Nail Polish Hacks: ಟ್ರಾನ್ಸ್‌ಪರೆಂಟ್ ನೈಲ್ ಪಾಲಿಶ್ ಉಗುರಿಗೊಂದೇ ಅಂದ ನೀಡುವುದಲ್ಲ; ಇಷ್ಟೆಲ್ಲ ಕೆಲಸಕ್ಕೆ ಬರುತ್ತೆ ನೋಡಿ
Nail Polish Hacks : ಉಗುರುಗಳನ್ನು ಸುಂದರವಾಗಿಸಲು ಮಾತ್ರ ನೀವು ನೈಲ್ ಪಾಲಿಶ್ ಬಳಸುತ್ತಿದ್ದರೆ ಈ ಉಪಯೋಗಗಳನ್ನೂ ತಿಳಿದುಕೊಳ್ಳಿ. ಈ ಅದ್ಭುತ ಹ್ಯಾಕ್ ನಿಮಗೆ ಇನ್ನಷ್ಟು ಖುಷಿ ಕೊಡುತ್ತದೆ. ನೀವು ತುಂಬಾ ಕ್ರಿಯೇಟಿವ್ ಆಗಿದ್ರೆ ಇದನ್ನು ಯಾವ ರೀತಿಯೆಲ್ಲ ಬಳಕೆ ಮಾಡಬಹುದು ಎಂದು ತಿಳಿದು ಅದನ್ನು ಉಪಯೋಗಿಸಿ.
ವಿಶೇಷವಾಗಿ ಪಾರದರ್ಶಕ ನೈಲ್ ಪಾಲಿಶ್ ಉಗುರುಗಳು ಸುಂದರವಾಗಿ ಕಾಣಲು ಸಹಾಯ ಮಾಡುತ್ತದೆ. ಅದರ ಹೊರತಾಗಿಯೂ ಬೇರೆ ಬೇರೆ ಕೆಲಸಗಳಿಗೆ ಇದನ್ನು ಬಳಕೆ ಮಾಡಬಹುದು. ಇದು ಅಷ್ಟೊಂದು ಜನರಿಗೆ ತಿಳಿದಿರುವುದಿಲ್ಲ. ಅನೇಕ ಮುರಿದ ಮತ್ತು ಹರಿದ ವಸ್ತುಗಳನ್ನು ಜೋಡಿಸಲು ಇದು ಸಹಾಯ ಮಾಡುತ್ತದೆ. ಹೇಗೆ ಎಂದು ನೀವು ಆಶ್ಚರ್ಯ ಪಡುತ್ತಿದ್ದರೆ? ನಾವು ಕೆಳಗೆ ನೀಡಿದ ಮಾಹಿತಿಯನ್ನು ಓದಿ. ಈ ಹ್ಯಾಕ್ ಗಳನ್ನು ತಿಳಿದ ನಂತರ ಮೊದಲೇ ಏಕೆ ನನಗೆ ಇದು ಗೊತ್ತಾಗಲಿಲ್ಲ ಎಂದು ನೀವು ಅಂದುಕೊಳ್ಳುತ್ತೀರ.
ಲೆಗ್ಗಿಂಗ್ ತೂತಾದರೆ ಅದನ್ನು ಸರಿಪಡಿಸಬಹುದು
ನಿಮ್ಮ ನೆಚ್ಚಿನ ಲೆಗ್ಗಿಂಗ್ ನಲ್ಲಿ ರಂಧ್ರವಿದೆ ಆದರೆ ನಿಮಗೆ ಅದನ್ನು ಬಿಡಲು ಮನಸಿಲ್ಲ. ಆದ್ದರಿಂದ ಸೂಜಿ-ದಾರದಿಂದ ಹೊಲಿಗೆ ಮಾಡಲು ಪ್ರಯತ್ನಿಸಿದ್ದೀರಿ ಆದರೆ ಅದರ ಅಂದಗೆಟ್ಟಿದೆ ಎಂದಾದರೆ ನೀವು ಇನ್ನು ಮುಂದೆ ಹಾಗೆ ಮಾಡಬೇಕಾದ ಅವಶ್ಯಕತೆ ಇಲ್ಲ. ಪಾರದರ್ಶಕ ಅಂದರೆ ಟ್ರಾನ್ಪಟೆಂಟ್ ನೈಲ್ ಪಾಲಿಶ್ ತೆಗೆದುಕೊಳ್ಳಿ. ತೂತಾದಲ್ಲಿ ಎರಡರಿಂದ ಮೂರು ಸಾರಿ ಹಚ್ಚಿ. ಆ ನಂತರ ಅದನ್ನು ಒಣಗಲು ಬಿಡಿ. ಈ ರೀತಿ ಮಾಡುವುದರಿಂದ ರಂದ್ರ ಮುಚ್ಚಿ ಹೋಗುತ್ತದೆ. ನಿಮ್ಮ ಸಮಸ್ಯೆಗೂ ಪರಿಹಾರ ಸಿಗುತ್ತದೆ.
