ಡಿಸೆಂಬರ್ ಟ್ರಿಪ್‌ಗೆ ಸೂಕ್ತ ಸ್ಥಳಗಳಿವು, ಇಲ್ಲಿ ಕ್ರಿಸ್‌ಮಸ್ ಕೂಡಾ ಆಚರಿಸಬಹುದು; ಬೇಗ ಪ್ಲ್ಯಾನ್ ಮಾಡಿ
Travel Guide: ರಾಜರು, ಯೋಧರ ನಾಡು ಎಂದೇ ಹೆಸರಾಗಿರುವ ರಾಜಸ್ಥಾನ್‌ನಲ್ಲಿ ವಿಶಾಲವಾದ ಮರುಭೂಮಿಯ ಬೇಟಿ ವಿಭಿನ್ನ ಅನುಭವ ನೀಡುತ್ತದೆ. ಇಲ್ಲಿನ ಥಾರ್ ಮರುಭೂಮಿಯಲ್ಲಿ ನೀವು ಒಂಟೆ ಸವಾರಿ ಮಾಡಬಹುದು. ಅದ್ಭುತ ಸೂರ್ಯಾಸ್ತವನ್ನು ವೀಕ್ಷಿಸಬಹುದು.
Travel Guide: ಡಿಸೆಂಬರ್ ತಿಂಗಳು ಬಂತು. ಚಳಿಗಾಲ ಆರಂಭವಾಗಿದೆ. ಒಂದು ವೇಳೆ ನೀವು ಲಾಂಗ್ ಟ್ರಿಪ್ ಪ್ಲಾನ್ ಮಾಡುತ್ತಿದ್ದಲ್ಲಿ ಈ ಜಾಗಗಳು ಹೇಳಿ ಮಾಡಿಸಿದಂತಿದೆ ನೋಡಿ. ಜೊತೆಗೆ ಕ್ರಿಸ್‌ಮಸ್ ಕೂಡಾ ಹತ್ತಿರ ಬರುತ್ತಿದೆ. ಈ ಸ್ಥಳಗಳಲ್ಲಿ ನೀವು ಹಬ್ಬವನ್ನೂ ಸೆಲಬ್ರೇಟ್ ಮಾಡಬಹುದು.
ಹಿಮಾಚಲ ಪ್ರದೇಶ
ಹಿಮದಿಂದ ಆವೃತವಾದ ಹಿಮಾಚಲ ಪ್ರದೇಶಕ್ಕೆ ನೀವು ಡಿಸೆಂಬರ್ ಟ್ರಿಪ್ ಪ್ಲಾನ್ ಮಾಡಬಹುದು. ಹಿಮದಿಂದ ಕೂಡಿದ ಶಿಖರಗಳು, ಕಾಟೇಜ್‌ಗಳು, ಫೈರ್ ಪ್ಲೇಸ್ ಇರುವ ಸ್ಥಳದಲ್ಲಿ ನೀವು ಕ್ರಿಸ್‌ಮಸ್ ಆಚರಣೆಗೆ ಸೂಕ್ತ ಸ್ಥಳಗಳಾಗಿವೆ. ಡಾಲ್‌ಹೌಸಿಯ ಕಣ್ಮನ ಸೆಳೆಯುವ ರಸ್ತೆಗಳಲ್ಲಿ ಓಡಾಡಿ, ಮನಾಲಿಯ ವಿಹಂಗಮ ನೋಟವನ್ನು ಕಣ್ತುಂಬಿಕೊಂಡು ಶಿಮ್ಲಾದಲ್ಲಿ ಸ್ಕೀಯಿಂಗ್ ಮತ್ತು ಟ್ರೆಕಿಂಗ್‌ನಂತ ಸಾಹಸಮಯ ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳಬಹುದು.
ಕೇರಳ
ದೇವರ ನಾಡು ಕೇರಳ ಈಗ ಪ್ರವಾಸೋದ್ಯಮವನ್ನು ಅಭಿವೃದ್ಧಿಪಡಿಸಲು ಸಾಕಷ್ಟು ಯೋಜನೆಗಳನ್ನು ಕೈಗೊಂಡಿದೆ. ಕೇರಳದ ಹಿನ್ನೀರಿನ ಪ್ರದೇಶ, ಬೋಟ್ ಹೌಸ್, ಆಯುರ್ವೇದ ಚಿಕಿತ್ಸಾ ಕೇಂದ್ರಗಳು, ಕೊವಲಂ ಬೀಚ್, ಅಲೆಪ್ಪಿ, ಕುಮಾರಕೊಂ ಸೌಂದರ್ಯ, ರೆಸಾರ್ಟ್‌ಗಳಲ್ಲಿ ಉಳಿದುಕೋಂಡು ನಿಮ್ಮ ಟ್ರಿಪ್ ಎಂಜಾಯ್ ಮಾಡಬಹುದು.
