ಕನ್ನಡ ಸುದ್ದಿ  /  ಜೀವನಶೈಲಿ  /  Brain Teaser: ಈ ಪ್ರಶ್ನೆಗೆ ಉತ್ತರಿಸಲು ಪೆನ್ನು-ಪುಸ್ತಕ ಬೇಡ; 6092ರ ಮಧ್ಯೆ ಅಡಗಿರುವ ಭಿನ್ನ ಸಂಖ್ಯೆ ಪತ್ತೆಹಚ್ಚಬಲ್ಲಿರಾ?

Brain Teaser: ಈ ಪ್ರಶ್ನೆಗೆ ಉತ್ತರಿಸಲು ಪೆನ್ನು-ಪುಸ್ತಕ ಬೇಡ; 6092ರ ಮಧ್ಯೆ ಅಡಗಿರುವ ಭಿನ್ನ ಸಂಖ್ಯೆ ಪತ್ತೆಹಚ್ಚಬಲ್ಲಿರಾ?

ಇಲ್ಲಿರುವ ಸರಳ ಪ್ರಶ್ನೆಯೊಂದಕ್ಕೆ ನೀವು ಉತ್ತರಿಸಬೇಕು. ಗಣಿತದ ಲೆಕ್ಕ ಮಾಡಬೇಕೆಂದು ಸುದ್ದಿ ಓದದೆ ಹಿಂದೆ ಸರಿಯಬೇಡಿ. ಈ ಪ್ರಶ್ನೆಗೆ ಉತ್ತರ ಹೇಳಲು ನಿಮ್ಮ ಕಣ್ಣಿಗೆ ಸ್ವಲ್ಪ ಕೆಲಸ ಕೊಡಬೇಕು ಅಷ್ಟೇ. ನಿಮಗಿರುವ ಸಮಯ 20 ಸೆಕೆಂಡುಗಳು ಮಾತ್ರ.

6092ರ ಮಧ್ಯೆ ಅಡಗಿರುವ ಭಿನ್ನ ಸಂಖ್ಯೆ ಪತ್ತೆಹಚ್ಚಬಲ್ಲಿರಾ?
6092ರ ಮಧ್ಯೆ ಅಡಗಿರುವ ಭಿನ್ನ ಸಂಖ್ಯೆ ಪತ್ತೆಹಚ್ಚಬಲ್ಲಿರಾ? (Selfiequiz.com)

ನಿಮ್ಮನ್ನು ಸಾಕಷ್ಟು ಯೋಚಿಸುವಂತೆ ಮಾಡಿ ಮಿದುಳಿಗೆ ಕಸರತ್ತು ಕೊಡುವ ಗಣಿತದ ಕೆಲವೊಂದು ಸವಾಲುಗಳು ನಿಮ್ಮ ಯೋಚನಾ ಸಾಮರ್ಥ್ಯವನ್ನು ವೃದ್ಧಿಸಲು ಸಹಕಾರಿ. ಮೆದುಳಿಗೆ ಮೇವು ಕೊಡುವ ಪ್ರಶ್ನೆಗಳು ಮಾನಸಿಕ ಸಾಮರ್ಥ್ಯವನ್ನು ಹೆಚ್ಚಿಸುವುದರ ಜೊತೆಗೆ ಇಂಥಾ ಪ್ರಶ್ನೆಗಳನ್ನು ಮತ್ತಷ್ಟು ಬಿಡಿಸಲು ಪ್ರೇರೇಪಿಸುತ್ತವೆ. ಕೆಲವೊಬ್ಬರಿಗೆ ಗಣಿತವೆಂದರೆ ಕಬ್ಬಿಣದ ಕಡಲೆ. ಅಂಕೆ ಸಂಖ್ಯೆಗಳನ್ನು ಕಂಡರೆ ಮಾರುದ್ದ ಓಡುತ್ತಾರೆ. ಆದರೆ, ಮೆದುಳಿನ ಜೊತೆಗೆ ನಿಮ್ಮ ದೃಷ್ಟಿ ಸಾಮರ್ಥ್ಯಕ್ಕೂ ಸವಾಲೊಡ್ಡುವ ಬ್ರೇನ್‌ ಟೀಸರ್‌ ಒಂದನ್ನು ನಾವಿಂದು ಹೊತ್ತು ತಂದಿದ್ದೇವೆ. ಇದನ್ನು ಯಾವುದೇ ಕ್ಯಾಲ್ಕುಲೇಟರ್‌ ನೆರವಿಲ್ಲದೆ ಬಿಡಿಸಬಹುದು.

