ವಾಷಿಂಗ್ ಮೆಷಿನ್ ಬಳಸುವಾಗ ಅಪ್ಪಿತಪ್ಪಿಯೂ ಈ ತಪ್ಪುಗಳನ್ನು ಮಾಡದಿರಿ: ಮೆಷಿನ್ ಬೇಗನೆ ಹಾಳಾಗಬಹುದು
ಕನ್ನಡ ಸುದ್ದಿ  /  ಜೀವನಶೈಲಿ  /  ವಾಷಿಂಗ್ ಮೆಷಿನ್ ಬಳಸುವಾಗ ಅಪ್ಪಿತಪ್ಪಿಯೂ ಈ ತಪ್ಪುಗಳನ್ನು ಮಾಡದಿರಿ: ಮೆಷಿನ್ ಬೇಗನೆ ಹಾಳಾಗಬಹುದು

ವಾಷಿಂಗ್ ಮೆಷಿನ್ ಬಳಸುವಾಗ ಅಪ್ಪಿತಪ್ಪಿಯೂ ಈ ತಪ್ಪುಗಳನ್ನು ಮಾಡದಿರಿ: ಮೆಷಿನ್ ಬೇಗನೆ ಹಾಳಾಗಬಹುದು

ವಾಷಿಂಗ್ ಮೆಷಿನ್ಬಳಸುವುದು ತುಂಬಾನೇ ಸುಲಭ. ಇದು ನಮ್ಮ ಸಮಯ, ಶ್ರಮವನ್ನು ಉಳಿಸುತ್ತದೆ. ಆದರೆ, ಕೆಲವು ವಿಷಯಗಳಲ್ಲಿ ಕಾಳಜಿ ವಹಿಸುವುದು ಇನ್ನೂ ಮುಖ್ಯವಾಗಿದೆ. ವಾಷಿಂಗ್ ಮೆಷಿನ್ ಅನ್ನು ಬಳಸುವಾಗ ಕೆಲವು ತಪ್ಪುಗಳನ್ನು ಮಾಡಬಾರದು. ಇದರಿಂದ ಮೆಷಿನ್ ಕೆಟ್ಟು ಹೋಗಬಹುದು. ಈ ಬಗ್ಗೆ ಇಲ್ಲಿದೆ ಮಾಹಿತಿ.

ವಾಷಿಂಗ್ ಮೆಷಿನ್ ಬಳಸುವಾಗ ಅಪ್ಪಿತಪ್ಪಿಯೂ ಈ ತಪ್ಪುಗಳನ್ನು ಮಾಡದಿರಿ: ಮೆಷಿನ್ ಬೇಗನೆ ಹಾಳಾಗಬಹುದು
ವಾಷಿಂಗ್ ಮೆಷಿನ್ ಬಳಸುವಾಗ ಅಪ್ಪಿತಪ್ಪಿಯೂ ಈ ತಪ್ಪುಗಳನ್ನು ಮಾಡದಿರಿ: ಮೆಷಿನ್ ಬೇಗನೆ ಹಾಳಾಗಬಹುದು (PC: Canva)

