ವಾಟ್ಸಾಪ್‌ನಲ್ಲಿ ಬಂದಿವೆ ಹಲವು ಹೊಸ ಫೀಚರ್ಸ್; ಕ್ಯಾಮೆರಾ ಎಫೆಕ್ಟ್‌, ಸೆಲ್ಫಿ ಸ್ಟಿಕ್ಕರ್ ಬಳಸಲು ಆ್ಯಪ್ ಅಪ್ಡೇಟ್‌ ಮಾಡಿ
ಕನ್ನಡ ಸುದ್ದಿ  /  ಜೀವನಶೈಲಿ  /  ವಾಟ್ಸಾಪ್‌ನಲ್ಲಿ ಬಂದಿವೆ ಹಲವು ಹೊಸ ಫೀಚರ್ಸ್; ಕ್ಯಾಮೆರಾ ಎಫೆಕ್ಟ್‌, ಸೆಲ್ಫಿ ಸ್ಟಿಕ್ಕರ್ ಬಳಸಲು ಆ್ಯಪ್ ಅಪ್ಡೇಟ್‌ ಮಾಡಿ

ವಾಟ್ಸಾಪ್‌ನಲ್ಲಿ ಬಂದಿವೆ ಹಲವು ಹೊಸ ಫೀಚರ್ಸ್; ಕ್ಯಾಮೆರಾ ಎಫೆಕ್ಟ್‌, ಸೆಲ್ಫಿ ಸ್ಟಿಕ್ಕರ್ ಬಳಸಲು ಆ್ಯಪ್ ಅಪ್ಡೇಟ್‌ ಮಾಡಿ

WhatsApp: ವಾಟ್ಸಾಪ್‌ನಲ್ಲಿ ಹೊಸ ವರ್ಷಕ್ಕೆ ಹೊಸ ಹೊಸ ಅಪ್ಡೇಟ್‌ಗಳು ಬಂದಿವೆ. ನಿಮ್ಮ ಫೋನ್‌ನಲ್ಲಿ ನೀವು ಬಳಸುವ ಅಪ್ಲಿಕೇಶನ್‌ನಲ್ಲೂ ಈ ಫೀಚರ್ಸ್‌ ಲಭ್ಯವಿರಲಿದೆ. ಅದಕ್ಕಾಗಿ ನೀವು ನಿಮ್‌ ವಾಟ್ಸಾಪ್ ಅಪ್ಲಿಕೇಶನ್ ಅಪ್ಡೇಟ್‌ ಮಾಡಿ‌ ನೋಡಿ.

ವಾಟ್ಸಾಪ್‌ನಲ್ಲಿ ಬಂದಿವೆ ಹಲವು ಹೊಸ ಫೀಚರ್ಸ್; ಆ್ಯಪ್ ಅಪ್ಡೇಟ್‌ ಮಾಡಿ ನೋಡಿ
ವಾಟ್ಸಾಪ್‌ನಲ್ಲಿ ಬಂದಿವೆ ಹಲವು ಹೊಸ ಫೀಚರ್ಸ್; ಆ್ಯಪ್ ಅಪ್ಡೇಟ್‌ ಮಾಡಿ ನೋಡಿ (Pexel)

ನೀವು ನಿಮ್ಮ ಮೊಬೈಲ್‌ ಫೋನ್‌ನಲ್ಲಿ ವಾಟ್ಸಾಪ್‌ ಅಪ್ಡೇಟ್‌ ಮಾಡಿಲ್ಲವಾದರೆ, ಈಗಲೇ ಮಾಡಿಕೊಳ್ಳಿ. ಈಗಾಗಲೇ ವಾಟ್ಸಾಪ್‌ ತನ್ನ ಮೆಸೆಂಜರ್ ಅಪ್ಲಿಕೇಶನ್‌ನಲ್ಲಿ ಹೊಸ ಹೊಸ ನವೀಕರಣ (ಅಪ್ಡೇಟ್)ಗಳನ್ನು ಹೊರತಂದಿದೆ. ಬಳಕೆದಾರರು ಅಪ್ಲಿಕೇಶನ್‌ ಬಳಸಲು ಇನ್ನಷ್ಟು ಸುಲಭವಾಗಲು ಹಾಗೂ ಬಳಕೆಯ ಅನುಭವವನ್ನು ಸುಧಾರಿಸುವ ಹೊಸ ವೈಶಿಷ್ಟ್ಯಗಳು ಇದಾಗಿವೆ. ಇತ್ತೀಚೆಗಷ್ಟೇ ಹೊಸ ಫೀಚರ್‌ಗಳನ್ನು ಪರಿಚಯಿಸಲಾಗಿದೆ. ನಿಮ್ಮ ಫೋನ್‌ನಲ್ಲಿ ಈ ಆಯ್ಕೆಗಳು ಕಾಣಿಸಿಕೊಳ್ಳದಿದ್ದರೆ, ನಿಮ್ಮ ವಾಟ್ಸಾಪ್‌ ಅಪ್ಡೇಟ್‌ ಮಾಡಿಕೊಳ್ಳಿ.

