂಟೆಯಿಂದ ಖರೀದಿಗೆ ಲಭ್ಯವಿದೆ.
ರಿಯಲ್ ಮಿ 13 ಪ್ರೊ+ ಫೀಚರ್ಸ್
ರಿಯಲ್ ಮಿ 13 ಪ್ರೊ+ 6.7-ಇಂಚಿನ FHD+ AMOLED ಡಿಸ್ಪ್ಲೇ ಜೊತೆಗೆ 120Hz ರಿಫ್ರೆಶ್ ರೇಟ್ ಮತ್ತು 2,000 nits ಗರಿಷ್ಠ ಬ್ರೈಟ್ನೆಸ್ ಹೊಂದಿದೆ. ಇದು ಆಂಡ್ರೆನೊ 710 GPU ಜೊತೆಗೆ ಕ್ವಾಲ್ಕಂ ಸ್ನಾಪ್ಡ್ರಾಗನ್ 7s Gen 2 ಚಿಪ್‌ಸೆಟ್‌ನಿಂದ ಚಾಲಿತವಾಗಿದೆ. ಈ ಫೋನ್ OIS ಜೊತೆಗೆ 50MP ಸೋನಿ LYT-701 ಪ್ರಾಥಮಿಕ ಕ್ಯಾಮೆರಾ, 50MP ಸೋನಿ LYT-600 ಪೆರಿಸ್ಕೋಪ್ ಕ್ಯಾಮೆರಾ ಮತ್ತು 8MP ಅಲ್ಟ್ರಾ-ವೈಡ್ ಕ್ಯಾಮೆರಾವನ್ನು ಹೊಂದಿದೆ. ಸೆಲ್ಫಿಗಳಿಗಾಗಿ, ನೀವು 32MP ಮುಂಭಾಗದ ಕ್ಯಾಮೆರಾವನ್ನು ಪಡೆಯುತ್ತೀರಿ.
80W SuperVOOC ಚಾರ್ಜಿಂಗ್ ತಂತ್ರಜ್ಞಾನದೊಂದಿಗೆ 5,200mAh ಬ್ಯಾಟರಿಯನ್ನು ನೀಡಲಾಗಿದೆ. ಸಾಫ್ಟ್‌ವೇರ್ ಮುಂಭಾಗದಲ್ಲಿ, ಇದು ಆಂಡ್ರಾಯ್ಡ್ 14 ಆಧಾರಿತ ರಿಯಲ್ ಮಿ UI 5.0 ಮೂಲಕ ರನ್ ಆಗುತ್ತದೆ. ವೈ-ಫೈ 6, ಹೈ-ರೆಸ್ ಆಡಿಯೋದೊಂದಿಗೆ ಸ್ಟೀರಿಯೋ ಸ್ಪೀಕರ್‌ಗಳು, ಇನ್-ಡಿಸ್ಪ್ಲೇ ಫಿಂಗರ್‌ಪ್ರಿಂಟ್ ಸೆನ್ಸಾರ್ ಹೊಂದಿದೆ.
ರಿಯಲ್ ಮಿ 13 ಪ್ರೊ ಫೀಚರ್ಸ್
ಈ ಫೋನ್ 6.7-ಇಂಚಿನ OLED FHD+ ಡಿಸ್ಪ್ಲೇಯನ್ನು 120Hz ರಿಫ್ರೆಶ್ ದರ ಮತ್ತು 2,000 nits ಗರಿಷ್ಠ ಬ್ರೈಟ್ನೆಸ್ ಹೊಂದಿದೆ. ಇದು ಕೂಡ ಆಂಡ್ರೆನೊ 710 GPU ಜೊತೆಗೆ ಕ್ವಾಲ್ಕಂ ಸ್ನಾಪ್ಡ್ರಾಗನ್ 7s Gen 2 ಚಿಪ್‌ಸೆಟ್‌ನಿಂದ ಚಾಲಿತವಾಗಿದೆ. OIS ಜೊತೆಗೆ 50MP ಸೋನಿ LYT-600 ಪ್ರಾಥಮಿಕ ಕ್ಯಾಮೆರಾ, 8MP ಅಲ್ಟ್ರಾ-ವೈಡ್ ಕ್ಯಾಮೆರಾ ಮತ್ತು 2MP ಕ್ಯಾಮೆರಾವನ್ನು ಹೊಂದಿದೆ. ಮುಂಭಾಗ 32MP ಕ್ಯಾಮೆರಾ ಅಳವಡಿಸಲಾಗಿದೆ. ಇದು 45W SuperVOOC ಚಾರ್ಜಿಂಗ್‌ನೊಂದಿಗೆ 5,200mAh ಬ್ಯಾಟರಿಯನ್ನು ಪ್ಯಾಕ್ ಮಾಡುತ್ತದೆ. ಆಂಡ್ರಾಯ್ಡ್ 14 ಆಧಾರಿತ ರಿಯಲ್ ಮಿ UI 5.0 ನಲ್ಲಿ ರನ್ ಆಗುತ್ತದೆ.
ಈ ಫೋನ್ನಲ್ಲಿ ನೀವು AI ವೈಶಿಷ್ಟ್ಯಗಳನ್ನು ಸಹ ಪಡೆಯುತ್ತೀರಿ. ಇದು ಫೋಟೋಗಳಿಂದ ಅನಗತ್ಯ ವಸ್ತುಗಳನ್ನು ತೆಗೆದುಹಾಕುವ 'AI ಸ್ಮಾರ್ಟ್ ರಿಮೂವಲ್' ಅನ್ನು ಹೊಂದಿದೆ. ಗ್ರೂಪ್ ಫೋಟೋಗಳಲ್ಲಿ ಎಲ್ಲರೂ ಅಂದವಾಗಿ ಕಾಣುವಂತೆ ಮಾಡಲು AI ಆಡಿಯೋ ಜೂಮ್ ಆಯ್ಕೆ ನೀಡಲಾಗಿದೆ. ಇದರಲ್ಲಿ ವಿಡಿಯೋದ ಧ್ವನಿಯನ್ನು ಇನ್ನಷ್ಟು ಸ್ಪಷ್ಟವಾಗಿಸುವ ಆಯ್ಕೆ ಕೂಡ ಇದೆ.