ಪ್ರವಾಸಕ್ಕೆ ಹೋದಾಗ ತಪ್ಪದೇ ಈ 8 ಅಗತ್ಯ ವಸ್ತುಗಳು ನಿಮ್ಮೊಂದಿಗೆ ಇರಲಿ -Travel Essential Items
ಕನ್ನಡ ಸುದ್ದಿ  /  ಜೀವನಶೈಲಿ  /  ಪ್ರವಾಸಕ್ಕೆ ಹೋದಾಗ ತಪ್ಪದೇ ಈ 8 ಅಗತ್ಯ ವಸ್ತುಗಳು ನಿಮ್ಮೊಂದಿಗೆ ಇರಲಿ -Travel Essential Items

ಪ್ರವಾಸಕ್ಕೆ ಹೋದಾಗ ತಪ್ಪದೇ ಈ 8 ಅಗತ್ಯ ವಸ್ತುಗಳು ನಿಮ್ಮೊಂದಿಗೆ ಇರಲಿ -Travel Essential Items

ಪ್ರವಾಸಕ್ಕೆ ಹೋಗುವಾಗ ಏನೆಲ್ಲಾ ವಸ್ತುಗಳು ನಮ್ಮೊಂದಿಗೆ ಇರಬೇಕು, ಪ್ರವಾಸದ ಪ್ಲಾನ್ ಹೇಗಿರಬೇಕು, ಯಾವೆಲ್ಲಾ ಅಗತ್ಯ ವಸ್ತುಗಳನ್ನು ತಪ್ಪದೆ ತೆಗೆದುಕೊಂಡು ಹೋಗಬೇಕು ಎಂಬುದರ ಮಾಹಿತಿ ಇಲ್ಲಿದೆ.

ಪ್ರವಾಸಕ್ಕೆ ಹೋದಾಗ ತಪ್ಪದೇ ಈ 8 ವಸ್ತುಗಳು ನಿಮ್ಮೊಂದಿಗೆ ಇರಲಿ
ಪ್ರವಾಸಕ್ಕೆ ಹೋದಾಗ ತಪ್ಪದೇ ಈ 8 ವಸ್ತುಗಳು ನಿಮ್ಮೊಂದಿಗೆ ಇರಲಿ

ನಿಮ್ಮ ಪ್ರವಾಸದಲ್ಲಿ ಯಾವುದೇ ರೀತಿಯ ಸಮಸ್ಯೆಗಳು ಆಗದಂತೆ ಅಗತ್ಯವಾದ ವಸ್ತುಗಳನ್ನು (Travel Essential Items) ಜೊತೆಗೆ ತೆಗೆದುಕೊಂಡು ಹೋಗಬೇಕಾದ ಜವಾಬ್ದಾರಿ ನಿಮ್ಮದು. ಲಗೇಜ್ ಪ್ಯಾಕ್ ಮಾಡುವಾಗ ಒಂದಷ್ಟು ಹಗುರವಾಗಿರುವ ಜೊತೆಗೆ ಅಗತ್ಯ ಇರುವ ಎಲ್ಲಾ ವಸ್ತುಗಳು ಇವೆಯೇ ಎಂಬುದನ್ನು ಖಚಿತಪಡಿಸಿಕೊಳ್ಳಬೇಕು. ಲಗೇಜ್ ಸಿದ್ದಮಾಡುವಾಗ ನೀವು ನೆನೆಪಿನಲ್ಲಿ ಇಟ್ಟುಕೊಳ್ಳಬೇಕಾದ 8 ವಸ್ತುಗಳ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ.

  1. ಹಗುರುವಾದ ಕ್ಯಾರಿ ಆನ್ ಲಗೇಜ್ ಬ್ಯಾಗ್

ಮೊದಲಿಗೆ ನಿಮ್ಮ ಭುಜದ ಮೇಲೆ ಬಾರವಾದ ಬ್ಯಾಗ್ ಬೇಸರಕ್ಕೆ ಕಾರಣವಾಗಿ, ಸಾಕಷ್ಟು ಕಿರಿಕಿರಿ ಉಂಟುಮಾಡಬಹುದು. ಹೀಗಾಗಿ ಹಗುರುವಾಗಿರುವ ಕ್ಯಾರಿ ಆನ್ ಸೂಟ್ ಕೇಸ್‌ಅನ್ನು ತೆಗೆದುಕೊಂಡು ಹೋಗುವುದು ಉತ್ತಮ ಆಯ್ಕೆಯಾಗಿದೆ.

