Jio cloud Offer: ರಿಲಯೆನ್ಸ್ ಜಿಯೋ ದೀಪಾವಳಿ ಆಫರ್, 100 ಜಿಬಿ ಎಐ ಕ್ಲೌಡ್ ಸ್ಟೋರೇಜ್ ಉಚಿತ, ಏನಿದು ಜಿಯೋ ಕ್ಲೌಡ್, ಬಳಸೋದು ಹೇಗೆ
Reliance Jio free Cloud Storage: ಜಿಯೋ ಸಿಮ್ ಬಳಕೆದಾರರಿಗೆ ರಿಲಯೆನ್ಸ್ ಕಂಪನಿಯು 100 ಜಿಬಿ ಜಿಯೋ ಎಐ ಕ್ಲೌಡ್ ಸ್ಟೋರೇಜ್ ಉಚಿತವಾಗಿ ನೀಡುತ್ತಿದೆ. ಈ ಆರಂಭಿಕ ಆಫರ್‌ನಿಂದ ಫೋಟೋ, ಮ್ಯೂಸಿಕ್, ಫೈಲ್‌ಗಳನ್ನು ಜಿಯೋ ಸಂಗ್ರಹಾಲಯದಲ್ಲಿ ಸಂಗ್ರಹಿಸಿಡಬಹುದು. ಏನಿದು ಜಿಯೋ ಕ್ಲೌಡ್ ಸ್ಟೋರೇಜ್? ಇಲ್ಲಿದೆ ವಿವರ.
Reliance Jio free Cloud Storage: ಭಾರತದಲ್ಲಿ ಆರ್ಟಿಫಿಶಿಯಲ್ ಇಂಟಲಿಜೆನ್ಸ್ ಬಳಕೆ ಹೆಚ್ಚಾಗುತ್ತಿದೆ. ಇದೇ ಸಂದರ್ಭದಲ್ಲಿ ಇತ್ತೀಚೆಗೆ ನಡೆದ ಕಂಪನಿ ಸಭೆಯಲ್ಲಿ ಮುಖೇಶ್ ಅಂಬಾನಿ ಅವರು ಜಿಯೋ ಎಐ ಕ್ಲೌಡ್ ವೆಲ್‌ಕಂ ಆಫರ್ ನೀಡಿದ್ದಾರೆ. ಭಾರತದಲ್ಲಿರುವ ಹಲವು ಮಿಲಿಯನ್ ಜಿಯೋ ಸಿಮ್ ಬಳಕೆದಾರರು ಆರಂಭದಲ್ಲಿ ಈ ಆಫರ್ ಅನ್ನು ಉಚಿತವಾಗಿ ಬಳಸಬಹುದು. ಮುಂದಿನ ದಿನಗಳಲ್ಲಿ ಅದಕ್ಕೂ ಒಂದು ರೇಟ್ ಫಿಕ್ಸ್ ಆಗಬಹುದು. ಸಾಕಷ್ಟು ಮೊಬೈಲ್ ಫೋನ್ ಬಳಕೆದಾರರಿಗೆ ಕಾಲ್, ಇಂಟರ್‌ನೆಟ್ ಎಲ್ಲವೂ ಗೊತ್ತು. ಆದರೆ, ಜನಸಾಮಾನ್ಯರಿಗೆ ಈ ಕ್ಲೌಡ್ ಸ್ಟೋರೇಜ್ ಕುರಿತು ಅಷ್ಟೊಂದು ಮಾಹಿತಿ ಇರಲಿಕಿಲ್ಲ. ಈ ಲೇಖನದಲ್ಲಿ ಜಿಯೋ ಎಐ ಕ್ಲೌಡ್ ಸ್ಟೋರೇಜ್ ಕುರಿತು ಹೆಚ್ಚಿನ ವಿವರ ತಿಳಿದುಕೊಳ್ಳೋಣ.