ಗೋವಾ
ಗೋವಾದಲ್ಲಿ ಕ್ರಿಸ್‌ಮಸ್ ಆಚರಣೆ ಅದ್ಧೂರಿಯಾಗಿರುತ್ತದೆ. ಈ ಸಮಯದಲ್ಲಿ ನೀವು ಗೋವಾ ಟ್ರಿಪ್ ಮಿಸ್ ಮಾಡಲೇಬಾರದು. ಬೀಚ್, ಅಡ್ವೆಂಚ್ ವಾಟರ್ ಸ್ಪೋರ್ಟ್ಸ್, ಕರಾವಳಿ ತೀರದಲ್ಲಿರುವ ಐತಿಹಾಸಿಕ ಕೋಟೆಗಳು ಮತ್ತು ಚರ್ಚ್‌ಗಳನ್ನು ಎಕ್ಸ್‌ಪ್ಲೋರ್ ಮಾಡಬಹುದು. ಇಲ್ಲಿನ ಅಂಜುನಾ ಬೀಚ್, ಬಾಗಾ ಬೀಚ್ ಮತ್ತು ವಾಗಟರ್ ಬೀಚ್ ಪ್ರವಾಸಿಗರ ಅಚ್ಚುಮೆಚ್ಚಿನ ತಾಣವಾಗಿದೆ.
ರಾಜಸ್ಥಾನ್
ರಾಜರು, ಯೋಧರ ನಾಡು ಎಂದೇ ಹೆಸರಾಗಿರುವ ರಾಜಸ್ಥಾನ್‌ನಲ್ಲಿ ವಿಶಾಲವಾದ ಮರುಭೂಮಿಯ ಬೇಟಿ ವಿಭಿನ್ನ ಅನುಭವ ನೀಡುತ್ತದೆ. ಇಲ್ಲಿನ ಥಾರ್ ಮರುಭೂಮಿಯಲ್ಲಿ ನೀವು ಒಂಟೆ ಸವಾರಿ ಮಾಡಬಹುದು. ಅದ್ಭುತ ಸೂರ್ಯಾಸ್ತವನ್ನು ವೀಕ್ಷಿಸಬಹುದು. ಜೈಸಲ್ಮೇರ್, ಜೋಧಪುರ್ ಮತ್ತು ಬಿಕಾನೇರ್ ಡೆಸರ್ಟ್ ಸಫಾರಿ ಮಾಡಿ ಆನಂದಿಸಬಹುದು.
ಮಧ್ಯಪ್ರದೇಶ
ಶ್ರೀಮಂತ ಜೀವವೈವಿಧ್ಯದ ನೆಲೆಯಾಗಿರುವ ಮಧ್ಯಪ್ರದೇಶವು ನಿಮಗೆ ರೋಮಾಂಚಕ ವನ್ಯಜೀವಿಗಳ ವೀಕ್ಷಣೆಯ ಅದ್ಭುತ ಅನುಭವ ನೀಡುತ್ತದೆ. ಕನ್ಹಾ ರಾಷ್ಟ್ರೀಯ ಉದ್ಯಾನವನದ ಮೂಲಕ ಜೀಪ್ ಸಫಾರಿಯನ್ನು ಪ್ರಾರಂಭಿಸಿ ಕನ್ಹಾ ನ್ಯಾಷನಲ್ ಪಾರ್ಕ್, ಬಂದೇಗಢ್ ನ್ಯಾಷನಲ್ ಪಾರ್ಕ್‌ಗೆ ಹೋಗಿಬರಬಹುದು.
ವಾರಣಾಸಿ
ಇದು ಭಾರತದ ಆಧ್ಯಾತ್ಮದ ರಾಜಧಾನಿ ಎಂದೇ ಹೆಸರಾಗಿದೆ. ದೇಶದ ಪ್ರಾಚೀನ ಸಂಪ್ರದಾಯಗಳ ಆಕರ್ಷಣೆ. ಆಕರ್ಷಕ ಗಂಗಾ ಆರತಿ, ದೇವಾಲಯಗಳ ದರ್ಶನ ನಿಮ್ಮನ್ನು ಪುನೀತರನ್ನಾಗಿ ಮಾಡುತ್ತದೆ. ಜೀವನದಲ್ಲಿ ಒಮ್ಮೆಯಾದರೂ ಈ ಸ್ಥಳಕ್ಕೆ ಭೇಟಿ ನೀಡಬೇಕು.
