Slow iPhone: ನಿಮ್ಮ ಆಪಲ್‌ ಐಫೋನ್‌ ಸ್ಲೋನಾ? ಒಂದೇ ನಿಮಿಷದಲ್ಲಿ ಸ್ಪೀಡ್‌ ಹೆಚ್ಚಿಸಲು ಈ ಟ್ರಿಕ್ಸ್‌ ಅನುಸರಿಸಿ-technology tips how to speedup apple iphone how to fix a sluggish device in few minutes pcp ,ಜೀವನಶೈಲಿ ಸುದ್ದಿ
ಕನ್ನಡ ಸುದ್ದಿ  /  ಜೀವನಶೈಲಿ  /  Slow Iphone: ನಿಮ್ಮ ಆಪಲ್‌ ಐಫೋನ್‌ ಸ್ಲೋನಾ? ಒಂದೇ ನಿಮಿಷದಲ್ಲಿ ಸ್ಪೀಡ್‌ ಹೆಚ್ಚಿಸಲು ಈ ಟ್ರಿಕ್ಸ್‌ ಅನುಸರಿಸಿ

Slow iPhone: ನಿಮ್ಮ ಆಪಲ್‌ ಐಫೋನ್‌ ಸ್ಲೋನಾ? ಒಂದೇ ನಿಮಿಷದಲ್ಲಿ ಸ್ಪೀಡ್‌ ಹೆಚ್ಚಿಸಲು ಈ ಟ್ರಿಕ್ಸ್‌ ಅನುಸರಿಸಿ

How to fix a slow iPhone?: ಐಫೋನ್‌ ಎಲ್ಲಾದರೂ ಸ್ಲೋ ಆದ್ರೆ ಅದನ್ನು ಸ್ಪೀಡ್‌ ಮಾಡಲು ಒಂದಿಷ್ಟು ಟ್ರಿಕ್ಸ್‌ಗಳಿವೆ. ಅನಗತ್ಯ ಆಪ್‌ಗಳನ್ನು ಡಿಲೀಟ್‌ ಮಾಡುವ ಮೂಲಕ ಸ್ಟೋರೇಜ್‌ ಖಾಲಿ ಮಾಡಬಹುದು. ಐಫೋನ್‌ ಸ್ಪೀಡ್‌ ಹೆಚ್ಚಿಸಲು ಅನುಸರಿಸಬೇಕಾದ ಕ್ರಮಗಳ ವಿವರ ಇಲ್ಲಿದೆ.

ಐಫೋನ್‌ ನಿರ್ವಹಣೆ ಸಲಹೆ
ಐಫೋನ್‌ ನಿರ್ವಹಣೆ ಸಲಹೆ

ಆಂಡ್ರಾಯ್ಡ್‌ ಫೋನ್‌ಗಳಿಗೆ ಹೋಲಿಸಿದರೆ ಐಫೋನ್‌ಗಳು ಸ್ಪೀಡ್‌ಗೆ ಹೆಸರುವಾಸಿ. ಹೀಗಿದ್ದರೂ ಒಮ್ಮೊಮ್ಮೆ ಐಫೋನ್‌ಗಳು ಶೀತ, ನೆಗಡಿ ಬಂದಂತೆ ಮಂದಗತಿಯಲ್ಲಿ ವರ್ತಿಸುವುದುಂಟು. ಹಳೆಯ ಐಫೋನ್‌ಗಳು ಹೆಚ್ಚಾಗಿ ಸ್ಲೋ ಆಗುತ್ತವೆ. ಹಾಗಂತ, ಹಳೆ ಐಫೋನ್‌ ಮಾರಾಟ ಮಾಡಿ ಈ ಸೆಪ್ಟೆಂಬರ್‌ ಇವೆಂಟ್‌ನಲ್ಲಿ ಘೋಷಿಸುವ ಐಫೋನ್‌ 16 ಹೊಸ ವರ್ಷನ್‌ ಖರೀದಿಸಲು ಎಲ್ಲರಲ್ಲೂ ಹಣವಿದೆ ಎನ್ನಲಾಗದು. ಕೆಲವೊಂದು ಚಿಕ್ಕ ಪುಟ್ಟ ಸಮಸ್ಯೆಗಳು ಬಂದಾಗ ಹಳೆ ಐಫೋನ್‌ ಮಾರಿ ಹೊಸ ಫೋನ್‌ ಮಾರುವುದೂ ಸರಿಯಲ್ಲ. ಕೆಲವೊಮ್ಮೆ ಐಫೋನ್‌ ಸ್ಲೋ ಆದಾಗ ಅದನ್ನು ನಾವೇ ಸರಿ ಮಾಡಬಹುದು.

