ಇನ್ನೊಂದು ವಾರದೊಳಗೆ ಬಿಡುಗಡೆ ಆಗಲಿದೆ ಬರೋಬ್ಬರಿ 6 ಹೊಸ ಸ್ಮಾರ್ಟ್‌ಫೋನ್: ಇಲ್ಲಿದೆ ಪೂರ್ಣ ವಿವರ
Upcoming Smartphones: ಭಾರತದಲ್ಲಿ ಸ್ಮಾರ್ಟ್ಫೋನ್ಗಳ ಬಿಡುಗಡೆ ಕಾರ್ಯಕ್ರಮ ಮತ್ತೆ ಶುರುವಾಗಿದೆ. ಒಂದರ ಹಿಂದೆ ಒಂದರಂತೆ ಆಕರ್ಷಕ ಫೋನುಗಳು ಅನಾವರಣಗೊಳ್ಳುತ್ತಿದೆ. ಇದೀಗ ಜುಲೈ ತಿಂಗಳ ಕೊನೆಯ ವಾರದಲ್ಲಿ ಬರೋಬ್ಬರಿ 6 ಮೊಬೈಲ್ಗಳು ಬಿಡುಗಡೆಗೆ ಸಜ್ಜಾಗಿದೆ. ಅವುಗಳು ಯಾವುವು ಎಂಬ ಕುರಿತ ಸಂಪೂರ್ಣ ಮಾಹಿತಿ ಇಲ್ಲಿದೆ. (ಬರಹ: ವಿನಯ್ ಭಟ್)
ನೀವು ಹೊಸ ಫೋನ್ (Smartphones) ಖರೀದಿಸಲು ಯೋಜಿಸುತ್ತಿದ್ದರೆ, ಸ್ವಲ್ಪ ದಿನ ಕಾಯುವುದು ಉತ್ತಮ. ಏಕೆಂದರೆ ಈ ತಿಂಗಳ ಕೊನೆಯ ವಾರದಲ್ಲಿ ಭಾರತಕ್ಕೆ ಬರೋಬ್ಬರಿ 6 ಹೊಸ ಸ್ಮಾರ್ಟ್‌ಫೋನ್‌ಗಳು (Upcoming Smartphones) ಅಪ್ಪಳಿಸಲಿದೆ. ಹೆಚ್ಎಮ್ಡಿ, ರಿಯಲ್ ಮಿ, ನಥಿಂಗ್ನಂತಹ ಕಂಪನಿಗಳು ತಮ್ಮ ಹೊಸ ಮಾದರಿಗಳನ್ನು ದೇಶೀಯ ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡಲಿವೆ. ಹಾಗಾದರೆ ಯಾವ ದಿನದಂದು ಯಾವ ಫೋನ್ ಬಿಡುಗಡೆಯಾಗಲಿದೆ, ಇವುಗಳ ಫೀಚರ್ಸ್ ಏನಿದೆ?, ಈ ಕುರಿತ ಸಂಪೂರ್ಣ ಮಾಹಿತಿ ಇಲ್ಲಿದೆ.
ಹೆಚ್ಎಮ್ಡಿ ಕ್ರೆಸ್ಟ್ ಸರಣಿ
HMD ಕಂಪನಿಯ ಮೊಟ್ಟ ಮೊದಲ ಸ್ಮಾರ್ಟ್‌ಫೋನ್ ಭಾರತದಲ್ಲಿ ಬಿಡುಗಡೆ ಆಗಲು ಸಜ್ಜಾಗಿದೆ. ಈ ಸರಣಿಯಲ್ಲಿ ಕಂಪನಿಯು ಕ್ರೆಸ್ಟ್ ಮತ್ತು ಕ್ರೆಸ್ಟ್ ಮ್ಯಾಕ್ಸ್ 5G ಸ್ಮಾರ್ಟ್‌ಫೋನ್‌ಗಳು ಸೇರಿದೆ. ಅಧಿಕೃತ HMD ಇಂಡಿಯಾ ಖಾತೆಯು ಜುಲೈ 25 ರಂದು ಈ ಫೋನ್ ಅನಾವರಣಗೊಳ್ಳಲಿದೆ ಎಂದು ಹೇಳಿದೆ. ಕ್ರೆಸ್ಟ್ ಸರಣಿಯನ್ನು ಅಮೆಜಾನ್ ಮೂಲಕ ದೇಶದಲ್ಲಿ ಮಾರಾಟ ಮಾಡಲಾಗುವುದು. ವಿಶೇಷ ಎಂದರೆ ಈ ಹ್ಯಾಂಡ್‌ಸೆಟ್‌ಗಳನ್ನು ಭಾರತದಲ್ಲಿಯೇ ತಯಾರಿಸಲಾಗಿದೆ. ಈ ಫೋನಿನ ಫೀಚರ್ಸ್ ಕುರಿತು ಕಂಪನಿ ಅಧಿಕೃತ ಮಾಹಿತಿ ಈವರೆಗೆ ನೀಡಿಲ್ಲ.
