ಕನ್ನಡ ಸುದ್ದಿ  /  Lifestyle  /  Tomato Dosa Recipe For Breakfast

Breakfast Recipe: ಸ್ವಲ್ಪ ಹುಳಿ, ಸ್ವಲ್ಪ ಸಿಹಿ...ದೋಸೆಪ್ರಿಯರಿಗಾಗಿ ಟೊಮ್ಯಾಟೊ ದೋಸೆ ರೆಸಿಪಿ

ಟೊಮ್ಯಾಟೋ ನಿಮಗೆ ಹುಳಿ ಎನಿಸಬಹುದು. ಆದರೆ ಇದರೊಂದಿಗೆ ನೀವು ರವೆ, ಅಕ್ಕಿಹಿಟ್ಟನ್ನು ಸೇರಿಸುವುದರಿಂದ ನಿಮಗೆ ಹುಳಿಯ ರುಚಿ ಗೊತ್ತಾಗುವುದಿಲ್ಲ. ಆದರೂ ಮಕ್ಕಳು ಹಾಗೂ ವಯಸ್ಸಾದವರು ಇದನ್ನು ಇಷ್ಟಪಟ್ಟು ತಿನ್ನುತ್ತಾರೆ. ಇದು ಮಧ್ಯಾಹ್ನದವರೆಗೂ ನಿಮಗೆ ಸ್ವಲ್ಪವೂ ಹಸಿವು ಕಾಡದಂತೆ ತಡೆಯುತ್ತದೆ.

ಟೊಮ್ಯಾಟೋ ದೋಸೆ
ಟೊಮ್ಯಾಟೋ ದೋಸೆ

ದೋಸೆ, ಭಾರತದ ಅನೇಕ ಜನರ ನೆಚ್ಚಿನ ಉಪಹಾರವಾಗಿದೆ. ಅದರಲ್ಲೂ ದಕ್ಷಿಣ ಭಾರತದಲ್ಲಿ ಇದು ಬಹಳ ಜನಪ್ರಿಯ. ನಾವು ಇದುವರೆಗೂ ಅನೇಕ ರೀತಿಯ ದೋಸೆಗಳನ್ನು ಸೇವಿಸಿದ್ದೇವೆ. ಮಸಾಲೆ ದೋಸೆ, ರವಾ ದೋಸೆ, ಪನೀರ್ ದೋಸೆ ಬಹಳ ಜನಪ್ರಿಯವಾಗಿದೆ. ನೀವು ಎಂದಾದರೂ ಟೊಮ್ಯಾಟೊ ದೋಸೆ ಟೇಸ್ಟ್ ಮಾಡಿದ್ದೀರಾ...? ಇದು ಬಹಳ ರುಚಿಯಾಗಿರುತ್ತದೆ. ನಿಮಗೆ ಸಮಯ ಕಡಿಮೆ ಇದ್ದರೆ ನೀವು ಈ ಟೊಮ್ಯಾಟೊ ದೋಸೆಯನ್ನು ಬ್ರೇಕ್​​ ಫಾಸ್ಟ್​​​ಗೆ ತಯಾರಿಸಬಹುದು. ಇದನ್ನು ತಯಾರಿಸಲು ಬಹಳ ಸುಲಭ.

ಟೊಮ್ಯಾಟೋ ನಿಮಗೆ ಹುಳಿ ಎನಿಸಬಹುದು. ಆದರೆ ಇದರೊಂದಿಗೆ ನೀವು ರವೆ, ಅಕ್ಕಿಹಿಟ್ಟನ್ನು ಸೇರಿಸುವುದರಿಂದ ನಿಮಗೆ ಹುಳಿಯ ರುಚಿ ಗೊತ್ತಾಗುವುದಿಲ್ಲ. ಆದರೂ ಮಕ್ಕಳು ಹಾಗೂ ವಯಸ್ಸಾದವರು ಇದನ್ನು ಇಷ್ಟಪಟ್ಟು ತಿನ್ನುತ್ತಾರೆ. ಇದು ಮಧ್ಯಾಹ್ನದವರೆಗೂ ನಿಮಗೆ ಸ್ವಲ್ಪವೂ ಹಸಿವು ಕಾಡದಂತೆ ತಡೆಯುತ್ತದೆ.

