2023ರಲ್ಲಿ ಅತಿ ಹೆಚ್ಚು ಗೂಗಲ್ ಸರ್ಚ್ ಮಾಡಿದ ಅಗ್ರ 10 ಸೈಟ್‌ಗಳು; ಈ ವರ್ಷವೂ ಪಾರ್ನ್ ವೆಬ್‌ಸೈಟ್‌ಗಳೇ ಟಾಪ್
ಕನ್ನಡ ಸುದ್ದಿ  /  ಜೀವನಶೈಲಿ  /  2023ರಲ್ಲಿ ಅತಿ ಹೆಚ್ಚು ಗೂಗಲ್ ಸರ್ಚ್ ಮಾಡಿದ ಅಗ್ರ 10 ಸೈಟ್‌ಗಳು; ಈ ವರ್ಷವೂ ಪಾರ್ನ್ ವೆಬ್‌ಸೈಟ್‌ಗಳೇ ಟಾಪ್

2023ರಲ್ಲಿ ಅತಿ ಹೆಚ್ಚು ಗೂಗಲ್ ಸರ್ಚ್ ಮಾಡಿದ ಅಗ್ರ 10 ಸೈಟ್‌ಗಳು; ಈ ವರ್ಷವೂ ಪಾರ್ನ್ ವೆಬ್‌ಸೈಟ್‌ಗಳೇ ಟಾಪ್

2023ರಲ್ಲಿ ಗೂಗಲ್‌ನಲ್ಲಿ ಅತಿ ಹೆಚ್ಚು ಹುಡುಕಾಟ ನಡೆಸಿದ ಅಗ್ರ 10 ಸೈಟ್‌ಗಳ ಪೈಕಿ 2 ಪಾರ್ನ್ ವೆಬ್‌ಸೈಟ್‌ಗಳು ಟಾಪ್ 10ರಲ್ಲಿ ಸ್ಥಾನ ಪಡೆದಿವೆ.

2023ರಲ್ಲಿ ಗೂಗಲ್‌ನಲ್ಲಿ ಅತಿ ಹೆಚ್ಚು ಹುಡುಕಾಟ ನಡೆಸಿದ ತಾಣಗಳ ಪೈಕಿ ಪಾರ್ನ್ ವೆಬ್‌ಸೈಟ್‌ಗಳು 3ನೇ ಸ್ಥಾನದಲ್ಲಿವೆ.
2023ರಲ್ಲಿ ಗೂಗಲ್‌ನಲ್ಲಿ ಅತಿ ಹೆಚ್ಚು ಹುಡುಕಾಟ ನಡೆಸಿದ ತಾಣಗಳ ಪೈಕಿ ಪಾರ್ನ್ ವೆಬ್‌ಸೈಟ್‌ಗಳು 3ನೇ ಸ್ಥಾನದಲ್ಲಿವೆ.

ಬೆಂಗಳೂರು: 2022 ರಂತೆ 2023 ರಲ್ಲೂ ಗೂಗಲ್ ಹುಡುಕಾಟದ (Google Search) ಟಾಪ್ 10ರಲ್ಲಿ ಪಾರ್ನ್ ಸೈಟ್‌ಗಳೇ ಅಗ್ರ ಸ್ಥಾನದಲ್ಲಿವೆ. ಭಾರತದಲ್ಲಿ ಅತಿ ಹೆಚ್ಚು ಸರ್ಚ್ ಮಾಡಿರುವ ಸೈಟ್‌ಗಳ ಪೈಕಿ 2 ಪಾರ್ನ್ ಸೈಟ್‌ಗಳು ಟಾಪ್ 10 ರಲ್ಲಿವೆ.

ಈ ವರ್ಷ ಅತಿ ಹೆಚ್ಚು ಗೂಗಲ್ ಸರ್ಚ್ ಮಾಡಿರುವ ಈ ಪಟ್ಟಿಯಲ್ಲಿ ಯೂಟ್ಯೂಬ್ ನಂಬರ್ 1 ಸ್ಥಾನದಲ್ಲಿದೆ. ಅತಿ ಹೆಚ್ಚು ಭಾರತೀಯರು ಗೂಗಲ್‌ನಲ್ಲಿ ಯೂಟ್ಯೂಬ್ ಪದವನ್ನು ಹೆಚ್ಚು ಸರ್ಚ್ ಮಾಡಿದ್ದಾರೆ. 2.3 ಬಿಲಿಯನ್ ಇದರ ಒಟ್ಟಾರೆ ಟ್ರಾಫಿಕ್ ಜೊತೆಗೆ ಯೂಟ್ಯೂಬ್‌ಗೆ ಅರ್ಗಾನಿಕ್ ಶೇಕಡಾ 99.03 ರಷ್ಟು ಇದೆ.

