ಕನ್ನಡ ಸುದ್ದಿ  /  Lifestyle  /  Tips To Get Long And Strong Nails

Strong and long Nails: ಸುಂದರ, ಉದ್ದವಾದ ಉಗುರುಗಳಿಗಾಗಿ ಹೀಗೆ ಮಾಡಿ.. ಹೆಚ್ಚು ಹಣ ವ್ಯಯಿಸಬೇಕಾದ ಅವಶ್ಯಕತೆ ಇಲ್ಲವೇ ಇಲ್ಲ!

ನಿಮ್ಮ ಉಗುರುಗಳು ಆರೋಗ್ಯಕರ ಹಾಗೂ ಉದ್ದವಾಗಿ ಬೆಳೆಯಬೇಕೆಂದರೆ ಆಲಿವ್ ಎಣ್ಣೆ ಕೂಡಾ ಉತ್ತಮ ಆಯ್ಕೆ ಆಗಿದೆ. ಆಲಿವ್ ಎಣ್ಣೆ ನಿಮ್ಮ ಉಗುರುಗಳ ಒಳ ಪದರವನ್ನು ತಲುಪುತ್ತದೆ. ಇದು ನಿಮ್ಮ ಉಗುರಿನ ಸುತ್ತಲಿನ ಚರ್ಮ ಒಣಗದಂತೆ ತಡೆಯುತ್ತದೆ.

ಸುಂದರವಾದ ಉಗುರುಗಳಿಗೆ ಟಿಪ್ಸ್‌
ಸುಂದರವಾದ ಉಗುರುಗಳಿಗೆ ಟಿಪ್ಸ್‌

ಕೈಗಳು ಸುಂದರವಾಗಿ ಕಾಣಲು ಉಗುರುಗಳು ಕೂಡಾ ಚೆನ್ನಾಗಿರಬೇಕು. ಕೆಲವರಿಗೆ ಉದ್ದವಾದ ಉಗುರು ಬೆಳೆಸಲು ಆಸೆ. ಆದರೆ ಉಗುರು ದುರ್ಬಲವಾಗಿದ್ದರೆ ಆಗ್ಗಾಗ್ಗೆ ಉಗುರು ತುಂಡಾಗುತ್ತದೆ. ಆದರೆ ನೀವು ಸೂಕ್ತ ರೀತಿಯಲ್ಲಿ ಕಾಳಜಿ ಮಾಡಿದರೆ ನೀವೂ ಕೂಡಾ ಸುಂದರವಾದ, ಆರೋಗ್ಯಕರ ಉದ್ದವಾದ ಉಗುರು ಬೆಳೆಸಬಹುದು.

ಮನೆಯಲ್ಲೇ ದೊರೆಯುವ ಕೆಲವೊಂದು ವಸ್ತುಗಳನ್ನು ಬಳಸಿ ನೀವು ನಿಮ್ಮ ಉಗುರಿನ ಸೌಂದರ್ಯವನ್ನು ಹೆಚ್ಚಿಸಿಕೊಳ್ಳಬಹುದು. ಹೀಗೆ ಮಾಡುವುದರಿಂದ ಯಾವುದೇ ಅಡ್ಡ ಪರಿಣಾಮಗಳು ಕೂಡಾ ಇರುವುದಿಲ್ಲ.

