ಪುಷ್ಪ 2 ನಾಯಕ ಅಲ್ಲು ಅರ್ಜುನ್ ಸ್ಟೈಲ್‌ಗೆ ಅವರೇ ಸಾಟಿ; ಸ್ಟೈಲಿಶ್ ಸ್ಟಾರ್‌ನಿಂದ ಕಲಿಯಬೇಕಾದ ಫ್ಯಾಷನ್‌ ಪಾಠಗಳಿವು
ಕನ್ನಡ ಸುದ್ದಿ  /  ಜೀವನಶೈಲಿ  /  ಪುಷ್ಪ 2 ನಾಯಕ ಅಲ್ಲು ಅರ್ಜುನ್ ಸ್ಟೈಲ್‌ಗೆ ಅವರೇ ಸಾಟಿ; ಸ್ಟೈಲಿಶ್ ಸ್ಟಾರ್‌ನಿಂದ ಕಲಿಯಬೇಕಾದ ಫ್ಯಾಷನ್‌ ಪಾಠಗಳಿವು

ಪುಷ್ಪ 2 ನಾಯಕ ಅಲ್ಲು ಅರ್ಜುನ್ ಸ್ಟೈಲ್‌ಗೆ ಅವರೇ ಸಾಟಿ; ಸ್ಟೈಲಿಶ್ ಸ್ಟಾರ್‌ನಿಂದ ಕಲಿಯಬೇಕಾದ ಫ್ಯಾಷನ್‌ ಪಾಠಗಳಿವು

ಟಾಲಿವುಡ್‌ನ ಪ್ಯಾನ್ ಇಂಡಿಯಾ ಸಿನಿಮಾ ‘ಪುಷ್ಪ–2 ದಿ ರೂಲ್‌‘ ಸಿನಿಮಾ ಬಿಡುಗಡೆಯಾಗಿದೆ. ಪುಷ್ಪ ಸಿನಿಮಾ ಹೈಲೈಟ್ ನಾಯಕ ಅಲ್ಲು ಅರ್ಜುನ್ ಅನ್ನೋದು ಸುಳ್ಳಲ್ಲ. ಇವರು ತಮ್ಮ ಅಭಿನಯ ಮಾತ್ರವಲ್ಲ, ಸ್ಟೈಲಿಶ್ ಲುಕ್‌ನ ಕಾರಣದಿಂದಲೇ ಗಮನ ಸೆಳೆದವರು. ಯಾವಾಗಲೂ ಸದಾ ಸ್ಟೈಲಿಶ್ ಆಗಿ ಇರುವ ಇವರಿಂದ ಕಲಿಯಬೇಕಾದ ಫ್ಯಾಷನ್ ಪಾಠಗಳು ಇಲ್ಲಿವೆ.

ಅಲ್ಲು ಅರ್ಜುನ್ ಸ್ಟೈಲಿಂಗ್ ಟಿಪ್ಸ್
ಅಲ್ಲು ಅರ್ಜುನ್ ಸ್ಟೈಲಿಂಗ್ ಟಿಪ್ಸ್

ಪುಷ್ಪ– 2 ಸಿನಿಮಾ ಬಿಡುಗಡೆಯಾಗಿದ್ದು ಎಲ್ಲೆಡೆ ಅದ್ಧೂರಿ ಪ್ರದರ್ಶನ ಕಾಣುತ್ತಿದೆ. ನಾಯಕ ಅಲ್ಲು ಅರ್ಜುನ್ ಹಾಗೂ ನಾಯಕಿ ರಶ್ಮಿಕಾ ಮಂದಣ್ಣ ಅಭಿನಯಕ್ಕೆ ಅಭಿಮಾನಿಗಳು ಫಿದಾ ಆಗಿದ್ದಾರೆ. ಪುಷ್ಪ ಪ್ರೀಕ್ವೆಲ್ ಬಿಡುಗಡೆಯಾದಾಗಿನಿಂದ ಅಲ್ಲು ಅರ್ಜುನ್‌ಗೆ ಭಾರತದಾದ್ಯಂತ ಅಭಿಮಾನಿಗಳನ್ನು ಸಂಪಾದಿಸಿದ್ದಾರೆ. ಅಲ್ಲು ಅರ್ಜುನ್ ತಮ್ಮ ನಟನೆ ಮಾತ್ರವಲ್ಲ ಸ್ಟೈಲಿಶ್ ಲುಕ್ ಮೂಲಕವು ಅಭಿಮಾನಿಗಳ ಮನ ಗೆದ್ದಿದ್ದಾರೆ.

ಸ್ಟೈಲಿಶ್ ಸ್ಟಾರ್ ಎಂದೇ ಖ್ಯಾತಿ ಪಡೆದಿರುವ ಅಲ್ಲು ಅರ್ಜುನ್ ತಮ್ಮ ಡ್ರೆಸ್ಸಿಂಗ್‌ ಸೆನ್ಸ್‌, ಹೇರ್‌ ಸ್ಟೈಲ್‌, ಬಿಯರ್ಡ್‌ ಸ್ಟೈಲ್‌ ಮೂಲಕ ಗಮನ ಸೆಳೆಯುತ್ತಾರೆ. ಮಾತ್ರವಲ್ಲ ಇವರ ಸ್ಟೈಲಿಂಗ್ ಸಲಹೆಗಳನ್ನು ಹಲವರು ಫಾಲೋ ಮಾಡುತ್ತಾರೆ. ಅಲ್ಲು ಅರ್ಜುನ್‌ನಿಂದ ಪ್ರತಿಯೊಬ್ಬರ ಕಲಿಯಬೇಕಾದ ಫ್ಯಾಷನ್ ಸಲಹೆಗಳಿವು.