ಉತ್ತರಾಖಂಡ್
ಹಿಮದಿಂದ ಆವೃತವಾದ ಪರ್ವತಗಳು, ನದಿಗಳ ನಾಡು, ಸಾಹಸ ಹುಡುಕುವವರಿಗೆ ಸ್ವರ್ಗವನ್ನು ನೀಡುವ ಉತ್ತರಾಖಂಡ್‌ಗೆ ಭೇಟಿ ಕೊಡಿ. ಹಿಮಾಲಯದ ತಪ್ಪಲಿನಲ್ಲಿ ಚಾರಣವನ್ನು ಪ್ರಾರಂಭಿಸಿ, ನಂದಾದೇವಿಯ ಶಿಖರಗಳನ್ನು ಕಣ್ತುಂಬಿಕೊಂಡು, ಋಷಿಕೇಶದಲ್ಲಿ ರಾಫ್ಟಿಂಗ್ ಸಾಹಸವನ್ನು ಕೈಗೊಳ್ಳಬಹುದು.
ಅರುಣಾಚಲ ಪ್ರದೇಶ
ಭಾರತದ ಈಶಾನ್ಯದಲ್ಲಿರುವ ಅರುಣಾಚಲ ಪ್ರದೇಶವು ಅದ್ಭತ ನೈಸರ್ಗಿಕ ಸೌಂದರ್ಯವನ್ನು ಹೊಂದಿದೆ. ಹಸಿರು ಕಾಡು, ತವಾಂಗ್‌ನ ಜಲಪಾತ, ಕಾಜಿರಂಗ ರಾಷ್ಟ್ರೀಯ ಉದ್ಯಾನವನ ಇಲ್ಲಿನ ಆಕರ್ಷಕ ಸ್ಥಳಗಳು.
ಮೇಘಾಲಯ
ಪೂರ್ವದ ಸ್ಕಾಟ್ಲೆಂಡ್ ಎಂದೇ ಹೆಸರಾಗಿರುವ ಮೇಘಾಲಯವು ಪ್ರವಾಸಿಗರಿಗೆ ಸಂಸ್ಕೃತಿ ಮತ್ತು ಸಂಪ್ರದಾಯದ ವಿಶಿಷ್ಟ ಮಿಶ್ರಣವನ್ನು ನೀಡುತ್ತದೆ. ಚಿರಾಪುಂಜಿ ನೊಂಗ್ರಿಯಾಟ್ ನೀವು ಭೇಟಿ ನೀಡಬಹುದಾದ ಸ್ಥಳಗಳು. ಏಷ್ಯಾದಲ್ಲೇ ಸ್ವಚ್ಛ ಗ್ರಾಮ ಎನಿಸಿಕೊಂಡ ಮಾವ್ಲಿನ್ನಾಂಗ್‌ಗೆ ಕೂಡಾ ಹೋಗಿಬರಬಹುದು.
ತಮಿಳುನಾಡು
ಪ್ರಾಚೀನ ದೇವಾಲಯಗಳು, ದ್ರಾವಿಡ ವಾಸ್ತುಶಿಲ್ಪದ ಸ್ಥಳ ತಮಿಳುನಾಡಿನಲ್ಲಿ ನೀವು ಅನೇಕ ದೇವಾಲಯಗಳನ್ನು ನೋಡಬಹುದು. ತಮಿಳುನಾಡು ಆಧ್ಯಾತ್ಮಿಕ ಪ್ರಯಾಣಕ್ಕೆ ಸಾಕ್ಷಿಯಾಗಿದೆ. ತಂಜಾವೂರಿನ ಭವ್ಯವಾದ ಬೃಹದೀಶ್ವರ ದೇವಸ್ಥಾನ, ಮಧುರೈ ಮೀನಾಕ್ಷಿ, ತಿರುಚಿರಾಪಳ್ಳಿಯಲ್ಲಿರುವ ಪ್ರಶಾಂತ ರಮಣಾಶ್ರಮ ಆಶ್ರಮಕ್ಕೆ ಭೇಟಿ ನೀಡಲು ಮರೆಯದಿರಿ.
ಇವಿಷ್ಟೇ ಅಲ್ಲದೆ ಭಾರತದಲ್ಲಿ ಇನ್ನೂ ಅನೇಕ ಸ್ಥಳಗಳಿವೆ. ನಿಮ್ಮ ಬಜೆಟ್‌ಗೆ ತಕ್ಕಂತೆ ಟ್ರಿಪ್ ಪ್ಲಾನ್ ಮಾಡಿ.