ನಿಂಬೆಹಣ್ಣು: ನಿಂಬೆಹಣ್ಣು ಎಲ್ಲರ ಮನೆಯಲ್ಲಿ ಲಭ್ಯವಿರುತ್ತದೆ. ಸುಂದರವಾದ ಉಗುರುಗಳನ್ನು ಪಡೆಯುವಲ್ಲಿ ನಿಂಬೆಹಣ್ಣು ಬಹಳ ಉಪಯುಕ್ತವಾಗಿದೆ. ನಿಂಬೆ ಹಣ್ಣನ್ನು ಕತ್ತರಿಸಿ ಸಣ್ಣ ತುಂಡುಗಳನ್ನು ತೆಗೆದುಕೊಂಡು 5-10 ನಿಮಿಷಗಳ ಕಾಲ ಉಗುರುಗಳ ಮೇಲೆ ಮಸಾಜ್‌ ಮಾಡಬೇಕು. ನಂತರ, ಬೆಚ್ಚಗಿನ ನೀರಿನಿಂದ ಅದನ್ನು ಸ್ವಚ್ಛಗೊಳಿಸಿ, ಮೃದುವಾದ ಟವೆಲ್‌ನಿಂದ ಮೃದುವಾಗಿ ಒತ್ತಿ. ಹೀಗೆ ನೀವು ವಾರಕ್ಕೆ ಎರಡು-ಮೂರು ಬಾರಿ ಮಾಡುವುದರಿಂದ ಉಗುರುಗಳ ಮೇಲಿರುವ ಬ್ಯಾಕ್ಟೀರಿಯಾ ನಿವಾರಣೆಯಾಗಿ ಉಗುರುಗಳು ಸುಂದರವಾಗಿ ಬೆಳೆಯುತ್ತವೆ.

ತೆಂಗಿನ ಎಣ್ಣೆ: ತೆಂಗಿನ ಎಣ್ಣೆ ನಿಮ್ಮ ಕೂದಲು ಹಾಗೂ ಚರ್ಮಕ್ಕೆ ಮಾತ್ರವಲ್ಲ, ಉದ್ದವಾದ ಉಗುರುಗಳಿಗೆ ಹೆಚ್ಚುವರಿ ಶಕ್ತಿಯನ್ನು ನೀಡುತ್ತದೆ. ತೆಂಗಿನ ಎಣ್ಣೆಯಲ್ಲಿ ವಿಟಮಿನ್ ಇ ಸಮೃದ್ಧವಾಗಿದೆ. ಇದು ಉತ್ಕರ್ಷಣ ನಿರೋಧಕಗಳ ಉತ್ತಮ ಮೂಲವಾಗಿದೆ. ಪ್ರತಿದಿನ ರಾತ್ರಿ ತೆಂಗಿನ ಎಣ್ಣೆಯಿಂದ ಉಗುರುಗಳನ್ನು ನಿಧಾನವಾಗಿ ಮಸಾಜ್ ಮಾಡುತ್ತಾ ಬನ್ನಿ. ಕೆಲವೇ ದಿನಗಳಲ್ಲಿ ವ್ಯಸ್ಯಾಸವನ್ನು ಗಮನಿಸಿ.

ಕಿತ್ತಳೆ ರಸ : ಕಿತ್ತಳೆ, ಕಾಲಜನ್ ಅಂಶವನ್ನು ಹೊಂದಿರುತ್ತದೆ. ಇದು ಉಗುರುಗಳ ಬೆಳವಣಿಗೆಗೆ ಸಹಾಯ ಮಾಡುತ್ತದೆ. ಉಗುರುಗಳು ಬಲವಾಗಿ ಬೆಳೆಯುವಂತೆ ಮಾಡುತ್ತದೆ. ಕಿತ್ತಳೆ ಹಣ್ಣಿನಲ್ಲಿ ಆ್ಯಂಟಿಆಕ್ಸಿಡೆಂಟ್ ಅಧಿಕವಾಗಿರುತ್ತದೆ. ಇದು ಸೋಂಕುಗಳನ್ನು ದೂರವಿಡುತ್ತದೆ. ಒಂದು ಬಟ್ಟಲಿನಲ್ಲಿ ಸ್ವಲ್ಪ ಕಿತ್ತಳೆ ರಸವನ್ನು ತೆಗೆದುಕೊಂಡು ಅದರೊಳಗೆ ನಿಮ್ಮ ಬೆರಳಿನ ತುದಿಯನ್ನು 10 ನಿಮಿಷಗಳ ಕಾಲ ನೆನೆಸಿಡಿ. ನಂತರ, ಬೆಚ್ಚಗಿನ ನೀರಿನಿಂದ ಅದನ್ನು ಸ್ವಚ್ಛಗೊಳಿಸಿ ಮೃದುವಾದ ಬಟ್ಟೆಯಿಂದ ಒರೆಸಿ. ಇದನ್ನು ನಿಯಮಿತವಾಗಿ ಮಾಡುವುದರಿಂದ ಉತ್ತಮ ಫಲಿತಾಂಶ ಸಿಗುತ್ತದೆ.

