ಭಾರತದ ಹೊಸ ಸ್ಮಾರ್ಟ್ಫೋನ್ಗೆ ನಲುಗಿದ ವಿವೋ-ಶವೋಮಿ; ಈ ಫೋನ್ ಬೆಲೆ ಕೇವಲ 6499 ರೂಪಾಯಿ
Excerpt: ಲಾವಾ ಯುವ 4 ಸ್ಮಾರ್ಟ್ಫೋನ್, 50-ಮೆಗಾಪಿಕ್ಸೆಲ್ ಮುಖ್ಯ ಹಿಂಬದಿಯ ಕ್ಯಾಮೆರಾ, 5,000mAh ಬ್ಯಾಟರಿ ಮತ್ತು ಫಿಂಗರ್‌ಪ್ರಿಂಟ್ ಸಂವೇದಕ ಸೇರಿದಂತೆ ಒಂದು ಮೊಬೈಲ್ನಲ್ಲಿ ಅಗತ್ಯಕ್ಕೆ ಬೇಕಾಗಿರುವಂತಹ ಎಲ್ಲ ಆಯ್ಕೆಗಳನ್ನು ನೀಡಲಾಗಿದೆ.
ಭಾರತದ ಪ್ರಸಿದ್ಧ ಮೊಬೈಲ್ ಬ್ರ್ಯಾಂಡ್ ಲಾವಾ ಇದೀಗ ಹೊಸ ಸ್ಮಾರ್ಟ್ಫೋನ್ ಮೂಲಕ ದೇಶದಲ್ಲಿ ಸಂಚಲನ ಮೂಡಿಸಿದೆ. ಲಾವಾ ಯುವ 4 ಅನ್ನು ಯುನಿಸೊಕ್ ಟಿ606 ಚಿಪ್‌ಸೆಟ್‌ನೊಂದಿಗೆ ಭಾರತದಲ್ಲಿ ಬಿಡುಗಡೆ ಮಾಡಲಾಗಿದೆ. ಈ ಹ್ಯಾಂಡ್‌ಸೆಟ್ 230,000 ಕ್ಕಿಂತ ಹೆಚ್ಚು AnTuTu ಸ್ಕೋರ್ ಅನ್ನು ಸಾಧಿಸಿದೆ ಎಂದು ಹೇಳಲಾಗಿದೆ. 50-ಮೆಗಾಪಿಕ್ಸೆಲ್ ಮುಖ್ಯ ಹಿಂಬದಿಯ ಕ್ಯಾಮೆರಾ, 5,000mAh ಬ್ಯಾಟರಿ ಮತ್ತು ಫಿಂಗರ್‌ಪ್ರಿಂಟ್ ಸಂವೇದಕ ಸೇರಿದಂತೆ ಒಂದು ಮೊಬೈಲ್ನಲ್ಲಿ ಅಗತ್ಯಕ್ಕೆ ಬೇಕಾಗಿರುವಂತಹ ಎಲ್ಲ ಆಯ್ಕೆಗಳನ್ನು ನೀಡಲಾಗಿದೆ.
ಈ ಫೋನ್ ಪ್ರಸ್ತುತ ದೇಶದಲ್ಲಿ ಆಫ್‌ಲೈನ್ ಚಿಲ್ಲರೆ ವ್ಯಾಪಾರಿಗಳ ಮೂಲಕ ಖರೀದಿಸಲು ಲಭ್ಯವಿದೆ. ಯುವ 4 ಫೆಬ್ರವರಿಯಲ್ಲಿ ದೇಶದಲ್ಲಿ ಅನಾವರಣಗೊಂಡ ಲಾವಾ ಯುವ 3ರ ಉತ್ತರಾಧಿಕಾರಿಯಾಗಿದೆ. ಲಾವಾ ಯುವ 4 ಒಂದು ವರ್ಷದ ವಾರಂಟಿ ಮತ್ತು ಉಚಿತ ಹೋಮ್ ಸರ್ವೀಸ್ನೊಂದಿಗೆ ಬರುತ್ತದೆ ಎಂದು ಕಂಪನಿಯು ಪತ್ರಿಕಾ ಪ್ರಕಟಣೆಯಲ್ಲಿ ದೃಢಪಡಿಸಿದೆ.