ಒಪ್ಪೋ K12x 5G
ಈ ಒಪ್ಪೋ ಫೋನ್ ಭಾರತದಲ್ಲಿ ಮುಂದಿನ ವಾರ ಜುಲೈ 29 ರಂದು ಬಿಡುಗಡೆಯಾಗಲಿದೆ. ಇ-ಕಾಮರ್ಸ್ ಪ್ಲಾಟ್‌ಫಾರ್ಮ್ ಫ್ಲಿಪ್‌ಕಾರ್ಟ್‌ನಿಂದ ಖರೀದಿಸಬಹುದು. ಇದರಲ್ಲಿ 6.67-ಇಂಚಿನ HD+ ಸ್ಕ್ರೀನ್ ಜೊತೆಗೆ 120Hz ರಿಫ್ರೆಶ್ ದರ ಇರುತ್ತದೆ. ಸ್ಪ್ಲಾಶ್ ಟಚ್ ತಂತ್ರಜ್ಞಾನವನ್ನು ಸಹ ಬೆಂಬಲಿಸುತ್ತದೆ, ಇದು ಬಳಕೆದಾರರಿಗೆ ಒದ್ದೆಯಾದ ಕೈಗಳಿಂದಲೂ ಫೋನ್ ಅನ್ನು ಉಪಯೋಗಿಸಲು ಸಹಾಯ ಮಾಡುತ್ತದೆ. ಕ್ವಾಲ್ಕಂ ಸ್ನಾಪ್‌ಡ್ರಾಗನ್ 695 ಪ್ರೊಸೆಸರ್ನಿಂದ ಆವೃತ್ತವಾಗಿದೆ.
ರಿಯಲ್ ಮಿ 13 ಪ್ರೊ ಸರಣಿ 5G
ರಿಯಲ್ ಮಿ 13 ಪ್ರೊ ಮತ್ತು ರಿಯಲ್ ಮಿ 13 ಪ್ರೊ ಪ್ಲಸ್ 5G ಮುಂದಿನ ವಾರ ಜುಲೈ 30 ರಂದು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆ ಆಗಲಿದೆ. ಈ ಫೋನ್ ಫ್ಲಿಪ್‌ಕಾರ್ಟ್‌ನಲ್ಲಿ ಲಭ್ಯವಿರುತ್ತದೆ. ರಿಯಲ್ ಮಿ 13 ಪ್ರೊ ಸರಣಿ ಸ್ಮಾರ್ಟ್‌ಫೋನ್ AI ಜೊತೆಗೆ ಅಲ್ಟ್ರಾ-ಕ್ಲಿಯರ್ ಕ್ಯಾಮೆರಾವನ್ನು ಹೊಂದಿರುತ್ತವೆ. ಕಂಪನಿಯ ಮೊದಲ AI- ಫೋಟೋಗ್ರಫಿ ಆರ್ಕಿಟೆಕ್ಚರ್, ಹೈಪರಿಮೇಜ್+ ನೊಂದಿಗೆ ಬರುತ್ತಿರುವ ಮೊದಲ ಸ್ಮಾರ್ಟ್‌ಫೋನ್ ಇದಾಗಿದೆ.
ರಿಯಲ್ ಮಿ 13 ಪ್ರೊ+ 5G OIS ಜೊತೆಗೆ 50MP Sony LYT 701 ಪ್ರಾಥಮಿಕ ಕ್ಯಾಮೆರಾ ಮತ್ತು 50MP Sony LYT 600 ಪೆರಿಸ್ಕೋಪ್ ಟೆಲಿಫೋಟೋ ಕ್ಯಾಮೆರಾ ಜೊತೆಗೆ 3x ಆಪ್ಟಿಕಲ್ ಜೂಮ್ ಅನ್ನು ಹೊಂದಿದೆ . ಮುಂಬರುವ ಸ್ಮಾರ್ಟ್‌ಫೋನ್‌ಗಳು ಟಿಯುವಿ ರೈನ್‌ಲ್ಯಾಂಡ್ ಹೈ-ರೆಸಲ್ಯೂಶನ್ ಕ್ಯಾಮೆರಾ ಪ್ರಮಾಣೀಕರಣವನ್ನು ಪಡೆದುಕೊಂಡಿವೆ.
