Xiaomi 15 Series: ಬೆಸ್ಟ್ ಕ್ಯಾಮೆರಾ ಫೋನ್ ಖರೀದಿ ಮಾಡ್ಬೇಕಾ, ಬಿಡುಗಡೆಯಾಗುತ್ತಿದೆ ಶಓಮಿ 15 ಸಿರೀಸ್; ಫೀಚರ್ಸ್‌, ದರ ವಿವರ ಇಲ್ಲಿದೆ
ಕನ್ನಡ ಸುದ್ದಿ  /  ಜೀವನಶೈಲಿ  /  Xiaomi 15 Series: ಬೆಸ್ಟ್ ಕ್ಯಾಮೆರಾ ಫೋನ್ ಖರೀದಿ ಮಾಡ್ಬೇಕಾ, ಬಿಡುಗಡೆಯಾಗುತ್ತಿದೆ ಶಓಮಿ 15 ಸಿರೀಸ್; ಫೀಚರ್ಸ್‌, ದರ ವಿವರ ಇಲ್ಲಿದೆ

Xiaomi 15 Series: ಬೆಸ್ಟ್ ಕ್ಯಾಮೆರಾ ಫೋನ್ ಖರೀದಿ ಮಾಡ್ಬೇಕಾ, ಬಿಡುಗಡೆಯಾಗುತ್ತಿದೆ ಶಓಮಿ 15 ಸಿರೀಸ್; ಫೀಚರ್ಸ್‌, ದರ ವಿವರ ಇಲ್ಲಿದೆ

Xiaomi 15 Series Release: ಶಓಮಿ ಇಂಡಿಯಾ ತನ್ನ 15 ಸರಣಿ ಉತ್ಪನ್ನಗಳನ್ನು ಬಿಡುಗಡೆ ಮಾಡಿದೆ. ಮೊಬೈಲ್‌ ಫೋನ್ ಹಾಗೂ ಫೋಟೋಗ್ರಫಿ ಕಿಟ್ ಒಳಗೊಂಡಿರುವ ಈ ಸೀರಿಸ್‌ನ ಕುರಿತ ವಿವರ ಇಲ್ಲಿದೆ.

ಶಓಮಿ 15 ಸಿರೀಸ್ ಬಿಡುಗಡೆ
ಶಓಮಿ 15 ಸಿರೀಸ್ ಬಿಡುಗಡೆ

Xiaomi 15 Series Release: ಉತ್ತಮ ದರದಲ್ಲಿ ಅತ್ಯದ್ಭುತ ವೈಶಿಷ್ಟಗಳನ್ನು ಹೊಂದಿರುವ ಫೋನ್ ಖರೀದಿ ಮಾಡಬೇಕು ಎಂದುಕೊಳ್ಳುತ್ತಿದ್ದೀರಾ, ಶಓಮಿ ನಿಮಗಾಗಿ ಹೊಸ ಫೋನ್ ಬಿಡುಗಡೆ ಮಾಡುತ್ತಿದೆ. ಶಓಮಿ 15 ಸೀರಿಸ್‌ ಸ್ಮಾರ್ಟ್‌ಫೋನ್‌ಗಳು ಬಿಡುಗಡೆಯಾಗುತ್ತಿದ್ದು, ಮಾರ್ಚ್ 18 ರಿಂದ ಖರೀದಿಗೆ ಲಭ್ಯವಿದೆ.

ಶಓಮಿ ಇಂಡಿಯಾ 15 ಸೀರಿಸ್‌ ಸ್ಮಾರ್ಟ್‌ಫೋನ್‌ಗಳ ವೈಶಿಷ್ಟ್ಯ ಹಾಗೂ ದರ ವಿವರಗಳ ಬಗ್ಗೆ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ. ಹಿಂದಿನ ಸ್ಮಾರ್ಟ್‌ಫೋನ್‌ಗಳಿಗೆ ಹೋಲಿಸಿದರೆ ಈ ಸರಣಿಯ ಸ್ಮಾರ್ಟ್‌ಫೋನ್‌ನಲ್ಲಿ ಅತ್ಯಾಧುನಿಕ ತಂತ್ರಜ್ಞಾನವನ್ನು ಅಳವಡಿಸಲಾಗಿದೆ.