ಹಿಂದೆಲ್ಲಾ ಮಹಿಳೆಯರು ತೊಳೆಯುವ ಕಲ್ಲಿನಲ್ಲಿ ಬಟ್ಟೆ ಒಗೆಯುತ್ತಿದ್ದರು. ಆದರೀಗ ಈ ಕೆಲಸವನ್ನು ವಾಷಿಂಗ್ ಮೆಷಿನ್ ಸುಲಭವಾಗಿಸಿದೆ. ಆದರೂ, ಇಂದು ಕೂಡ ಹಳ್ಳಿಗಳಲ್ಲಿ ನದಿ, ಕೆರೆ, ಅಥವಾ ಮನೆ ಮುಂದೆ ಒಗೆಯುವ ಕಲ್ಲಿನಲ್ಲಿ ಬಟ್ಟೆ ಒಗೆಯುವುದನ್ನು ಕಾಣಬಹುದು. ವಾಷಿಂಗ್ ಮೆಷಿನ್ ಬಂದ ಮೇಲೆ ಕೊಳಕು ಬಟ್ಟೆಯೂ ಹೊಳೆಯುತ್ತದೆ. ವಾಷಿಂಗ್ ಮೆಷಿನ್ ಬಳಸುವುದು ತುಂಬಾನೇ ಸುಲಭ. ಕೊಳಕು ಬಟ್ಟೆಗಳು, ಲಕ್ವಿಡ್ ಹಾಕಿ ಸ್ವಿಚ್ ಒತ್ತಿದರೆ ಸಾಕು. ಕೆಲವೇ ನಿಮಿಷಗಳಲ್ಲಿ ಸ್ವಚ್ಛ ಬಟ್ಟೆ ಹೊರಬರುತ್ತದೆ. ಹೀಗಾಗಿ ನಗರಗಳಲ್ಲಂತೂ ಬಹಳಷ್ಟು ಮಂದಿ ವಾಷಿಂಗ್ ಮೆಷಿನ್ ಅನ್ನು ಹೆಚ್ಚಾಗಿ ಬಳಸುತ್ತಾರೆ. ಇದರಿಂದ ಸಮಯವೂ ಉಳಿಯುತ್ತದೆ. ವಾಷಿಂಗ್ ಮೆಷಿನ್ ಬಳಸುವುದು ಕಷ್ಟದ ಕೆಲಸವಲ್ಲವಾದರೂ, ನಮಗೆ ಗೊತ್ತಿಲ್ಲದೆ ನಾವು ಮಾಡುವ ಕೆಲವು ತಪ್ಪುಗಳಿವೆ. ಈ ಸಣ್ಣ ತಪ್ಪುಗಳು ನಿಮ್ಮ ದುಬಾರಿ ವಾಷಿಂಗ್ ಮೆಷಿನ್ ಅನ್ನು ಬೇಗನೆ ಹಾನಿಗೊಳಿಸಬಹುದು. ತೊಳೆಯುವ ಯಂತ್ರವನ್ನು ಬಳಸುವಾಗ ಮಾಡಬಾರದ ತಪ್ಪುಗಳು ಏನು ಎಂಬುದನ್ನು ಇಲ್ಲಿ ತಿಳಿಯಿರಿ.

