ಕನ್ನಡ ಸುದ್ದಿ  /  Lifestyle  /  These Are Health Benefits Of Crying

Health benefits of Crying: ಅಳು ನಿಯಂತ್ರಿಸುತ್ತೀರಾ? ಅಳುವುದರ ಆರೋಗ್ಯ ಪ್ರಯೋಜನ ಗೊತ್ತಾ ನಿಮಗೆ?

ನೀವು ಮನಃಪೂರ್ವಕವಾಗಿ ಅಳುತ್ತಿದ್ದರೆ, ದೇಹದ ಕೆಲವು ಅಂಗಗಳು ಕೂಡಾ ಆರೋಗ್ಯಕರವಾಗಿರುತ್ತವೆ. ವಿಶೇಷವಾಗಿ ಮಾನಸಿಕ ನೆಮ್ಮದಿ ನಿಮ್ಮದಾಗುತ್ತದೆ. ಮನಸು ಹಗುರವಾಗುತ್ತದೆ. ಇದರಿಂದ ದೇಹಕ್ಕೆ ಒಳ್ಳೆಯದೇ.

ಅಳುವುದು ಒಳ್ಳೆಯದು
ಅಳುವುದು ಒಳ್ಳೆಯದು

ಭಾವನೆಗಳು ಪ್ರತಿ ಮನುಷ್ಯನಿಗೂ ಇರುತ್ತದೆ. ನಿಜಾರ್ಥದಲ್ಲಿ ಭಾವನೆಗಳಿಲ್ಲದವರು ಮನುಷ್ಯರೇ ಇಲ್ಲ. ನಗು, ಅಳು, ಖುಷಿ ಇವೆಲ್ಲವೂ ಜೀವನದ ಒಂದು ಭಾಗ. ಮನಸಿನ ಭಾವನೆಗಳನ್ನು ವ್ಯಕ್ತಪಡಿಸಿದಾಗಲೇ ಅದಕ್ಕೊಂದು ಅರ್ಥ ಸಿಗುವುದು. ಹಸಿವಾದಾಗ ಹೇಗೆ ಊಟ ಮಾಡುತ್ತೇವೋ, ಅದೇ ರೀತಿ ನಗಬೇಕು ಅನಿಸಿದಾಗ ನಕ್ಕು ಬಿಡಬೇಕು. ಅಳಬೇಕು ಎನಿಸಿದಾಗ ಅತ್ತುಬಿಡಬೇಕು.

ಅಳು; ಹೆಣ್ಣು ಮಕ್ಕಳಿಗೆ ಮಾತ್ರ ಎಂದು ಸಾಮಾನ್ಯವಾಗಿ ಹೇಳುವುದುಂಟು. ಬೇಜಾರಾದಾಗಲೆಲ್ಲಾ ಹೆಣ್ಣು ಮಕ್ಕಳು ಜೋರಾಗಿ ಅತ್ತು ಮನಸ್ಸನ್ನು ಹಗುರ ಮಾಡುತ್ತಾರೆ. ಆದರೆ ಪುರುಷರು ಹೀಗಲ್ಲ. ಹೆಚ್ಚಿನ ಪುರುಷರು ಅಳು ಬಂದರೂ, ಅದನ್ನು ತೋರಿಸಿಕೊಳ್ಳುವುದಿಲ್ಲ. ಒಳಗೊಳಗೆ ನುಂಗಿಕೊಂಡು ವ್ಯಥೆ ಪಡುತ್ತಾರೆ. ಇದು ಕೆಲವೊಬ್ಬರಿಗೆ ಜನ್ಮತಃ ಬಂದಿರುವ ಗುಣ. ಇನ್ನೂ ಕೆಲವೊಬ್ಬರು ಅವರ ಪರಿಸ್ಥಿತಿಯಿಂದಾಗಿ ಅಳುವನ್ನು ನುಂಗುವ ಗುಣವನ್ನು ಅಳವಡಿಸಿಕೊಂಡಿರುತ್ತಾರೆ.

ಅಳುವುದು ತಪ್ಪು ಎಂದು ಖಂಡಿತಾ ಭಾವಿಸಬೇಡಿ. ಅಳುವನ್ನು ನಿಯಂತ್ರಿಸುವುದರಿಂದ ಅನಾರೋಗ್ಯವನ್ನು ಹೊರತುಪಡಿಸಿ ಏನನ್ನೂ ಸಾಧಿಸಲು ಸಾಧ್ಯವಿಲ್ಲ. ಹೌದು, ನೀವು ಅಳು ಬಂದಾಗ ಅಂದನ್ನು ಕಂಟ್ರೋಲ್‌ ಮಾಡಿ ಸಹಿಸಿಕೊಂಡಿರಿ ಎಂದಾದರೆ, ನಿಮಗೆ ಆರೋಗ್ಯ ಸಮಸ್ಯೆ ಎದುರಾಗಬಹುದು ಎಂದು ತಜ್ಞರು ಹೇಳುತ್ತಾರೆ. ಇದು ನಿಮಗೂ ಅರಿವಿಗೆ ಬರಬಹುದು.