ಮೆಟಾ ಮಾಲೀಕತ್ವದ ವಾಟ್ಸಾಪ್‌, ಹೊಸದಾಗಿ ಕ್ಯಾಮೆರಾ ಎಫೆಕ್ಸ್‌ಗಳನ್ನು ಪರಿಚಯಿಸಿದೆ. ಈ ಮೊದಲು ವಿಡಿಯೋಗಳಿಗೆ ಈ ಎಫೆಕ್ಟ್ ಆರಂಭಿಸಲಾಗಿತ್ತು. ಇದೀಗ ಫೋಟೋಗಳಿಗೂ ಲಭ್ಯವಿದೆ. ಈಗ ನಿಮ್ಮವರೊಂದಿಗೆ ಚಾಟ್ ಮಾಡುವಾಗ ಫೋಟೋಗಳನ್ನು ಹೆಚ್ಚು ಆಕರ್ಷಕವಾಗಿಸಲು 30 ಬ್ಯಾಗ್‌ರೌಂಡ್‌ಗಳು, ಫಿಲ್ಟರ್‌ಗಳು ಮತ್ತು ಎಫೆಕ್ಟ್‌ಗಳನ್ನು ಹಾಕಬಹುದು. ಫೋಟೋಗಳನ್ನು ನಿಮಗೆ ಬೇಕಾದಂತೆ ಪರಿವರ್ತಿಸಬಹುದು. ಅಂದರೆ, ಸುಲಭವಾಗಿ ಎಡಿಟ್‌ ಮಾಡಬಹುದು.

ಇದಲ್ಲದೆ, ವಾಟ್ಸಾಪ್‌ನಲ್ಲಿ ಹೊಸ ಸೆಲ್ಫಿ ಸ್ಟಿಕ್ಕರ್ ಅನ್ನು ಕೂಡಾ ಬಳಸಬಹುದು. ಈಗಾಗಲೇ ಈ ಫೀಚರ್‌ ಲಭ್ಯವಿದೆ. ಆದರೆ, ಅಪ್ಡೇಟ್‌ ನಂತರವೇ ನಿಮ್ಮ ಫೋನ್‌ನಲ್ಲೂ ಇಂತಹ ಆಯ್ಕೆಗಳನ್ನು ಬಳಸಲು ಸಾಧ್ಯ. ಬಳಕೆದಾರರು ತಮ್ಮ ಸೆಲ್ಫಿ ಫೋಟೋಗಳನ್ನು ಕಸ್ಟಮ್ ಸ್ಟಿಕ್ಕರ್‌ಗಳಾಗಿ ಪರಿವರ್ತಿಸಬಹುದು.

ಸೆಲ್ಫಿ ಸ್ಟಿಕ್ಕರ್‌

ಇದಕ್ಕಾಗಿ ನೀವು ಕ್ರಿಯೇಟ್ ಸ್ಟಿಕ್ಕರ್‌ನಲ್ಲಿರುವ ಸ್ಟಿಕ್ಕರ್ ಆಯ್ಕೆಯನ್ನು ಟ್ಯಾಪ್ ಮಾಡಬೇಕು. ಅಲ್ಲಿ ನೀವು ನಿಮಗೆ ಬೇಕಾದಂತೆ ಸೆಲ್ಫಿ ತೆಗೆದುಕೊಳ್ಳಬೇಕು. ಕ್ಯಾಮೆರಾ ಆಯ್ಕೆ ಕ್ಲಿಕ್‌ ಮಾಡಿ ಫೋಟೋ ತೆಗೆದುಕೊಂಡು ಅದರಿಂದ ಸ್ಟಿಕ್ಕರ್ ರಚಿಸಬಹುದು. ಇದು ಈಗಾಗಲೇ ಆಂಡ್ರಾಯ್ಡ್‌ ಫೋನ್‌ನಲ್ಲಿ ಲಭ್ಯವಿದೆ. ಈ ವೈಶಿಷ್ಟ್ಯವನ್ನು ಐಫೋನ್ ಬಳಕೆದಾರರು ಮುಂದಿನ ದಿನಗಳಲ್ಲಿ ಪಡೆಯಲಿದ್ದಾರೆ.

