ಗರ್ಭಿಣಿಯರು ತೆಗೆದುಕೊಳ್ಳಬೇಕಾದ ಮುನ್ನೆಚ್ಚರಿಕೆ ಕ್ರಮಗಳಿವು, ನಿಮ್ಮ ಮಗುವಿನ ಆರೋಗ್ಯ ನಿಮ್ಮ ಕೈಯ್ಯಲ್ಲಿ
ಕನ್ನಡ ಸುದ್ದಿ  /  ಜೀವನಶೈಲಿ  /  ಗರ್ಭಿಣಿಯರು ತೆಗೆದುಕೊಳ್ಳಬೇಕಾದ ಮುನ್ನೆಚ್ಚರಿಕೆ ಕ್ರಮಗಳಿವು, ನಿಮ್ಮ ಮಗುವಿನ ಆರೋಗ್ಯ ನಿಮ್ಮ ಕೈಯ್ಯಲ್ಲಿ

ಗರ್ಭಿಣಿಯರು ತೆಗೆದುಕೊಳ್ಳಬೇಕಾದ ಮುನ್ನೆಚ್ಚರಿಕೆ ಕ್ರಮಗಳಿವು, ನಿಮ್ಮ ಮಗುವಿನ ಆರೋಗ್ಯ ನಿಮ್ಮ ಕೈಯ್ಯಲ್ಲಿ

ನಿಮ್ಮ ಗರ್ಭಾವಸ್ಥೆಯಲ್ಲಿ ನೀವು ಜಾಗರೂಕರಾಗಿದ್ದಷ್ಟು ಮುಂದೆ ಹುಟ್ಟುವ ಮಗುವಿಗೆ ಒಳ್ಳೆಯದಾಗುತ್ತದೆ. ನಿಮ್ಮ ಮಗುವಿನ ಆರೋಗ್ಯ ಉತ್ತಮವಾಗಿರುತ್ತದೆ. ಇಂತಹ ಸಂದರ್ಭದಲ್ಲಿ ನೀವು ಏನೇನು ಮಾಡಬೇಕು ಎಂಬ ಅಂಶ ಇಲ್ಲಿದೆ ಗಮನಿಸಿ.

ಗರ್ಭಾವಸ್ಥೆ
ಗರ್ಭಾವಸ್ಥೆ

ಪ್ರತಿಯೊಬ್ಬ ಗರ್ಭಿಣಿಯರು ಅತ್ಯಂತ ಜಾಗರೂಕರಾಗಿರಬೇಕು. ಯಾಕೆಂದರೆ ನಿಮ್ಮ ಹೊಟ್ಟೆಯಲ್ಲಿ ಇನ್ನೊಂದು ಜೀವ ಬೆಳೆಯುತ್ತಾ ಇರುತ್ತದೆ. ಅದನ್ನು ಸುರಕ್ಷಿತವಾಗಿ ಭೂಮಿಗೆ ತರುವ ಜವಾಬ್ಧಾರಿ ನಿಮ್ಮದಾಗಿರುತ್ತದೆ. ಉತ್ತಮ ಆಹಾರ ಸೇವನೆಯಿಂದ ಉತ್ತಮ ಆರೋಗ್ಯವನ್ನು ಕಾಪಾಡಿಕೊಂಡರೆ ಮಾತ್ರ ನಿಮ್ಮ ಮಗು ಬೆಳವಣಿಗೆಯಾಗಲು ಸಾಧ್ಯ. ಗರ್ಭಿಣಿ ಮಹಿಳೆ ತನ್ನ ದಿನನಿತ್ಯದ ಆಹಾರದಲ್ಲಿ ಪೌಷ್ಟಿಕ ಆಹಾರ ಸೇವಿಸಬೇಕು. ಹಾಲು, ಹಣ್ಣುಗಳನ್ನು ನಿಯಮಿತವಾಗಿ ತಿನ್ನಬೇಕು.

