ನಿಸರ್ಗದ ನಡುವೆ ಎಂದಾದರೂ ಕ್ಯಾಂಪಿಂಗ್‌ ಮಾಡಿದ್ದೀರಾ? ಚಿಕ್ಕಮಗಳೂರು, ಸಕಲೇಶಪುರ ಬೆಸ್ಟ್‌ ಆಯ್ಕೆ; ವಿವರ ಇಲ್ಲಿದೆ
ಕನ್ನಡ ಸುದ್ದಿ  /  ಜೀವನಶೈಲಿ  /  ನಿಸರ್ಗದ ನಡುವೆ ಎಂದಾದರೂ ಕ್ಯಾಂಪಿಂಗ್‌ ಮಾಡಿದ್ದೀರಾ? ಚಿಕ್ಕಮಗಳೂರು, ಸಕಲೇಶಪುರ ಬೆಸ್ಟ್‌ ಆಯ್ಕೆ; ವಿವರ ಇಲ್ಲಿದೆ

ನಿಸರ್ಗದ ನಡುವೆ ಎಂದಾದರೂ ಕ್ಯಾಂಪಿಂಗ್‌ ಮಾಡಿದ್ದೀರಾ? ಚಿಕ್ಕಮಗಳೂರು, ಸಕಲೇಶಪುರ ಬೆಸ್ಟ್‌ ಆಯ್ಕೆ; ವಿವರ ಇಲ್ಲಿದೆ

Travel Guide: ಹೊರಗೆ ಟ್ರಿಪ್‌ ಹೋದಾಗ ರೆಸಾರ್ಟ್‌, ಹೋಟೆಲ್‌ನಲ್ಲಿ ಉಳಿದುಕೊಳ್ಳುವುದು ಸಹಜ. ಆದರೆ ಕ್ಯಾಂಪಿಂಗ್‌ ಅನುಭವವೇ ಬೇರೆ. ನೀವೂ ಕ್ಯಾಂಪಿಂಗ್‌ ಎಂಜಾಯ್‌ ಮಾಡಬೇಕೆಂದರೆ ಚಿಕ್ಕಮಗಳೂರು, ಸಕಲೇಶಪುರದ ಅನೇಕ ಕಡೆ ಇಂಥಹ ಸಾಕಷ್ಟು ಕ್ಯಾಂಪ್‌ಸೈಟ್‌ಗಳಿವೆ.

ಚಿಕ್ಕಮಗಳೂರು, ಸಕಲೇಶಪುರದಲ್ಲಿ ಕ್ಯಾಂಪಿಂಗ್‌ ಮಾಡಲು ಅನೇಕ ಕ್ಯಾಂಪ್‌ಸೈಟ್‌ಗಳಿದ್ದು ಸೆಪ್ಟೆಂಬರ್‌ನಿಂದ ಮಾರ್ಚ್‌ ಅವಧಿಯಲ್ಲಿ ಹೋಗಿಬರಬಹುದು.
ಚಿಕ್ಕಮಗಳೂರು, ಸಕಲೇಶಪುರದಲ್ಲಿ ಕ್ಯಾಂಪಿಂಗ್‌ ಮಾಡಲು ಅನೇಕ ಕ್ಯಾಂಪ್‌ಸೈಟ್‌ಗಳಿದ್ದು ಸೆಪ್ಟೆಂಬರ್‌ನಿಂದ ಮಾರ್ಚ್‌ ಅವಧಿಯಲ್ಲಿ ಹೋಗಿಬರಬಹುದು.

ಪ್ರೀತಿಪಾತ್ರರೊಂದಿಗೆ ಪ್ರವಾಸ ಹೋಗಿ ಬರೋದು ಅಂದ್ರೆ ಯಾರು ತಾನೇ ಬೇಡ ಅಂತಾರೆ, ಅದರಲ್ಲೂ ಇಷ್ಟಪಟ್ಟವರೊಂದಿಗೆ ಇಷ್ಟಪಟ್ಟ ಸ್ಥಳಗಳಿಗೆ ಹೋದರೆ ಆ ಟ್ರಿಪ್‌ ಖುಷಿಯನ್ನು ವ್ಯಕ್ತಪಡಿಸೋಕೆ ಸಾಧ್ಯವೇ ಇಲ್ಲ. ಸಾಮಾನ್ಯವಾಗಿ ಹೊರಗೆ ಟ್ರಿಪ್‌ ಹೋದಾಗ ಹೋಟೆಲ್‌, ರೆಸಾರ್ಟ್‌ಗಳನ್ನು ಬುಕ್‌ ಮಾಡುತ್ತೇವೆ. ಆದರೆ ನೀವು ಎಂದಾದರೂ ಕ್ಯಾಂಪ್‌ನಲ್ಲಿ ಉಳಿದುಕೊಂಡಿದ್ದೀರಾ? ಪ್ರಕೃತಿ ನಡುವೆ ನೀವು ಕ್ಯಾಂಪಿಂಗ್‌ ಮಾಡಿದ್ರೆ ನಿಜಕ್ಕೂ ಅದೊಂಥರಾ ಥ್ರಿಲ್‌ ಬಿಡಿ.

