Parenting Tips: ಪೋಷಕರು ತಮ್ಮ ಮಕ್ಕಳಿಗೆ ಈ ವಿಷಯಗಳನ್ನು ಬಾಲ್ಯದಲ್ಲೇ ಕಲಿಸಬೇಕು
ಮಕ್ಕಳು ಭವಿಷ್ಯದಲ್ಲಿ ಉತ್ತಮ ನಾಗರಿಕರಾಗಲು, ಅವರ ಬಾಲ್ಯ ಪ್ರಭಾವ ಬೀರುತ್ತದೆ. ಮಕ್ಕಳು ಬಾಲ್ಯದಲ್ಲಿ ಬೆಳೆಯುವ ವಾತಾವರಣ, ಪೋಷಕರು ಕಲಿಸುವ ಪರಿಪಾಠಗಳು, ಮಕ್ಕಳಿಗೆ ನೀಡುವ ಶಿಕ್ಷಣ, ಮಕ್ಕಳ ಒಡನಾಟ ಇವೆಲ್ಲವೂ ಮಕ್ಕಳ ಭವಿಷ್ಯದ ಮೇಲೆ ಪ್ರಭಾವ ಬೀರುತ್ತದೆ. ಹೀಗಾಗಿ ಬಾಲ್ಯದಲ್ಲಿ ಮಕ್ಕಳನ್ನು ಉತ್ತಮ ವಾತಾವರಣದಲ್ಲಿ ಬೆಳೆಸಬೇಕು.
ಮಕ್ಕಳನ್ನು ಸಾಕುವುದು ಕಷ್ಟವೇನಲ್ಲ. ನಮ್ಮ ಜೀವನ ಶೈಲಿಯಿಂದಾಗಿ ಅದು ಕಷ್ಟವಾಗುತ್ತಿದೆ ಅಷ್ಟೇ. ವಾಸ್ತವದಲ್ಲಿ ಮಕ್ಕಳನ್ನು ನೋಡಿಕೊಳ್ಳುವುದು ಅಥವಾ ಅವರನ್ನು ಬೆಳೆಸುವುದು ಜೀವನದ ಒಂದು ಭಾಗ ಅಥವಾ ಪ್ರಕ್ರಿಯೆ ಅಷ್ಟೇ. ಆದರೆ, ನಮ್ಮ ಒತ್ತಡದ ಜೀವನ ಶೈಲಿಯಿಂದಾಗಿ ಅದನ್ನು ನಾವು ಕೆಲಸವಾಗಿ ನೋಡುತ್ತೇವೆ. ಹೀಗಾಗಿಯೇ ಮಕ್ಕಳ ಮೇಲೆ ಹೆತ್ತವರ ಕಾಳಜಿ ಅಥವಾ ಗಮನ ಕಡಿಮೆಯಾಗುತ್ತಿದೆ.
ಮಕ್ಕಳು ಭವಿಷ್ಯದಲ್ಲಿ ಉತ್ತಮ ನಾಗರಿಕರಾಗಲು, ಅವರ ಬಾಲ್ಯ ಪ್ರಭಾವ ಬೀರುತ್ತದೆ. ಮಕ್ಕಳು ಬಾಲ್ಯದಲ್ಲಿ ಬೆಳೆಯುವ ವಾತಾವರಣ, ಪೋಷಕರು ಕಲಿಸುವ ಪರಿಪಾಠಗಳು, ಮಕ್ಕಳಿಗೆ ನೀಡುವ ಶಿಕ್ಷಣ, ಮಕ್ಕಳ ಒಡನಾಟ ಇವೆಲ್ಲವೂ ಮಕ್ಕಳ ಭವಿಷ್ಯದ ಮೇಲೆ ಪ್ರಭಾವ ಬೀರುತ್ತದೆ. ಹೀಗಾಗಿ ಬಾಲ್ಯದಲ್ಲಿ ಮಕ್ಕಳನ್ನು ಉತ್ತಮ ವಾತಾವರಣದಲ್ಲಿ ಬೆಳೆಸಬೇಕು. ಅವರು ತಮ್ಮ ಘನತೆಯನ್ನು ಉಳಿಸಿಕೊಂಡು, ಇತರರನ್ನು ಗೌರವಿಸುವಂತೆ ಬೆಳೆಸಬೇಕು. ಅದಕ್ಕಾಗಿಯೇ ಮಕ್ಕಳಿಗೆ ಕೆಲವೊಂದು ಸೂಕ್ಷ್ಮವಾದ ವಿಷಯಗಳನ್ನು ಹೇಳಿಕೊಡಬೇಕು.
