Sweat Reduce:ಹೆಚ್ಚು ಬೆವರುತ್ತಿದ್ದೀರಾ? ಸ್ವೆಟ್​ ಕಡಿಮೆಯಾಗಬೇಕಂದ್ರೆ ಹೀಗೆ ಮಾಡಿ..
ಕನ್ನಡ ಸುದ್ದಿ  /  ಜೀವನಶೈಲಿ  /  Sweat Reduce:ಹೆಚ್ಚು ಬೆವರುತ್ತಿದ್ದೀರಾ? ಸ್ವೆಟ್​ ಕಡಿಮೆಯಾಗಬೇಕಂದ್ರೆ ಹೀಗೆ ಮಾಡಿ..

Sweat Reduce:ಹೆಚ್ಚು ಬೆವರುತ್ತಿದ್ದೀರಾ? ಸ್ವೆಟ್​ ಕಡಿಮೆಯಾಗಬೇಕಂದ್ರೆ ಹೀಗೆ ಮಾಡಿ..

ಇದು ಬೇಸಿಗೆ. ಸುಡು ಬಿಸಿಲಿನ ಜತೆಗೆ ಬೆವರಿಳಿಸುವ ಕಾಲವಿದು. ಶಾಖ, ಶುಷ್ಕತೆ ಮತ್ತು ಸೂರ್ಯನ ಬೆಳಕಿಗೆ ಒಡ್ಡಿಕೊಳ್ಳುವುದರಿಂದ ನಿಮ್ಮ ದೇಹವು ಹೆಚ್ಚು ಬೆವರುವಿಕೆಗೆ ಕಾರಣವಾಗಬಹುದು. ಇದು ನಿಮ್ಮ ದೇಹದಿಂದ ದುರ್ವಾಸನೆ ಬರಲೂ ಕಾರಣವಾಗಬಹುದು. ಆದರೆ ಕೆಲವು ಆಹಾರಗಳು ಈ ಸಮಸ್ಯೆಯನ್ನು ಪರಿಹರಿಸಲು ಸಹಾಯ ಮಾಡುತ್ತದೆ ಎಂದು ನಿಮಗೆ ತಿಳಿದಿದೆಯೇ? ಬೆವರುವಿಕೆಯನ್ನು ಕಡಿಮೆ ಮಾಡುವ ಕೆಲವು ಆಹಾರಗಳ ಬಗ್ಗೆ ಈಗ ತಿಳಿದುಕೊಳ್ಳೋಣ.

<p>ಬೆವರುವಿಕೆ</p>
ಬೆವರುವಿಕೆ

ಬೇಸಿಗೆ ಬಂದಿದೆ. ಆದ್ದರಿಂದ ವಿಪರೀತವಾಗಿ ಬೆವರಲು ಪ್ರಾರಂಭವಾಗುತ್ತದೆ. ಬೆವರುವುದು ಚರ್ಮದ ಸಮಸ್ಯೆಗಳನ್ನು ಉಂಟುಮಾಡಬಹುದು. ಇದಲ್ಲದೇ ದೇಹದಿಂದ ದುರ್ವಾಸನೆಯೂ ಬರಲಾರಂಭಿಸುತ್ತದೆ. ಇದರಿಂದ ಆಗುವ ಕಿರಿಕಿರಿ ಅಷ್ಟಿಷ್ಟಲ್ಲ. ಹಾಗಂತ ಇದಕ್ಕೆ ಪರಿಹಾರವಿಲ್ಲವೆಂದಲ್ಲ. ಅದನ್ನು ಕಡಿಮೆ ಮಾಡಲು ಮಾರ್ಗಗಳಿವೆ. ಆಹಾರ ಕ್ರಮದಿಂದಲೂ ಬೆವರುವಿಕೆಯನ್ನು ಕಡಿಮೆ ಮಾಡಬಹುದು ಎನ್ನುತ್ತಾರೆ ತಜ್ಞರು.

