IRCTC Andaman Tour 2024: ಸುಂದರ ಪ್ರವಾಸಿ ತಾಣ ಅಂಡಮಾನ್ ನೋಡುವ ಪ್ಲಾನ್ ಇದೆಯಾ; ಐಆರ್‌ಸಿಟಿಸಿ ಬೆಸ್ಟ್ ಟೂರ್ ಪ್ಯಾಕೇಜ್ ತಿಳಿಯಿರಿ
IRCTC Andaman Tour 2024: ಈ ವರ್ಷ ನೀವೇನಾದರೂ ಅಂಡಮಾನ್ ಪ್ರವಾಸದ ಪ್ಲಾನ್ ಮಾಡಿಕೊಂಡಿದ್ದರೆ ಸುಮಾರು 300 ದ್ವೀಪಗಳು, ಸುಂದರವಾದ ಕಡಲತೀರಗಳನ್ನು ನೋಡಲು ಐಆರ್‌ಸಿಟಿಸಿ ಹೊಸ ಟೂರ್ ಪ್ಲಾನ್‌ಗಳ ಬಗ್ಗೆ ಒಮ್ಮೆ ತಿಳಿಯಿರಿ.
(1 / 6)
ಐಆರ್‌ಸಿಟಿಸಿ ವಿವಿಧ ಪ್ರವಾಸಿ ತಾಣಗಳಿಗೆ ಟೂರ್ ಪ್ಯಾಕೇಜ್‌ಗಳನ್ನು ಘೋಷಿಸುತ್ತಲೇ ಇರುತ್ತದೆ. ಇದರ ಭಾಗವಾಗಿ ಅಂಡಮಾನ್ ದ್ವೀಪಗಳನ್ನು ನೋಡಲು ಬಯಸುವವರಿಗಾಗಿ ಪ್ಯಾಕೇಜ್ ಘೋಷಿಸಿದೆ. ನೀವು ಬಿಳಿ ಮರಳಿನ ದಿಬ್ಬಗಳೊಂದಿಗೆ ಆಹ್ಲಾದಕರವಾಗಿ ಕಾಣುವ ಕಡಲತೀರಗಳನ್ನು ನೋಡಲು ಬಯಸಿದರೆ ನೀವು ಈ ದ್ವೀಪಗಳಿಗೆ ಹೋಗಬಹುದು. ರೋಮ್ಯಾಂಟಿಕ್ ಅಂಡಮಾನ್ ಹಾಲಿಡೇಸ್ ಹೆಸರಿನ ಪ್ಯಾಕೇಜ್ ನೀಡುತ್ತಿದೆ. (Unsplash)
(2 / 6)
ನೀವು ಈ ಪ್ರವಾಸವನ್ನು ಕೈಗೊಳ್ಳಬೇಕಾದರೆ ಮೊದಲು ಪೋರ್ಟ್ ಬ್ಲೇರ್‌ಗೆ ತಲುಪಬೇಕು. ಐಆರ್‌ಸಿಟಿಸಿ ಇಲ್ಲಿಂದ ಪ್ರವಾಸವನ್ನು ನಡೆಸುತ್ತದೆ. ಪ್ರಸ್ತುತ ಈ ಪ್ರವಾಸ ಪ್ಯಾಕೇಜ್ ಫೆಬ್ರವರಿ 12 ರಿಂದ ಆರಂಭವಾಗುತ್ತದೆ. (Unsplash)
(3 / 6)
6 ರಾತ್ರಿಗಳು ಸೇರಿ 7 ದಿನಗಳ ಪ್ರವಾಸ ಪ್ಯಾಕೇಜ್ ಇದಾಗಿದ್ದು, ಹ್ಯಾವ್ಲಾಕ್, ಪೋರ್ಟ್‌ಬ್ಲೇರ್ ಸೇರಿದಂತೆ ವಿವಿಧ ಪ್ರದೇಶಗಳನ್ನು ಒಳಗೊಂಡಿದೆ. ವಿಮಾನದಲ್ಲಿ ಕರೆದುಕೊಂಡು ಹೋಗುತ್ತಾರೆ. (Unsplash)(/unsplash.com)
(4 / 6)
