ನಿಮ್ಮ ಮಕ್ಕಳನ್ನು ಹಾಸ್ಟೆಲ್‌ನಲ್ಲಿ ಓದಿಸುವುದರ ಬಗ್ಗೆ ಆಲೋಚನೆ ಮಾಡ್ತಾ ಇದ್ದೀರ? ಹಾಗಾದ್ರೆ ಅನುಕೂಲ ಹಾಗೂ ಅನಾನುಕೂಲದ ಬಗ್ಗೆ ತಿಳಿದುಕೊಳ್ಳಿ
ನೀವು ನಿಮ್ಮ ಮಕ್ಕಳನ್ನು ಹಾಸ್ಟೇಲ್‌ನಲ್ಲಿ ಓದಿಸಲು ನಿರ್ಧರಿಸಿದ್ದರೆ ಅದರಿಂದ ಆಗುವ ಅನುಕೂಲ ಹಾಗೂ ಅನಾನುಕೂಲಗಳನ್ನು ಗಮನದಲ್ಲಿಟ್ಟುಕೊಳ್ಳಿ. ನಂತರ ನಿಮ್ಮ ಮಕ್ಕಳನ್ನು ಹಾಸ್ಟೆಲ್‌ನಲ್ಲಿ ಓದಿಸಬೇಕೋ ಅಥವಾ ಬೇಡವೋ ಎಂದು ನಿರ್ಧಾರ ಮಾಡಿಕೊಳ್ಳಿ.
ನೀವು ನಿಮ್ಮ ಮಕ್ಕಳನ್ನು ಹಾಸ್ಟೇಲ್‌ನಲ್ಲಿ ಓದಿಸಲು ನಿರ್ಧರಿಸಿದ್ದರೆ ಅದರಿಂದ ಆಗುವ ಅನುಕೂಲ ಹಾಗೂ ಅನಾನುಕೂಲಗಳನ್ನು ಗಮನದಲ್ಲಿಟ್ಟುಕೊಂಡು ಮುಂದಿನ ನಿರ್ಧಾರ ತೆಗೆದುಕೊಳ್ಳುವುದು ಉತ್ತಮ. ಮಕ್ಕಳು ತಂದೆ ತಾಯಿಯನ್ನು ಬಿಟ್ಟು ಇರುವುದು ತುಂಬಾ ಕಷ್ಟ, ಆದರೆ ಅನಿವಾರ್ಯವಾಗಿ ಬಿಟ್ಟು ಇರುವ ಸಂದರ್ಭ ಬಂದರೆ ಮುಂದೇನು ಮಾಡಬೇಕೆಂದು ಆಲೋಚನೆ ಮಾಡಿ ನಿರ್ಧಾರ ತೆಗೆದುಕೊಳ್ಳಬೇಕು. ಇಲ್ಲಿ ಕೆಲವು ಅನುಕೂಲಗಳು ಹಾಗೂ ಅನಾನುಕೂಲಗಳನ್ನು ನಾವು ನೀಡಿದ್ದೇವೆ.
ಅನುಕೂಲಗಳು
1. ಸಾಮಾಜಿಕ ಮನೋಭಾವ: ನಿಮ್ಮ ಮಕ್ಕಳು ಒಂಟಿ ಆಗುವುದಿಲ್ಲ. ಒಂದು ಸಮಾಜದಲ್ಲಿ ಯಾವ ರೀತಿ ಬದುಕಬೇಕು ಎಂಬುದು ಅವರಿಗೆ ಅರಿವಾಗುತ್ತದೆ. ನಾಲ್ಕು ಜನ ಇರುವಾಗ ನಮಗೆ ಬೇಕಾದ ರೀತಿಯಲ್ಲಿ ಬದುಕುವುದಕ್ಕಿಂತ ಹೊಂದಿಕೊಂಡು ಬದುಕುವುದು ಹೇಗೆ ಎಂಬುದು ಅಲ್ಲಿಂದ ಅರ್ಥವಾಗುತ್ತದೆ. ಇದೊಂದು ಹೊಸ ಕಲಿಕೆ.
2. ವೈವಿಧ್ಯತೆ: ವೈವಿಧ್ಯಮಯ ಹಿನ್ನೆಲೆ ಮತ್ತು ಬೇರೆ ಬೇರೆ ಸಂಸ್ಕೃತಿಗಳ ಜನರನ್ನು ಭೇಟಿ ಮಾಡಿ ಅವರ ಆಚಾರ ವಿಚಾರ ತಿಳಿದುಕೊಳ್ಳಬಹುದು. ಸಮಾಜದಲ್ಲಿ ಯಾವ ರೀತಿಯ ಜನ ಇರುತ್ತಾರೆ ಎಂದು ಅರ್ಥವಾಗುತ್ತದೆ. ಯಾಕೆಂದರೆ ಮುಂದೆ ನಿಮ್ಮ ಮಕ್ಕಳು ಮನೆಯಲ್ಲಲ್ಲ ಸಮಾಜದಲ್ಲಿ ಒಬ್ಬರಾಗಿ ಬದುಕಬೇಕಾಗುತ್ತದೆ. ಅಲ್ಲೇ ವ್ಯವಹಾರ ಮಾಡಬೇಕಾಗುತ್ತದೆ.
