Hoysala Temples: ಬೇಲೂರು, ಹಳೇಬೀಡು ಹೊರತಾಗಿ ಕರ್ನಾಟಕದಲ್ಲಿನ ಹೊಯ್ಸಳ ವಾಸ್ತುಶಿಲ್ಪದ 10 ಪ್ರಮುಖ ದೇಗುಲಗಳಿವು
ಬೇಲೂರಿನ ಚೆನ್ನಕೇಶವ ದೇವಸ್ಥಾನ, ಹಳೆಬೀಡಿನ ಹೊಯ್ಸಳೇಶ್ವರ ದೇವಸ್ಥಾನ ಮತ್ತು ಸೋಮನಾಥಪುರದ ಚೆನ್ನಕೇಶವ ದೇವಸ್ಥಾನ ಸೇರಿದಂತೆ ಹೊಯ್ಸಳರ 92 ದೇಗುಲಗಳು ಕರ್ನಾಟಕದಲ್ಲಿದೆ. ಅವುಗಳಲ್ಲಿ ಹೆಚ್ಚಿನವು ಹಾಸನ ಜಿಲ್ಲೆಗಳಲ್ಲಿವೆ. ಈ ಪೈಕಿ 10 ಪ್ರಮುಖ ದೇಗುಲಗಳ ಪಟ್ಟಿ ಇಲ್ಲಿದೆ..
ಹೊಯ್ಸಳರು 11 ರಿಂದ13 ನೇ ಶತಮಾನದವರೆಗೆ ಕರ್ನಾಟಕದಲ್ಲಿ ಆಳ್ವಿಕೆ ನಡೆಸಿದ್ದರು. ಅವರು ಕಲೆ, ಸಾಹಿತ್ಯ ಮತ್ತು ಧರ್ಮದ ಪೋಷಕರಾಗಿದ್ದರು. ಹೊಯ್ಸಳರು ತಮ್ಮ ಅತ್ಯುತ್ತಮ ದೇವಾಲಯದ ವಾಸ್ತುಶಿಲ್ಪಕ್ಕೆ ಹೆಸರುವಾಸಿಯಾಗಿದ್ದಾರೆ. ಬೇಲೂರು, ಹಳೇಬೀಡು ಮತ್ತು ಸೋಮನಾಥಪುರದಲ್ಲಿನ ದೇವಾಲಯಗಳು ಹೊಯ್ಸಳ ವಾಸ್ತುಶಿಲ್ಪದ್ದಾಗಿದ್ದು, ಹೆಚ್ಚು ಖ್ಯಾತಿ ಪಡೆದಿವೆ.
ಬೇಲೂರಿನ ಚೆನ್ನಕೇಶವ ದೇವಸ್ಥಾನ, ಹಳೆಬೀಡಿನ ಹೊಯ್ಸಳೇಶ್ವರ ದೇವಸ್ಥಾನ ಮತ್ತು ಸೋಮನಾಥಪುರದ ಚೆನ್ನಕೇಶವ ದೇವಸ್ಥಾನ ಸೇರಿದಂತೆ ಹೊಯ್ಸಳರ 92 ದೇಗುಲಗಳು ಕರ್ನಾಟಕದಲ್ಲಿದೆ. ಅವುಗಳಲ್ಲಿ ಹೆಚ್ಚಿನವು ಹಾಸನ ಜಿಲ್ಲೆಗಳಲ್ಲಿವೆ. ಈ ಪೈಕಿ 10 ಪ್ರಮುಖ ದೇಗುಲಗಳ ಪಟ್ಟಿ ಇಲ್ಲಿದೆ..
1) ನುಗ್ಗೇಹಳ್ಳಿಯ ಲಕ್ಷ್ಮೀ ನರಸಿಂಹ ದೇವಸ್ಥಾನ: ಹಾಸನ ಜಿಲ್ಲೆಯ ಚನ್ನರಾಯಪಟ್ಟಣ ತಾಲೂಕಿನ ನುಗ್ಗೇಹಳ್ಳಿ ಎಂಬ ಸಣ್ಣ ಗ್ರಾಮದಲ್ಲಿ ದೇಗುಲವಿದೆ. ಈ ದೇವಾಲಯವನ್ನು ಹೊಯ್ಸಳ ರಾಜ ವೀರ ಸೋಮೇಶ್ವರನ ದಂಡನಾಯಕ ಬೊಮ್ಮಣ್ಣ ಕ್ರಿ.ಶ 1246 ರಲ್ಲಿ ನಿರ್ಮಿಸಿದನು.
2) ನುಗ್ಗೇಹಳ್ಳಿಯ ಸದಾಶಿವ ದೇವಾಲಯ: ಇದು ಕೂಡ ದಂಡನಾಯಕ ಬೊಮ್ಮಣ್ಣ ನಿರ್ಮಿಸಿದ ದೇಗುಲವಾಗಿದೆ. ಹಾಸನದಿಂದ 63 ಕಿಲೋ ಮೀಟರ್ ಮತ್ತು ಬೆಂಗಳೂರಿನಿಂದ 163 ಕಿ.ಮೀ ದೂರದಲ್ಲಿ ನುಗ್ಗೇಹಳ್ಳಿ ಇದೆ.