ಪೋರ್ಟ್ ಬ್ಲೇರ್‌ನಲ್ಲಿ ಮೊದಲ ದಿನದ ಪ್ರವಾಸ ಇರಲಿದ್ದು, ಇಲ್ಲಿ ಚೆನ್ನಾಗಿ ತಿರುಗಾಡಬಹುದು. ಎರಡನೇ ದಿನ ನಾರ್ತ್ ಬೇ ಐಲ್ಯಾಂಡ್‌ನಲ್ಲಿರುವ ಅನೇಕ ಸ್ಥಳಗಳನ್ನು ತೋರಿಸುತ್ತಾರೆ. ಮೂರನೇ ದಿನ ಪೋರ್ಟ್ ಬ್ಲೇರ್ - ಹ್ಯಾವ್ ಲಾಕ್ ಪ್ರವಾಸ ಇರಲಿದೆ. ಕಲಾಪತ್ತಾರ್, ರಾಧಾನಗರ ಬೀಚ್‌ಗಳಿಗೆ ಕರೆದುಕೊಂಡು ಹೋಗುತ್ತಾರೆ. ಹ್ಯಾವ್‌ಲಾಕ್‌ನಲ್ಲಿ ರಾತ್ರಿ ವಾಸ್ತವ್ಯ ಇರಲಿದೆ. (Unsplash)(/unsplash.com)
(5 / 6)
ನಾಲ್ಕನೇ ದಿನ ಹೋಟೆಲ್‌ನಲ್ಲಿ ಉಪಹಾರ ಸೇವಿಸಿದ ನಂತರ ಲಕ್ಷ್ಮೀಪುರ ಬೀಜ್‌ಗೆ ಭೇಟಿ ನೀಡಲಾಗುತ್ತದೆ. ಐದನೇ ದಿನ ಭರತ್‌ಪುರ ಬೀಚ್ ತೋರಿಸಲಾಗುತ್ತದೆ. ಪೋರ್ಟ್ ಬ್ಲೇರ್‌ನಲ್ಲಿ ರಾತ್ರಿ ವಾಸ್ತವ್ಯ ಇರಲಿದೆ. 6ನೇ ದಿನ ಬೆಳಗ್ಗೆ ತಿಂಡಿ ಮುಗಿಸಿದ ನಂತರ ಬರತಾಂಗ್‌ಗೆ ಹೊರಡುತ್ತಾರೆ. 7ನೇ ದಿನ ಪ್ರವಾಸದ ಪ್ಯಾಕೇಜ್ ಮುಕ್ತಾಯಗೊಳ್ಳಲಿದೆ. (Unsplash)
(6 / 6)
ಅಂಡಮಾನ್ ಪ್ರವಾಸದ ಪ್ಯಾಕೇಜ್ ಬೆಲೆಗಳನ್ನು ನೋಡುವುದಾದರೆ ಸಿಂಗಲ್ ಆಕ್ಯುಪೆನ್ಸಿಗೆ 55,500 ರೂಪಾಯಿ ಇದೆ. ಡಬಲ್ ಆಕ್ಯುಪೆನ್ಸಿಗೆ 32,100 ರೂಪಾಯಿ ಹಾಗೂ ಟ್ರಿಪಲ್ ಆಕ್ಯುಪೆನ್ಸಿಗೆ 29,100 ರೂಪಾಯಿ ಇರಲಿದೆ. ಹೋಟೆಲ್, ಫುಡ್, ಪ್ರಯಾಣದ ವಿಮೆ ಈ ಪ್ಯಾಕೇಜ್‌ನಲ್ಲಿ ಒಳಗೊಂಡಿರುತ್ತದೆ. 5 ರಿಂದ 11 ವರ್ಷದ ಮಕ್ಕಳಿಗೆ ಪ್ರತ್ಯೇಕ ಬೆಲೆಗಳಿವೆ. ಬುಕಿಂಗ್ ಜೊತೆಗೆ ಹೆಚ್ಚಿನ ವಿವರಗಳನ್ನು ತಿಳಿಯಲು https://www.irctctourism.com/ ವೆಬ್‌ಸೈಟ್‌ಗೆ ಭೇಟಿ ನೀಡಿ.
ಇತರ ಗ್ಯಾಲರಿಗಳು