ವಾಷಿಂಗ್ ಮೆಷಿನ್ ಬಳಸುವಾಗ ಈ ತಪ್ಪು ಮಾಡದಿರಿ

ಒಂದೇ ಬಾರಿಗೆ ಹಲವಾರು ಬಟ್ಟೆಗಳನ್ನು ಹಾಕುವುದು: ಅನೇಕ ಜನರು ವಾರದಲ್ಲಿ ಒಂದು ದಿನ ಬಟ್ಟೆ ಒಗೆಯುತ್ತಾರೆ. ವಿದ್ಯುತ್ ಅಥವಾ ನೀರಿನ ಉಳಿತಾಯಕ್ಕಾಗಿ ಈ ರೀತಿ ಮಾಡುವವರು ಅನೇಕರಿದ್ದಾರೆ. ಹೀಗಾಗಿ ಬಟ್ಟೆಗಳ ರಾಶಿ ತುಂಬಿ ಹೋಗುತ್ತದೆ. ಅಷ್ಟೂ ಬಟ್ಟೆಗಳನ್ನು ಒಂದೇ ಬಾರಿಗೆ ವಾಷಿಂಗ್ ಮೆಷಿನ್‍ನಲ್ಲಿ ತುಂಬಿಸುತ್ತಾರೆ. ಈ ಅಭ್ಯಾಸವು ವಾಷಿಂಗ್ ಮೆಷಿನ್ ಅನ್ನು ಹಾನಿ ಮಾಡುತ್ತದೆ. ಯಾವಾಗಲೂ ಉಡುಪನ್ನು ಅದರ ದಕ್ಷತೆಯನ್ನು ಗಮನದಲ್ಲಿಟ್ಟುಕೊಂಡು ವಾಷಿಂಗ್ ಮೆಷಿನ್‍ಗೆ ಹಾಕಬೇಕು. ಒಂದೇ ಬಾರಿಗೆ ಹಲವಾರು ಬಟ್ಟೆಗಳನ್ನು ಸೇರಿಸುವುದರಿಂದ ಯಂತ್ರವು ಓವರ್‌ಲೋಡ್ ಆಗುತ್ತದೆ. ಇದರಿಂದ ಮೋಟಾರು ಹಾನಿಯಾಗುತ್ತದೆ. ಬಟ್ಟೆಗಳನ್ನು ತುಂಬಾ ಇದ್ದಾಗ, ಅವುಗಳನ್ನು ಒಂದೇ ಬಾರಿಗೆ ತೊಳೆಯುವ ಬದಲು ಎರಡು ಅಥವಾ ಮೂರು ಬಾರಿ ವಾಷಿಂಗ್ ಮೆಷಿನ್‌ನಲ್ಲಿ ಇರಿಸಿ. ಇದು ಯಂತ್ರದ ಮೇಲೆ ಹೊರೆಯಾಗುವುದಿಲ್ಲ. ಹೀಗಾಗಿ ಅದು ಯಂತ್ರಕ್ಕೆ ಹಾನಿಯಾಗುವುದಿಲ್ಲ.

ಸರಿಯಾದ ಸ್ಥಳದಲ್ಲಿ ಇಡಬೇಕು: ವಾಷಿಂಗ್ ಮೆಷಿನ್‍ನಲ್ಲಿ ಬಟ್ಟೆಗಳನ್ನು ಒಗೆಯುವಾಗ, ಯಾವಾಗಲೂ ಮೆಷಿನ್ ಅನ್ನು ಸಮತಟ್ಟಾದ ಮೇಲ್ಮೈಯಲ್ಲಿ ಇರಿಸಿ. ಅನೇಕ ಬಾರಿ ಜನರು ಅದನ್ನು ಅಸಮ ಮೇಲ್ಮೈಯಲ್ಲಿ ಇರಿಸುತ್ತಾರೆ. ಅಂದರೆ ಇಳಿಜಾರಿನ ಮೇಲ್ಮೈ ಅದನ್ನು ತ್ವರಿತವಾಗಿ ಹಾನಿಗೊಳಿಸುತ್ತದೆ. ಹಾಗೆ ಮೆಷಿನ್ ಅನ್ನು ಮೇಲೆ ಕೆಳಗೆ ಹಾಕಿದರೆ ಯಂತ್ರದ ಮೇಲೆ ಹೆಚ್ಚಿನ ಒತ್ತಡ ಬೀಳುತ್ತದೆ. ಅಲ್ಲದೆ ಯಂತ್ರದ ಆಕಾರಕ್ಕೆ ಹಾನಿಯಾಗುವ ಅಪಾಯವಿದೆ. ಅಷ್ಟೇ ಅಲ್ಲದೆ, ಕೆಲವರಿಗೆ ಒದ್ದೆ ಬಟ್ಟೆಯನ್ನು ಮೆಷಿನ್‌ನಲ್ಲಿ ಒಗೆದ ನಂತರ ಮೆಷಿನ್‌ನಲ್ಲಿ ದೀರ್ಘಕಾಲ ಇಡುವ ಅಭ್ಯಾಸವಿದೆ. ಕೆಲವೊಮ್ಮೆ ಮರೆತು ಅದರಲ್ಲೇ ಇಡಬಹುದು. ಅಥವಾ ರಾತ್ರಿ ವಾಷಿಂಗ್ ಮೆಷಿನ್ ಹಾಕಿ ಬೆಳಗ್ಗೆವರೆಗೂ ಹಾಗೆಯೇ ಇರಬಹುದು. ಇದು ಸಹ ವಾಷಿಂಗ್ ಮೆಷಿನ್ ಅನ್ನು ಸಹ ಹಾನಿಗೊಳಿಸುತ್ತದೆ.