  • ಐಫೋನ್‌ ಸ್ಲೋ ಆದಾಗ ಮೊದಲನೆಯದಾಗಿ ಸ್ಪೋರೇಜ್‌ ಸ್ಪೇಸ್‌ ಪರಿಶೀಲಿಸಿ. ಸ್ಟೋರೇಜ್‌ನಲ್ಲಿ ಜಾಗ ಕಡಿಮೆ ಇದೆ ಅಂದ್ರೆ ಒಂದಿಷ್ಟು ಸ್ಥಳಾವಕಾಶ ಮಾಡಿ. "ಅದರ್‌ ಸ್ಟೋರೇಜ್‌" ಆಯ್ಕೆಯನ್ನು ಪರಿಶೀಲಿಸಿ ಕ್ಲೀನಪ್‌ ಮಾಡಿ.

ಏನಿದು ಅದರ್‌ ಸ್ಟೋರೇಜ್‌?

ಐಫೋನ್‌ನಲ್ಲಿ Other Storage ಎಂದಿರುತ್ತದೆ. ಇಲ್ಲಿ ನಿಗೂಢ ವಿಷಯಗಳು ಸ್ಟೋರೇಜ್‌ ಆಗಿರುತ್ತವೆ. ಅಂದರೆ, ಏನೇನೋ ಫೈಲ್‌ಗಳು ಇಲ್ಲಿ ಸೇವ್‌ ಆಗಿರುತ್ತವೆ. ಅಂದರೆ, ಸಿಸ್ಟಮ್‌ ಫೈಲ್‌ಗಳು, ಸಿರಿ ವಾಯ್ಸ್‌ ಇತ್ಯಾದಿಗಳು ಇಲ್ಲಿ ಸ್ಟೋರ್‌ ಆಗಿರಬಹುದು. ಇದರೊಂದಿಗೆ ಮೆಮೊರಿ ಲಾಗ್‌, ಕಾಶೆ (cache) ಇತ್ಯಾದಿಗಳು ಇಲ್ಲಿರಬಹುದು. ಗೂಗಲ್‌ ಮ್ಯಾಪ್‌, ಕ್ರೋಮ್‌ನ ಕಾಶೆ ಡೇಟಾಗಳು ಸ್ಟೋರ್‌ ಆಗಿರುತ್ತವೆ.