ಕ್ಯಾಂಪ್‌ ಹಾಕೋಕೆ‌ ಅದನ್ನು ಖರೀದಿಸಬೇಕು, ಹೋದ ಕಡೆಯೆಲ್ಲಾ ತೆಗೆದುಕೊಂಡು ಹೋಗಬೇಕು ಅದೆಲ್ಲಾ ಕಷ್ಟ ಎನ್ನಬೇಡಿ, ಅದೆಲ್ಲಾ ನಿಮಗೆ ಬಾಡಿಗೆಗೆ ಸಿಗುತ್ತೆ, ಒಂದು ದಿನಕ್ಕೆ ಇಂತಿಷ್ಟು ಹಣ ಪಾವತಿಸಿ ನೀವು ಕ್ಯಾಂಪ್‌ನಲ್ಲಿ ಉಳಿದುಕೊಳ್ಳಬಹುದು. ಆ ರೀತಿ ಸ್ಥಳ ಎಲ್ಲಿದೆ ಅಂತೀರಾ? ಇನ್ನೆಲ್ಲೋ ಅಲ್ಲ ಕರ್ನಾಟಕದ ಬಹುತೇಕ ಪ್ರವಾಸಿ ತಾಣಗಳಲ್ಲಿ ನೀವು ಈ ಕ್ಯಾಂಪಿಂಗ್‌ ಅನುಭವ ಮಾಡಬಹುದು. ಅದರಲ್ಲೂ ಚಿಕ್ಕಮಗಳೂರು, ಸಕಲೇಶಪುರಗಳಲ್ಲಿ ಇಂತಹ ಸಾಕಷ್ಟು ಕ್ಯಾಂಪಿಂಗ್‌ ಜಾಗಗಳಿವೆ.

ಚಿಕ್ಕಮಗಳೂರು, ಸಕಲೇಶಪುರದಲ್ಲಿ ಯಾವ ಸಮಯದಲ್ಲಿ ಕ್ಯಾಂಪಿಂಗ್‌ ಮಾಡುವುದು ಒಳ್ಳೆಯದು?

ಚಿಕ್ಕಮಗಳೂರು, ಸಕಲೇಶಪುರದಲ್ಲಿ ಕ್ಯಾಂಪಿಂಗ್ ಮಾಡಲು ಸೆಪ್ಟೆಂಬರ್‌ನಿಂದ ಮಾರ್ಚ್ ಉತ್ತಮ ಸಮಯ. ಈ ಸಮಯದಲ್ಲಿ ಕ್ಯಾಂಪ್‌ ಸೈಟ್‌ಗಳಲ್ಲಿ ಆಯೋಜಿಸಲಾಗುವ ಪ್ರಕೃತಿ ನಡಿಗೆ, ಟ್ರೆಕ್ಕಿಂಗ್‌, ಬೊನಿಫೈರ್, ಕೊರಾಕಲ್ ರೈಡ್‌ಗಳು, ಪಕ್ಷಿ‌ ವೀಕ್ಷಣೆ, ಒಳಾಂಗಣ ಮತ್ತು ಹೊರಾಂಗಣ ಆಟಗಳನ್ನು ನೀವು ಎಂಜಾಯ್‌ ಮಾಡಬೇಕೆಂದರೆ ಈ ಅವಧಿ ಉತ್ತಮ ಆಯ್ಕೆ. ನೀವು ಮಾನ್ಸೂನ್ ಸಮಯದಲ್ಲಿ ಕೂಡಾ ಚಿಕ್ಕಮಗಳೂರಿನಲ್ಲಿ ಕ್ಯಾಂಪಿಂಗ್ ಮಾಡಬಹುದು. ಆದರೆ ಆ ಸಮಯದಲ್ಲಿ ವಾಟರ್‌ಪ್ರೂಫ್‌ ಬ್ಯಾಕ್‌ಪ್ಯಾಕ್‌, ರೈನ್‌ ಕೋಟ್‌, ಛತ್ರಿ ಸೇರಿದಂತೆ ಇನ್ನಿತರ ಅಗತ್ಯ ವಸ್ತುಗಳನ್ನು ಕೊಂಡೊಯ್ಯುವುದನ್ನು ಮರೆಯಬೇಡಿ.