ಎಲ್ಲರೂ ಸಮಾನರು
ಕೆಲವು ಮನೆಗಳಲ್ಲಿ ಮಗ ಹಾಗೂ ಮಗಳನ್ನು ಭಿನ್ನವಾಗಿ ನೋಡುತ್ತಾರೆ. ಒಂದು ಕಣ್ಣಿಗೆ ಬೆಣ್ಣೆ ಮತ್ತೊಂದು ಕಣ್ಣಿಗೆ ಸುಣ್ಣ ಎಂಬ ಮನಸ್ಥಿತಿ ಇರುತ್ತದೆ. ಆ ನಿಟ್ಟಿನಲ್ಲಿ ಪಾಲಕರು ಸಾಕಷ್ಟು ಬದಲಾಗಬೇಕು. ಹೆಣ್ಣು ಮತ್ತು ಗಂಡು ಸಮಾನರು ಎಂದು ಚಿಕ್ಕ ವಯಸ್ಸಿನಿಂದಲೇ ಹೇಳಬೇಕು. ಅವರನ್ನು ಸಮನಾಗಿ ನೋಡಿ, ಅವರು ಬೇರೆಯವರನ್ನು ಕೂಡಾ ಸಮಾನರಾಗಿ ನೋಡುವಂತೆ ಹೇಳಬೇಕು. ಇವೆರಡೂ ಸಮಾಜದ ಒಂದು ಭಾಗ ಎಂಬುದನ್ನು ಅವರಿಗೆ ಮನದಟ್ಟು ಮಾಡಿಕೊಡಬೇಕು.
ಸಹಾಯ ಮಾಡುವುದನ್ನು ಹೇಳಿಕೊಡಿ
ಇತರರಿಗೆ ಸಹಾಯ ಮಾಡುವುದನ್ನು ಚಿಕ್ಕ ವಯಸ್ಸಿನಿಂದಲೇ ಕಲಿಸಬೇಕು. ತಿಳಿದಿರುವವರಿಗೆ ಮಾತ್ರವಲ್ಲದೆ, ಅಸಹಾಯಕರಿಗೂ ನೀವು ಸಹಾಯ ಮಾಡಬಹುದು ಎಂದು ಹೇಳಿ. ಸಣ್ಣಪುಟ್ಟ ಉಪಕಾರಗಳನ್ನು ಮಾಡಲು ಅವರಿಗೆ ಹೇಳಿಕೊಡಿ. ವಯಸ್ಸಾದವರನ್ನು ರಸ್ತೆ ದಾಟಿಸುವುದು, ಹಸಿವಾದವರಿಗೆ ಆಹಾರ ಕೊಡುವುದು ಹೀಗೆ ಅಗತ್ಯ ನೆರವು ಮಾಡಬೇಕು
ಎಲ್ಲರನ್ನೂ ಗೌರವಿಸುವುದು
ಜಾತಿ ಮತ್ತು ವಯಸ್ಸಿನ ಭೇದವಿಲ್ಲದೆ ಎಲ್ಲರನ್ನೂ ಗೌರವಿಸಲು ಪ್ರತಿಯೊಬ್ಬ ಮನುಷ್ಯನಿಗೆ ಕಲಿಸಬೇಕು. ಅವರು ಭೇಟಿಯಾಗುವ ಪ್ರತಿಯೊಬ್ಬ ಮನುಷ್ಯನನ್ನು ಗೌರವಿಸಲು ಹೇಳಿಕೊಡಿ. ತನಗಿಂತ ಚಿಕ್ಕವರನ್ನು ಪ್ರೀತಿಯಿಂದ ಕಾಣುವುದನ್ನು ಕಲಿಸಿ. ಹಿರಿಯರಿಗೆ ಗೌರವ ಕೊಡುವುದನ್ನು ಕಲಿಸಿ.