3) ಅರಸೀಕೆರೆಯ ಈಶ್ವರ ದೇವಸ್ಥಾನ: ಹಾಸನ ಜಿಲ್ಲೆಯ ಅರಸೀಕೆರೆ ಪಟ್ಟಣದಲ್ಲಿರುವ ಈ ದೇವಸ್ಥಾನವನ್ನು ರಾಜ ವೀರ ಬಲ್ಲಾಳನ ಕಾಲದಲ್ಲಿ ನಿರ್ಮಿಸಲಾಗಿದೆ. ಹಾಸನದಿಂದ 41 ಕಿಲೋ ಮೀಟರ್ ಮತ್ತು ಬೆಂಗಳೂರಿನಿಂದ 200 ಕಿ.ಮೀ ದೂರದಲ್ಲಿ ಅರಸೀಕೆರೆ ಇದೆ.
4) ಬೆಳವಡಿಯ ವೀರ ನಾರಾಯಣ ದೇವಸ್ಥಾನ: ಚಿಕ್ಕಮಗಳೂರು ಜಿಲ್ಲೆಯ ಬೆಳವಡಿ ಗ್ರಾಮದಲ್ಲಿ ಈ ದೇಗುಲವಿದೆ. ಇದು ಹಳೇಬೀಡಿನಿಂದ ಕೇವಲ 12 ಕಿ.ಮೀ ದೂರದಲ್ಲಿದೆ.
5) ಕಿಕ್ಕೇರಿಯ ಬ್ರಹ್ಮೇಶ್ವರ ದೇವಸ್ಥಾನ: ಇದು ಮಂಡ್ಯದ ಕೆ ಆರ್ ಪೇಟೆಯಿಂದ 11 ಕಿ.ಲೋ ಮೀಟರ್ ದೂರದಲ್ಲಿದ್ದು, ಶ್ರೀರಂಗಪಟ್ಟಣ-ಚನ್ನರಾಯಪಟ್ಟಣ ಹೈವೇ ಯಲ್ಲಿ ಸಿಗುತ್ತದೆ.
6) ಗೋವಿಂದನಹಳ್ಳಿಯ ಪಂಚಲಿಂಗೇಶ್ವರ ದೇವಸ್ಥಾನ: ಇದನ್ನು ಪ್ರಸಿದ್ಧ ಹೊಯ್ಸಳ ಶಿಲ್ಪಿ ಮಲ್ಲಿತಮ್ಮ ಕ್ರಿ.ಶ. 1237-38 ರ ಸುಮಾರಿಗೆ ನಿರ್ಮಿಸಿದ್ದು, ಈ ದೇವಾಲಯವು ಶ್ರೀರಂಗಪಟ್ಟಣ-ಚನ್ನರಾಯಪಟ್ಟಣ ಹೆದ್ದಾರಿಯಲ್ಲಿ ಕಿಕ್ಕೇರಿಯಿಂದ 5 ಕಿಮೀ ದೂರದಲ್ಲಿದೆ.
7) ದೊಡ್ಡಗಡ್ಡವಳ್ಳಿಯ ಲಕ್ಷ್ಮೀದೇವಿ ದೇವಸ್ಥಾನ: ಹಾಸನ-ಹಳೇಬೀಡು ಹೆದ್ದಾರಿಯಿಂದ 2 ಕಿಲೋ ಮೀಟರ್ ದೂರದಲ್ಲಿದೆ. ಕ್ರಿ.ಶ 1114 ರಲ್ಲಿ ಹೊಯ್ಸಳ ದೊರೆ ವಿಷ್ಣುವರ್ಧನನಿಂದ ನಿರ್ಮಿಸಲ್ಪಟ್ಟಿದೆ.
8) ಜಾವಗಲ್ ಲಕ್ಷ್ಮೀ ನರಸಿಂಹ ದೇವಸ್ಥಾನ: ಹಾಸನದಿಂದ 50 ಕಿಲೋ ಮೀಟರ್ ದೂರದಲ್ಲಿರುವ ಜಾವಗಲ್ ಪಟ್ಟಣದಲ್ಲಿ ಈ ದೇವಸ್ಥಾನವಿದೆ. ಈ ದೇವಾಲಯವನ್ನು 13 ನೇ ಶತಮಾನದಲ್ಲಿ ಹೊಯ್ಸಳ ರಾಜ ವೀರ ಸೋಮೇಶ್ವರ ನಿರ್ಮಿಸಿದನು.
9) ಶಾಂತಿಗ್ರಾಮದ ಭೋಗ ನರಸಿಂಹ ದೇಗುಲ: ಈ ದೇವಾಲಯವನ್ನು 11 ನೇ ಶತಮಾನದಲ್ಲಿ ರಾಜ ವಿಷ್ಣುವರ್ಧನ್ ಅವರ ಪತ್ನಿ ರಾಣಿ ಶಾಂತಲಾ ದೇವಿ ನಿರ್ಮಿಸಿದರು. ಶಾಂತಿಗ್ರಾಮವು ಬೆಂಗಳೂರು-ಹಾಸನ ಹೆದ್ದಾರಿಯಲ್ಲಿ ಬರುತ್ತದೆ. ಹಾಸನದಿಂದ 13 ಕಿಮೀ ದೂರದಲ್ಲಿದೆ.
10) ಆನೆಕೆರೆಯ ಚೆನ್ನಕೇಶವ ದೇವಾಲಯ: ಶ್ರೀರಂಗಪಟ್ಟಣ-ಚನರಾಯಪಟ್ಟಣ ಹೆದ್ದಾರಿಯಲ್ಲಿರುವ ಚನರಾಯಪಟ್ಟಣ ತಾಲ್ಲೂಕಿನ ಒಂದು ಸಣ್ಣ ಪಟ್ಟಣವಾದ ಆನೆಕೆರೆಯಲ್ಲಿ ಈ ದೇಗುಲವಿದೆ.