ನಥಿಂಗ್ ಫೋನ್ 2ಎ ಪ್ಲಸ್
ನಥಿಂಗ್ ಕಂಪನಿಯ ಹೊಸ ಫೋನ್ ಜುಲೈ 31 ರಂದು ಭಾರತೀಯ ಮಾರುಕಟ್ಟೆಯಲ್ಲಿ ಗ್ರಾಹಕರಿಗೆ ಬಿಡುಗಡೆ ಆಗಲಿದೆ. ಅಧಿಕೃತ ಬಿಡುಗಡೆಯ ನಂತರ, ಈ ಹ್ಯಾಂಡ್‌ಸೆಟ್ ಅನ್ನು ಫ್ಲಿಪ್‌ಕಾರ್ಟ್‌ನಲ್ಲಿ ಮಾರಾಟ ಮಾಡಲಾಗುತ್ತದೆ. ನಥಿಂಗ್ ಫೋನ್ 2a ಪ್ಲಸ್ ಅನ್ನು ಫೋನ್ 2a ಮಾಡೆಲ್ನಲ್ಲಿರುವ ಮೀಡಿಯಾಟೆಕ್ ಡೈಮೆನ್ಸಿಟಿ 7200 ಪ್ರೊ ಗಿಂತ ಹೆಚ್ಚು ಶಕ್ತಿಯುತವಾದ ಚಿಪ್‌ಸೆಟ್‌ನಿಂದ ಬೆಂಬಲಿತವಾಗಿದೆ. ಇದರ ಬೆಲೆ ಎಷ್ಟೆಂದು ಬಹಿರಂಗವಾಗಿಲ್ಲ.
ಪೋಕೋ F6 ಡೆಡ್‌ಪೂಲ್ ಲಿಮಿಟೆಡ್
ಈ ಸ್ಮಾರ್ಟ್‌ಫೋನ್ ಈ ವಾರದ ಕೊನೆಯಲ್ಲಿ ಜುಲೈ 26 ರಂದು ಭಾರತದಲ್ಲಿ ಅನಾವರಣಗೊಳ್ಳಲಿದೆ. ಇದು ಕಳೆದ ಮೇ ತಿಂಗಳಲ್ಲಿ ದೇಶದಲ್ಲಿ ಬಿಡುಗಡೆಯಾದ ಪೋಕೋ F6 5G ಯಂತೆಯೇ ಅದೇ ಫೀಚರ್ಸ್ ಹೊಂದಿರುವ ನಿರೀಕ್ಷೆಯಿದೆ. ಆದಾಗ್ಯೂ, ಫೋನ್‌ನ ವಿಶೇಷ ಡೆಡ್‌ಪೂಲ್ ರೂಪಾಂತರವು ಮಾರ್ವೆಲ್ ಹೀರೋದ ಸ್ಫೂರ್ತಿ ಪಡೆದ ವಿನ್ಯಾಸದೊಂದಿಗೆ ಬರುವ ಸಾಧ್ಯತೆಯಿದೆ. ಈ ಫೋನಿನ ಬ್ಯಾಕ್ ಪ್ಯಾನೆಲ್ ಡೆಡ್‌ಪೂಲ್‌ನ ಸೂಟ್‌ನ ಬಣ್ಣವನ್ನು ಹೋಲುವ ಕಡುಗೆಂಪು ಛಾಯೆಯಲ್ಲಿ ಕಾಣಿಸಿಕೊಳ್ಳುತ್ತದೆ. ಎರಡು ಹಿಂಬದಿಯ ಕ್ಯಾಮೆರಾ ಮಾಡ್ಯೂಲ್‌ಗಳು ಕಪ್ಪು ಬಣ್ಣದಲ್ಲಿ ಇದೆ. ಎಲ್‌ಇಡಿ ಫ್ಲ್ಯಾಷ್ ಘಟಕವು ಮೇಲ್ಭಾಗದಲ್ಲಿ ಡೆಡ್‌ಪೂಲ್ ಲೋಗೋವನ್ನು ಹೊಂದಿದೆ.
ಇದು ಸ್ನಾಪ್‌ಡ್ರಾಗನ್ 8s Gen 3 SoC ನಿಂದ ರನ್ ಆಗುವ ಸಾಧ್ಯತೆಯಿದೆ, ಆಂಡ್ರಾಯ್ಡ್ 14-ಆಧಾರಿತ Xiaomi HyperOS ನೊಂದಿಗೆ ಕಾರ್ಯನಿರ್ವಹಿಸುತ್ತದೆ. 90W ವೈರ್ಡ್ ಫಾಸ್ಟ್ ಚಾರ್ಜಿಂಗ್ ಬೆಂಬಲದೊಂದಿಗೆ 5,000mAh ಬ್ಯಾಟರಿಯಿಂದ ಬೆಂಬಲಿತವಾಗಿದೆ.
ಬರಹ: ವಿನಯ್ ಭಟ್