ಈ ಮೆದುಳಿಗೆ ಕಸರತ್ತು ಕೊಡುವ ಪ್ರಶ್ನೆಯು ವಯಸ್ಕರಿಗೆ ಮಾತ್ರವಲ್ಲ. ಮಕ್ಕಳು ಕೂಡಾ ಇದನ್ನು ಬಿಡಿಸಲು ಪ್ರಯತ್ನಿಸಬಹುದು. ನಿಮ್ಮ ಅರಿವಿನ ಕೌಶಲ್ಯವನ್ನು ಅಭಿವೃದ್ಧಿಪಡಿಸಲು ಈ ಚಿತ್ರ ನಿಮಗೆ ಸಹಾಯ ಮಾಡುತ್ತದೆ. ಮೆದುಳಿನ ಕಸರತ್ತುಗಳನ್ನು ನೀವು ಬೇರೆ ಬೇರೆ ಪುಸ್ತಕ, ನಿಯತಕಾಲಿಕೆಗಳು, ಆನ್‌ಲೈನ್ ವೆಬ್‌ಸೈಟ್‌ಗಳಲ್ಲಿ ನೋಡಿರಬಹುದು. ಇದು ಒಂದು ಉತ್ತಮ ಸಾಮಾಜಿಕ ಚಟುವಟಿಕೆಯಾಗಬಹುದು. ಹಾಗಿದ್ದರೆ ಈ ಗಣಿತದ ಪ್ರಶ್ನೆಯನ್ನು ಯಾರು ಬೇಗ ಪರಿಹರಿಸಬಹುದು ಎಂಬುದನ್ನು ನೋಡೋಣ.

ನಾವು ನಿಮಗೆ ಬ್ರೈನ್ ಟೀಸರ್ ಒಂದನ್ನು ಕೊಟ್ಟಿದ್ದೇವೆ. ಇದು ನಿಮ್ಮ ತಲೆಗಿಂತ ಹೆಚ್ಚಾಗಿ ನಿಮ್ಮ ದೃಷ್ಟಿ ತೀಕ್ಷ್ಣತೆಗೆ ಸವಾಲು ಹಾಕುತ್ತದೆ. ಇಲ್ಲಿ ಕೊಟ್ಟಿರುವ ಫೋಟೋದಲ್ಲಿ ಒಂದೇ ಸಂಖ್ಯೆ ಕಾಣುತ್ತಿದೆ. ಅಲ್ವಾ? ಖಂಡಿತಾ ಅಲ್ಲ. ಈ ಫೋಟೋದಲ್ಲಿ ಎಲ್ಲೆಡೆ ಒಂದೇ ಸಂಖ್ಯೆ ಇದೆ ಎಂಬಂತೆ ಮೇಲ್ನೋಟಕ್ಕೆ ಕಾಣುತ್ತದೆ. ಆದರೆ ನಿಮ್ಮ ಊಹೆ ಸುಳ್ಳು. ಇಲ್ಲಿ ಇನ್ನೊಂದು ಸಂಖ್ಯೆ ಅಡಗಿದೆ. ಒಂದೇ ರೀತಿ ಕಾಣುವ ಸಂಖ್ಯೆಯ ನಡುವೆ ವಿಭಿನ್ನ ಸಂಖ್ಯೆಗಳನ್ನು ಹುಡುಕುವುದೇ ನಿಮಗಿರುವ ಸವಾಲು.