ಹೈಪರ್ಹೈಡ್ರೋಸಿಸ್ ಎಂಬ ಅತಿಯಾದ ಬೆವರುವಿಕೆಯ ಸಮಸ್ಯೆ ಇರುವವರಿಗೆ ಬೇಸಿಗೆಯು ಇನ್ನಷ್ಟು ದುರ್ಬಲವಾಗಿರುತ್ತದೆ. ನೀವು ಸೇವಿಸುವ ಆಹಾರವು ನೀವು ಉತ್ಪಾದಿಸುವ ಬೆವರಿನ ಪ್ರಮಾಣದ ಮೇಲೆ ಪರಿಣಾಮ ಬೀರುತ್ತದೆ ಎಂಬುದು ಹೆಚ್ಚಿನವರಿಗೆ ತಿಳಿದಿಲ್ಲ ಎಂದು ಡಯಟಿಷಿಯನ್​ ಹರಿಲಕ್ಷ್ಮಿ ಹೇಳುತ್ತಾರೆ. ಕೆಲವೊಂದು ಆಹಾರವು ಬೆವರುವಿಕೆಯನ್ನು ಕಡಿಮೆ ಮಾಡಲು ಮತ್ತು ದೇಹದ ವಾಸನೆಯನ್ನು ಸುಧಾರಿಸಲು ಸಹ ಸಹಾಯ ಮಾಡುತ್ತದೆ.

ಬೆವರುವಿಕೆಗೆ ಕಾರಣಗಳು

* ಮಧುಮೇಹ

* ಋತುಬಂಧ

* ಸೋಂಕು ( ಕಾಲುಗಳಲ್ಲಿ ಫಂಗಲ್ ಸೋಂಕು)

* ಕಡಿಮೆ ರಕ್ತದೊತ್ತಡ

* ಥೈರಾಯ್ಡ್ ಸಮಸ್ಯೆಗಳು

* ಲ್ಯುಕೇಮಿಯಾ

* ಕೆಲವು ಔಷಧಿಗಳ ಅಡ್ಡ ಪರಿಣಾಮಗಳು

* ಒತ್ತಡ, ಆತಂಕ, ಖಿನ್ನತೆ

* ನೈರ್ಮಲ್ಯ ಸಮಸ್ಯೆಗಳು

ಅತಿಯಾಗಿ ಬೆವರುವುದು ಹೆಚ್ಚಿನವರಿಗೆ ಸಮಸ್ಯೆಯಾಗಿರಬಹುದು. ಅದಕ್ಕಾಗಿಯೇ ಪರಿಹಾರವನ್ನು ಕಂಡುಹಿಡಿಯುವುದು ತುಂಬಾ ಅಗತ್ಯವಾಗಿದೆ. ನಿಮ್ಮ ದೇಹದ ವಾಸನೆಯನ್ನು ಸುಧಾರಿಸಲು ಮತ್ತು ಬೆವರುವಿಕೆಯನ್ನು ಕಡಿಮೆ ಮಾಡಲು ಈ 6 ಆಹಾರಗಳನ್ನು ತೆಗೆದುಕೊಳ್ಳುವಂತೆ ತಜ್ಞರು ಸಲಹೆ ನೀಡುತ್ತಾರೆ.

1. ನೀರು

ಸಾಕಷ್ಟು ನೀರು ಕುಡಿಯುವುದರಿಂದ ನಿಮ್ಮ ದೇಹ ತಂಪಾಗಿರುತ್ತದೆ. ಅತಿಯಾದ ಬೆವರುವಿಕೆಯಿಂದ ಉಂಟಾಗುವ ನಿರ್ಜಲೀಕರಣದಿಂದ ನಿಮ್ಮನ್ನು ರಕ್ಷಿಸುತ್ತದೆ.

2. ಹೆಚ್ಚಿನ ಫೈಬರ್

ಹೆಚ್ಚಿನ ಫೈಬರ್ ಆಹಾರಗಳಾದ ಓಟ್ಸ್ ಮತ್ತು ಧಾನ್ಯಗಳು ಜೀರ್ಣಕ್ರಿಯೆಯನ್ನು ಸುಧಾರಿಸಲು ಸಹಾಯ ಮಾಡುತ್ತದೆ. ಸುಧಾರಿತ ಜೀರ್ಣಕ್ರಿಯೆಯು ದೇಹದ ಉಷ್ಣತೆಯನ್ನು ನಿಯಂತ್ರಣದಲ್ಲಿಡುತ್ತದೆ. ಬೆವರುವಿಕೆಯನ್ನು ಕಡಿಮೆ ಮಾಡುತ್ತದೆ.

