ತಪ್ಪಿಯೂ ನಿಮ್ಮ ಕಾರಿನಲ್ಲಿ ಈ ವಸ್ತುಗಳನ್ನು ಇಡಬೇಡಿ; ಸ್ಫೋಟ ಸಂಭವಿಸಬಹುದು
ಕನ್ನಡ ಸುದ್ದಿ  /  ಜೀವನಶೈಲಿ  /  ತಪ್ಪಿಯೂ ನಿಮ್ಮ ಕಾರಿನಲ್ಲಿ ಈ ವಸ್ತುಗಳನ್ನು ಇಡಬೇಡಿ; ಸ್ಫೋಟ ಸಂಭವಿಸಬಹುದು

ತಪ್ಪಿಯೂ ನಿಮ್ಮ ಕಾರಿನಲ್ಲಿ ಈ ವಸ್ತುಗಳನ್ನು ಇಡಬೇಡಿ; ಸ್ಫೋಟ ಸಂಭವಿಸಬಹುದು

ಇತ್ತೀಚಿನ ದಿನಗಳಲ್ಲಿ ರಸ್ತೆಯಲ್ಲಿ ಚಲಿಸುತ್ತಿದ್ದ ಕಾರಿಗೆ ಏಕಾಏಕಿ ಬೆಂಕಿ ಹತ್ತಿಕೊಳ್ಳುವ ಹಲವು ಪ್ರಕರಣಗಳು ಕಂಡು ಬರುತ್ತಿವೆ. ಕೆಲವೊಮ್ಮೆ ನಾವು ಮಾಡುವ ಸಣ್ಣ ತಪ್ಪುಗಳಿಂದಲೇ ಇವು ಸಂಭವಿಸುತ್ತದೆ. ಹೀಗಾಗಿ ಕಾರಿನಲ್ಲಿ ಕೆಲವೊಂದು ವಸ್ತುಗಳನ್ನು ಇಡಬಾರದು. ಅವು ಯಾವ ವಸ್ತು?, ಕಾರಿನಲ್ಲಿ ಬೆಂಕಿ ಕಾಣಿಸಿಕೊಂಡರೆ ಏನು ಮಾಡಬೇಕು? ಈ ಕುರಿತ ಮಾಹಿತಿ ಇಲ್ಲಿದೆ.

ತಪ್ಪಿಯೂ ನಿಮ್ಮ ಕಾರಿನಲ್ಲಿ ಈ ವಸ್ತುಗಳನ್ನು ಇಡಬೇಡಿ (ಸಾಂಕೇತಿಕ ಚಿತ್ರ)
ತಪ್ಪಿಯೂ ನಿಮ್ಮ ಕಾರಿನಲ್ಲಿ ಈ ವಸ್ತುಗಳನ್ನು ಇಡಬೇಡಿ (ಸಾಂಕೇತಿಕ ಚಿತ್ರ) (PTI File)

ವಾಹನಕ್ಕೆ ಬೆಂಕಿ ತಗುಲಿರುವ ಘಟನೆಗಳ ಬಗ್ಗೆ ಆಗಾಗ ನೀವು ಸುದ್ದಿ ಕೇಳುತ್ತಿರುತ್ತೀರಿ. ಇತ್ತೀಚಿನ ದಿನಗಳಲ್ಲಿ ಇಂತಹ ಘಟನೆಗಳು ಹೆಚ್ಚು ಸಂಭವಿಸುತ್ತಿವೆ. ಅತಿಯಾದ ಬಿಸಿಯಿಂದ ಇಂತಹ ಅಪಾಯಗಳು ದ್ವಿಗುಣಗೊಳ್ಳುತ್ತವೆ. ಶಾರ್ಟ್ ಸರ್ಕ್ಯೂಟ್ ಅಥವಾ ಇತರ ತಾಂತ್ರಿಕ ಕಾರಣಗಳಿಂದ ಕೂಡ ಈ ಅಪಘಡಗಳು ಸಂಭವಿಸುತ್ತವೆ. ಇದರ ಜೊತೆಗೆ ನಾವು ಮಾಡುವ ಸಣ್ಣ ತಪ್ಪುಗಳು ಕೂಡಾ ಕಾರವಾಗುತ್ತವೆ. ಕೆಲವೊಮ್ಮೆ ನಾವು ಕೆಲವು ವಸ್ತುಗಳನ್ನು ಕಾರಿನಲ್ಲಿ ಇಡುತ್ತೇವೆ. ಇದು ಕೂಡ ಬೆಂಕಿ ಕಾಣಿಸಲು ಮುಖ್ಯ ಕಾರಣವಾಗಬಹುದು. ನಿಮ್ಮ ಪ್ರಾಣಕ್ಕೂ ಅಪಾಯ ತಂದೊಡ್ಡಬಹುದು.

