ಕನ್ನಡ ಸುದ್ದಿ  /  ಜೀವನಶೈಲಿ  /  ಅಜ್ಜಿ ಊರಿಂದ ಶ್ರಾವಣಿಗೆ ಬಂತು ಕರೆ, ಸಾಲಿಗ್ರಾಮದಲ್ಲಿ ಸಿಗುತ್ತಾ ಮಿನಿಸ್ಟರ್‌ ಮಗಳ ಬದುಕಿಗೆ ತಿರುವು; ಶ್ರಾವಣಿ ಸುಬ್ರಹ್ಮಣ್ಯ ಧಾರಾವಾಹಿ

ಅಜ್ಜಿ ಊರಿಂದ ಶ್ರಾವಣಿಗೆ ಬಂತು ಕರೆ, ಸಾಲಿಗ್ರಾಮದಲ್ಲಿ ಸಿಗುತ್ತಾ ಮಿನಿಸ್ಟರ್‌ ಮಗಳ ಬದುಕಿಗೆ ತಿರುವು; ಶ್ರಾವಣಿ ಸುಬ್ರಹ್ಮಣ್ಯ ಧಾರಾವಾಹಿ

Shravani Subramanya Kannada Serial Today Episode June 26th: ʼಶ್ರಾವಣಿ ಸುಬ್ರಹ್ಮಣ್ಯʼ ಧಾರಾವಾಹಿಯ ಬುಧವಾರದ ಎಪಿಸೋಡ್‌ನಲ್ಲಿ ಸುಬ್ಬುವಿನ ಮನೆಯ ಯಜಮಾನಿಕೆ ಪಟ್ಟ ತನ್ನ ಮಗ ಸುಂದರನಿಗೆ ಕೊಡಬೇಕು ಎಂದು ಕಾಂತಮ್ಮ ಪಟ್ಟು. ಕರುಳ ಬಳ್ಳಿಯನ್ನು ಹುಡುಕಿ ಬಂತು ಕರೆ, ಶ್ರಾವಣಿಯ ಅಜ್ಜಿ ಊರಿನವರ ಆಗಮನ. ಶುರುವಾಗುತ್ತಾ ವಿಜಯಾಂಬಿಕಾಗೆ ಬ್ಯಾಡ್‌ಟೈಮ್‌.

ಅಜ್ಜಿ ಊರಿಂದ ಶ್ರಾವಣಿಗೆ ಬಂತು ಕರೆ, ಸಾಲಿಗ್ರಾಮದಲ್ಲಿ ಸಿಗುತ್ತಾ ಮಿನಿಸ್ಟರ್‌ ಮಗಳ ಬದುಕಿಗೆ ತಿರುವು; ಶ್ರಾವಣಿ ಸುಬ್ರಹ್ಮಣ್ಯ ಧಾರಾವಾಹಿ
ಅಜ್ಜಿ ಊರಿಂದ ಶ್ರಾವಣಿಗೆ ಬಂತು ಕರೆ, ಸಾಲಿಗ್ರಾಮದಲ್ಲಿ ಸಿಗುತ್ತಾ ಮಿನಿಸ್ಟರ್‌ ಮಗಳ ಬದುಕಿಗೆ ತಿರುವು; ಶ್ರಾವಣಿ ಸುಬ್ರಹ್ಮಣ್ಯ ಧಾರಾವಾಹಿ

