Thursday Motivation: ಜೀವನಕ್ಕೊಂದು ಸ್ಫೂರ್ತಿ ಮಾತು; ದೃಢ ಮನಸ್ಸಿನಿಂದ ಬಯಸಿದ್ದನ್ನ ಸಾಧಿಸಬಹುದು
Wednesday Motivation: ಮನಸ್ಸು ಕೋತಿಯಿದ್ದಂತೆ. ಇದರಿಂದ ಯಶಸ್ಸು ದೂರವಾಗಿರುತ್ತೆ. ಅನೇಕ ಜನರು ತಮಗೆ ಬೇಕಾದುದನ್ನು ಸಾಧಿಸಲು ಸಾಧ್ಯವಾಗದೆ ಸೋಲಿನ ಹಂಚಿಗೆ ತಲುತ್ತಾರೆ. ಇದಕ್ಕೆ ದೃಢವಾದ ಮನಸ್ಸಿಲ್ಲದಿರುವುದು ಕಾರಣ.
ನಮ್ಮ ಮನಸ್ಸು ನಮ್ಮ ಜೀವನವನ್ನು ನಿರ್ಧರಿಸುತ್ತದೆ. ಅಂತಹ ಮನಸ್ಸು ಮಂಗನಂತಿದ್ದರೆ ಆ ವ್ಯಕ್ತಿಯ ಬದುಕು ಏರಿಳಿತಗಳಾಗುವುದು ಖಚಿತ. ಮಂಗನಂತಿರುವ ಮನಸ್ಸು ಒಂದು ವಿಷಯದ ಮೇಲೆ ಹೆಚ್ಚು ಕಾಲ ಏಕಾಗ್ರತೆ ಇಡಲಾರದು. ಒಂದು ಆಲೋಚನೆಯಿಂದ ಇನ್ನೊಂದಕ್ಕೆ ಜಿಗಿಯುತ್ತದೆ. ವಿಶ್ರಾಂತಿ ಪಡೆಯಲು ಬಿಡುವುದಿಲ್ಲ. ಮಲಗಲು ಆಗುತ್ತಿಲ್ಲ. ಆಲೋಚನೆಗಳನ್ನು ಚದುರಿಸುತ್ತದೆ. ಆತಂಕವನ್ನು ಹೆಚ್ಚಿಸುತ್ತದೆ. ತಬ್ಬಿಬ್ಬುಗೊಳಿಸುತ್ತದೆ. ಈ ಅನೇಕ ನಕಾರಾತ್ಮಕ ಪರಿಣಾಮಗಳು ಕೋತಿಯಂತಹ ಮನಸ್ಸಿನಿಂದ ಮಾತ್ರ ಉಂಟಾಗುತ್ತದೆ. ಒಂದು ವೇಳೆ ನಿಮ್ಮದು ಮಂಗನಂತ ಮನಸ್ಸು ಇದ್ದರೆ ತುಂಬಾ ಬದಲಾಗಬೇಕಕು. ಆಗ ಮಾತ್ರ ಯಶಸ್ಸು ಸಿಗುತ್ತದೆ. ಸ್ಥಿರ ಮಾನಸಿಕ ಆರೋಗ್ಯ ಮತ್ತು ಆಲೋಚನೆಗಳು ಅತ್ಯಗತ್ಯ. ನಿಮ್ಮ ಮನಸ್ಸು ದಿನವಿಡೀ ಕೋತಿಯಂತೆ ಯೋಚಿಸುತ್ತಿದ್ದರೆ, ರಾತ್ರಿಯಲ್ಲಿ ನೀವು ತುಂಬಾ ಸುಸ್ತಾಗಿರುತ್ತೀರಿ.
ಕೊನೆಗೆ ಆತ ಮಾನಸಿಕ ಅಂಗವಿಕಲನಾಗಿ ಬದುಕಬೇಕಾಗುತ್ತದೆ. ಆದ್ದರಿಂದ ಗೊಂದಲವನ್ನು ಸೃಷ್ಟಿಸುವ ಮನಸ್ಸನ್ನು ಶಾಂತಗೊಳಿಸಲು ಸಾವಧಾನತೆಯನ್ನು ಅಭ್ಯಾಸ ಮಾಡಿ. ಶಾಂತವಾಗಿ ಕುಳಿತುಕೊಳ್ಳಿ ಮತ್ತು ನಿಮ್ಮ ಮನಸ್ಸು ಮತ್ತು ಆಲೋಚನೆಗಳನ್ನು ನಿಯಂತ್ರಿಸಲು ಪ್ರಯತ್ನಿಸಸಿ. ದೀರ್ಘಕಾಲದವರೆಗೆ ಒಂದು ವಿಷಯದ ಮೇಲೆ ಕೇಂದ್ರೀಕರಿಸುವುದನ್ನು ಅಭ್ಯಾಸ ಮಾಡಿಕೊಳ್ಳಿ.