ಲೀಕಾ ಸಮ್ಮಿಲಕ್ಸ್ ಆಪ್ಟಿಕಲ್ ಲೆನ್ಸ್‌ಗಳು ಮತ್ತು ಶಕ್ತಿಯುತ ಸ್ನಾಪ್ ಡ್ರ್ಯಾಗನ್ 8 ಎಲೈಟ್ ಮೊಬೈಲ್ ಪ್ಲಾಟ್ ಫಾರಂ ಶಓಮಿ ಹೈಪರ್ ಒಎಸ್ 2ನಿಂದ ಸನ್ನದ್ಧವಾಗಿದ್ದು, ಶಓಮಿ 15 ಸೀರೀಸ್ ಮುಂದಿನ ತಲೆಮಾರಿನ ಎಐ ಸಾಮರ್ಥ್ಯಗಳು, ಉನ್ನತೀಕರಿಸಿದ ಸಿಸ್ಟಂ ಆಪ್ಟಿಮೈಸೇಷನ್ ಮತ್ತು ಉನ್ನತ ಕನೆಕ್ಟಿವಿಟಿಗಳನ್ನು ನೀಡುತ್ತದೆ. ಶಓಮಿ 15 ಸರಣಿಯ ಸ್ಮಾರ್ಟ್‌ಫೋನ್‌ಗಳ ವೈಶಿಷ್ಟ್ಯ ಈ ಕೆಳಗಿನಂತಿದೆ.

ಶಓಮಿ 15

ಶಓಮಿ 15 6.36 ಇಂಚು ಕ್ರಿಸ್ಟಲ್ ರೆಸ್ ಡೈನಾಮಿಕ್ 1-120 ಹರ್ಟ್ಸ್ ಅಮೋಲ್ಡ್ ಡಿಸ್‌ಪ್ಲೇ ಇದರಲ್ಲಿದೆ. ಶೇ 94 ಸ್ಕ್ರೀನ್-ಟು-ಬಾಡಿ ಅನುಪಾತದೊಂದಿಗೆ ಹೊಂದಿದೆ. ಇದರ ವೈವಿಧ್ಯಮಯ ಟ್ರಿಪಲ್-ಕ್ಯಾಮೆರಾ ಸಿಸ್ಟಂ 14 ಎಂಎಂನಿಂದ 120ಎಂಎಂ ಫೋಕಲ್ ಲೆಂಥ್ ಹೊಂದಿದ್ದು ಇದರೊಂದಿಗೆ ಲೀಕಾ ಸಮ್ಮಿಲಕ್ಸ್ ಮೇನ್‌ ಕ್ಯಾಮೆರಾ ಎಫ್ 1.62 ಅಪಾರ್ಚರ್ ಮತ್ತು ಲೈಟ್ ಹಂಟರ್ ಫ್ಯೂಷನ್ 900 ಸೆನ್ಸರ್ ಅನ್ನು ಅಸಾಧಾರಣ ಛಾಯಾಗ್ರಹಣಕ್ಕೆ ಹೊಂದಿದೆ. 60 ಎಂಎಂ ಲೀಕಾ ಫ್ಲೋಟಿಂಗ್ ಟೆಲಿಫೋಟೊ ಕ್ಯಾಮೆರಾ ಕ್ಲೋಸ್-ಅಪ್ ಛಾಯಾಗ್ರಹಣದಲ್ಲಿ ಉತ್ತಮವಾಗಿದ್ದು ಫಾಸ್ಟ್ ಶಾಟ್ ಮೋಡ್ ಬಳಕೆದಾರರಿಗೆ ಕೇವಲ 0.6 ಸೆಕೆಂಡುಗಳ ಕ್ಷಣಗಳನ್ನೂ ಸೆರೆ ಹಿಡಿಯುತ್ತದೆ. 30 ಎಫ್‌ಪಿಎಸ್‌ನಲ್ಲಿ 8ಕೆ ವಿಡಿಯೊ ರೆಕಾರ್ಡಿಂಗ್ ಮತ್ತು ಡಾಲ್ಬಿ ವಿಷನ್ 5ಕೆ 60 ಎಫ್‌ಪಿಎಸ್‌ ಹೊಂದಿರುವ ಶಓಮಿ 15 ಪ್ರತಿ ಫ್ರೇಮ್ ಕೂಡಾ ಸಿನಿಮೀಯವಾಗಿರುವಂತೆ ಮಾಡುತ್ತದೆ.