ಶ್ರಾವಣಿ ಸುಬ್ರಹ್ಮಣ್ಯ ಧಾರಾವಾಹಿಯ ನಿನ್ನೆಯ (ಜೂನ್‌ 26) ಸಂಚಿಕೆಯಲ್ಲಿ ಶ್ರಾವಣಿಯನ್ನು ಹಾಗೂ ಹೀಗೂ ಸಮಾಧಾನ ಮಾಡಿ ಊಟ ಮಾಡುವಂತೆ ಮಾಡುವ ಸುಬ್ಬು, ಅವಳು ಮಲಗಿದ ಮೇಲೆ ಅಲ್ಲಿಂದ ಹೊರಡುತ್ತಾನೆ. ಬಾಲ್ಕನಿಯಲ್ಲಿ ನಿಂತಿದ್ದ ಸುರೇಂದ್ರ ಹಾಗೂ ವಂದನಾ ಬಳಿ ಶ್ರಾವಣಿ ಊಟ ಮಾಡಿ ಮಲಗಿದ್ದಾಳೆ ಎಂದು ಹೇಳುತ್ತಾರೆ. ಆಗ ಸುರೇಂದ್ರ ʼಸುಬ್ಬು ನಮಗೆ ಶ್ರಾವಣಿಯನ್ನು ಹೇಗೆ ಸಮಾಧಾನ ಮಾಡಬೇಕು ಎಂಬುದೇ ತಿಳಿಯಲಿಲ್ಲ. ಆದರೆ ನೀನು ನಿಜಕ್ಕೂ ಈ ಮನೆ ಮಗ. ಆ ಕಡೆ ಅಣ್ಣನನ್ನೂ ಸಮಾಧಾನ ಮಾಡಿ, ಈ ಕಡೆ ಶ್ರಾವಣಿಯನ್ನೂ ಸಮಾಧಾನ ಮಾಡಿದೆ. ನಮ್ಮಿಂದಾದ್ರೇ ಇದು ಖಂಡಿತ ಸಾಧ್ಯ ಆಗ್ತಾ ಇರ್ಲಿಲ್ಲಾʼ ಎಂದು ಮನಸಾರೆ ಹೊಗಳುತ್ತಾರೆ. ಸುಬ್ಬು ಬಳಿ ಊಟ ಮಾಡಿ ಹೋಗು ಅಂದ್ರು ಅವನು ಕೇಳುವುದಿಲ್ಲ, ನಾನು ಮನೆಯಲ್ಲಿ ಹೋಗಿ ಊಟ ಮಾಡುತ್ತೇನೆ ಎಂದು ಹೊರಟು ಬಿಡುತ್ತಾನೆ.

ಮಗನಿಗೆ ಯಜಮಾನಿಕೆ ಕೊಡಬೇಕೆಂದು ಕಾಂತಮ್ಮ ಪಟ್ಟು

ಮನೆಗೆ ಬಂದ ಸುಬ್ಬ ಕೈಕಾಲು ತೊಳೆದು ಊಟಕ್ಕೆ ಕೂರುತ್ತಾನೆ. ಮನೆಯಲ್ಲಿ ಅಮ್ಮ-ಅಕ್ಕ ಇಲ್ಲದೇ ಇರುವ ಕಾರಣ ತಂಗಿ ವರಲಕ್ಷ್ಮೀ ಊಟ ಬಡಿಸುತ್ತಾಳೆ. ಅಪ್ಪನ ಬಳಿ ನಿಂದು ಊಟ ಆಯ್ತೇನಪ್ಪಾ ಎಂದು ಕೇಳಿ ಇನ್ನೇನು ತುತ್ತು ತಿನ್ನಬೇಕು ಎನ್ನುವಾಗ ಅಲ್ಲಿಗೆ ಬರುವ ಕಾಂತಮ್ಮ ʼಸುಬ್ಬು ನಿನ್ನ ಅಮ್ಮ-ಅಪ್ಪನಿಗೆ ಮೊನ್ನೆಯಿಂದ ಒಂದು ವಿಚಾರ ಹೇಳ್ತಾ ಇದೀನಿ. ಅವರು ಕಿವಿ ಮೇಲೆ ಹಾಕಿಕೊಳ್ತಾ ಇಲ್ಲ. ಈ ಮನೆಯಲ್ಲಿ ನನಗೆ, ನನ್ನ ಮಾತಿನ ಮೇಲೆ ಯಾರಿಗೂ ಗೌರವ ಇಲ್ಲ. ನಾನು ಹೇಳಿದ ಮಾತನ್ನು ನಿಂಗೂ ಅವರು ಹೇಳಿಲ್ಲ ನೋಡುʼ ಎಂದು ಆರೋಪ ಮಾಡುತ್ತಾಳೆ. ʼಯಾಕೆ ಕಾಂತಮ್ಮತ್ತೆ, ಯಾರೀಗ ನಿಮಗೆ ಗೌರವ ಕೊಟ್ಟಿಲ್ಲ, ನಿಮಗೆ ಏನು ಬೇಕಿತ್ತು?ʼ ಎಂದು ಕೇಳಿದಾಗ ʼನನ್ನ ಮಗ ಈ ಮನೆಗೆ ಹಿರಿಯ. ಆದರೂ ಅವನಿಗೆ ಈ ಮನೆಯಲ್ಲಿ ಬೆಲೆ ಇಲ್ಲ, ಏನೋ ಅವನು ದುಡಿತಾ ಇಲ್ಲ. ನೀನು ದುಡಿತೀಯಾ ಅಷ್ಟೇ ವ್ಯತ್ಯಾಸ. ನೀನು ದುಡಿತೀಯಾ ಅಂತ ಮನೆ ಯಜಮಾನಿಕೆಯನ್ನು ವಯಸ್ಸಿನಲ್ಲಿ ಕಿರಿಯವನಾದ ನಿನಗೆ ಕೊಡಲು ಆಗುತ್ತಾ?ʼ ಎಂದು ಊಟದ ತಟ್ಟೆಯ ಮುಂದೆ ಕುಳಿತಿದ್ದ ಸುಬ್ಬುಗೆ ಪ್ರಶ್ನೆ ಮಾಡುತ್ತಾಳೆ. ಅದಕ್ಕೆ ಸುಬ್ಬು ʼಕಾಂತಮ್ಮತ್ತೆ ನಂಗೆ ಮನೆ ಯುಜಮಾನಿಕೆ ಬೇಕು ಎನ್ನುವ ಹುಚ್ಚಿಲ್ಲ. ಅವರೇ ಮೊದಲು ಊಟ ಮಾಡ್ಲಿʼ ಎಂದು ಊಟ ತಟ್ಟೆಗೆ ಕೈ ಇಟ್ಟವನ್ನು ಊಟ ಬಿಟ್ಟು ಎದ್ದು ನಿಲ್ಲುತ್ತಾನೆ. ವರ ಹಾಗೂ ಪದ್ಮನಾಭ ಅವರು ಎಷ್ಟು ಹೇಳಿದ್ರೂ ಕೇಳದೇ ನಾನು ಆಮೇಲೆ ತಿನ್ನುತ್ತೇನೆ ಎಂದು ರೂಮ್‌ಗೆ ಹೋಗುತ್ತಾನೆ.

