ಕನ್ನಡ ಸುದ್ದಿ  /  Lifestyle  /  Tips To Empower Students To Organise Events

Tips to empower students: ಮಕ್ಕಳಿಗೆ ಬಾಲ್ಯದಲ್ಲೇ ನಾಯಕತ್ವದ ಬಗ್ಗೆ ಹೇಳಿಕೊಡಿ, ಇಲ್ಲಿದೆ ಸಲಹೆ

ಮಕ್ಕಳಿಗೆ ಸಾಮಾಜಿಕ ಮತ್ತು ಭಾವನಾತ್ಮಕ ಕಲಿಕೆ ತುಂಬಾ ಮುಖ್ಯ. ಈ ಮೂಲಕ, ದೀರ್ಘಾವಧಿಯ ನಾಯಕತ್ವದ ಗುರಿಗಳನ್ನು ರಚಿಸಲು ಅವರ ಅಭ್ಯಾಸಗಳು ಮತ್ತು ನಡವಳಿಕೆಗಳನ್ನು ವಿಶ್ಲೇಷಿಸಲು ಶಾಲೆಗಳಲ್ಲಿ ಪ್ರಾರಂಭಿಸಬೇಕು. ಇದರ ಬಗ್ಗೆ ಮಕ್ಕಳ ಪೋಷಕರು ಕೂಡಾ ಪ್ರೋತ್ಸಾಹಿಸಬಹುದು.

ಮಕ್ಕಳಿಗೆ ನಾಯಕತ್ವದ ಬಗ್ಗೆ ಹೇಳಿಕೊಡಿ
ಮಕ್ಕಳಿಗೆ ನಾಯಕತ್ವದ ಬಗ್ಗೆ ಹೇಳಿಕೊಡಿ

ಮಕ್ಕಳು ತಮ್ಮ ಸುತ್ತಮುತ್ತಲಿನ ಜನರನ್ನು ನೋಡಿ ಹಲವು ವಿಷಗಳನ್ನು ಕಲಿಯುತ್ತಾರೆ. ಇತರರು ಟೀಕೆಗಳಿಗೆ ಹೇಗೆ ಪ್ರತಿಕ್ರಿಯಿಸುತ್ತಾರೆ, ವೈಫಲ್ಯವನ್ನು ಹೇಗೆ ಎದುರಿಸುತ್ತಾರೆ, ಬೇರೆಯವರೊಂದಿಗೆ ಹೇಗೆ ಮಾತನಾಡುತ್ತಾರೆ, ಹೀಗೆ ಎಲ್ಲಾ ವಿಚಾರಗಳನ್ನು ಗಮನಿಸುವ ಮೂಲಕ ಅದನ್ನು ಅನುಕರಣೆ ಮಾಡುತ್ತಾರೆ. ಆ ಮೂಲಕ ಮಕ್ಕಳು ತಮ್ಮ ಸ್ವಂತ ಅಭ್ಯಾಸಗಳು ಮತ್ತು ಆಲೋಚನಾ ಪ್ರಕ್ರಿಯೆಗಳನ್ನು ಅಭಿವೃದ್ಧಿಪಡಿಸಲು ಪ್ರಾರಂಭಿಸುತ್ತಾರೆ. ಹೀಗಾಗಿ ಪ್ರತಿಯೊಬ್ಬ ವ್ಯಕ್ತಿಯ ಭವಿಷ್ಯದಲ್ಲೂ ಅವರ ಬಾಲ್ಯ ತುಂಬಾ ಪ್ರಭಾವ ಬೀರುತ್ತದೆ.

ಮಕ್ಕಳಿಗೆ ಸಾಮಾಜಿಕ ಮತ್ತು ಭಾವನಾತ್ಮಕ ಕಲಿಕೆ ತುಂಬಾ ಮುಖ್ಯ. ಈ ಮೂಲಕ, ದೀರ್ಘಾವಧಿಯ ನಾಯಕತ್ವದ ಗುರಿಗಳನ್ನು ರಚಿಸಲು ಅವರ ಅಭ್ಯಾಸಗಳು ಮತ್ತು ನಡವಳಿಕೆಗಳನ್ನು ವಿಶ್ಲೇಷಿಸಲು ಶಾಲೆಗಳಲ್ಲಿ ಪ್ರಾರಂಭಿಸಬೇಕು. ಇದರ ಬಗ್ಗೆ ಮಕ್ಕಳ ಪೋಷಕರು ಕೂಡಾ ಪ್ರೋತ್ಸಾಹಿಸಬಹುದು.