ಟ್ರೆಂಡಿಂಗ್​ ಸುದ್ದಿ

ಇಲ್ಲಿ ಕೊಟ್ಟಿರುವ ಚಿತ್ರದಲ್ಲಿ ಎಲ್ಲೆಡೆ 6092 ಸಂಖ್ಯೆಯೇ ಕಾಣಿಸುತ್ತದೆ. ಇದರ ನಡುವೆ ಒಂದು ಬೇರೆ ಸಂಖ್ಯೆ ಅಡಗಿದೆ. ಆ ಸಂಖ್ಯೆಯನ್ನು ನೀವು ಕಂಡುಹಿಡಿಯಬೇಕು. ಈ ಬ್ರೈನ್ ಟೀಸರ್ ಸುಲಭವೆಂದು ತೋರುತ್ತದೆ. ಆದರೆ ಈ ಪ್ರಶ್ನೆಗೊಂದು ಟ್ವಿಸ್ಟ್ ಇದೆ. ನೀವು ಕೇವಲ 20 ಸೆಕೆಂಡುಗಳ ಒಳಗಡೆ ಆ ನಿರ್ದಿಷ್ಟ ಸಂಖ್ಯೆಯನ್ನು ಕಂಡುಹಿಡಿಯಬೇಕು. ನೀವು ಈ ಸವಾಲಿಗೆ ಸಿದ್ಧರಿದ್ದೀರಾ?

ನಿಮ್ಮ ಸಮಯ ಈಗ ಶುರು

ಟೈಮರ್‌ ಸೆಟ್‌ ಮಾಡಿ ಆ ಭಿನ್ನ ಸಂಖ್ಯೆಯನ್ನು ಹುಡುಕಲು ಆರಂಭಿಸಿ. ನಿಮ್ಮ ಸಮಯ ಈಗ ಶುರು... 3, 2,1 0…

ಮೊದಲ ನೋಟದಲ್ಲಿಯೇ ವಿಭಿನ್ನ ಸಂಖ್ಯೆಯನ್ನು ಕಂಡುಹಿಡಿಯಲು ನಿಮಗೆ ಸಾಧ್ಯವಾಗಿಲ್ವಾ? ಹಾಗಿದ್ದರೆ ಇನ್ನಷ್ಟು ಹೆಚ್ಚುವರಿ ಸಮಯ ತಗೊಂದು ನೋಡಿ. ಈಗ ನಿಮ್ಮ ಸಮಯ ಮುಕ್ತಾಯವಾಯ್ತು. ಇಷ್ಟರಲ್ಲೇ ನೀವು ಸಂಖ್ಯೆಯನ್ನು ಗುರುತಿಸಿದರೆ, ನೀವು ಈ ಸವಾಲು ಗೆದ್ದಿದ್ದೀರಿ. ಹೀಗಾಗಿ ನಿಮಗೆ ಅಭಿನಂದನೆಗಳು. ಒಂದು ವೇಳೆ ಉತ್ತರ ಕಂಡುಹಿಡಿಯಲು ನಿಮ್ಮಿಂ ಸಾಧ್ಯವಾಗದಿದ್ದರೆ, ಮತ್ತೊಮ್ಮೆ ಪ್ರಯತ್ನಿಸಿ ನೋಡಿ. ಈಗಲೂ ಸಾಧ್ಯವಾಗದಿದ್ದರೆ ನಾವೇ ನಿಮಗೆ ಉತ್ತರ ಹೇಳುತ್ತೇವೆ.

ಪ್ರಶ್ನೆಗೆ ಇಲ್ಲಿದೆ ಉತ್ತರ
ಪ್ರಶ್ನೆಗೆ ಇಲ್ಲಿದೆ ಉತ್ತರ (Selfiequiz.com)

ಇಂಥಾ ಇನ್ನಷ್ಟು ಬ್ರೇನ್‌ ಟೀಸರ್‌ ಪ್ರಶ್ನೆಗಳು ಎಚ್‌ಟಿ ಕನ್ನಡದಲ್ಲಿ ಬರುತ್ತಿರುತ್ತವೆ ಅದಕ್ಕಾಗಿ ಎಚ್‌ ಟಿ ಕನ್ನಡ ವೆಬ್‌ಸೈಟ್‌ಗೆ ನಿತ್ಯ ಭೇಟಿ ನೀಡಿ.