ಟ್ರೆಂಡಿಂಗ್​ ಸುದ್ದಿ

ತಂದೆಯ ಮುಂದೆ ಕಾಣಿಸಿಕೊಳ್ಳದ ಶ್ರಾವಣಿ

ಮೊದಲೇ ಶಪಥ ಮಾಡಿದಂತೆ ಇನ್ನೆಂದು ತಂದೆ ಮುಂದೆ ಕಾಣಿಸಿಕೊಳ್ಳುವುದಿಲ್ಲ ಎಂದಿದ್ದ ಶ್ರಾವಣಿ ಅಂದಿನಿಂದ ಎಂದೂ ತಂದೆ ಮುಂದೆ ಬರುವುದಿಲ್ಲ. ಊಟಕ್ಕೆ ಕುಳಿತಾಗಲೂ ತಂದೆ ಬಂದ್ರು ಎನ್ನುವ ಕಾರಣಕ್ಕೆ ಊಟ ಬಿಟ್ಟು ಹೊರಟು ಹೋಗುತ್ತಾಳೆ. ಸಾಧ್ಯವಾದಷ್ಟು ತಂದೆಯನ್ನು ಅವಾಯ್ಡ್‌ ಮಾಡಿ ಬದುಕುತ್ತಿರುತ್ತಾಳೆ. ಆ ಹೊತ್ತಿಗೆ ಶ್ರಾವಣಿಯ ಬದುಕಿಗೊಂದು ತಿರುವು ನೀಡುವ ಸನ್ನಿವೇಶ ನಡೆಯುತ್ತದೆ.