100 ಜಿಬಿ ಜಿಯೋ ಎಐ ಕ್ಲೌಡ್ ಸ್ಟೋರೇಜ್ ಉಚಿತ
ದೀಪಾವಳಿ ಆಫರ್ ಲೆಕ್ಕದಲ್ಲಿ ಜಿಯೋ ಸಿಮ್ ಬಳಕೆದಾರರಿಗೆ ರಿಲಯೆನ್ಸ್ ಕಂಪನಿಯು 100 ಜಿಬಿ ಎಐ ಕ್ಲೌಡ್ ಸ್ಟೋರೇಜ್ ಉಚಿತವಾಗಿ ನೀಡಲಿದೆ. 47ನೇ ವಾರ್ಷಿಕ ಪ್ರಧಾನ ಸಭೆಯಲ್ಲಿ ಆರ್‌ಐಎಲ್ ಈ ಘೋಷಣೆ ಮಾಡಿದೆ. "ಈಗ ಎಲ್ಲೆಡೆ ಎಲ್ಲರೂ ಎಐ ತಂತ್ರಜ್ಞಾನವನ್ನು ಬಳಸುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಕನೆಕ್ಟೆಡ್ ಇಂಟಲಿಜೆನ್ಸ್ ನೀಡಲು ನಮಗೆ ಖುಷಿಯಾಗುತ್ತಿದೆ. ನಾವು ಜಿಯೋ ಎಐ ಕ್ಲೌಡ್ ವೆಲ್‌ಕಂ ಆಫರ್ ಘೋಷಿಸುತ್ತಿದ್ದೇವೆ" ಎಂದು ಮುಕೇಶ್ ಅಂಬಾನಿ ಹೇಳಿದ್ದಾರೆ.
ಏನಿದು ಜಿಯೋ ಎಐ ಕ್ಲೌಡ್ ಸ್ಟೋರೇಜ್? ಬಳಸುವುದು ಹೇಗೆ?
ಸ್ಮಾರ್ಟ್‌ಫೋನ್‌ನಲ್ಲಿ ಜಿಯೋ ಸಿಮ್ ಬಳಕೆದಾರರು ತಮ್ಮ ಮೊಬೈಲ್‌ನಲ್ಲಿರುವ ಫೋಟೋಗಳು, ವಿಡಿಯೋಗಳು ಅಥವಾ ಇತರೆ ದಾಖಲೆಗಳನ್ನು ಆನ್‌ಲೈನ್‌ನಲ್ಲಿ ಸಂಗ್ರಹಿಸಿಡುವ ವ್ಯವಸ್ಥೆ ಇದಾಗಿದೆ. ಉದಾಹರಣೆಗೆ ನೀವು ಜಿಮೇಲ್ ಬಳಕೆದಾರರಾಗಿದ್ದರೆ ಗೂಗಲ್ ಫೋಟೋಸ್, ಗೂಗಲ್ ಡಾಕ್ಸ್‌ನಲ್ಲಿ ಮೊಬೈಲ್‌ನಲ್ಲಿರುವ ಕಾಂಟ್ಯಾಕ್ಟ್, ಫೋಟೋಗಳು, ಫೈಲ್‌ಗಳನ್ನು ಸಂಗ್ರಹಿಸಿಡುವಿರಿ. ಇದೇ ರೀತಿ ಜಿಯೋ ಕ್ಲೌಡ್‌ನಲ್ಲೂ 100 ಜಿಬಿಯಷ್ಟು ಫೋಟೋಗಳು, ವಿಡಿಯೋಗಳು, ಫೈಲ್‌ಗಳನ್ನು ಉಚಿತವಾಗಿ ಸಂಗ್ರಹಿಸಿಡಬಹುದು. ಇದನ್ನು ಮೊಬೈಲ್ ಹೊರತುಪಡಿಸಿ ಆನ್‌ಲೈನ್‌ನಲ್ಲಿ ಜಿಯೋ ಕ್ಲೌಡ್‌ನಲ್ಲಿ ಎಲ್ಲಿ ಬೇಕಾದರೂ ಬಳಸಬಹುದು. ಇದರಿಂದ ನಿಮ್ಮ ಮೊಬೈಲ್ ಸ್ಟೋರೇಜ್ ಉಳಿತಾಯವಾಗುತ್ತದೆ. ಮೊಬೈಲ್‌ನ 60 ಜಿಬಿ, 100 ಜಿಬಿ ಸ್ಟೋರೇಜ್ ಫುಲ್ ಆಯ್ತು ಎಂದು ತಲೆಬಿಸಿ ಮಾಡಿಕೊಳ್ಳಬೇಕಿಲ್ಲ. ನೆನಪಿಡಿ, ಮುಂದೊಂದು ದಿನ 100 ಜಿಬಿಗಿಂತ ಹೆಚ್ಚು ಸಂಗ್ರಹವಾದಗ ಜಿಯೋ ಕ್ಲೌಡ್‌ಗೆ ನೀವು ಹಣ ನೀಡಬೇಕಾಗಬಹುದು.