3. ಆಲಿವ್ ಎಣ್ಣೆ

ನಿಮ್ಮ ಆಹಾರವನ್ನು ಬೇಯಿಸಲು ಆಲಿವ್ ಎಣ್ಣೆಯನ್ನು ಬಳಸುವುದರಿಂದ ಇದು ಚಯಾಪಚಯ ಮತ್ತು ಜೀರ್ಣಕ್ರಿಯೆಯನ್ನು ಹೆಚ್ಚಿಸುತ್ತದೆ. ಆಲಿವ್ ಎಣ್ಣೆಯು ಉತ್ಕರ್ಷಣ ನಿರೋಧಕಗಳಲ್ಲಿ ಸಮೃದ್ಧವಾಗಿದೆ. ಇದು ದೇಹದಲ್ಲಿ ಉಷ್ಣತೆ ಏರಿಕೆಯನ್ನು ತಡೆಯುತ್ತದೆ. ಬೆವರುವಿಕೆಯನ್ನು ನಿಯಂತ್ರಿಸುತ್ತದೆ.

4. ಹಣ್ಣುಗಳು

ಸೇಬು, ದ್ರಾಕ್ಷಿ, ಕರಬೂಜ, ಅನಾನಸ್, ಕಿತ್ತಳೆಗಳಂತಹ ಹೆಚ್ಚಿನ ನೀರಿನ ಅಂಶವಿರುವ ಹಣ್ಣುಗಳು ನಿಮ್ಮ ಬೆವರಿನ ಮಟ್ಟವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಜೊತೆಗೆ ಸಿಟ್ರಸ್ ಹಣ್ಣುಗಳಾದ ಕಿತ್ತಳೆ, ನಿಂಬೆಹಣ್ಣು ಮತ್ತು ಅನಾನಸ್‌ ಹಣ್ಣುಗಳನ್ನು ಸೇವಿಸುವುದರಿಂದ ನೈಸರ್ಗಿಕ ಪರಿಮಳವನ್ನು ದೇಹವು ಹೀರಿಕೊಳ್ಳುತ್ತದೆ. ನಿಮ್ಮ ಚರ್ಮಕ್ಕೆ ತಾಜಾ ಪರಿಮಳವನ್ನು ನೀಡುತ್ತದೆ.

5. ತರಕಾರಿಗಳು

ನಿಮ್ಮ ಆಹಾರದಲ್ಲಿ ನೀವು ಸೌತೆಕಾಯಿಗಳು, ಪಾಲಕ್​ ಸೊಪ್ಪು, ಕೆಂಪು ಎಲೆಕೋಸು ಮುಂತಾದ ತರಕಾರಿಗಳನ್ನು ಸೇರಿಸಿಕೊಳ್ಳಬೇಕು. ಇವು ನೀರಿನಿಂದ ದಟ್ಟವಾಗಿರುತ್ತವೆ. ಇದಲ್ಲದೆ, ಅವು ಬೆವರುವ ಮಟ್ಟವನ್ನು ನಿಯಂತ್ರಿಸಲು ಸಹಾಯ ಮಾಡುತ್ತಾರೆ.

6. ಹಸಿರು ಚಹಾ

ಬಿಸಿ ಪಾನೀಯಗಳನ್ನು ಕುಡಿಯುವುದರಿಂದ ನಕಾರಾತ್ಮಕ ಭಾವನೆ ಉಂಟಾಗುತ್ತದೆ. ಆದರೆ ಹಸಿರು ಚಹಾವು ಉತ್ಕರ್ಷಣ ನಿರೋಧಕಗಳಲ್ಲಿ ಸಮೃದ್ಧವಾಗಿದೆ. ಇದು ನರಮಂಡಲವನ್ನು ತಂಪಾಗಿರಿಸಲು ಮತ್ತು ಬೆವರನ್ನು ನಿಯಂತ್ರಣದಲ್ಲಿಡಲು ಸಹಾಯ ಮಾಡುತ್ತದೆ.

ಏನು ತೆಗೆದುಕೊಳ್ಳಬಾರದು..

ಕೆಫೀನ್ ಮತ್ತು ಆಲ್ಕೊಹಾಲ್​ ಇರುವ ಪಾನೀಯಗಳಿಂದ ದೂರವಿರಲು ಮರೆಯದಿರಿ. ಈ ವಸ್ತುಗಳು ನರಮಂಡಲವನ್ನು ಉತ್ತೇಜಿಸುತ್ತದೆ. ಈ ಕ್ರಮದಲ್ಲಿ ದೇಹವು ಅತಿಯಾಗಿ ಪ್ರತಿಕ್ರಿಯಿಸುತ್ತದೆ. ಇದು ಬೆವರಿನ ಪ್ರಮಾಣವನ್ನು ಹೆಚ್ಚಿಸಲು ಕಾರಣವಾಗುತ್ತದೆ.

Whats_app_banner