ಇನ್‌ಸ್ಟಾಗ್ರಾಮ್‌ನಂತೆ ವಾಟ್ಸಾಪ್‌ನಲ್ಲೂ ತ್ವರಿತ ಪ್ರತಿಕ್ರಿಯೆ

ಅಪ್ಲಿಕೇಶನ್‌ನಲ್ಲಿ ಚಾಟ್‌ ಮೂಲಕ ಸಂಪೂರ್ಣ ಸ್ಟಿಕ್ಕರ್ ಪ್ಯಾಕ್ ಅನ್ನು ನೇರವಾಗಿ ಸ್ನೇಹಿತರೊಂದಿಗೆ ಸುಲಭವಾಗಿ ಹಂಚಿಕೊಳ್ಳಲು ಹೊಸ ಆಯ್ಕೆಯನ್ನು ನೀಡಿದೆ. ಇದೇ ವೇಳೆ ಇನ್‌ಸ್ಟಾಗ್ರಾಮ್‌ನಂತೆ ವಾಟ್ಸಾಪ್‌ನಲ್ಲೂ ತ್ವರಿತ ಪ್ರತಿಕ್ರಿಯೆ ವೈಶಿಷ್ಟ್ಯಗಳನ್ನು ತರುತ್ತಿದೆ. ಬಳಕೆದಾರರು ಈಗ ತ್ವರಿತವಾಗಿ ಪ್ರತಿಕ್ರಿಯಿಸಲು, ಸಂದೇಶದ ಮೇಲೆ ಡಬಲ್-ಟ್ಯಾಪ್ ಮಾಡಬಹುದು.‌

ಡಾಕ್ಯುಮೆಂಟ್ ಸ್ಕ್ಯಾನರ್

ಅತ್ತ, ಐಫೋನ್‌ ಬಳಕೆದಾರರಿಗಾಗಿ ವಾಟ್ಸಾಪ್‌ ಐಒಎಸ್‌ ಆವೃತ್ತಿಯಲ್ಲಿ ಅಪ್ಲಿಕೇಶನ್‌ನಲ್ಲಿಯೇ ಡಾಕ್ಯುಮೆಂಟ್ ಸ್ಕ್ಯಾನರ್ ಅನ್ನು ಪರಿಚಯಿಸಿದೆ. ಈ ವೈಶಿಷ್ಟ್ಯದ ಮೂಲಕ, ಬಳಕೆದಾರರು ಅಪ್ಲಿಕೇಶನ್ ಕ್ಲೋಸ್‌ ಮಾಡದೆಯೇ ಯಾವುದೇ ಡಾಕ್ಯುಮೆಂಟ್ ಅನ್ನು ಸ್ಕ್ಯಾನ್ ಮಾಡಬಹುದು. ಅಲ್ಲದೆ ಅದನ್ನು ನಿಮಗೆ ಬೇಕಾದ ಕಾಂಟ್ಯಾಕ್ಟ್‌ನೊಂದಿಗೆ ತಕ್ಷಣ ಹಂಚಿಕೊಳ್ಳಬಹುದು.

ಈ ಹೊಸ ವೈಶಿಷ್ಟ್ಯವು ಬಳಕೆದಾರರ ಸಮಯವನ್ನು ಉಳಿಸುತ್ತದೆ. ಹಿಂದೆ, ಬಳಕೆದಾರರು ಡಾಕ್ಯುಮೆಂಟ್ ಅನ್ನು ಸ್ಕ್ಯಾನ್ ಮಾಡಿ ಅದನ್ನು ಫೋಲ್ಡರ್‌ನಲ್ಲಿ ಸೇವ್‌ ಮಾಡಬೇಕಿದ್ದರೆ ಫೋನ್‌ನ ಮುಖ್ಯ ಕ್ಯಾಮೆರಾ ಅಥವಾ ಯಾವುದಾದರೂ ಮೂರನೇ ಅಪ್ಲಿಕೇಶನ್ (ಥರ್ಡ್‌ ಪಾರ್ಟಿ) ಅನ್ನು ಅವಲಂಬಿಸಬೇಕಾಗಿತ್ತು. ಆ ನಂತರವೇ ವಾಟ್ಸಾಪ್‌ ತೆರೆದು, ಡಾಕ್ಯುಮೆಂಟ್ ಅನ್ನು ಆಯ್ಕೆ ಮಾಡಿ ಹಂಚಿಕೊಳ್ಳಲು ನಿರ್ದಿಷ್ಟ ಫೋಲ್ಡರ್‌ಗೆ ಹೋಗಬೇಕಿತ್ತು. ಈಗ ಈ ಪ್ರಕ್ರಿಯೆ ಸುಲಭವಾಗುತ್ತದೆ.

Whats_app_banner