ಶ್ರಾವಣಿ ಅಜ್ಜಿ ಊರಿನವರ ಆಗಮನ

ಒಂದಿನ ಟಿವಿ ನೋಡೋಕೆ ಎಂದು ಹಾಲ್‌ಗೆ ಬರುವ ಶ್ರಾವಣಿ ಹಾಲ್‌ನಲ್ಲಿ ಚಿಕ್ಕಮ್ಮ ಹಾಗೂ ಅಪ್ಪ ಇದ್ದ ಕಾರಣ ಅಡುಗೆಮನೆಗೆ ಹೋಗುತ್ತಾಳೆ. ಅಲ್ಲಿ ಚಿಕ್ಕಮ್ಮ ಪಿಂಕಿಗೆ ಊಟ ತಿನ್ನಿಸುತ್ತಿರುತ್ತಾರೆ. ಶ್ರಾವಣಿ ಅಡುಗೆಮನೆಗೆ ಬಂದಿರುವುದು ನೋಡಿ ಏನಮ್ಮಾ ಶ್ರಾವಣಿ ಏನಾದ್ರೂ ಅಡುಗೆ ಮಾಡೋಣ ಅಂತ ಬಂದ್ಯಾ ಎಂದು ರೇಗಿಸುತ್ತಾರೆ ಚಿಕ್ಕಮ್ಮ. ಅದಕ್ಕೆ ಶ್ರಾವಣಿ ʼಇಲ್ಲ ಚಿಕ್ಕಮ್ಮ, ಒಂದಿನ ಅಡುಗೆ ಮಾಡಿ ತಿನ್ನಲು ಕೊಟ್ಟಿದ್ದಕ್ಕೆ ವಿಷ ಆಯ್ತು, ಇನ್ನೊಮ್ಮೆ ಮಾಡಿ ಇನ್ನೇನೋ ಆಗೋದು ಬೇಡʼ ಎಂದು ಹೇಳಿ ಇನ್ನೇನೂ ಹೇಳಲು ಹೊರಡುವಾಗ ಡೋರ್‌ ಬೆಲ್‌ ಶಬ್ದ ಕೇಳಿಸುತ್ತದೆ. ಯಾರೆಂದು ನೋಡಲು ಬಾಗಿಲ ಬಳಿ ಹೋಗುವ ಶ್ರಾವಣಿಗೆ ಅಲ್ಲಿ ನಿಂತಿರುವ ಅಪರಿಚಿತರನ್ನು ಕಂಡು ಅಚ್ಚರಿಯಾಗುತ್ತೆ, ಮಾತ್ರವಲ್ಲ ಅವರು ವೀರೇಂದ್ರ ಇದಾರಾ? ಎಂದು ಅಪ್ಪನನ್ನು ಹೆಸರು ಹಿಡಿದು ಕೂಗಿದ್ದನ್ನು ನೋಡಿ ಶಾಕ್‌ ಕೂಡ ಆಗುತ್ತದೆ. ಇಲ್ಲಿಯವರೆಗೆ ಅಪ್ಪನನ್ನು ಹೆಸರು ಹಿಡಿದು ಕೂಗಿದವರನ್ನು ನೋಡಿಲ್ಲದ ಶ್ರಾವಣಿ ಇವರು ಯಾರೋ ಅಪ್ಪನಿಗೆ ತುಂಬಾ ಆತ್ಮೀಯರಿರಬಹುದು ಎಂದು ಅಂದಾಜಿಸುತ್ತಾಳೆ. ಕೂಡಲೇ ಹಾಲ್‌ಗೆ ಹೋಗಿ ಚಿಕ್ಕಪ್ಪ ಯಾರೋ ಬಂದಿದ್ದಾರೆ ಎಂದು ಹೇಳುತ್ತಾರೆ. ಒಳಗೆ ಕರೆದುಕೊಂಡು ಬಾ ಎಂದು ಚಿಕ್ಕಪ್ಪ ಹೇಳಿದಾಗ ಬಂದವರನ್ನು ಒಳಗೆ ಆಹ್ವಾನಿಸುತ್ತಾಳೆ ಶ್ರಾವಣಿ. ಅವರು ಮನೆಯೊಳಗೆ ಬಂದಿದ್ದೇ ತಡ ವೀರೇಂದ್ರ, ಸುರೇಂದ್ರ ಎದ್ದು ನಿಂತು ಗೌರವ ಸಲ್ಲಿಸುತ್ತಾರೆ. ಉಭಯ ಕುಶಲೋಪರಿ ವಿಚಾರಿಸಿ, ಕುಳಿತುಕೊಳ್ಳುವಂತೆ ಹೇಳುತ್ತಾರೆ. ಇದನ್ನೆಲ್ಲಾ ನೋಡಿ ಶ್ರಾವಣಿಗೆ ಮಾತ್ರವಲ್ಲ ವಂದನಾಗೂ ಗೊಂದಲ ಆಗುತ್ತದೆ. ಅವರು ಯಾರು ಎಂದು ತಿಳಿಯದೇ ತಲೆ ಕೆಡಿಸಿಕೊಳ್ಳುತ್ತಾರೆ.