ಕೋಪ ನಿಯಂತ್ರಿಸಿ
ಮಕ್ಕಳು ಕೋಪ ಮಾಡಿಕೊಳ್ಳಲು ನೀವು ಅವಕಾಶ ಮಾಡಿಕೊಡಬೇಡಿ. ಕೆಲವು ಮಕ್ಕಳು ಕೋಪಗೊಂಡಾಗ ವಸ್ತುಗಳನ್ನು ಎಸೆಯುತ್ತಾರೆ. ಇಲ್ಲದ ರಂಪಾಟ ಮಾಡುತ್ತಾರೆ. ಹಾಗೆ ಮಾಡುವುದರಿಂದ ಆಗುವ ಅಪಾಯಗಳನ್ನು ತಿಳಿಸಿ. ಕೋಪಗೊಂಡರೆ, ಜನರು ತಮ್ಮನ್ನು ದೂರವಿಡುತ್ತಾರೆ ಎಂದು ವಿವರಿಸಿ. ಆರಂಭದಲ್ಲಿ ಅವರಿಗೆ ಅರ್ಥ ಮಾಡಿಸಲು ಕಷ್ಟವಾಗಬಹುದು. ಆದರೂ, ತಾಳ್ಮೆಗೆಡದೆ ಅವರಿಗೆ ನಿಧಾನವಾಗಿ ವಿವರಿಸಿ ಹೇಳಿ. ಅರ್ಥವಾಗುವವರೆಗೂ ಹೇಳಿ. ಮಕ್ಕಳು ನಿಧಾನವಾಗಿ ನೆನೆಪಿಟ್ಟುಕೊಳ್ಳುತ್ತಾರೆ. ಹಾಗೂ ಅದನ್ನೇ ಪಾಲಿಸುತ್ತಾರೆ.
ಯಾರೂ ಕೀಳಲ್ಲ
ಬಡವ-ಶ್ರೀಮಂತ, ಕಪ್ಪು-ಬಿಳಿ, ಹೆಣ್ಣು-ಗಂಡು, ಹೀಗೆ ಯಾವುದೇ ಕಾರಣಕ್ಕೂ ಯಾರನ್ನೂ ಅವರವರ ಬಣ್ಣ, ನೋಟ, ಸ್ಥಾನಮಾನ ನೋಡಿ ಕೀಳಾಗಿ ಮಾತನಾಡಬಾರದು. ಯಾವುದೇ ವ್ಯಕ್ತಿಯನ್ನು ಅವಮಾನಿಸುವ ಹಕ್ಕು ಯಾರಿಗೂ ಇಲ್ಲ ಎಂಬುದನ್ನು ಅವರಿಗೆ ವಿವರಿಸಬೇಕು. ತಮ್ಮ ಗೆಳೆಯರೊಂದಿಗೆ ಸೌಹಾರ್ದಯುತವಾಗಿರುವುದನ್ನು ಕಲಿಸಬೇಕು.
ತಾಳ್ಮೆ ಹಾಗೂ ಸೌಮ್ಯತೆ ಮುಖ್ಯ
ಯಾರೊಂದಿಗಾದರೂ ಸೌಮ್ಯವಾಗಿರಬೇಕು ಎಂದು ಹೇಳಬೇಕು. ತಪ್ಪು ಮಾಡಿದಾಗ ಕ್ಷಮೆಯಿರಲಿ. ಯಾರಾದರೂ ಸಹಾಯ ಮಾಡಿದರೆ ಧನ್ಯವಾದ ಹೇಳುವುದನ್ನು ಕಲಿಸಬೇಕು. ಹೇಡಿಯಾಗಿ ಬದುಕಬಾರದು, ಧೈರ್ಯದಿಂದ ಬದುಕಬೇಕು ಎಂಬುದನ್ನೂ ವಿವರಿಸಬೇಕು. ಕೋಪಗೊಳ್ಳಬಾರದು. ತಾಳ್ಮೆಯಿಂದ ಯೋಚಿಸಬೇಕು. ಕೋಪದ ಕೈಯಲ್ಲಿ ಬುದ್ಧಿ ಕೊಡಬಾರದು ಎಂದು ತಿಳಿಹೇಳಬೇಕು.
ವಿಭಾಗ