ಬೈಸೆಪ್ಸ್ ಕಾಣಿಸುವ ಟೀ ಶರ್ಟ್

ಬೈಸೆಪ್ಸ್ ಕಾಣಿಸುವ ಆಸೆ ನಿಮಗೂ ಇದು, ನೀವು ಸ್ಟೈಲಿಶ್ ಆಗಿ ಕಾಣಿಸಬೇಕು ಅಂತಿದ್ದರೆ ಅಲ್ಲು ಅರ್ಜುನ್ ಅವರಂತೆ ರೌಂಡ್‌ ನೆಕ್‌ನ, ಅರ್ಧ ತೋಳಿನ ಮೈಗಂಟುವಂತಿರುವ ಟೀ ಶರ್ಟ್ ಧರಿಸಬಹುದು. ಈ ಟೀ ಶರ್ಟ್ ಜೊತೆಗೆ ನೀವು ಡೆನಿಮ್ ಜೀನ್ಸ್ ಧರಿಸುವ ಮೂಲಕ ಸಖತ್ ಟ್ರೆಂಡಿ ಆಗಿ ಕಾಣಿಸಬಹುದು.

ಸಾಂಪ್ರದಾಯಿಕ ಉಡುಪಿನಲ್ಲಿ ಬೋಲ್ಡ್ ಬುಕ್‌

ಸಾಂಪ್ರದಾಯಿಕ ಉಡುಪು ಧರಿಸಿದಾಗಲೂ ನೀವು ಬೋಲ್ಡ್ ಆಗಿ ಕಾಣಿಸಬೇಕು ಎಂದರೆ ಅಲ್ಲು ಅರ್ಜುನ್ ನಿಮಗೆ ಟಿಪ್ಸ್ ನೀಡುತ್ತಾರೆ ನೋಡಿ. ಈ ಫೋಟೊದಲ್ಲಿ ಅಲ್ಲು ಬಿಳಿ ಬಣ್ಣದ ತುಂಬು ತೋಳಿನ ಟೀ ಶರ್ಟ್ ಮೇಲೆ ಕ್ರೀಮ್‌ ಬಣ್ಣದ ಕೋಟ್ ಧರಿಸಿದ್ದು, ಬಿಳಿ ಬಣ್ಣದ ಸ್ನೀಕರ್ ಶೂ ಧರಿಸಿದ್ದಾರೆ. ಇದರ ಜೊತೆ ಸನ್‌ಗ್ಲಾಸ್ ಹಾಕಿದ್ರೆ ಎಷ್ಟು ಸೈಲ್ ಆಗಿ ಕಾಣಿಸಬಹುದು ಎಂಬುದಕ್ಕೆ ಅಲ್ಲು ಅರ್ಜುನ್ ಸಾಕ್ಷಿ.

ಮ್ಯಾಚೋ ಲುಕ್‌

ಸ್ವಲ್ಪ ಉದ್ದ ಕೂದಲು ಹೊಂದಿರುವ ಪುರುಷರು ತಮ್ಮ ಕೂದಲನ್ನು ಸಂಪೂರ್ಣವಾಗಿ ಹಿಂದಕ್ಕೆ ಬಾಚಿದರೆ ಪರಿಪೂರ್ಣವಾದ ಮ್ಯಾಚೋ ಲುಕ್ ಪಡೆಯಲು ಸಾಧ್ಯ. ಇದರ ಜೊತೆಗೆ ಲೈಟ್ ಗಡ್ಡ ಇದ್ದರೆ ನೀವು ಅದ್ಭುತವಾಗಿ ಕಾಣುತ್ತೀರಿ.

ಸ್ಟೈಲಿಶ್ ನೋಟ ನೀಡುವ ಪ್ಲಾಟಿನಂ ಉಂಗುರ

ಉಂಗುರಗಳನ್ನು ಮಹಿಳೆಯರು ಮಾತ್ರ ಧರಿಸಬೇಕು ಅಂತೇನಿಲ್ಲ. ಪುರುಷರು ಕೂಡ ಪ್ಲಾಟಿನಂ ರೌಂಡ್ ಶೇಪ್ ಉಂಗುರ ಧರಿಸಿ ಸಖತ್ ಸ್ಟೈಲಿಶ್ ಆಗಿ ಕಾಣಿಸಬಹುದು. ಇದನ್ನು ಧರಿಸಿದಾಗ ಸಖರ್ ಸ್ಟೈಲಿಶ್ ಆಗಿ ಫೋಟೊಗೆ ಪೋಸ್ ಕೂಡ ಕೊಡಬಹುದು ಎಂಬುದನ್ನು ತೋರಿಸಿದ್ದಾರೆ ಅಲ್ಲು.

ಕಪ್ಪು ಬಣ್ಣದ ಸ್ಯೂಟ್‌

ಕಪ್ಪು ಬಣ್ಣದ ಸ್ಯೂಟ್ ಖಂಡಿತ ಎಲ್ಲರಿಗೂ ಸಖತ್ ಆಗಿ ಹೊಂದುತ್ತದೆ. ಈವ್ನಿಂಗ್ ಪಾರ್ಟಿ, ಗೆಟ್ ಟುಗೆದರ್‌ನಂತಹ ಸಂದರ್ಭದಲ್ಲಿ ನೀವು ಕೂಡ ಅಲ್ಲು ಅರ್ಜುನ್ ಅವರ ಫುಲ್ ಬ್ಲ್ಯಾಕ್ ಸ್ಯೂಟ್ ಧರಿಸಬಹುದು. ಈ ಬಣ್ಣ ಉಡುಪು ಖಂಡಿತ ನಿಮ್ಮ ವಾರ್ಡ್‌ರೋಬ್‌ನಲ್ಲಿ ಇರಲೇಬೇಕು.

Whats_app_banner