ವೀರೇಂದ್ರ, ಪದ್ಮನಾಭ ಕುಟುಂಬದವರಿಗೆ ಪುಷ್ಕರಿಣಿ ಉತ್ಸವಕ್ಕೆ ಆಹ್ವಾನ

ಅವರ ಬಳಿ ವೀರೇಂದ್ರ ʼಅತ್ತೆಯವರು ಹೇಗಿದ್ದಾರೆʼ ಎಂದು ವಿಚಾರಿಸುತ್ತಾರೆ. ಆಗ ಬಂದ ಹಿರಿಯ ವ್ಯಕ್ತಿ ʼಅವರು ಆರಾಮ ಇದಾರೆ, ಅವರೇ ನಮ್ಮನ್ನು ಇಲ್ಲಿಗೆ ಕಳುಹಿಸಿದ್ದು, ಈ ಬಾರಿ ನಮ್ಮೂರು ಅಂದರೆ ಸಾಲಿಗ್ರಾಮದಲ್ಲಿ ಪುಷ್ಕರಿಣಿ ಉತ್ಸವ ನಡೆಯುತ್ತಿದೆ. ಹಲವು ವರ್ಷಗಳ ನಂತರ ಮೊದಲ ಬಾರಿಗೆ ಈ ಉತ್ಸವ ನಡೆಯುತ್ತಿದ್ದು ನಿಮ್ಮನ್ನು ಆಹ್ವಾನಿಸುವ ಸಲುವಾಗಿ ಬಂದಿದ್ದೇನೆʼ ಎಂದು ಹೇಳುತ್ತಾರೆ. ಆಗ ಶ್ರಾವಣಿಗೆ ಇವರು ತನ್ನಜ್ಜಿ ಊರಿನವರು ಎಂಬುದು ಅರ್ಥವಾಗುತ್ತದೆ, ಮಾತ್ರವಲ್ಲ ನನಗೂ ಅಜ್ಜಿ ಇದ್ದಾರೆ ಎಂದು ತಿಳಿದ ಶ್ರಾವಣಿ ಅಚ್ಚರಿಗೊಳ್ಳುತ್ತಾಳೆ, ಖುಷಿಯಲ್ಲಿ ತೇಲಾಡುತ್ತಾಳೆ. ಮಾತ್ರವಲ್ಲ ಬಂದವನು ಪುಷ್ಕರಿಣಿ ಉತ್ಸವದಲ್ಲಿ ಪಲ್ಲಕ್ಕಿ ಹೊರಲು ಆ ಕುಟುಂಬದ ಒಂದೇ ಒಂದು ಕುಡಿ ಈಗ ಇರುವುದು ಅದು ನಮ್ಮ ಶ್ರಾವಣಿ. ಶ್ರಾವಣಿಗೆ 24 ವರ್ಷ ತುಂಬುವವರೆಗೂ ಉತ್ಸವ ಮಾಡಬಾರದು ಎಂದು ಜೋಯಿಸರು ಹೇಳಿದ್ದ ಕಾರಣ ಉತ್ಸವ ಮಾಡಿರಲಿಲ್ಲ. ಈಗ ಅದಕ್ಕೆ ಸಮಯ ಬಂದಿದೆʼ ಎಂದು ಹೇಳುತ್ತಾರೆ. ಅಂದಹಾಗೆ ನಮ್ಮ ಶ್ರಾವಣಿ ಎಲ್ಲಿದ್ದಾಳೆ ಎಂದು ಕೇಳುತ್ತಾರೆ. ವೀರೇಂದ್ರ ಚಡಪಡಿಸುತ್ತಾ ನಿಂತು ಬಿಡುತ್ತಾರೆ. ಇದರೊಂದಿಗೆ ಉತ್ಸವಕ್ಕೆ ಕರೆಯಲು ಬಂದವರು ನಮ್ಮ ಪದ್ದು ಅಂದರೆ ಪದ್ಮನಾಭ ಅವರು ಕುಟುಂಬದವರು ಈ ಊರಿನಲ್ಲೇ ಅಂತಲ್ವಾ ಇರೋದು, ಬರುವಾಗ ಅವರ ಕುಟುಂಬದವರನ್ನೂ ನಿಮ್ಮ ಜೊತೆ ಕರೆದುಕೊಂಡು ಬರಲು ಅಮ್ಮೋರು ಹೇಳಿದ್ದಾರೆ, ನೀವು ಅವರನ್ನೂ ಕರೆದುಕೊಂಡು ಬನ್ನಿ ಎಂದು ಹೇಳಿ ಇನ್ನಷ್ಟು ಅಚ್ಚರಿ ಮೂಡಿಸುತ್ತಾರೆ.

ಬಂದವರಿಗೆ ಶ್ರಾವಣಿಯನ್ನು ಪರಿಚಯ ಮಾಡಿಸಿ ಕೊಡ್ತಾರಾ ವೀರೇಂದ್ರ, ಅಜ್ಜಿ ಊರಿಗೆ ಹೋಗುವ ಶ್ರಾವಣಿಯ ಅದೃಷ್ಟ ಬದಲಾಗುತ್ತಾ, ವಿಜಯಾಂಬಿಕಾಗೆ ಬ್ಯಾಡ್‌ಟೈಮ್‌ ಶುರುವಾಯ್ತ ಈ ಎಲ್ಲವನ್ನೂ ಮುಂದಿನ ಸಂಚಿಕೆಗಳಲ್ಲಿ ನಿರೀಕ್ಷಿಸಿ.