ಮಕ್ಕಳಲ್ಲಿ ಆತ್ಮವಿಶ್ವಾಸ ತುಂಬಬೇಕು. ಈಗಿನ ಮಕ್ಕಳು ಯಾವ ಸನ್ನಿವೇಶಕ್ಕೂ ಹೆಚ್ಚು ಭಯಪಡುವುದಿಲ್ಲ. ಇದು ಪೋಷಕರಿಗೆ ಒಂದು ಪ್ಲಸ್‌ ಪಾಯಿಂಟ್.‌ ಹೀಗಾಗಿ ಮಕ್ಕಳನ್ನು ಮತ್ತಷ್ಟು ಆತ್ಮವಿಶ್ವಾಸದ ವ್ಯಕ್ತಿಗಳಾಗಿಸಲು ಮತ್ತು ಅವರ ಆಲೋಚನೆಗಳನ್ನು ನಿರ್ಭಯವಾಗಿ ಸಂವಹನ ಮಾಡಲು ಎಲ್ಲಾ ವಿದ್ಯಾರ್ಥಿಗಳಿಗೆ ಸಮಾನ ಅವಕಾಶ ನೀಡಬೇಕು. ಈ ಬಗ್ಗೆ HT ಲೈಫ್‌ಸ್ಟೈಲ್‌ಗೆ ನೀಡಿದ ಸಂದರ್ಶನದಲ್ಲಿ, ಗ್ರೀನ್‌ವುಡ್ ಹೈ ಇಂಟರ್‌ನ್ಯಾಶನಲ್ ಸ್ಕೂಲ್‌ನ ಟ್ರಸ್ಟಿ ನಿರು ಅಗರ್ವಾಲ್ ಸಲಹೆ ನೀಡಿದ್ದಾರೆ.

1. ಶಾಲೆಯಲ್ಲಿ ಸಕಾರಾತ್ಮಕ ವಾತಾವರಣವನ್ನು ಸೃಷ್ಟಿಸುವುದು ವಿದ್ಯಾರ್ಥಿಗಳ ಆತ್ಮವಿಶ್ವಾಸವನ್ನು ಹೆಚ್ಚಿಸುತ್ತದೆ. ಇದು ಅವರು ಮುಂದೆ ಬರಲು ಮತ್ತು ಅವರ ಸೃಜನಶೀಲ ಆಲೋಚನೆಗಳನ್ನು ವ್ಯಕ್ತಪಡಿಸಲು ಪ್ರೋತ್ಸಾಹಿಸುತ್ತದೆ. ತರಗತಿಯಲ್ಲಿನ ಸಂವಾದಾತ್ಮಕ ಮತ್ತು ಚಟುವಟಿಕೆ ಆಧಾರಿತ ಕಲಿಕೆಯು, ಕಲಿಕೆಯ ಶಕ್ತಿಯನ್ನು ಶಕ್ತಗೊಳಿಸುತ್ತದೆ ಮತ್ತು ಸಾಮಾನ್ಯ ಸ್ವಗತ ತರಗತಿಗಳಿಗಿಂತ ಹೆಚ್ಚು ಪರಿಣಾಮಕಾರಿಯಾಗಿರುತ್ತದೆ.

2. ಚಿಕ್ಕವರಿದ್ದಾಗಲೇ ಸಣ್ಣ ಸಣ್ಣ ಜವಾಬ್ದಾರಿಗಳನ್ನು ನೀಡುವುದು ವಿದ್ಯಾರ್ಥಿಗಳಿಗೆ ಉತ್ತೇಜನಕಾರಿಯಾಗಿದೆ. ರೊಟೇಷನ್‌ ಮಾದರಿಯಲ್ಲಿ ತರಗತಿಯ ನಾಯಕತ್ವವನ್ನು ನೀಡುವುದು ಎಲ್ಲಾ ವಿದ್ಯಾರ್ಥಿಗಳಿಗೆ ನಾಯಕತ್ವದ ಪಾತ್ರವನ್ನು ವಹಿಸಲು ಮತ್ತು ಜವಾಬ್ದಾರಿಯನ್ನು ತೆಗೆದುಕೊಳ್ಳಲು ಅನುವು ಮಾಡಿಕೊಡುತ್ತದೆ.

3. ನಿಯಮಿತ ಮಾರ್ಗದರ್ಶನ ಕಾರ್ಯಕ್ರಮಗಳನ್ನು ಆಯೋಜಿಸಿ. ಆ ಮೂಲಕ ಪ್ರಖ್ಯಾತ ಮತ್ತು ಯಶಸ್ವಿ ನಾಯಕರು ತಮ್ಮ ಕಥೆಗಳ ಬಗ್ಗೆ ಚರ್ಚಿಸಿ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡುವಂತೆ ಮಾಡಬಹುದು. ಅವರ ಪ್ರೋತ್ಸಾಹದಾಯಕ ಮಾತುಗಳು ಬಾಲ್ಯದಲ್ಲಿ ಮಕ್ಕಳ ಮೇಲೆ ಪ್ರಭಾವ ಬೀರುತ್ತದೆ.