ಆಲಿವ್ ಎಣ್ಣೆ: ನಿಮ್ಮ ಉಗುರುಗಳು ಆರೋಗ್ಯಕರ ಹಾಗೂ ಉದ್ದವಾಗಿ ಬೆಳೆಯಬೇಕೆಂದರೆ ಆಲಿವ್ ಎಣ್ಣೆ ಕೂಡಾ ಉತ್ತಮ ಆಯ್ಕೆ ಆಗಿದೆ. ಆಲಿವ್ ಎಣ್ಣೆ ನಿಮ್ಮ ಉಗುರುಗಳ ಒಳ ಪದರವನ್ನು ತಲುಪುತ್ತದೆ. ಇದು ನಿಮ್ಮ ಉಗುರಿನ ಸುತ್ತಲಿನ ಚರ್ಮ ಒಣಗದಂತೆ ತಡೆಯುತ್ತದೆ. ರಕ್ತ ಪರಿಚಲನೆ ಸುಧಾರಿಸುತ್ತದೆ. ಈ ಎಣ್ಣೆಯಿಂದ ನಿಮ್ಮ ಉಗುರುಗಳು ಮತ್ತು ಹೊರ ಪೊರೆಗಳನ್ನು ಆಗಾಗ್ಗೆ ಮಸಾಜ್ ಮಾಡಿದರೆ ಉಗುರು ಸುಂದರವಾಗಿ ಬೆಳೆಯುತ್ತದೆ.

ನಿಯಮಿತವಾಗಿ ಕೊಳೆ ತೆಗೆಯಿರಿ: ನೀವು ಏನೇ ಕೆಲಸ ಮಾಡಿದರೂ ಉಗುರಿನ ಒಳಗೆ ಬೇಗ ಕೊಳೆ ಸೇರುತ್ತದೆ. ಇದರಿಂದ ಕೂಡಾ ನಿಮ್ಮ ಉಗುರಿನ ಅಂದ ಹಾಳಾಗುತ್ತದೆ. ಆದ್ದರಿಂದ ನಿಯಮಿತವಾಗಿ ಉಗುರಿನ ಕೊಳೆಯನ್ನು ಸ್ವಚ್ಛಗೊಳಿಸಿ.

ನೇಲ್‌ ಆರ್ಟ್‌: ನೇಲ್ ಆರ್ಟ್, ಜೆಲ್, ಅಕ್ರಿಲಿಕ್ ಕಲರ್‌ಗಳಿಂದ ಕೂಡಾ ಉಗುರುಗಳು ಸುಂದರವಾಗಿ ಕಾಣುತ್ತದೆ. ಇದರಿಂದ ಉಗುರುಗಳು ಬಲವಾಗಿ ಬೆಳೆಯುತ್ತವೆ.

ಈ ಸಲಹೆಗಳನ್ನು ಅನುಸರಿಸಿ ಸುಂದರವಾದ, ಉದ್ದವಾದ ಹಾಗೂ ಆರೋಗ್ಯಕರ ಉಗುರುಗಳನ್ನು ಪಡೆಯಿರಿ. ಜೊತೆಗೆ ಪೌಷ್ಠಿಕ ಆಹಾರ ಸೇವನೆ ಕೂಡಾ ಅಷ್ಟೇ ಮುಖ್ಯವಾಗಿದೆ.

ವಿಭಾಗ