ಚಿಕ್ಕಮಗಳೂರು ಕ್ಯಾಂಪಿಂಗ್‌
ಚಿಕ್ಕಮಗಳೂರು ಕ್ಯಾಂಪಿಂಗ್‌

ಮಹಿಳೆಯರ ಸೋಲೋ ಕ್ಯಾಂಪಿಂಗ್‌

ಬಹಳಷ್ಟು ಮಹಿಳೆಯರು ಕೂಡಾ ಸೋಲೋ ಟ್ರಿಪ್‌ ಮಾಡುತ್ತಾರೆ. ಒಂದು ವೇಳೆ ನೀವು ಸೋಲೋ ಕ್ಯಾಂಪಿಂಗ್‌ ಮಾಡಬಯಸಿದರೆ ಸುರಕ್ಷತೆಗಾಗಿ ನಾಲ್ವರು ಮಹಿಳೆಯರ ಗುಂಪನ್ನು ಕ್ಯಾಂಪಿಂಗ್‌ ಸ್ಥಳದಲ್ಲಿ ಆಯೋಜಿಸಲಾಗುತ್ತದೆ. ಸೋಲೋ ಪ್ರಯಾಣಿಕರು ಈ ಗುಂಪಿಗೆ ಸೇರಲು ಬಯಸಿದರೆ ಖಂಡಿತ ನೀವು ಕ್ಯಾಂಪಿಂಗ್‌ ಎಂಜಾಯ್‌ ಮಾಡಬಹುದು. ತರಬೇತಿ ಪಡೆದ ವೃತ್ತಿಪರರು ಕ್ಯಾಂಪಿಂಗ್‌ ನಡೆಸಲಿದ್ದು ಪ್ರವಾಸಿಗರಿಗೆ ಬೇಕಾದ ಎಲ್ಲಾ ವ್ಯವಸ್ಥೆ ಮಾಡುತ್ತಾರೆ.

ಅದರಲ್ಲೂ ಚಿಕ್ಕಮಗಳೂರು, ಸಕಲೇಶಪುರದಂಥ ಹಚ್ಚ ಹಸಿರಿನ ನಿಸರ್ಗದ ನಡುವೆ ಕ್ಯಾಂಪಿಂಗ್‌ ಮಾಡುವುದರ ಜೊತೆಗೆ ನಿಮ್ಮಿಷ್ಟದ ತಿಂಡಿ, ನಿಮ್ಮಿಷ್ಟದ ಆಟಗಳನ್ನು ಆಡುವ ಮೂಲಕ ಖುಷಿಯಾಗಿ ಕಾಲ ಕಳೆಯಬಹುದು. ಚಿಕ್ಕಮಗಳೂರಿನಲ್ಲಿ ಕ್ಯಾಂಪ್‌ ಆಲ್ಫಾ, ಭದ್ರಾ ನೇಚರ್‌ ಕ್ಯಾಂಪ್‌, ಭಗವತಿ ನೇಚರ್ ಕ್ಯಾಂಪ್, ಜಪಾವತಿ ರಿವರ್‌ ಕ್ಯಾಂಪ್, ರೇಂಜರ್ ಕ್ಯಾಂಪ್‌ನಂಥ ಕ್ಯಾಂಪ್‌ಸೈಟ್‌ಗಳನ್ನು ನೀವು ಆಯ್ಕೆ ಮಾಡಿಕೊಳ್ಳಬಹುದು. ಒಂದು ದಿನಕ್ಕೆ 1500 ರೂನಿಂದ ಬಾಡಿಗೆ ಆರಂಭವಾಗುತ್ತದೆ. ಕ್ಯಾಂಪ್‌ಸೈಟ್‌ ಸ್ಥಳ, ನಿಮಗೆ ಒದಗಿಸಿಕೊಡಲಾಗುವ ಅನುಕೂಲಗಳ ಆಧಾರದ ಮೇಲೆ ನೀವು ಹಣ ಪಾವತಿಸಬೇಕಾಗುತ್ತದೆ. ಮೊದಲೇ ಬುಕ್‌ ಮಾಡಿ ಹೋಗುವುದು ಉತ್ತಮ.

ಮತ್ತೇಕೆ ತಡ? ಕ್ಯಾಂಪಿಂಗ್‌ ಹೊರಡೋಕೆ ರೆಡಿ ಆಗಿ.

ಜಲಪಾತ, ಹಸಿರು ಬೆಟ್ಟಗಳ ನಡುವೆ ಕ್ಯಾಂಪಿಂಗ್‌
ಜಲಪಾತ, ಹಸಿರು ಬೆಟ್ಟಗಳ ನಡುವೆ ಕ್ಯಾಂಪಿಂಗ್‌ (PC: MDoNER India)
Whats_app_banner