ಹೆಚ್ಚು ಡಿಟರ್ಜೆಂಟ್‌ಗಳನ್ನು ಬಳಸಬೇಡಿ: ವಾಷಿಂಗ್ ಮೆಷಿನ್‍ನಲ್ಲಿ ಬಟ್ಟೆ ಒಗೆಯುವಾಗ ಒಂದೇ ಬಾರಿಗೆ ಹೆಚ್ಚು ಡಿಟರ್ಜೆಂಟ್‍ಗಳನ್ನು ಬಳಸಬೇಡಿ. ವಾಸ್ತವವಾಗಿ, ಹೆಚ್ಚಿನ ತೊಳೆಯುವ ಯಂತ್ರಗಳು ಸ್ವಲ್ಪಮಟ್ಟಿಗೆ ನೀರು ಮತ್ತು ಶಕ್ತಿಯ ದಕ್ಷತೆಯನ್ನು ಹೊಂದಿವೆ. ಹೆಚ್ಚು ಡಿಟರ್ಜೆಂಟ್ ಅನ್ನು ಸೇರಿಸಿದಾಗ, ಸಂಪೂರ್ಣ ಡಿಟರ್ಜೆಂಟ್ ಅನ್ನು ಅದರಲ್ಲಿ ಬಿಡುಗಡೆ ಮಾಡಿದ ನೀರಿನಿಂದ ಸ್ವಚ್ಛಗೊಳಿಸಲಾಗುವುದಿಲ್ಲ, ಅದು ಯಂತ್ರದಲ್ಲಿಯೇ ಹೆಪ್ಪುಗಟ್ಟುತ್ತದೆ. ಇದು ಕ್ರಮೇಣ ವಾಷಿಂಗ್ ಮೆಷಿನ್ ಮೋಟಾರ್ ಜಾಮ್‌ಗೆ ಕಾರಣವಾಗುತ್ತದೆ. ಅದನ್ನು ಸರಿಪಡಿಸಲು ನೀವು ಸಾಕಷ್ಟು ಹಣವನ್ನು ಖರ್ಚು ಮಾಡಬೇಕಾಗುತ್ತದೆ.

ಇನ್ನು ಕೆಲವರು ಯಾವುದೇ ವಸ್ತುಗಳನ್ನು ಪರಿಶೀಲಿಸದೆ ಬಟ್ಟೆಗಳನ್ನು ವಾಷಿಂಗ್ ಮೆಷಿನ್‌ಗಳಲ್ಲಿ ಹಾಕುತ್ತಾರೆ. ನಾಣ್ಯಗಳು, ಪಿನ್‌ಗಳು, ಟೂತ್‌ಪಿಕ್‌ಗಳಂತಹ ವಸ್ತುಗಳು ಪ್ಯಾಂಟ್‌ನಲ್ಲಿ ಉಳಿಯುತ್ತವೆ. ಇದರಿಂದ ವಾಷಿಂಗ್ ಮೆಷಿನ್‌ನ ಆಂತರಿಕ ಭಾಗಗಳನ್ನು ಹಾನಿಗೊಳಿಸಬಹುದು. ಹೀಗಾಗಿ ವಾಷಿಂಗ್ ಮೆಷಿನ್‍ನಲ್ಲಿ ಬಟ್ಟೆ ಹಾಕುವ ಮುನ್ನ ಪಾಕೆಟ್ಸ್ ಚೆಕ್ ಮಾಡಿಕೊಳ್ಳಿ.

Whats_app_banner