4. ನಾವು ವಿದ್ಯಾರ್ಥಿಗಳಲ್ಲಿ ಚರ್ಚೆ ಮತ್ತು ಪ್ರದರ್ಶನಗಳನ್ನು ಉತ್ತೇಜಿಸಬೇಕು. ಇದು ಆತ್ಮವಿಶ್ವಾಸವನ್ನು ತುಂಬುತ್ತದೆ. ಅಲ್ಲದೆ ಅವರ ಅಭಿಪ್ರಾಯವನ್ನು ವ್ಯಕ್ತಪಡಿಸಲು ಮತ್ತು ವಿವಿಧ ವಿಷಯಗಳ ಧ್ವನಿ ಎತ್ತಲು ಮತ್ತು ಅವರ ಪ್ರತಿಭೆಯನ್ನು ಪ್ರದರ್ಶಿಸಲು ವೇದಿಕೆಯಾಗುತ್ತದೆ. ಮಕ್ಕಳು ಮುಕ್ತವಾಗಿ ಮಾತನಾಡಲು ಅವಕಾಶ ನೀಡಬೇಕು.

5. ಸಂಕ್ಷಿಪ್ತವಾಗಿ ಹೇಳುವುದಾದರೆ, ನಾವು ಶಾಲೆಯಲ್ಲಿ ಸಂಸ್ಕೃತಿಯನ್ನು ಅಭಿವೃದ್ಧಿಪಡಿಸಬೇಕಾಗಿದೆ. ಇದರಲ್ಲಿ ವಿದ್ಯಾರ್ಥಿಗಳು ಸವಾಲುಗಳನ್ನು ಎದುರಿಸಲು ಪ್ರೇರೇಪಿಸುವ ಮೂಲಕ ಮತ್ತು ಬದಲಾವಣೆಗೆ ತೆರೆದುಕೊಳ್ಳುವ ಮೂಲಕ ನವೀನ ದೃಷ್ಟಿಕೋನವನ್ನು ಅಳವಡಿಸಿಕೊಳ್ಳಬಹುದು.

ಆರ್ಕಿಡ್ಸ್ ಪ್ರಾಂಶುಪಾಲರಾದ ವಿಭಾ ಗುಪ್ತಾ ಅವರ ಪ್ರಕಾರ, ಯಾವುದೇ ಕಾರ್ಯಕ್ರಮ ಅಥವಾ ಪ್ರದರ್ಶನವನ್ನು ಮುನ್ನಡೆಸಲು ಒಳಗೊಳ್ಳುವಿಕೆ ಪ್ರಮುಖವಾಗಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ. “ಒಮ್ಮೆ ನಾವು ನಮ್ಮ ವಿದ್ಯಾರ್ಥಿಗಳಿಗೆ ಯಾವುದೇ ಘಟನೆಯ ಮೂಲ ಕಲ್ಪನೆಯ ಮೇಲೆ ಹಿಡಿತವನ್ನು ಹೊಂದಲು ಕಲಿಸುತ್ತೇವೆ. ಆ ಬಳಿಕ ವಿದ್ಯಾರ್ಥಿಗಳು ವಿಶಿಷ್ಟವಾದ ಆಲೋಚನೆಗಳು ಮತ್ತು ದೃಷ್ಟಿಕೋನಗಳೊಂದಿಗೆ ಬರುತ್ತಾರೆ ಎಂದು ಖಚಿತವಾಗುತ್ತದೆ. ಎರಡನೆಯದಾಗಿ, ಯಾವುದಾದರೂ ಒಂದು ಈವೆಂಟ್ ಆಯೋಜಿಸಲು ವಿದ್ಯಾರ್ಥಿಗಳಿಗೆ ಕಲಿಸಬೇಕು. ತಮ್ಮದೇ ಆದ ಬ್ಯಾನರ್‌ಗಳು, ಕರಪತ್ರಗಳು, ಮಾರ್ಗದರ್ಶಿ ಯೋಜನೆಗಳು, ಟಿಕೆಟ್‌ಗಳು ಇತ್ಯಾದಿಗಳ ಪರಿಕಲ್ಪನೆ ಮತ್ತು ವಿನ್ಯಾಸದ ಮೂಲಕ ಅವರ ಈವೆಂಟ್‌ಗಳನ್ನು ಪ್ರಚಾರ ಮಾಡಲು ಅವರಿಗೆ ಕಲಿಸಬೇಕು. ಈವೆಂಟ್‌ನ ವಿಷಯ, ಪ್ರೇಕ್ಷಕರ ನಡವಳಿಕೆ, ಉತ್ತಮ ಆತಿಥ್ಯ ಮತ್ತು ಒಟ್ಟಾರೆ ಅನುಭವದ ಬಗ್ಗೆ ಗಮನ ಹರಿಸಲು ಅವರಿಗೆ ಕಲಿಸಬೇಕು” ಎಂದು ಅವರು ಸಲಹೆ ನೀಡಿದ್ದಾರೆ.

ಹೆಚ್ಚಿನ ಸುದ್ದಿಗಳಿಗೆ ನಮ್ಮನ್ನು ಫೇಸ್‌ಬುಕ್‌ ಮತ್ತು ಟ್ವಿಟರ್‌ ನಲ್ಲಿ ಫಾಲೋಮಾಡಿ.

ವಿಭಾಗ