3. ಅನುಭವ ಮತ್ತು ಶಿಸ್ತು: ನಿಮ್ಮ ಮಕ್ಕಳು ನಿತ್ಯ ಚಟುವಟಿಕೆಯಲ್ಲಿರುತ್ತಾರೆ. ಗುಂಪು ಚಟುವಟಿಕೆಗಳು, ಪ್ರವಾಸಗಳು ಮತ್ತು ಈವೆಂಟ್‌ಗಳಲ್ಲಿ ಭಾಗವಹಿಸಿ ಸ್ವರ್ಧೆಗಳಲ್ಲಿ ಗೆದ್ದು ಅಥವಾ ಸೋತು ಒಂದಷ್ಟು ಅನುಭವಗಳನ್ನು ಪಡೆಯುತ್ತಾರೆ. ಅನೇಕ ಹಾಸ್ಟೆಲ್‌ಗಳು ನಿಯಮವನ್ನು ಕಟ್ಟುನಿಟ್ಟಾಗಿ ಪಾಲಿಸುತ್ತದೆ. ಹೀಗಾಗಿ ಅವರು ಶಿಸ್ತು ಕಲಿಯುತ್ತಾರೆ.
ಅನಾನುಕೂಲಗಳು
1. ಗೌಪ್ಯತೆಯ ಕೊರತೆ: ಒಂದೇ ಕೊಠಡಿಯೊಳಗಡೆ ಹಲವಾರು ಜನ ವಾಸ ಮಾಡಬೇಕಾಗುತ್ತದೆ. ಆಗ ಗೌಪ್ಯತೆಯನ್ನು ಅಥವಾ ವಯಕ್ತಿಕ ಎನ್ನುವ ಅನುಭವ ಹಾಗೂ ಅವಕಾಶ ಕಡಿಮೆ ಆಗಿರುತ್ತದೆ. ನಿಮ್ಮ ಗುಟ್ಟುಗಳು ಅಥವಾ ಕೌಟುಂಬಿಕ ಮಾಹಿತಿ ಪ್ರಸರಣ ಅಲ್ಲಿ ಆಗುತ್ತದೆ. ಅದು ನಿಮಗೆ ಇಷ್ಟ ಆಗದೇ ಇರಬಹುದು.
2. ಭದ್ರತೆ ಇರುವುದಿಲ್ಲ: ಕೊಠಡಿಗಳಲ್ಲಿ ಕಳ್ಳತನ ಅಥವಾ ವಸ್ತುಗಳನ್ನು ಕಳೆದುಕೊಳ್ಳುವ ಸಂಭವ ಹೆಚ್ಚಾಗಿರುತ್ತದೆ. ಆದ ಕಾರಣ ನೀವು ಹಾಸ್ಟೆಲ್‌ಗೆ ಸೇರಿಸುವಾಗ ಯಾವ ದುಬಾರಿ ವಸ್ತುವನ್ನೂ ಕೊಡಬೇಡಿ. ಇನ್ನು ಕೆಲವು ಅವಶ್ಯಕ ಅಂದರೆ ಲ್ಯಾಪ್‌ಟಾಪ್ ಹಾಗೂ ಫೋನ್ ಇರುತ್ತದೆ ಇವುಗಳನ್ನು ಭದ್ರವಾಗಿ ನೋಡಿಕೊಳ್ಳುವ ಜವಾಬ್ಧಾರಿ ನಿಮ್ಮ ಮಕ್ಕಳದೇ ಆಗಿರುತ್ತದೆ.
3 ಗಲಾಟೆ/ ಜಗಳ: ಮಕ್ಕಳು ಹೊಡೆದಾಡಿಕೊಂಡು ಒಬ್ಬರಿಗೊಬ್ಬರು ನೋವುಂಟು ಮಾಡಿಕೊಳ್ಳುವ ಸಂಭವ ಇರುತ್ತದೆ. ಹಾಸ್ಟೆಲ್‌ನಲ್ಲಿ ವಾರ್ಡನ್ ಇದ್ದರೂ ಕೆಲವು ಸಂದರ್ಭಗಳಲ್ಲಿ ಇದು ಹೆಚ್ಚಾಗಿರುತ್ತದೆ. ಅವರಿಗೂ ತಿಳಿಯದ ಹಾಗೆ ಒಳಗೊಳಗೆ ಏನೇನೋ ನಡೆಯುತ್ತದೆ. ಚಟಗಳಿಗೆ ನಿಮ್ಮ ಮಕ್ಕಳು ಬಲಿಯಾಗಬಹುದು.
ವಿಭಾಗ