ನೀವು ಮನಃಪೂರ್ವಕವಾಗಿ ಅಳುತ್ತಿದ್ದರೆ, ದೇಹದ ಕೆಲವು ಅಂಗಗಳು ಕೂಡಾ ಆರೋಗ್ಯಕರವಾಗಿರುತ್ತವೆ. ವಿಶೇಷವಾಗಿ ಮಾನಸಿಕ ನೆಮ್ಮದಿ ನಿಮ್ಮದಾಗುತ್ತದೆ. ಮನಸು ಹಗುರವಾಗುತ್ತದೆ. ಇದರಿಂದ ದೇಹಕ್ಕೆ ಒಳ್ಳೆಯದೇ.

ಕೆಲವೊಬ್ಬರು ಚಿಕ್ಕ ಚಿಕ್ಕ ವಿಷಯಗಳಿಗೂ ಆಗಾಗ ಕಣ್ಣೀರು ಹಾಕುತ್ತಾರೆ. ಇದರಿಂದ ಅಂಥವರೆಗೆ ಅಳುಮೂತಿ ಎಂದೇ ಅಡ್ಡಹೆಸರುಗಳನ್ನು ಇಟ್ಟಿರುತ್ತಾರೆ. ವಾಸ್ತವವಾಗಿ ಅವರು ಮಾನಸಿಕವಾಗಿ ತುಂಬಾ ಸಂತೋಷವಾಗಿರುತ್ತಾರೆ. ಅಲ್ಲದೆ ಶಾಂತವಾಗಿಯೂ ಇರುತ್ತಾರೆ. ಅಳುವುದು ಒತ್ತಡವನ್ನು ಕಡಿಮೆ ಮಾಡುತ್ತದೆ. ಮಾನಸಿಕವಾಗಿ ನಿರಾಳವಾದಾಗ ಸಂತೋಷ ಹೆಚ್ಚಾಗುತ್ತದೆ. ಹಾಗಾದರೆ, ಅಳುವುದರಿಂದ ಇನ್ನೇನು ಪ್ರಯೋಜನಗಳಿವೆ ಎಂಬುದನ್ನು ಇಲ್ಲಿ ನೋಡಿ.

ನರಗಳ ಆರೋಗ್ಯ

ಅಳುವುದು ನರಮಂಡಲದ ಮೇಲೆ ಉತ್ತಮ ಪರಿಣಾಮ ಬೀರುತ್ತದೆ. ಇದು ದೇಹ ಮತ್ತು ಮನಸ್ಸನ್ನು ವಿಶ್ರಾಂತ ಸ್ಥಿತಿಯಲ್ಲಿ ಇಡುತ್ತದೆ. ತುಂಬಾ ಅತ್ತಾಗ ಅನೇಕರು ನಿರಾಳವಾದ ಅನುಭವ ಪಡೆಯುತ್ತಾರೆ. ಕಣ್ಣೀರು ಹೋದಂತೆಲ್ಲಾ ನರಗಳ ಆರೋಗ್ಯವನ್ನು ಉತ್ತೇಜಿಸುತ್ತದೆ. ಮನಸ್ಥಿತಿಯನ್ನು ಸುಧಾರಿಸುವಲ್ಲಿ ಇದು ಪ್ರಮುಖ ಪಾತ್ರ ವಹಿಸುತ್ತದೆ.