ಭಾರತದಲ್ಲಿ ಲಾವಾ ಯುವ 4 ಬೆಲೆ, ಲಭ್ಯತೆ
ಭಾರತದಲ್ಲಿ ಲಾವಾ ಯುವ 4 ಎರಡು ಸ್ಟೋರೇಜ್ ಆಯ್ಕೆಯಲ್ಲಿ ಲಭ್ಯವಿದೆ. ಇದರ ಆರಂಭಿಕ 4GB + 64GB ಆಯ್ಕೆಗೆ ಕೇವಲ 6,999 ರೂ. ಇದೆ. ಅಂತೆಯೆ ಇದರ 4GB + 128GB ರೂಪಾಂತರದ ಬೆಲೆ ರೂ. 7,499 ಆಗಿದೆ. ಇದನ್ನು ಮೂರು ಬಣ್ಣ ಆಯ್ಕೆಗಳಲ್ಲಿ ನೀಡಲಾಗುತ್ತದೆ - ಹೊಳಪು ಕಪ್ಪು, ಹೊಳಪು ನೇರಳೆ ಮತ್ತು ಹೊಳಪು ಬಿಳಿ.
ಲಾವಾ ಯುವ 4 ಫೀಚರ್ಸ್
ಲಾವಾ ಯುವ 4 ಸ್ಮಾರ್ಟ್ಫೋನ್ 90Hz ರಿಫ್ರೆಶ್ ದರದೊಂದಿಗೆ 6.56-ಇಂಚಿನ HD+ ಡಿಸ್ಪ್ಲೇಯನ್ನು ಹೊಂದಿದೆ. ಈ ಫೋನ್ 4GB RAM ಮತ್ತು 128GB ವರೆಗಿನ ಆನ್‌ಬೋರ್ಡ್ ಸಂಗ್ರಹಣೆಯೊಂದಿಗೆ Unisoc T606 SoC ನಿಂದ ನಡೆಸಲ್ಪಡುತ್ತದೆ. ಇದು ಆಂಡ್ರಾಯ್ಡ್ 14 ಔಟ್-ಆಫ್-ದಿ-ಬಾಕ್ಸ್‌ನಲ್ಲಿ ಕಾರ್ಯನಿರ್ವಹಿಸುತ್ತದೆ.
ಕ್ಯಾಮೆರಾ ವಿಭಾಗದಲ್ಲಿ, ಇದು ಸೆಲ್ಫಿಗಳು ಮತ್ತು ವಿಡಿಯೋ ಕರೆಗಳಿಗಾಗಿ 50-ಮೆಗಾಪಿಕ್ಸೆಲ್ ಪ್ರಾಥಮಿಕ ಹಿಂಭಾಗದ ಸಂವೇದಕ ಮತ್ತು 8-ಮೆಗಾಪಿಕ್ಸೆಲ್ ಮುಂಭಾಗದ ಕ್ಯಾಮೆರಾ ಸಂವೇದಕವನ್ನು ಪಡೆದುಕೊಂಡಿದೆ. ಫ್ರಂಟ್ ಕ್ಯಾಮೆರಾವನ್ನು ಮುಂಭಾಗದ ಫಲಕದ ಮೇಲ್ಭಾಗ ಪಂಚ್-ಹೋಲ್ ಸ್ಲಾಟ್‌ನಲ್ಲಿ ಇರಿಸಲಾಗಿದೆ.
ಲಾವಾ ಯುವ 4 10W ವೈರ್ಡ್ ಚಾರ್ಜಿಂಗ್‌ಗೆ ಬೆಂಬಲದೊಂದಿಗೆ 5,000mAh ಬ್ಯಾಟರಿಯೊಂದಿಗೆ ಬರುತ್ತದೆ. ಭದ್ರತೆಗಾಗಿ, ಇದು ಸೈಡ್-ಮೌಂಟೆಡ್ ಫಿಂಗರ್‌ಪ್ರಿಂಟ್ ಸಂವೇದಕವನ್ನು ಹೊಂದಿದೆ. ವಿಶೇಷವಾಗಿ ಈ ಫೋನ್ ಗ್ಲಾಸಿ ಬ್ಯಾಕ್ ವಿನ್ಯಾಸದಿಂದ ಕೂಡಿದೆ.
ವರದಿ: ವಿನಯ್ ಭಟ್
ಇದನ್ನೂ ಓದಿ | ಮೊಬೈಲ್ ಚಾರ್ಜ್ ಮಾಡಿದಷ್ಟೇ ವೇಗದಲ್ಲಿ ಬ್ಯಾಟರಿ ಕೂಡ ಖಾಲಿಯಾಗುತ್ತಿದೆಯೆ? ಇದಕ್ಕೆ ಪರಿಹಾರ ಇಲ್ಲಿದೆ