ಶಓಮಿ 15 ಅಲ್ಟ್ರಾ

ಲೀಕಾದ ಮುಂಚೂಣಿಯ ಕ್ಲಾಸಿಕ್ ಕ್ಯಾಮೆರಾ ಕರಕುಶಲತೆಯಿಂದ ಸ್ಫೂರ್ತಿ ಪಡೆದ ಶಓಮಿ 15 ಅಲ್ಟ್ರಾ ಸ್ಮಾರ್ಟ್ ಫೋನ್ ಇಮೇಜಿಂಗ್ ಅನ್ನು ಅತ್ಯಾಧುನಿಕ ತಂತ್ರಜ್ಞಾನ ಮತ್ತು ವೃತ್ತಿಪರ ಮಟ್ಟದ ಸಾಮರ್ಥ್ಯಗಳೊಂದಿಗೆ ಮರು ವ್ಯಾಖ್ಯಾನಿಸುತ್ತದೆ. ಇದರ 1-ಇಂಚು 50 ಎಂಪಿ ಲೀಕಾ ಸಮ್ಮಿಲಕ್ಸ್ ಮೇನ್‌ ಕ್ಯಾಮೆರಾ ಸೋನಿ ಎಲ್‌ವೈಟಿ-900 ಸೆನ್ಸರ್ ಮತ್ತು 14ಇವಿ ಹೈ ಡೈನಮಿಕ್‌ ರೇಂಜ್‌ ಹೊಂದಿದ್ದು 14 ಎಂಎಂನಿಂದ 200 ಎಂಎಂ ಆಪ್ಟಿಕಲ್ ಗುಣಮಟ್ಟದ ಝೂಮ್ ಶ್ರೇಣಿಯಲ್ಲಿ ಅತ್ಯಾಕರ್ಷಕ ಛಾಯಾಚಿತ್ರದ ಗುಣಮಟ್ಟ ನೀಡುತ್ತದೆ. ಆಕರ್ಷಕ ಭೂ ಪ್ರದೇಶಗಳು, ವಿವರವಾದ ಪೋರ್ಟ್ರೈಟ್ ಅಥವಾ ಲ್ಯಾಂಡ್‌ಸ್ಕೇಪ್, ಟ್ರಾವೆಲ್ ಫೋಟೊ ಬಳಕೆದಾರರು ವೃತ್ತಿಪರ ಮಟ್ಟದ ಫಲಿತಾಂಶಗಳನ್ನು ಪಡೆಯಬಹುದು. ಶಓಮಿ 15 ಅಲ್ಟ್ರಾ ಮೊಬೈಲ್ ವಿಡಿಯೊಗ್ರಫಿಯನ್ನು 4ಕೆ 120 ಎಫ್.ಇ.ಎಸ್ ಸ್ಲೋ-ಮೋಷನ್ ರೆಕಾರ್ಡಿಂಗ್ ಮೂಲಕ ವಿಸ್ತರಿಸಿದೆ.

ಶಓಮಿ 15 ಅಲ್ಟ್ರಾ ಫೋಟೋಗ್ರಫಿ ಕಿಟ್

ಲೆಜೆಂಡ್ ಎಡಿಷನ್

ಛಾಯಾಗ್ರಹಣದ ಉತ್ಸಾಹಿಗಳಿಗೆ ಶಓಮಿ 15 ಅಲ್ಟ್ರಾ ಫೋಟೊಗ್ರಫಿ ಕಿಟ್ ಭಾರತಕ್ಕೆ ಪ್ರವೇಶಿಸಿದ್ದು ಇದು ಕಿರಿದಾದ ಮಾದರಿಯಲ್ಲಿ ವೃತ್ತಿಪರ ಗುಣಮಟ್ಟದ ನಿಯಂತ್ರಣ ನೀಡುತ್ತದೆ. ಶಟರ್ ಬಟನ್ ಮತ್ತು ಹಿಡಿತವು ಡಿಎಸ್‌ಎಲ್ಆರ್ ರೀತಿಯ ಅನುಭವ ನೀಡುತ್ತದೆ. ಬಿಲ್ಟ್-ಇನ್ 2000 ಎಂಎಎಚ್ ಬ್ಯಾಟರಿ ಶೂಟಿಂಗ್ ಸೆಷನ್‌ಗಳನ್ನು ವಿಸ್ತರಿಸುತ್ತದೆ.

