ಕನ್ನಡ ಸುದ್ದಿ  /  Lifestyle  /  Tips To Preserve Pickle For Long Time

Pickle Preservation: ನೀವು ಮಾಡಿದ ಉಪ್ಪಿನಕಾಯಿ ಬೇಗ ಕೆಡುತ್ತಿದೆಯೇ...ಹಾಗಾಗದಿರಲು ಇಲ್ಲಿ ತಿಳಿಸಿರುವ ಟಿಪ್ಸ್ ಅನುಸರಿಸಿ

ಬಹಳ ಕಷ್ಟಪಟ್ಟು ಮಾಡಿರುವ ಉಪ್ಪಿನಕಾಯಿ ಈ ರೀತಿ ಬೇಗನೆ ಹಾಳಾಗುವುದರಿಂದ ನಮ್ಮ ಶ್ರಮ ವ್ಯರ್ಥವಾಗುವುದಲ್ಲದೆ, ಬಹಳ ಬೇಸರ ಉಂಟಾಗುತ್ತದೆ. ಹಾಗೇ ಮತ್ತೆ ಅದನ್ನು ತಿನ್ನಲು ಬಹಳ ಸಮಯ ಕಾಯಬೇಕು.

ಮಳೆಗಾಲದಲ್ಲಿ ಉಪ್ಪಿನಕಾಯಿ ಸಂರಕ್ಷಣೆ ( ಪಿಕ್ಸ ಬೇ )
ಮಳೆಗಾಲದಲ್ಲಿ ಉಪ್ಪಿನಕಾಯಿ ಸಂರಕ್ಷಣೆ ( ಪಿಕ್ಸ ಬೇ )

ಮಳೆಗಾಲದಲ್ಲಿ ಆಹಾರ ಸಂಗ್ರಹಣೆ ಮಾಡುವುದು ದೊಡ್ಡ ಟಾಸ್ಕ್ ಎಂದೇ ಹೇಳಬಹುದು. ಈ ಋತುವಿನಲ್ಲಿ ಫುಡ್ ಪಾಯ್ಸಿನಿಂಗ್ ಆಗುವ ಸಾಧ್ಯತೆ ಹೆಚ್ಚು. ಪರಿಸರದಲ್ಲಿ ಹೆಚ್ಚಿನ ಆರ್ದ್ರತೆಯಿಂದಾಗಿ ಆಹಾರ ಪದಾರ್ಥಗಳು ಬೇಗನೇ ಹಾಳಾಗುತ್ತವೆ. ಶಿಲೀಂಧ್ರ ಮತ್ತು ಇತರ ಬ್ಯಾಕ್ಟೀರಿಯಾಗಳು ಆಹಾರ ಪದಾರ್ಥಗಳ ಮೇಲೆ ಬೆಳೆಯಬಹುದು. ವಿಶೇಷವಾಗಿ ಈ ಸಮಯದಲ್ಲಿ ನಾವು ಪ್ರತಿದಿನ ಬಳಸುವ ಉಪ್ಪಿನಕಾಯಿ ಬೇಗನೆ ಹಾಳಾಗುತ್ತದೆ.

ಬಹಳ ಕಷ್ಟಪಟ್ಟು ಮಾಡಿರುವ ಉಪ್ಪಿನಕಾಯಿ ಈ ರೀತಿ ಬೇಗನೆ ಹಾಳಾಗುವುದರಿಂದ ನಮ್ಮ ಶ್ರಮ ವ್ಯರ್ಥವಾಗುವುದಲ್ಲದೆ, ಬಹಳ ಬೇಸರ ಉಂಟಾಗುತ್ತದೆ. ಹಾಗೇ ಮತ್ತೆ ಅದನ್ನು ತಿನ್ನಲು ಬಹಳ ಸಮಯ ಕಾಯಬೇಕು. ಆದರೆ ಕೆಲವೊಂದು ಸಲಹೆಗಳನ್ನು ಅನುಸರಿಸಿದರೆ ಉಪ್ಪಿನಕಾಯಿಯನ್ನು ದೀರ್ಘಕಾಲ ಸಂಗ್ರಹಿಸಬಹುದು.