ತಪ್ಪಾಗಿಯೂ ಪ್ಲಾಸ್ಟಿಕ್ ಬಾಟಲಿಗಳನ್ನು ಇಡಬೇಡಿ

ನಾವು ಸಾಮಾನ್ಯವಾಗಿ ಕಾರಿನಲ್ಲಿ ನೀರು ಕುಡಿಯಲು ಪ್ಲಾಸ್ಟಿಕ್ ಬಾಟಲಿಗಳನ್ನು ಇಡುತ್ತೇವೆ. ನಮ್ಮ ಕಾರಿನಲ್ಲಿ ಒಂದೋ ಎರಡೋ ಬಾಟಲ್ ಯಾವಾಗಲೂ ಇರುತ್ತದೆ. ಆದರೆ ಈ ಚಿಕ್ಕ ಪ್ಲಾಸ್ಟಿಕ್ ಬಾಟಲ್​ನಿಂದ ನಿಮ್ಮ ಕಾರು ದೊಡ್ಡ ಅಪಘಾತಕ್ಕೆ ಕಾರಣವಾಗಬಹುದು. ಬೇಸಿಗೆಯಲ್ಲಿ ಇದನ್ನು ಕಾರಿನೊಳಗೆ ಇಡಬಾರದು. ಪ್ಲಾಸ್ಟಿಕ್ ಬಾಟಲಿಗಳು ಬೆಂಕಿಯ ಅಪಾಯಕ್ಕೆ ಕಾರಣವಾಗಬಹುದು. ಆದ್ದರಿಂದ ಯಾವಾಗಲೂ ಸ್ಟೀಲ್ ಅಥವಾ ಗಾಜಿನ ಬಾಟಲಿಗಳನ್ನು ಬಳಸಿ.