ಕಿವಿಯೋಲೆ ಅಥವಾ ಆಭರಣಕ್ಕೂ ಹೊಸ ರೂಪ
ನೀವು ಒಂದು ಆಭರಣ ಕೊಂಡುಕೊಂಡಿದ್ದು ಅದರ ಗ್ಲೇಸ್ ಹಾಳಾಗಿ ತುಂಬಾ ಹಳೆಯದರಂತೆ ಅದು ಕಾಣುತ್ತಿದೆ ಎಂದಾದರೆ ನೀವು ಅದರ ಮೇಲೆ ಈ ನೈಲ್ ಪಾಲೀಶ್ ಲೇಪನ ಮಾಡಬೇಕು. ಇದನ್ನು ಒಂದೆರಡು ಕೋಟ್ ಹಚ್ಚಿದೆ ತುಂಬಾ ಚೆನ್ನಾಗಿ ಮತ್ತೆ ಶೈನಿಂಗ್ ಬರುತ್ತದೆ. ಇದನ್ನು ನೀವು ಉಪಯೋಗಿಸಬಹುದು. ಬೇಕಿದ್ದರೆ ಒಮ್ಮೆ ಟ್ರೈ ಮಾಡಿ ನೋಡಿ.
ಉಗುರು ಮುರಿದಿದ್ದರೆ ಹಚ್ಚಿ
ನಿಮ್ಮ ಉದ್ದವಾದ ಉಗುರುಗಳು ಮುರಿದಿದ್ದರೆ, ಸಣ್ಣ ತುಂಡು ಟಿಶ್ಯೂ ಪೇಪರ್ ತೆಗೆದುಕೊಂಡು ಅದನ್ನು ಮುರಿದ ಉಗುರಿನ ಮಧ್ಯದಲ್ಲಿ ಇರಿಸಿ ಮತ್ತು ಪಾರದರ್ಶಕ ನೈಲ್ ಪಾಲಿಶ್ ಹಚ್ಚಿ. ಮೇಲ್ಭಾಗದಲ್ಲಿ ಬೇರೆಯಾವುದಾದರೂ ಬಣ್ಣದ ನೈಲ್ ಪಾಲೀಶ್ ಹಚ್ಚಿ. ಇದರಿಂದ ನೀವು ಉಗುರನ್ನು ಕಳೆದುಕೊಂಡಿದ್ದೀರಿ ಅಥವಾ ಅದು ಕಟ್ ಆಗಿದೆ ಎಂದು ಯಾರುಗೂ ತಿಳಿಯುವುದಿಲ್ಲ.
ನೀವೂ ಕೂಡ ಈ ಎಲ್ಲ ಪ್ರಯೋಗಗಳನ್ನು ನಿಮ್ಮ ಮನೆಯಲ್ಲೇ ಮಾಡಿ ನೋಡಬಹುದು. ಇದು ನಿಜಕ್ಕೂ ತುಂಬಾ ಪ್ರಯೋಜನಕಾರಿ. ಇದನ್ನು ಹೊರತು ಪಡಿಸಿ ನೀವೇ ಒಂದು ಬೇರೆ ರೀತಿಯ ಕಿವಿಯೋಲೆ ಅಥವಾ ಕೀ ಬಂಚ್ ರೆಡಿ ಮಾಡಬೇಕು ಎಂದು ಬಯಸಿದರೆ ಇದನ್ನು ಬಳಸಿ ಮಾಡಬಹುದು. ಅದು ಹೇಗೆ ಎಂದರೆ ಒಂದು ಹೂವಿನ ಎಸಳನ್ನು ಅಥವಾ ನಿಮ್ಮಿಷ್ಟದ ಚಿಕ್ಕ ವಸ್ತುವನ್ನು ತೆಗೆದುಕೊಂಡು ಅದರ ಮೇಲೆ ಈ ನೈಲ್ ಪಾಲಿಶ್ ಹಾಕಿ ಸ್ವಲ್ಪ ಸಮಯ ಬಿಡಿ ಆಗ ಅದು ಗಟ್ಟಿಯಾಗುತ್ತದೆ. ಇದರಿಂದ ಕತ್ತಿಗೆ ಹಾಕುವ ಲಾಕೆಟ್ ಕೂಡ ಮಾಡಬಹುದು.
ವಿಭಾಗ