Top Hotels: ಜಗತ್ತಿನ ಟಾಪ್ 50 ಟಾಪ್ ಹೊಟೇಲ್‌ಗಳ ಪಟ್ಟಿ ಬಿಡುಗಡೆ; ಭಾರತದ ಒಂದೇ ಹೊಟೇಲ್‌ಗೆ ಸ್ಥಾನ
Worlds Top Hotels ವಿಶ್ವದ ಟಾಪ್ ಹೊಟೇಲ್‌ಗಳ ಪಟ್ಟಿಯನ್ನು ಬಿಡುಗಡೆ ಮಾಡಲಾಗಿದೆ. ಲಂಡನ್‌ನಲ್ಲಿ ನಡೆದ ಸಮಾರಂಭದಲ್ಲಿ ಟಾಪ್ ಹೊಟೇಲ್‌ಗಳಿಗೆ ಪ್ರಶಸ್ತಿಯನ್ನೂ ನೀಡಲಾಗಿದೆ. ಈ ಪಟ್ಟಿಯಲ್ಲಿ ಭಾರತದ ಆಗ್ರಾದ ಒಬೆರಾಯ್ ಹೊಟೇಲ್(Oberoi Amarvilas Agra) ಸ್ಥಾನ ಪಡೆದಿದೆ.
ಬ್ಲೂಮ್ ಬರ್ಗ್: ವಿಶ್ವದ ಟಾಪ್ 50 ಹೊಟೇಲ್‌ಗಳ ಪಟ್ಟಿ ಪ್ರಕಟಿಸಲಾಗಿದ್ದು. ಭಾರತದ ಒಂದು ಹೊಟೇಲ್‌ಗೆ ಈ ಪಟ್ಟಿಯಲ್ಲಿ ಸ್ಥಾನ ದೊರೆತಿದೆ.
ಲಂಡನ್‌ನ ಬ್ಲೂಮ್‌ಬರ್ಗ್ ನಲ್ಲಿ ನಡೆದ ಸಮಾರಂಭದಲ್ಲಿ ಪಟ್ಟಿ ಬಿಡುಗಡೆ ಜತೆಗೆ ಪ್ರಶಸ್ತಿಗಳನ್ನೂ ನೀಡಲಾಯಿತು
ಆಗ್ರಾದಲ್ಲಿರುವ ಓಬೇರಾಯ್ ಅಮರವಿಲಾಸ್ ಹೊಟೇಲ್‌ಗೆ ಈ ಪಟ್ಟಿಯಲ್ಲಿ 45ನೇ ಲಭಿಸಿದೆ. ಹಳೆಯ ಹಾಗೂ ಅತ್ಯುತ್ತಮ ನಿರ್ವಹಣೆಗೆ ಅಮರವಿಲಾಸ್ ಹೊಟೇಲ್‌ಗೆ ಈ ಪಟ್ಟಿಯಲ್ಲಿ ಸ್ಥಾನ ದೊರೆತಿದೆ.
ಬಹುತೇಕ ಯೂರೋಪ್‌ನ ಹೊಟೇಲ್‌ಗಳಿಗೆ ಹೆಚ್ಚಿನ ಸ್ಥಾನ ದೊರೆತಿದೆ. ಇಟಲಿಯ ಪಸ್ಸಾಲಕುವಾ ಲೇಕ್ ಕೋಮೋ ಹೊಟೇಲ್ ಪ್ರಥಮ ಸ್ಥಾನ ಪಡೆದುಕೊಂಡಿದೆ. ಇದು ಅತಿ ಸಣ್ಣ ಬರೀ 24 ಕೊಠಡಿ ಇರುವ ಹೊಟೇಲ್. ಆದರೆ ಹದಿನೆಂಟನೇ ಶತಮಾನದ ಹೊಟೇಲ್ ಬಹುವರ್ಷಗಳ ನವೀಕರಣದ ಬಳಿಕ ಕಳೆದ ವರ್ಷವಷ್ಟೇ ಪುನಾರಂಭಗೊಂಡಿತ್ತು. ಈ ಹೊಟೇಲ್ ಹಿಂದೆ ನೆಪೋಲಿಯನ್,. ಚರ್ಚಿಲ್, ಬೆಲ್ಲಿನಿ ಸಹಿತ ಹಲವರಿಗೆ ಆತಿಥ್ಯ ನೀಡಿದೆ.