ಇವುಗಳ ಮೇಲೂ ಗಮನ ಇರಲಿ

  • ಸಿಗರೇಟ್ ಉರಿಸುವ ಲೈಟರ್ ಅನ್ನು ಬಳಸಿದರೆ ನೀವು ಇನ್ನೂ ಜಾಗರೂಕರಾಗಿರಬೇಕು. ಕಾರಿನಲ್ಲಿ ಲೈಟರ್ ಅನ್ನು ಎಂದಿಗೂ ಬಿಡಬೇಡಿ. ವಾಸ್ತವವಾಗಿ ಸೂರ್ಯನ ಬೆಳಕು ಲೈಟರ್ ಮೇಲೆ ಬಿದ್ದರೆ ಅದು ದೊಡ್ಡ ಸ್ಫೋಟಕ್ಕೆ ಕಾರಣವಾಗುತ್ತದೆ. ಇದು ವಾಹನದಲ್ಲಿ ತೀವ್ರ ಬೆಂಕಿಗೆ ಕಾರಣವಾಗಬಹುದು.
  • ಸುವಾಸನೆಗಾಗಿ ಕಾರಿನಲ್ಲಿ ಡಿಯೋಡರೆಂಟ್ ಇಡುವುದನ್ನು ತಪ್ಪಿಸಿ. ತಾಪಮಾನವು ಸ್ವಲ್ಪಮಟ್ಟಿಗೆ ಏರಿಕೆಯಾದರೆ ಇದು ಸ್ಫೋಟಕ್ಕೆ ಕಾರಣವಾಗುತ್ತದೆ.
  • ತಪ್ಪಾಗಿಯೂ ಕಾರಿನಲ್ಲಿ ಸ್ಯಾನಿಟೈಸರ್ ಇಡಬೇಡಿ. ವಾಹನದಲ್ಲಿ ಸ್ಯಾನಿಟೈಸರ್ ಇಡುವುದರಿಂದ ಬೆಂಕಿಯ ಅಪಾಯ ಹೆಚ್ಚಾಗುತ್ತದೆ.
  • ಇವೆಲ್ಲದರ ಜೊತೆಗೆ, ನಿಮ್ಮ ವಾಹನದಲ್ಲಿ ಯಾವುದೇ ಎಲೆಕ್ಟ್ರಾನಿಕ್ ಸಾಧನ ಇಟ್ಟುಕೊಳ್ಳುವುದನ್ನು ತಪ್ಪಿಸಿ. ಬೇಸಿಗೆಯಲ್ಲಿ ಈ ಉಪಕರಣಗಳಿಗೆ ಬೆಂಕಿ ಹಿಡಿಯುವ ಅಪಾಯ ಹೆಚ್ಚಿದೆ. ಒಂದು ಸಣ್ಣ ತಪ್ಪು ದೊಡ್ಡ ಅಪಘಾತಕ್ಕೆ ಕಾರಣವಾಗಬಹುದು.
  • ಮತ್ತೊಂದು ವಾಹನಕ್ಕೆ ಡಿಕ್ಕಿ ಹೊಡೆದಾಗ ಕಾರಿಗೆ ಬೆಂಕಿಯ ಅಪಾಯ ಹೆಚ್ಚಾಗುತ್ತದೆ.
  • ಪೆಟ್ರೋಲ್-ಡೀಸೆಲ್ ಅಥವಾ ಸಿಎನ್‌ಜಿ ಕಾರುಗಳಲ್ಲಿ ಎಂಜಿನ್ ಅಧಿಕ ಬಿಸಿಯಾಗುವುದು.
  • ಕಾರಿನ ವೈರಿಂಗ್ ಅನ್ನು ಟ್ಯಾಂಪರಿಂಗ್ ಮಾಡುವುದು ಅಥವಾ ಹಾನಿಗೊಳಿಸುವುದು.

ಇದನ್ನೂ ಓದಿ | ಕಾರನ್ನು ಎಷ್ಟು ದಿನಗಳಿಗೊಮ್ಮೆ ವಾಷ್ ಮಾಡಬೇಕು; ಕಾರು ತೊಳೆಯುವ ಸರಿಯಾದ ಕ್ರಮ ಯಾವುದು?