ಎರಡನೇ ಸ್ಥಾನವನ್ನು ಫೇಸ್‌ಬುಕ್ ಆಕ್ರಮಿಸಿಕೊಂಡಿದೆ. 1.07 ಬಿಲಿಯನ್‌ನಷ್ಟು ಗೂಗಲ್‌ನಲ್ಲಿ ಎಫ್‌ಬಿ ಬಗ್ಗೆ ಸರ್ಚ್ ಮಾಡಿದ್ದಾರೆ. ಇದರ ಅರ್ಗಾನಿಕ್ 98.67 ರಷ್ಟಿದೆ. ಇನ್ನ ಮೂರನೇ ಸ್ಥಾನದಲ್ಲಿ ಒಂದು ಪಾರ್ನ್ ವೆಬ್‌ಸೈಟ್ ಇದೆ. 2023ರಲ್ಲಿ 16 ಕೋಟಿ ಜನರು ಗೂಗಲ್ ಸರ್ಚ್ ಮೂಲಕ ಪಾರ್ನ್ ವೆಬ್‌ಸೈಟ್‌ಗೆ ಎಂಟ್ರಿ ಕೊಟ್ಟಿದ್ದಾರೆ. ಪಾರ್ನ್ ವೆಬ್‌ಸೈಟ್‌ನ ಅರ್ನಾಗಿಕ್ ಶೇಕಡಾ 100 ರಷ್ಟಿದೆ.

ಭಾರತದಲ್ಲಿ 2023ರಲ್ಲಿ ಅತಿ ಹೆಚ್ಚು ಗೂಗಲ್ ಸರ್ಚ್ ಮಾಡಿದ ಅಗ್ರ 100 ಸೈಟ್‌ಗಳ ಪೈಕಿ 4ನೇ ಸ್ಥಾನದಲ್ಲಿ ವೆದರ್ ಪದ ಇದೆ. ವೆದರ್‌ಗೆ ಅರ್ಗಾನಿಕ್ ಶೇಕಡಾ 92.32 ರಷ್ಟಿದೆ. 5ನೇ ಸ್ಥಾನದಲ್ಲಿ ಅಮೆಜಾನ್, 6ನೇ ಸ್ಥಾನದಲ್ಲಿ ಟ್ರಾನ್ಸ್‌ಲೆಟ್, 7ನೇ ಸ್ಥಾನದಲ್ಲಿ ಮತ್ತೊಂದು ಪಾರ್ನ್ ವೆಬ್‌ಸೈಟ್, 8ನೇ ಸ್ಥಾನದಲ್ಲಿ ಜಿಮೇಲ್, 9ನೇ ಸ್ಥಾನದಲ್ಲಿ ಗೂಗಲ್ ಟ್ರಾನ್ಸ್‌ಲೆಟ್ ಹಾಗೂ 10ನೇ ಸ್ಥಾನದಲ್ಲಿ ವಾಟ್ಸಪ್ ವೆಬ್‌ಸೈಟ್ ಇದೆ.

ಇಡೀ ಜಗತ್ತಿನ್ನು ಶೇಕ್ ಮಾಡಿದ್ದ ಚಾಟ್ ಜಿಪಿಟಿಗೆ ಅಗ್ರ 10ರಲ್ಲಿ ಸ್ಥಾನ ಸಿಗದಿರುವುದು ವಿಶೇಷ. ಇದಿಷ್ಟೇ ಅಲ್ಲ, ಜನರು ಹೆಚ್ಚು ಬಳಸುವಂತ ಸಾಮಾಜಿಕ ಜಾಲತಾಣವಾಗಿರುವ ಇನ್‌ಸ್ಟಾಗ್ರಾಮ್, ಟ್ವಿಟರ್ (ಈಗ ಎಕ್ಸ್) ಕೂಡ ಅಗ್ರ ಹತ್ತರಲ್ಲಿ ಸ್ಥಾನ ಗಿಟ್ಟಿಸಿಕೊಳ್ಳುವಲ್ಲಿ ವಿಫಲವಾಗಿವೆ. ಇನ್‌ಸ್ಟಾಗ್ರಾಮ್ 12 ಹಾಗೂ ಟ್ವಿಟರ್ 14ನೇ ಸ್ಥಾನದಲ್ಲಿದೆ.

Whats_app_banner