ಬೇಳೆಕಾಳು

ದೈನಂದಿನ ಆಹಾರದಲ್ಲಿ ಗೋಧಿ, ಜೋಳ, ಅಕ್ಕಿ ಇದ್ದರೆ ಒಳ್ಳೆಯದು. ದಿನನಿತ್ಯದ ಆಹಾರದಲ್ಲಿ ಪ್ರೋಟೀನ್ ಕೂಡ ಇರುವಂತೆ ನೋಡಿಕೊಳ್ಳಬೇಕು. ಬೇಳೆಕಾಳುಗಳು, ಚಿಕನ್, ಮೊಟ್ಟೆ ಮತ್ತು ಹಾಲು ದಿನಕ್ಕೆ ಇವುಗಳಲ್ಲಿ ಒಂದು ಇರಲೇಬೇಕು.

ಹಸಿರು ಸೊಪ್ಪು

ಜೊತೆಗೆ ಹಸಿರು ಸೊಪ್ಪುಗಳು ಇರುವಂತೆ ನೋಡಿಕೊಳ್ಳಬೇಕು ಎನ್ನುತ್ತಾರೆ. ಅಂದರೆ ಪಾಲಕ್, ಪುದಿನಾ, ಕೊತ್ತಂಬರಿ, ಹರಿವೆ, ಮೆಂತೆ ಈ ರೀತಿ ಯಾವುದಾದರು ಸೊಪ್ಪನ್ನು ನೀವು ನಿಯಮಿತವಾಗಿ ನಿಮ್ಮ ಆಹಾರದಲ್ಲಿ ಸೇವಿಸಿ. ಮೊಳಕೆ ಬರಿಸಿದ ಕಾಳುಗಳು ಕೂಡ ನಿಮ್ಮ ಆರೋಗ್ಯಕ್ಕೆ ಒಳ್ಳೆಯದು. ಆದರೆ ಯಾವುದೇ ಕಾರಣಕ್ಕೂ ಬಾಡಿ ಹೀಟ್ ಆಗುವ ಪದಾರ್ಥಗಳನ್ನು ತಿನ್ನಬೇಡಿ. ಇದು ನಿಮಗೂ, ನಿಮ್ಮ ಮಗುವಿಗೂ ತೊಂದರೆ ಉಂಟು ಮಾಡುತ್ತದೆ.

ಕಾಳಜಿ

ಮೊದಲ ಮೂರು ತಿಂಗಳುಗಳ ಕಾಲ ನೀವು ತುಂಬಾ ಎಚ್ಚರಿಕೆಯಿಂದ ಇರಬೇಕು. ಈಗಿನ ಜೀವನ ಶೈಲಿ ಹಿಂದಿನಂತಿಲ್ಲ. ಆ ಕಾರಣದಿಂದ ನೀವು ತುಂಬಾ ಗಮನಕೊಟ್ಟು ಆರೋಗ್ಯ ಕಾಪಾಡಿಕೊಳ್ಳಬೇಕು. ಇಲ್ಲವಾದರೆ ತೊಂದರೆ ಅನುಭವಿಸುವುದು ಖಂಡಿತ. ನಂತರ ದಿನಗಳಲ್ಲೂ ಕೇರ್ ಬೇಕು ಆದರೆ ಮೊದಲ ಹಂತದಲ್ಲಿ ಹೆಚ್ಚು ಜಾಗರೂಕತೆ ಇರಲಿ.

ಯೋಗ ಮಾಡಬೇಕು

ಗರ್ಭಿಣಿ ಮಹಿಳೆ ಪ್ರತಿದಿನ ಒಂದೇ ಸ್ಥಳದಲ್ಲಿ ಇರದೆ ಬೆಳಿಗ್ಗೆ ಮತ್ತು ಸಂಜೆ ವ್ಯಾಯಾಮ ಮತ್ತು ಯೋಗ ಮಾಡಬೇಕು ಎಂದು ಹೇಳಲಾಗುತ್ತದೆ. ದಿನದಲ್ಲಿ ಒಂದೇ ಬಾರಿ ಹೆಚ್ಚು ತಿನ್ನದೆ ಆಗಾಗ ಸ್ವಲ್ಪ, ಸ್ವಲ್ಪ ಆಹಾರ ಸೇವನೆ ಮಾಡಬೇಕು. ಒಂದೇ ಬಾರಿಗೆ ಹೆಚ್ಚು ತಿಂದರೆ ಜೀರ್ಣಕ್ರಿಯೆ ಕಡಿಮೆ ಆಗುತ್ತದೆ ಎಂದು ಹೇಳಲಾಗುತ್ತದೆ.

Whats_app_banner