ಇತ್ತೀಚಿನ ದಿನಗಳಲ್ಲಿ ಹೈಬ್ರಿಡ್ ಕಾರುಗಳಲ್ಲಿ ಅತಿ ಹೆಚ್ಚು ಬೆಂಕಿಯ ಘಟನೆಗಳು ವರದಿಯಾಗುತ್ತಿವೆ. ಎರಡನೇ ಸ್ಥಾನದಲ್ಲಿ ಗ್ಯಾಸೋಲಿನ್ ಅಂದರೆ ಪೆಟ್ರೋಲ್ ಮತ್ತು ಮೂರನೇ ಸ್ಥಾನದಲ್ಲಿ ಎಲೆಕ್ಟ್ರಿಕ್ ವಾಹನಗಳಿವೆ. ಎಲೆಕ್ಟ್ರಿಕ್ ವಾಹನಗಳಲ್ಲಿ ಹೆಚ್ಚಿನ ಚಾರ್ಜ್ ಮತ್ತು ಹೆಚ್ಚಿನ ತಾಪಮಾನದ ಕಾರಣದಿಂದಾಗಿ ಬ್ಯಾಟರಿಗೆ ಬೆಂಕಿಯ ಅಪಾಯವಿದೆ. ಇತ್ತೀಚಿನ ದಿನಗಳಲ್ಲಿ ಭಾರತದಲ್ಲಿ ಇಂತಹ ಕೆಲವು ಪ್ರಕರಣಗಳು ಕಂಡುಬಂದಿದ್ದು, ಎಲೆಕ್ಟ್ರಿಕ್ ಕಾರುಗಳು ಮತ್ತು ಸ್ಕೂಟರ್‌ಗಳಿಗೆ ಬೆಂಕಿ ತಗುಲಿದ ಘಟನೆಗಳು ವರದಿಯಾಗಿವೆ.

ಚಲಿಸುವ ಕಾರಿನಲ್ಲಿ ಬೆಂಕಿ ಕಾಣಿಸಿಕೊಂಡರೆ ಏನು ಮಾಡಬೇಕು?

  • ಕಾರಿನಿಂದ ಹೊಗೆ ಅಥವಾ ಹೊಗೆಯ ವಾಸನೆ ಬಂದರೆ, ತಕ್ಷಣವೇ ನಿಮ್ಮ ವಾಹನವನ್ನು ರಸ್ತೆಯ ಬದಿಯಲ್ಲಿ ನಿಲ್ಲಿಸಿ.
  • ಕಾರ್ ಇಂಜಿನ್ ಅನ್ನು ಸ್ವಿಚ್ ಆಫ್ ಮಾಡಿ ಮತ್ತು ತಕ್ಷಣವೇ ಕಾರಿನಿಂದ ಇಳಿಯಿರಿ.
  • ಬಾಗಿಲುಗಳು ಜಾಮ್ ಆಗಿದ್ದರೆ, ಗಾಬರಿಯಾಗಬೇಡಿ ಮತ್ತು ಕಿಟಕಿಯನ್ನು ಒಡೆದು ಹೊರಗೆ ಬರಲು ಪ್ರಯತ್ನಿಸಿ.
  • ಹೊರಬಂದ ನಂತರ, ಕಾರಿನಿಂದ ದೂರ ನಿಂತು ಬೆಂಕಿ ಆರುವವರೆಗೆ ಕಾಯಿರಿ.
  • ತಪ್ಪಾಗಿಯೂ ಕಾರಿನ ಬಾನೆಟ್ ತೆರೆಯಲು ಪ್ರಯತ್ನಿಸಬೇಡಿ, ಅದು ದೊಡ್ಡ ಬೆಂಕಿಗೆ ಕಾರಣವಾಗಬಹುದು.
  • ಪೊಲೀಸ್ ಅಥವಾ ಅಗ್ನಿಶಾಮಕ ದಳಕ್ಕೆ ಕರೆ ಮಾಡಿ ಮತ್ತು ಅವರಿಗೆ ತಿಳಿಸಿ.

ವರದಿ: ವಿನಯ್ ಭಟ್

ಇನ್ನಷ್ಟು ಟೆಕ್ನಾಲಜಿ ಸುದ್ದಿ ಓದಲು ಇಲ್ಲಿ ಕ್ಲಿಕ್‌ ಮಾಡಿ

ಇದನ್ನೂ ಓದಿ | ಮೊಬೈಲ್ ಫೋನ್ ಆಗಾಗ ಹ್ಯಾಂಗ್ ಆಗುತ್ತಿದೆಯೇ? ಈ ಸಿಂಪಲ್ ಟ್ರಿಕ್‌ನಿಂದ ಸಮಸ್ಯೆ ಬಗೆಹರಿಸಿ

Whats_app_banner