ಗಾಜಿನ ಪಾತ್ರೆಗಳನ್ನು ಬಳಸಿ

ಪ್ಲಾಸ್ಟಿಕ್ ಬಾಟಲ್​​​​ಗಳಲ್ಲಿ ಸಂಗ್ರಹಿಸಿಟ್ಟ ಉಪ್ಪಿನಕಾಯಿ ಬೇಗ ಕೆಡುತ್ತದೆ. ಹಾಗೆಂದು ಉಕ್ಕಿನ ಪಾತ್ರೆಗಳಲ್ಲಿ ಉಪ್ಪಿನಕಾಯಿ ಸಂಗ್ರಹಿಸಲಾಗುವುದಿಲ್ಲ. ಹಾಗಾಗಿ ಉಪ್ಪಿನಕಾಯಿಯನ್ನು ಗಾಜಿನ ಬಾಟಲ್​​​ಗಳಲ್ಲಿ ಇಡುವುದರಿಂದ ದೀರ್ಘಕಾಲದವರೆಗೆ ಸಂಗ್ರಹಿಸಬಹುದು. ಉಪ್ಪಿನಕಾಯಿಯನ್ನು ಗಾಜಿನ ಬಾಟಲ್​​​​​ಗಳಲ್ಲಿ ಸಂಗ್ರಹಿಸಿದಾಗ ಗಾಳಿಯಲ್ಲಿ ತೇವಾಂಶವು ಉಪ್ಪಿನಕಾಯಿ ಮೇಲೆ ಪರಿಣಾಮ ಬೀರುವುದಿಲ್ಲ. ಗಾಜಿನ ಪಾತ್ರೆಯ ಹೊರ ಪದರವು ಸೂರ್ಯನ ಬೆಳಕಿನಲ್ಲಿ ಬೆಚ್ಚಗಾಗುತ್ತದೆ. ಇದು ಒಳಗೆ ತೇವಾಂಶವನ್ನು ಸಂಗ್ರಹಿಸಲು ಸಾಧ್ಯವಾಗುವುದಿಲ್ಲ. ಹಾಗಾಗಿ ಉಪ್ಪಿನಕಾಯಿಯನ್ನು ಸಂರಕ್ಷಿಸಲು ಗಾಜಿನ ಪಾತ್ರೆಗಳು ಅತ್ಯುತ್ತಮ ಆಯ್ಕೆ ಎಂದು ಹೇಳಬಹುದು.

ಎಣ್ಣೆ ಮತ್ತು ಉಪ್ಪನ್ನು ಹೆಚ್ಚು ಸೇರಿಸಿ

ಉಪ್ಪಿನಕಾಯಿಯಲ್ಲಿ ನೀವು ಎಷ್ಟು ಉಪ್ಪು ಮತ್ತು ಎಣ್ಣೆಯನ್ನು ಬಳಸುತ್ತೀರಿ ಎಂಬುದರ ಮೇಲೆ ಅದು ಎಷ್ಟು ದಿನಗಳ ಕಾಲ ಉಳಿಯುತ್ತದೆ ಎಂಬುದು ನಿರ್ಧಾರವಾಗುತ್ತದೆ. ಉಪ್ಪು ಮತ್ತು ಎಣ್ಣೆ ಉಪ್ಪಿನಕಾಯಿಯಲ್ಲಿ ಸಂರಕ್ಷಕಗಳಾಗಿ ಕಾರ್ಯ ನಿರ್ವಹಿಸುತ್ತವೆ. ಉಪ್ಪಿನಕಾಯಿಯ ಮೇಲೆ ತೇಲುತ್ತಿರುವ ಎಣ್ಣೆಯ ಪದರವು ತೇವಾಂಶವನ್ನು ಹಿಡಿದಿಟ್ಟುಕೊಳ್ಳುತ್ತದೆ. ಆದ್ದರಿಂದಲೇ ನಮ್ಮ ಮನೆಯಲ್ಲಿ ಅಜ್ಜಿಯಂದಿರು ಉಪ್ಪಿನಕಾಯಿ ಮಾಡುವಾಗ, ಎಲ್ಲಾ ಪದಾರ್ಥಗಳನ್ನು ಸರಿಯಾದ ಪ್ರಮಾಣದಲ್ಲಿ ಬೆರೆಸಿ, ಉಪ್ಪಿನಕಾಯಿಯನ್ನು ದೀರ್ಘಕಾಲದವರೆಗೂ ಸಂಗ್ರಹಿಸಿ ಇಡುತ್ತಿದ್ದರು. ಆದ್ದರಿಂದ ಉಪ್ಪಿನಕಾಯಿ ಹೆಚ್ಚು ಸಮಯ ಬಾಳಿಕೆ ಬರಬೇಕು ಎಂದರೆ ಉಪ್ಪು ಹಾಗೂ ಎಣ್ಣೆಯನ್ನು ಹೆಚ್ಚಾಗಿ ಬಳಸಿ