ಹಾಂಕಾಂಗ್ ನ ರೋಸ್‌ವುಡ್ ಎರಡನೇ ಸ್ಥಾನ ಪಡೆದುಕೊಂಡಿದೆ. ಬ್ಯಾಂಕಾಕ್ ಫೋನ್ ಸೀಸನ್ಸ್ ಚಾಯೋ ಪ್ರಯಾ ರಿವರ್ ಹೊಟೇಲ್ ಮೂರನೇ ಸ್ಥಾನ, ಹಾಂಕಾಂಗ್‌ನ ಅಪ್ಪರ್‌ಹೌಸ್ ನಾಲ್ಕನೇ ಸ್ಥಾನ ಹಾಗೂ ಟೊಕಿಯೋದ ಅಮನ್ ಹೊಟೇಲ್ ಐದನೇ ಸ್ಥಾನ ಪಡೆದುಕೊಂಡಿವೆ. ಈ ನಾಲ್ಕೂ ಏಷ್ಯಾ ಭಾಗದವು ಎನ್ನುವುದು ವಿಶೇಷ.
ಭಾರತೀಯ ಮೂಲದವರಾದರೂ ಮಾಲ್ಡೀವ್ಸ್‌ನಲ್ಲಿ ಹೊಟೇಲ್ ನಿರ್ಮಿಸಿರುವ ಸೋನು ಶಿವದಾಸನಿ ಅವರ ಎರಡು ರೆಸಾರ್ಟ್‌ಗಳಿಗೆ ಪ್ರಶಸ್ತಿ ಬಂದಿದೆ. ಸೆನೆವಾ ಫುಷಿಗೆ 7, ಸೊನೆವಾ ಜಾನಿ ರೆಸಾರ್ಟ್‌ಗೆ 36ನೇ ಸ್ಥಾನ ಲಭಿಸಿವೆ. ಶ್ರೀಲಂಕಾದ ಅಮನ್‌ಗಲ್ಲಾ ಹೊಟೇಲ್‌ಗೆ 37ನೇ ಸ್ಥಾನ ದೊರೆತಿದೆ. ಪ್ರವಾಸಿ ತಾಣಗಳಾದ ಬಾಲಿ, ದುಬೈ, ಸಿಂಗಾಪೂರ್, ಹಾಂಕಾಂಗ್‌ನ ಹೊಟೇಲ್‌ಗಳೂ ಪ್ರಶಸ್ತಿ ಪಾಲು ಪಡೆದಿವೆ. ಇಟಲಿ ಹಾಗೂ ಲಂಡನ್‌ನ ಹೆಚ್ಚು ಹೊಟೇಲ್‌ಗಳಿಗೆ ಸಿಂಹಪಾಲು ದೊರೆತಿದೆ.
ಪಟ್ಟಿ ಹೀಗಿದೆ
- ಪಸ್ಸಾಲಕುವಾ ಲೇಕ್ ಕೋಮೋ ಇಟಲಿ
- ರೋಸ್ ವುಡ್ ಹಾಂಕಾಂಗ್
- ಫೋರ್ ಸೀಸನ್ಸ್ ಚಾವೋ ಪ್ರಾಯ ರಿವರ್ ಬ್ಯಾಂಕಾಕ್
- ದ ಅಪ್ಪರ್ ಹೌಸ್ ಹಾಂಕಾಂಗ್
- ಅಮನ್ ಟೋಕಿಯೋ
- ಲಾ ಮಮೌನಿಯಾ ಮರಕೇಶ್ ಮೊರಾಕ್ಕೋ
- ಸೊನೆವಾ ಫುಷಿ ಮಾಲ್ಡೀವ್ಸ್
- ಒನ್ ಅಂಡ್ ಓನ್ಲಿ ಮಾಂಡರಿನಾ ಮೆಕ್ಸಿಕೋ
- ಫೋರ್ ಸೀಸನ್ಸ್ ಇಟಲಿ
- ಮಾಂಡ್ರಿನ್ ಓರಿಯಂಟಲ್ ಬ್ಯಾಂಕಾಕ್