2. ನೈಟ್ ಪ್ಯಾಂಟ್ ಅಥವಾ ಆರಾಮದಾಯಕ ಜಾಗರ್‌ಗಳು

ರಸ್ತೆ, ರೈಲು ಅಥವಾ ವಿಮಾನದ ದೀರ್ಘ ಪ್ರಯಾಣದ ಪ್ರವಾಸದಲ್ಲಿ ಆರಾಮಯಾದಯಕ ಬಟ್ಟೆಗಳನ್ನು ಧರಿಸುವುದು ನಿಮ್ಮ ಪ್ರಯಾಣದ ಖುಷಿಯನ್ನು ಮತ್ತಷ್ಟು ಹೆಚ್ಚಿಸುತ್ತದೆ. ಯೋಗ ಪ್ಯಾಂಟ್, ಜಾಗರ್‌ಗಳು, ಸಡಿಲವಾದ ಬಟ್ಟೆಗಳು ನಿಮ್ಮ ಲಗೇಜ್‌ನ ಭಾಗವಾಗಿದ್ದರೆ ಒಳ್ಳೆಯದು.

3. ಸ್ವೆಟರ್ ಅಥವಾ ಸ್ವೆಟರ್ ಮಾದರಿಯ ಶರ್ಟ್

ಹೆಚ್ಚಿನ ತಾಪಮಾನ ಇರುವ ತಾಣಗಳಿಗೆ ಅಥವಾ ಬೇಸಿಗೆಯಲ್ಲಿ ಪ್ರಯಾಣಿಸುತ್ತಿದ್ದರೂ ಸಹ ಸ್ವೆಟರ್ ಅಥವಾ ಅಲ್ಲಿನ ತಾವಾವರಣಕ್ಕೆ ಹೊಂದಿಕೊಳ್ಳುವಂತಹ ಬಟ್ಟೆಗಳನ್ನು ತೆಗೆದುಕೊಂಡು ಹೋಗುವುದು ಉತ್ತಮ. ಎಸಿ ಬಸ್, ಎಸಿ ರೈಲು ಹಾಗೂ ವಿಮಾನದಲ್ಲಿ ಪ್ರಯಾಣಿಸುವಾಗ ನಿಮಗೆ ಸ್ವೆಟರ್‌ನ ಅಗತ್ಯವಾಗಬಹುದು.

4. ಚಾರ್ಜರ್, ಅಡಾಪ್ಟ್, ಪೋರ್ಟಬಲ್ ಚಾರ್ಜರ್‌

ಪ್ರವಾಸದ ವೇಳೆ ನಿಮ್ಮ ಮೊಬೈಲ್ ಅಥವಾ ಟ್ಯಾಬ್‌ಗೆ ಬೇಕಾದ ಅಡಾಟ್ಪರ್‌, ಚಾರ್ಜರ್ ಹಾಗೂ ಪೋರ್ಟಬಲ್ ಚಾರ್ಜರ್‌ಗಳು ನಿಮ್ಮೊಂದಿಗೆ ಇರಬೇಕು. ಪೋರ್ಟಬಲ್ ಚಾರ್ಜರ್ ತೆಗೆದುಕೊಂಡು ಹೋದರೆ ಇನ್ನೂ ಒಳ್ಳೆಯದು. ಯಾಕೆಂದರೆ ಎಲ್ಲೆಡೆ ಚಾರ್ಜಿಂಗ್ ಪಾಯಿಂಟ್‌ಗಳು ಇರುವುದಿಲ್ಲ. ಇದ್ದರೂ ಹುಡುಕಿಕೊಂಡು ಹೋಗಬೇಕಾದ ಪರಿಸ್ಥಿತಿ ನಿರ್ಮಾಣವಾಗುತ್ತದೆ.

5. ಔಷಧಿ ಮತ್ತು ಪ್ರಿಸ್‌ಕ್ರಿಪ್ಷನ್‌ಗಳು

ನೀವು ನಿತ್ಯ ಔಷಧಿ ತೆಗೆದುಕೊಳ್ಳುವವರಾಗಿದ್ದರೆ ತಪ್ಪದೇ ಔಷಧಿ ನಿಮ್ಮ ಲಗೇಜ್‌ನಲ್ಲಿರಬೇಕು. ಪ್ರಿಸ್‌ಕ್ರಿಪ್ಷನ್‌ಗಳ ಜೆರಾಕ್ಸ್ ಕಾಪಿ ಇರಲಿ. ಇದರ ಜೊತೆಗೆ ಹೆಚ್ಚುವರಿಯಾಗಿ ಪ್ಯಾರಸಿಟಮಾಲ್ ಅತಿಸಾರದ ಔಷಧಿಗಳು, ನೋವು ನಿವಾರಕಗಳು, ಅಲರ್ಜಿ ಔಷಧಿಯಂತಹ ಸಾಮಾನ್ಯ ಔಷಧಿಗಳು ನಿಮ್ಮೊಂದಿಗೆ ಇರಲಿ. ಬ್ಯಾಂಡೇಜ್, ಳ್ಳೆ, ಕೀಟ ನಿವಾರಕಗಳು ಜೊತೆಗಿರಲಿ.