ಆರ್ದ್ರ ಸ್ಥಳಗಳಿಂದ ಉಪ್ಪಿನಕಾಯಿಯನ್ನು ದೂರ ಇಡಿ

ಉಪ್ಪಿನಕಾಯಿ ಕೆಡದಿರಲು ಉಪ್ಪು, ಎಣ್ಣೆಯನ್ನು ಬಳಸಿ ಸುರಕ್ಷಿತವಾಗಿ ಪ್ಯಾಕಿಂಗ್ ಮಾಡುವುದು ಎಷ್ಟು ಮುಖ್ಯವೋ, ಉಪ್ಪಿನಕಾಯಿ ಶೇಖರಣೆಗೆ ಉತ್ತಮ ಸ್ಥಳದ ಆಯ್ಕೆ ಕೂಡಾ ಅಷ್ಟೇ ಮುಖ್ಯ. ಉಪ್ಪಿನಕಾಯಿಯನ್ನು ಯಾವಾಗಲೂ ಒದ್ದೆ ಇರದ ಜಾಗದಲ್ಲಿ ಇಡಬೇಕು. ನೀರು ಇಲ್ಲದೆ, ಒಣ ಜಾಗದಲ್ಲಿ ಉಪ್ಪಿನಕಾಯಿ ಜಾಡಿಯನ್ನು ಇಡಿ. ಉಪ್ಪಿನಕಾಯಿ ಜಾರ್‌ನಲ್ಲಿ ಸರ್ವಿಂಗ್ ಚಮಚವನ್ನು ಇಡಬೇಡಿ. ಒದ್ದೆಯಾದ ಕೈಗಳಿಂದ ಉಪ್ಪಿನಕಾಯಿಯನ್ನು ಮುಟ್ಟಬೇಡಿ. ಹಾಗೆ ಮಾಡಿದರೆ ಖಂಡಿತ ಬೇಗ ಕೆಡುತ್ತದೆ.

ಸಣ್ಣ ಜಾಡಿಗಳಿಗೆ ವರ್ಗಾಯಿಸಿ

ದೊಡ್ಡ ಜಾಡಿಗಳಲ್ಲಿ ಸಂಗ್ರಹಿಸಿರುವ ಉಪ್ಪಿನಕಾಯಿಯಿಂದ ನಾವು ಪದೇ ಪದೆ ಮುಚ್ಚಳ ತೆಗೆಯುವುದರಿಂದ ಗಾಳಿ ಒಳಗೆ ಹೋಗುತ್ತದೆ. ಇದರಿಂದ ತೇವಾಂಶ ಕೂಡಾ ಹೆಚ್ಚಾಗುತ್ತದೆ. ಇದರಿಂದ ಉಪ್ಪಿನಕಾಯಿ ತೇವಾಂಶ ಕಳೆದುಕೊಳ್ಳುತ್ತದೆ. ಆದ್ದರಿಂದ ಆಗ್ಗಾಗ್ಗೆ ದೊಡ್ಡ ಜಾಡಿಗಳಿಂದ ಉಪ್ಪಿನಕಾಯಿ ತೆಗೆಯುವ ಬದಲಿಗೆ ಸಣ್ಣ ಜಾಡಿಗಳಲ್ಲಿ ತುಂಬಿಸಿಕೊಂಡು ರೆಫ್ರಿಜರೇಟರ್​​​​​ನಲ್ಲಿ ಸಂಗ್ರಹಿಸಿ. ಅವಶ್ಯಕತೆ ಇದ್ದಾಗ ಮತ್ತೆ ದೊಡ್ಡ ಜಾಡಿಯಿಂದ ತುಂಬಿಸಿಕೊಳ್ಳಬಹುದು.

ವಿಭಾಗ