ಬೇಕಾಗುವ ಸಾಮಗ್ರಿಗಳು

ಟೊಮ್ಯಾಟೊ - 3

ಅಕ್ಕಿ ಹಿಟ್ಟು - 1/4 ಕಪ್

ರವೆ - 1 ಕಪ್

ಗೋಧಿ ಹಿಟ್ಟು - 1/4 ಕಪ್

ಅಡುಗೆ ಸೋಡಾ - 1/2 ಟೀ ಸ್ಪೂನ್

ಶುಂಠಿ ಪೇಸ್ಟ್ - 1 ಟೀ ಸ್ಪೂನ್

ಒಣ ಮೆಣಸಿನಕಾಯಿ - 4

ಜೀರ್ಗೆ - 1/4 ಟೀ ಸ್ಪೂನ್

ಕೊತ್ತಂಬರಿ ಸೊಪ್ಪು 2 ಟೀ ಸ್ಪೂನ್

ಉಪ್ಪು - ರುಚಿಗೆ ತಕ್ಕಷ್ಟು

ತುಪ್ಪ/ಎಣ್ಣೆ - ಅಗತ್ಯವಿರುವಷ್ಟು

ತಯಾರಿಸುವ ವಿಧಾನ

ಟೊಮ್ಯಾಟೊವನ್ನು ತೊಳೆದು ಸಣ್ಣ ತುಂಡುಗಳನ್ನಾಗಿ ಕತ್ತರಿಸಿಕೊಳ್ಳಿ

ಅದನ್ನು ಮಿಕ್ಸಿ ಜಾರ್​​ಗೆ ವರ್ಗಾಯಿಸಿ, ಅದರೊಂದಿಗೆ ಒಣ ಮೆಣಸಿನಕಾಯಿ, ಶುಂಠಿ ಪೇಸ್ಟ್, ಸ್ವಲ್ಪ ನೀರು ಸೇರಿಸಿ ನುಣ್ಣನೆ ಗ್ರೈಂಡ್ ಮಾಡಿಕೊಳ್ಳಿ

ಗ್ರೈಂಡ್ ಮಾಡಿದ ಟೊಮ್ಯಾಟೊ ಪ್ಯೂರಿಯನ್ನು ದೊಡ್ಡ ಬೌಲ್​​​​ಗೆ ವರ್ಗಾಯಿಸಿ ಅದಕ್ಕೆ ಅಕ್ಕಿ ಹಿಟ್ಟು, ರವೆ, ಗೋಧಿ ಹಿಟ್ಟು, ಜೀರ್ಗೆ, ಅಡುಗೆ ಸೋಡಾ, ಕೊತ್ತಂಬರಿ ಸೊಪ್ಪು ಮತ್ತು ಉಪ್ಪು ಸೇರಿಸಿ ಮಿಕ್ಸ್ ಮಾಡಿ.

ಮಿಶ್ರಣ ಹೆಚ್ಚು ತೆಳ್ಳಗೆ ಆಗದಂತೆ ಅಗತ್ಯವಿರುವಷ್ಟು ನೀರನ್ನು ಮಾತ್ರ ಸೇರಿಸಿ, ಹಿಟ್ಟನ್ನು ಮಿಕ್ಸ್ ಮಾಡಿದ ನಂತರ 10 ನಿಮಿಷ ಬಿಡಿ

ತವಾ ಬಿಸಿ ಮಾಡಿ ಸ್ವಲ್ಪ ತುಪ್ಪ ಹಾಗೂ ಎಣ್ಣೆ ಸೇರಿಸಿ ಒಂದು ಸೌಟು ದೋಸೆ ಹಿಟ್ಟಿನಿಂದ ದೋಸೆ ಹಾಕಿ

ನಿಮಗೆ ಅಗತ್ಯಕ್ಕೆ ತಕ್ಕಂತೆ ತುಪ್ಪ ಅಥವಾ ಎಣ್ಣೆ ಸೇರಿಸಿ ದೋಸೆ ರೋಸ್ಟ್ ಆಗುವರೆಗೂ ಕುಕ್ ಮಾಡಿ

ಗರಿ ಗರಿಯಾದ ದೋಸೆಯನ್ನು ಸರ್ವಿಂಗ್ ಪ್ಲೇಟ್​​​​​​​​​​​ಗೆ ವಗಾಯಿಸಿ ಚಟ್ನಿ, ಸಾಂಬಾರ್ ಅಥವಾ ನಿಮಗಿಷ್ಟವಾದ ಡಿಪ್​​​​​ನೊಂದಿಗೆ ಸರ್ವ್ ಮಾಡಿ

ವಿಭಾಗ