ಬೆಲೆ ಹಾಗೂ ಲಭ್ಯತೆ ವಿವರ

ಶಓಮಿ 15 ದರ 64,999 ರಿಂದ ಪ್ರಾರಂಭವಾಗುತ್ತದೆ. ಶಓಮಿ 15 ಅಲ್ಟ್ರಾ ದರ 1,09,999 ರಿಂದ ಪ್ರಾರಂಭವಾಗುತ್ತದೆ. ಶಓಮಿ 15 ಸೀರೀಸ್ ಏಪ್ರಿಲ್ 3, 2025ರಿಂದ ಎಂಐ.ಕಾಂ, ಅಮೆಜಾನ್.ಇನ್ ಮತ್ತು ಅಧಿಕೃತ ರೀಟೇಲ್ ಮಳಿಗೆಗಳಲ್ಲಿ ಲಭ್ಯ.

ಪ್ರಿ ಬುಕ್ಕಿಂಗ್‌ಗೆ ವಿಶೇಷ ಆಫರ್

ಪ್ರಿ-ಬುಕಿಂಗ್ ಮಾರ್ಚ್ 19 ರಿಂದ ಪ್ರಾರಂಭವಾಗಲಿದೆ. ಶಓಮಿ 15 ಅಲ್ಟ್ರಾ ಪ್ರಿ-ಬುಕ್ ಮಾಡಿದವರು ಫೋಟೋಗ್ರಫಿ ಕಿಟ್-ಎಜೆಂಡ್ ಎಡಿಷನ್( 11,999 ಮೌಲ್ಯ) ಅನ್ನು ಯಾವುದೇ ಹೆಚ್ಚುವರಿ ವೆಚ್ಚವಿಲ್ಲದೆ ಪಡೆಯುತ್ತಾರೆ. ಶಓಮಿ 15 ಪ್ರಿ-ಬುಕ್ ಮಾಡಿದವರು ಶಓಮಿ ಕೇರ್ ಪ್ಲಾನ್ ( 5,999 ಮೌಲ್ಯ) ಹೆಚ್ಚುವರಿ ವೆಚ್ಚವಿಲ್ಲದೆ ಪಡೆಯುತ್ತಾರೆ.

Reshma

TwittereMail
ರೇಷ್ಮಾ ಶೆಟ್ಟಿ: 'ಹಿಂದೂಸ್ತಾನ್ ಟೈಮ್ಸ್​​ ಕನ್ನಡ'ದಲ್ಲಿ ಸೀನಿಯರ್​ ಕಂಟೆಂಟ್ ಪ್ರೊಡ್ಯೂಸರ್. ಜೀವನಶೈಲಿ (ಲೈಫ್‌ಸ್ಟೈಲ್) ವಿಭಾಗದಲ್ಲಿ ಕಾರ್ಯನಿರ್ವಹಣೆ. ಪ್ರಜಾವಾಣಿ ದಿನಪತ್ರಿಕೆಯ ವಿವಿಧ ವಿಭಾಗಗಳಲ್ಲಿ 9 ವರ್ಷಗಳ ಅನುಭವ. ಆರೋಗ್ಯ, ಆಹಾರ, ಸಿನಿಮಾ, ಕಿರುತೆರೆ ಆಸಕ್ತಿಯ ಕ್ಷೇತ್ರಗಳು. ಕುಂದಾಪುರ ತಾಲ್ಲೂಕಿನ ವಕ್ವಾಡಿ ಇವರ ಊರು. ಸದ್ಯಕ್ಕೆ ಬೆಂಗಳೂರು ನಿವಾಸಿ.