ನಿಮ್ಮ ಕಷ್ಟ-ನಷ್ಟಗಳಲ್ಲಿ ನಿಮ್ಮ ಮನಸ್ಸು ನಿಮ್ಮ ಜೊತೆಗಿರುತ್ತದೆ. ಅದು ನಿಮ್ಮ ಶಾಶ್ವತ ಸ್ನೇಹಿತ. ಅಂತಹ ಮನಸ್ಸು ಮಂಗನಂತಿದ್ದರೆ ತೊಂದರೆ ಆಗುತ್ತದೆ. ಸಣ್ಣ ವಿಷಯಗಳು ನಿಮ್ಮನ್ನು ಚಿಂತೆಗೀಡುಮಾಡುತ್ತವೆ. ಆದ್ದರಿಂದ ಆ ಮನಸ್ಥಿತಿಯನ್ನು ಬದಲಾಯಿಸಲು ಉಸಿರಾಟಕ್ಕೆ ಸಂಬಂಧಿಸಿದ ವರ್ಕೌಟ್ ಮಾಡಿ. ಧ್ಯಾನವನ್ನು ಅಭ್ಯಾಸ ಮಾಡಿಕೊಳ್ಳಿ. ನಿಮ್ಮನ್ನು ಶಾಂತವಾಗಿರಿಸಿಕೊಳ್ಳಲು ಪ್ರಯತ್ನಿಸಿ.
ಒಂದು ವಿಷಯದ ಮೇಲೆ ಏಕಾಗ್ರತೆಯಿಂದ ಮನಸ್ಸನ್ನು ನಿಯಂತ್ರಿಸಬಹುದು. ಇದು ಅಂದುಕೊಂಡಷ್ಟು ಸುಲಭವೂ ಅಲ್ಲ, ಅಸಾಧ್ಯವೂ ಅಲ್ಲ. ಮನಸ್ಸು ಸಹಜವಾಗಿ ಚಂಚಲವಾಗಿರುತ್ತದೆ. ಹಾಗಾಗಿ ಅದನ್ನು ನಿಮ್ಮ ದಾರಿಗೆ ತರಲು ಸಾಕಷ್ಟು ಅಭ್ಯಾಸ ಮತ್ತು ಶ್ರಮ ಬೇಕಾಗುತ್ತದೆ.
ಮನುಷ್ಯನ ದೊಡ್ಡ ದೌರ್ಬಲ್ಯ ಅಸಮರ್ಥತೆ ದೂರಮಾಡಲು ಏನು ಮಾಡಬೇಕು
ಮನಸ್ಸನ್ನು ನಿಯಂತ್ರಿಸಲು ಅಸಮರ್ಥತೆ ಮನುಷ್ಯನ ದೊಡ್ಡ ದೌರ್ಬಲ್ಯ. ಈ ದೌರ್ಬಲ್ಯವನ್ನು ನಿವಾರಿಸಿದರೆ ಯಶಸ್ಸಿನ ದಾರಿಯಲ್ಲಿ ನೀವು ಸಾಗುತ್ತೀರಿ. ಮನಸ್ಸನ್ನು ನಿಯಂತ್ರಿಸಲು ಶಾಂತವಾಗಿರಿಬೇಕು. ಸಾಕಷ್ಟು ನಿದ್ರೆ ಮಾಡಿ. ಪ್ರತಿನಿತ್ಯ ವ್ಯಾಯಾಮ ಮಾಡಿ, ಪೌಷ್ಟಿಕಾಂಶಗಳನ್ನು ಸೇವಿಸಿ. ಇವೆಲ್ಲವೂ ಮನಸ್ಸನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ. ನೀವು ನಿಮಗಾಗಿ ಸ್ವಲ್ಪ ಶಾಂತ ಸಮಯವನ್ನು ಮೀಸಲಿಡಬೇಕು. ಆ ಸಮಯದಲ್ಲಿ ನೀವು ನಿಮ್ಮ ಬಗ್ಗೆ ಮಾತ್ರ ಯೋಚಿಸಬೇಕು. ವಿನಾಕಾರಣ ಬೇಡವಾದದ್ದನ್ನೆಲ್ಲಾ ತಲೆಗೆ ತಲೆಗೆ ತುಂಬಿಸಿಕೊಳ್ಳುವುದನ್ನು ಮೊದಲು ಬಿಡಿ.
ಪ್ರತಿದಿನ ಬೆಳಗ್ಗೆ ಧ್ಯಾನ ಮಾಡಲು ಪ್ರಾರಂಭಿಸಿ. ಇದು ಮನಸ್ಸನ್ನು ಹಗುರಗೊಳಿಸುತ್ತದೆ. ನಿಮ್ಮ ಮನಸ್ಸು ಕೋತಿ ಪಾತ್ರವನ್ನು ಕಳೆದುಕೊಳ್ಳುತ್ತದೆ. ಧ್ಯಾನ ಮಾಡುವಾಗ ನಿಮ್ಮ ಉಸಿರಾಟದ ಮೇಲೆ ಕೇಂದ್ರೀಕರಿಸಿ. ಇದು ಮನಸ್ಸನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ. ನಕಾರಾತ್ಮಕವಾಗಿ ಯೋಚಿಸುವುದನ್ನು ಬಿಡಬೇಕು, ಬೇಡವಾದ ವಿಚಾರಗಳನ್ನು ತಲೆಗೆ ಹಾಕಿಕೊಳ್ಳಲೇ ಬಾರದು. ತಾಳ್ಮೆ, ಶಾಂತಚಿತ್ತರಾಗಿರಿ. ಆಗ ದೃಢ ಮನಸ್ಸಿನಿಂದ ನಿಮ್ಮ ಯೋಚನೆಗಳು ಬದಲಾಗುತ್ತವೆ. ಅಂದುಕೊಂಡಿದ್ದನ್ನು ಸಾಧಿಸಲು ಸಾಧ್ಯವಾಗುತ್ತದೆ.
(This copy first appeared in Hindustan Times Kannada website. To read more like this please logon to kannada.hindustantimes.com )
ವಿಭಾಗ