jiocloud ಸ್ಟೋರೇಜ್‌ನಲ್ಲಿ ಏನು ಬೇಕಾದರೂ ಸಂಗ್ರಹಿಸಿಡಬಹುದು. ಅದನ್ನು ಯಾವುದೇ ಆನ್‌ಲೈನ್‌ನಲ್ಲೂ ಪಡೆಯಬಹುದು. ಫೋಟೋಗಳು, ವಿಡಿಯೋಗಳು, ಮ್ಯೂಸಿಕ್, ಡಾಕ್ಯುಮೆಂಟ್‌ಗಳು, ಕಾಂಟ್ಯಾಕ್ಟ್‌ಗಳನ್ನು ಸಂಗ್ರಹಿಸಿಡಬಹುದು. ಇದದನ್ನು ಮೊಬೈಲ್ ಆಪ್‌ಗಳು, ಡೆಸ್ಕ್‌ಟಾಪ್ ಕಂಪ್ಯೂಟರ್ ಆಪ್‌ಗಳು, ವೆಬ್, ಟಿವಿ ಮಾತ್ರವಲ್ಲದೆ ಜಿಯೋ ಫೋನ್‌ನಲ್ಲಿ ಬಳಸಬಹುದು. ಇಷ್ಟು ಮಾತ್ರವಲ್ಲದೆ ಜಿಯೋ ಕ್ಲೌಡ್ ಹೊಂದಿರುವ ಇತರೆ ಬಳಕೆದಾರರ ಜತೆ ಈ ಫೈಲ್‌ಗಳನ್ನು ಸುಲಭವಾಗಿ ಹಂಚಿಕೊಳ್ಳಬಹುದು. ಜಿಯೋ ನಂಬರ್ ಮೂಲಕ ಲಾಗಿನ್ ಆದವರಿಗೆ 5 ಜಿಬಿ ಮತ್ತು ಗೂಗಲ್ ಮೂಲಕ ಲಾಗಿನ್ ಆದವರಿಗೆ 2 ಜಿಬಿ ಉಚಿತ ಸ್ಟೋರೇಜ್ ನೀಡಲಾಗುತ್ತದೆ. ಇದಕ್ಕಿಂತ ಹೆಚ್ಚು ಬೇಕಿದ್ದರೆ ಹಣ ಪಾವತಿಸಬೇಕು. ಸದ್ಯಕ್ಕೆ ಜಿಯೋ ತನ್ನ ಬಳಕೆದಾರರಿಗೆ 100 ಜಿಬಿ ವೆಲ್‌ಕಂ ಆಫರ್ ನೀಡಿದೆ. ಈ 100 ಜಿಬಿ ಆಫರ್ ದೀಪಾವಳಿ ಹಬ್ಬದಿಂದ ಜಿಯೋ ಬಳಕೆದಾರರಿಗೆ ದೊರಕಲಿದೆ.