6. ಸ್ಯಾನಿಟೈಸರ್ ಮತ್ತು ಕೈ ಸ್ವಚ್ಛಗೊಳಿಸುವ ಬಟ್ಟೆ ಇರಲಿ

ಸಾಂಕ್ರಾಮಿಕ ರೋಗಗಳನ್ನು ಗಮನದಲ್ಲಿಟ್ಟುಕೊಂಡು ಹ್ಯಾಂಡ್ ಸ್ಯಾನಿಟೈಜರ್ ಅಥವಾ ಸ್ಯಾನಿಟೈಸಿಂಗ್ ವೈಪ್‌ಗಳನ್ನು ತೆಗೆದುಕೊಂಡು ಹೋಗವುದನ್ನು ಮೆರೆಯಬೇಡಿ. ಆರೋಗ್ಯದ ದೃಷ್ಟಿಯಿಂದ ಇವು ಕೂಡ ನಿಮ್ಮ ಪ್ರವಾಸದ ಅಗತ್ಯಗಳಾಗಿವೆ. ನೀರು ಇಲ್ಲದ ಸಂದರ್ಭದಲ್ಲಿ ನೀರನ್ನು ಹುಡುವ ಬದಲು ಸ್ಯಾನಿಟೈಸ್ ಅಥವಾ ಕ್ಲೀನಿಂಗ್ ವೈಪ್‌ಗಳನ್ನು ಬಳಸುವುದು ಉತ್ತಮ ಆಯ್ಕೆಯಾಗಿರುತ್ತದೆ.

7. ಟ್ರಾವೆಲ್ ಬ್ಯಾಗ್ ಅಥವಾ ಜಿಪ್ಪರ್ ಬ್ಯಾಗ್

ಪ್ರವಾಸದ ವೇಳೆ ಗಾಳಿಯಾದ ಜನನಿರೋಧಕ ಚೀಲಗಳು ತುಂಬಾ ಅನುಕೂಲಕರವಾಗಿರುತ್ತದೆ. ನಿಮ್ಮ ಬಳಿ ಇರುವ ವಿವಿಧ ದ್ರವಗಳು ಮತ್ತು ಕ್ರೀಮ್‌ಗಳನ್ನು ಸಂಗ್ರಹಿಸಿಕೊಳ್ಳಲು ಇವುಗಳನ್ನು ಬಳಸಬಹುದು. ಬಟ್ಟೆಯಿಂದ ಹಿಡಿದು ಬಿಡಿಭಾಗಗಳವರೆಗೆ ಬಳಸಿದ ಬಟ್ಟೆಗಳವರೆಗೆ ಈ ಟ್ರಾವೆಲ್ ಸ್ಪೇಸ್ ಬ್ಯಾಗ್‌ನಲ್ಲಿ ಇಟ್ಟುಕೊಳ್ಳಬಹುದು.

8. ಪ್ರಥಮ ಚಿಕಿತ್ಸಾ ಕಿಟ್

ಅನಿರೀಕ್ಷಿತ ಅಪಘಾತಗಳಂತಹ ಸಂದರ್ಭದಲ್ಲಿ ಪ್ರಥಮ ಚಿಕಿತ್ಸಾ ಕಿಟ್ ಪ್ರಯೋಜನಕ್ಕೆ ಬರುತ್ತದೆ. ಹೀಗಾಗಿ ಪ್ರವಾಸದ ಅಗತ್ಯ ವಸ್ತುಗಳ ಪಟ್ಟಿಯಲ್ಲಿ ಈ ಕಿಟ್ ಇದ್ದರೆ ಒಳ್ಳೆಯದು. ಇದನ್ನು ಅಂಗಡಿಯಿಂದ ಖರೀದಿಸಬಹುದು. ಇಲ್ಲವೇ ನೀವೇ ಚಿಕ್ಕದಾಗಿ ತಯಾರಿಸಿಕೊಳ್ಳಬಹುದು.

(ಕನ್ನಡದಲ್ಲಿ ಕ್ರಿಕೆಟ್, ಎಚ್‌ಟಿ ಕನ್ನಡ ಬೆಸ್ಟ್‌. ಐಪಿಎಲ್, ಟಿ20 ವರ್ಲ್ಡ್‌ಕಪ್ ಸೇರಿದಂತೆ ಕ್ರಿಕೆಟ್ ಲೋಕದ ಸಮಗ್ರ ಮಾಹಿತಿ, ತಾಜಾ ವಿದ್ಯಮಾನ, ರನ್-ವಿಕೆಟ್, ಪ್ಲೇಆಫ್, ಟೀಮ್ ಸ್ಟಾಟ್ ವಿಶ್ಲೇಷಣೆಗಳಿಗಾಗಿ kannada.hindustantimes.com/cricket ಕ್ಕೆ ಭೇಟಿ ನೀಡಿ.)

Whats_app_banner