  • ನಿಮ್ಮ ಐಫೋನ್‌ನಲ್ಲಿ ಅದರ್‌ ಸ್ಟೋರೇಜ್‌ ಎಷ್ಟು ಬಳಕೆಯಾಗಿದೆ ಎಂದು ಗಮನಿಸಲು settings>general> iphone storage ಗೆ ಹೋಗಿ. ಇಲ್ಲಿ ಸರಿಯಾದ ಸ್ಟೋರೇಜ್‌ ಲೆಕ್ಕಾಚಾರ ದೊರಕುತ್ತದೆ. ಎಲ್ಲಾದರೂ other ಸ್ಟೋರೇಜ್‌ ಬಳಕೆ ಹೆಚ್ಚಾಗಿದ್ದರೆ ಕ್ಲೀನ್‌ ಮಾಡಿ ಸ್ಥಳಾವಕಾಶ ಹೆಚ್ಚಿಸಿ.
  • ಸ್ಥಳಾವಕಾಶ ಹೆಚ್ಚಿಸಲು ಯಾವ ಆಪ್‌ ಡಿಲೀಟ್‌ ಮಾಡಬೇಕೆಂಬ ಸಂದಿಗ್ಧತೆ ನಿಮ್ಮಲ್ಲಿ ಇರಬಹುದು. ಇಂತಹ ಸಮಯದಲ್ಲಿ ಆಫ್‌ಲೋಡ್‌ ಆಪ್ಸ್‌ (offload apps) ಆಯ್ಕೆಯನ್ನು ಬಳಸಿ. ಈ ಮೂಲಕ ನೀವು ಆಪ್‌ ಡಿಲೀಟ್‌ ಮಾಡಿದರೂ ಅದರಲ್ಲಿರುವ ಡೇಟಾ ಐಫೋನ್‌ನಲ್ಲೇ ಇರುತ್ತದೆ. ಮುಂದೊಮ್ಮೆ ಮತ್ತೆ ಆ ಆಪ್‌ ಡೌನ್‌ಲೋಡ್‌ ಮಾಡಿದಾಗ ಈ ಡೇಟಾಗಳು ದೊರಕುತ್ತವೆ.
  • ನೀವು ಸಫಾರಿ ಬ್ರೌಸರ್‌ ಆಗಾಗ ಬಳಸುತ್ತಿದ್ದರೆ ಸಫಾರಿ ಕಾಶೆ (cache) ಡಿಲೀಟ್‌ ಮಾಡಿ. ಸೆಟ್ಟಿಂಗ್ಸ್‌> ಸಫಾರಿ>ಗೆ ಹೋದ ಬಳಿಕ ಕ್ಲಿಯರ್‌ ಹಿಸ್ಟರಿ ಆಂಡ್‌ ವೆಬ್‌ಸೈಟ್‌ ಡೇಟಾ ಕ್ಲಿಕ್‌ ಮಾಡಿ ಕ್ಲಿಯರ್‌ ಮಾಡಿ.
  • ಟೆಕ್ಸ್ಟ್‌ ಸೇವ್‌ ಆಗುವುದನ್ನು ತಪ್ಪಿಸಿ: ಡಿಫಾಲ್ಟ್‌ ಆಗಿ ಐಫೋನ್‌ ಎಲ್ಲಾ ಟೆಕ್ಸ್ಟ್‌ ಸಂದೇಶಗಳನ್ನು ಸಂಗ್ರಹಿಸಿಡುತ್ತದೆ. ಅಂದರೆ, ಎಸ್‌ಎಂಎಸ್‌ ಕಳುಹಿಸಿರುವುದು, ಸ್ವೀಕರಿಸಿರುವುದು ಎಲ್ಲವೂ ಸೇವ್‌ ಆಗುತ್ತದೆ. ಆದರೆ, ಹತ್ತು ಹಲವು ತಿಂಗಳ ಹಿಂದಿನ ಟೆಕ್ಸ್ಟ್‌ ಸಂದೇಶಗಳ ಅಗತ್ಯ ಇಲ್ಲದೆ ಇದ್ದರೆ ಅದನ್ನೆಲ್ಲ ಡಿಲೀಟ್‌ ಮಾಡಿ. ಇದಕ್ಕಾಗಿ ಸೆಟ್ಟಿಂಗ್ಸ್‌ಗೆ ಹೋಗಿ. ಮೆಸೆಜಸ್‌ ಕ್ಲಿಕ್‌ ಮಾಡಿ. ಕೀಪ್‌ ಮೆಸೆಜಸ್‌ ಆಯ್ಕೆ ಮಾಡಿ. ಅಲ್ಲಿ 30 ದಿನ ಅಥವಾ 1 ವರ್ಷ ಆಯ್ಕೆ ಮಾಡಿ. ಅಷ್ಟು ಸಮಯದ ಸಂದೇಶಗಳು ಉಳಿದರೆ ಸಾಕು. ಹಳೆಯ ಮೆಸೆಜ್‌ಗಳನ್ನು ಡಿಲೀಟ್‌ ಮಾಡಬೇಕೆ? ಎಂಬ ಸೂಚನೆ ಬಂದಾಗ "ಹೌದು" ಆಯ್ಕೆ ಕ್ಲಿಕ್‌ ಮಾಡಿ.
  • ನಿಮ್ಮ ಫೋನ್‌ ತುಂಬಾ ಹಳೆಯದಾಗಿದ್ದರೆ, ಸ್ಪೀಡ್‌ ಹೆಚ್ಚಿಸುವ ಎಲ್ಲಾ ಪ್ರಯತ್ನಗಳು ಫಲಿಸದೆ ಇದ್ದರೆ ಐಫೋನ್‌ ರಿಸೆಟ್‌ ಮಾಡಿ.

ಇದನ್ನೂ ಓದಿ: Jio cloud Offer: ರಿಲಯೆನ್ಸ್‌ ಜಿಯೋ ದೀಪಾವಳಿ ಆಫರ್‌, 100 ಜಿಬಿ ಎಐ ಕ್ಲೌಡ್‌ ಸ್ಟೋರೇಜ್‌ ಉಚಿತ, ಏನಿದು ಜಿಯೋ ಕ್ಲೌಡ್‌, ಬಳಸೋದು ಹೇಗೆ