ದೃಷ್ಟಿ ಸುಧಾರಣೆ

ಕಣ್ಣು ರೆಪ್ಪೆಗಳನ್ನು ಮಿಟುಕಿಸುವುದು ಎಷ್ಟು ಮುಖ್ಯವೋ, ಕಣ್ಣೀರು ಹೊರಹೋಗುವುದು ಕೂಡಾ ಅಷ್ಟೇ ಮುಖ್ಯ. ಅಳುವಾಗ ಕಣ್ಣೀರು ಹೊರಹೋಗುತ್ತದೆ. ಇಂತಹ ಸಂದರ್ಭದಲ್ಲಿ ಕಣ್ಣುಗಳಲ್ಲಿನ ಧೂಳು ಮತ್ತು ಕಣಗಳು ಕೂಡಾ ನಿಮಗೆ ತಿಳಿಯದಂತೆ ಹೊರಹೋಗುತ್ತದೆ. ಹೀಗಾಗಿಯೇ ಕಣ್ಣುಗಳನ್ನು ತೇವವಾಗಿರಿಸಿಕೊಳ್ಳುವುದು ಬಹಳ ಮುಖ್ಯ. ಅದಕ್ಕಾಗಿಯೇ ಅಳುವುದು ಅವಶ್ಯಕ. ಅಳುವುದು ಡ್ರೈ ಐ ಸಿಂಡ್ರೋಮ್ ಅನ್ನು ತಡೆಯಬಹುದು. ಇದು ಸ್ಪಷ್ಟ ದೃಷ್ಟಿಯನ್ನು ಖಚಿತಪಡಿಸುತ್ತದೆ. ಇದು ಬ್ಯಾಕ್ಟೀರಿಯಾವನ್ನು ಕೊಲ್ಲುವ ಲೈಸೋಜೈಮ್ ಎಂಬ ದ್ರವವನ್ನು ಸಹ ಬಿಡುಗಡೆ ಮಾಡುತ್ತದೆ.

ಒತ್ತಡವನ್ನು ಕಡಿಮೆ ಮಾಡುತ್ತದೆ

ಅಳುವುದು ನಮ್ಮ ಭಾವನೆಗಳ ಒಂದು ಭಾಗ. ದೇಹದಲ್ಲಿ ಎಂಡಾರ್ಫಿನ್ ಮತ್ತು ಆಕ್ಸಿಟೋಸಿನ್ ಬಿಡುಗಡೆಯಾಗುವುದರಿಂದ ದೈಹಿಕ ನೋವು ನಿವಾರಣೆಯಾಗುತ್ತದೆ. ಈ ಹಾರ್ಮೋನ್‌ಗಳ ಬಿಡುಗಡೆಯಿಂದಾಗಿ ನೀವು ಅತ್ತ ನಂತರ ಮನಸ್ಸು ಹಗುರವಾದ ಅನುಭವ ಪಡೆಯುತ್ತೀರಿ. ಹೀಗಾಗಿ ಅಳುವುದು ನಿಮ್ಮ ಒತ್ತಡವನ್ನು ನಿವಾರಿಸುತ್ತದೆ.

ಹೀಗಾಗಿ ದೈಹಿಕ ಮತ್ತು ಮಾನಸಿಕ ಆರೋಗ್ಯಕ್ಕೆ ಅಳುವುದು ಬಹಳ ಮುಖ್ಯ. ಆದ್ದರಿಂದ ನೀವು ಅಳಲು ಬಯಸಿದಾಗಲೆಲ್ಲಾ ಅತ್ತುಬಿಡಿ. ನಿಮ್ಮ ಮನಸ್ಸು ಮತ್ತು ಹೃದಯದ ತೃಪ್ತಿಗಾಗಿ ನೀವು ಅಳಿ. ಗಂಡಾಗಿರಲಿ ಅಥವಾ ಹೆಣ್ಣಾಗಿರಲಿ, ಭಾವನೆಗಳನ್ನು ನಿಯಂತ್ರಿಸುವುದು ಒಳ್ಳೆಯದಲ್ಲ. ನಾಲ್ಕು ಜರ ಮುಂದೆ ಕಣ್ಣೀರು ಸುರಿಸುವುದು ನಿಮಗೆ ಇಷ್ಟವಿಲ್ಲವಾದರೂ, ನೀವು ಒಬ್ಬರೇ ಇರುವಾಗ ಅತ್ತುಬಿಡಿ. ನಿಮ್ಮ ನೋವನ್ನು ನಿಮ್ಮಲ್ಲೇ ಹೇಳಿಕೊಂಡು ಅಳಿ. ನಿಮ್ಮ ಮನಸ್ಸು ನಿರಾಳವಾಗುತ್ತದೆ. ಉಳಿದ ಆರೋಗ್ಯ ಪ್ರಯೋಜನಗಳು ಮೇಲೆಯೇ ಇದೆ. ಹೀಗಾಗಿ ಅಳುವನ್ನು ನಿಯಂತ್ರಿಸುವುದರಿಂದ ಆರೋಗ್ಯಕ್ಕೆ ನಷ್ಟವಲ್ಲದೆ ಲಾಭವಂತೂ ಇಲ್ಲ.

ವಿಭಾಗ