Adventure Places: ಭಾರತದ 5 ಅತ್ಯುತ್ತಮ ಅಡ್ವೆಂಚರ್ ತಾಣಗಳಿವು; ಸಾಹಸ ಪ್ರಿಯರು ನೀವಾಗಿದ್ರೆ ಒಮ್ಮೆಯಾದ್ರೂ ಇಲ್ಲಿಗೆ ಭೇಟಿ ನೀಡಿ
Adventure Places in India: ಸಾಹಸವನ್ನು ಇಷ್ಟಪಡುವವರು ನೀವಾದ್ರೆ ಭಾರತದ ಈ 5 ಬೆಸ್ಟ್ ಅಡ್ವೆಂಚರ್ ತಾಣಗಳ ಬಗ್ಗೆ ತಿಳಿದುಕೊಳ್ಳಲೇಬೇಕು, ಮಾತ್ರವಲ್ಲ ಜೀವನದಲ್ಲಿ ಒಮ್ಮೆಯಾದ್ರೂ ಇಲ್ಲಿಗೆ ಭೇಟಿ ನೀಡಬೇಕು.

ಪ್ರಯಾಣ ಮಾಡುವುದು ಅಥವಾ ಪ್ರವಾಸ ಹಲವರಿಗೆ ಇಷ್ಟ. ಆದರೆ ಕೆಲವರು ಅಡ್ವೆಂಚರ್ ಪ್ರಿಯರಿರುತ್ತಾರೆ. ಅವರಿಗೆ ಸಾಹಸ ಚಟುವಟಿಕೆಗಳಲ್ಲಿ ತೊಡಗುವುದು ಎಂದರೆ ಬಹಳ ಇಷ್ಟವಿರುತ್ತದೆ. ಅಂತಹ ಸ್ಥಳಗಳಿಗೆ ಮಾತ್ರ ಹೋಗಲು ಅವರು ಇಷ್ಟಪಡುತ್ತಾರೆ. ಭಾರತವು ಹಲವು ಪ್ರವಾಸಿ ತಾಣಗಳನ್ನು ಹೊಂದಿರುವ ನಾಡು. ಇಲ್ಲಿ ಸುಂದರ ಪ್ರಾಕೃತಿಕ ತಾಣಗಳಿಂದ ಹಿಡಿದು ಸಾಹಸಿಪ್ರಿಯರಿಗೆ ಇಷ್ಟವಾಗುವ ಅಡ್ವೆಂಚರಸ್ ತಾಣಗಳು ಸಾಕಷ್ಟಿವೆ.
ನೀವು ಕೂಡ ಸಾಹಸಪ್ರಿಯರಾಗಿದ್ದು, ಈ ವರ್ಷ ಬೇಸಿಗೆಯಲ್ಲಿ ಇಂತಹ ಸ್ಥಳಗಳಿಗೆ ಪ್ರಯಾಣ ನೀಡಬೇಕು ಎಂದು ಬಯಸುತ್ತಿದ್ದರೆ ಭಾರತದ ಬೆಸ್ಟ್ ಸಾಹಸೀತಾಣ ಬಗ್ಗೆ ನಾವು ನಿಮಗೆ ಹೇಳುತ್ತೇವೆ. ಈ ಸ್ಥಳಗಳಲ್ಲಿ ನೀವು ಒಂಟಿಯಾಗಿ, ಸ್ನೇಹಿತರ ಜೊತೆ ಅಥವಾ ಕುಟುಂಬದವರ ಜೊತೆ ತೆರಳಿ ಎಂಜಾಯ್ ಮಾಡಬಹುದು. ಸಾಹಸ ಚಟುವಟಿಕೆಗಳಿಗೆ ಹೆಸರುವಾಸಿಯಾದ ಭಾರತದ 5 ಪ್ರಸಿದ್ಧ ಸ್ಥಳಗಳ ಬಗ್ಗೆ ಇಲ್ಲಿದೆ ಮಾಹಿತಿ ನೀಡಲಾಗಿದೆ.
1. ಋಷಿಕೇಶ
ಹಿಮಾಲಯ ಪರ್ವತಗಳ ನಡುವೆ ಇರುವ ಋಷಿಕೇಶವು ಕೇವಲ ಆಧ್ಯಾತ್ಮಿಕ ವಾತಾವರಣದಿಂದ ಮಾತ್ರವಲ್ಲ, ಇದು ಸಾಹಸ ಚಟುವಟಿಕೆಗಳಿಗೂ ಹೆಸರುವಾಸಿಯಾಗಿದೆ. ಇದು ಯೋಗ ಮತ್ತು ಧ್ಯಾನ ಕೇಂದ್ರವಾಗಿ ಪ್ರಸಿದ್ಧವಾಗಿದೆ. ಇದು ಸಾಹಸ ಚಟುವಟಿಕೆಗಳಿಗೂ ಒಂದು ಬೆಸ್ಟ್ ಜಾಗ ಎಂದರೆ ತಪ್ಪಾಗಲಿಕ್ಕಿಲ್ಲ. ಇಲ್ಲಿ ನೀವು ಗಂಗಾ ನದಿಯಲ್ಲಿ ಅತ್ಯಾಕರ್ಷಕ ರಾಫ್ಟಿಂಗ್ ಮಾಡಬಹುದು. ಅತಿ ಎತ್ತರದ ಭಂಗೀ ಜಂಪಿಂಗ್ ತಾಣವೂ ಋಷಿಕೇಶದಲ್ಲಿದೆ. ಇಲ್ಲಿನ ಸುಂದರ ತಾಣಗಳಲ್ಲಿ ಕ್ಯಾಂಪಿಂಗ್ ಮತ್ತು ಟ್ರೆಕ್ಕಿಂಗ್‌ನಂತಹ ವಿವಿಧ ಸಾಹಸಮಯ ಚಟುವಟಿಕೆಗಳನ್ನು ಆನಂದಿಸಬಹುದು. ಬೇಸಿಗೆ ಕಾಲವು ಇಲ್ಲಿಗೆ ಭೇಟಿ ನೀಡಲು ಉತ್ತಮ ಎಂದು ಹೇಳಬಹುದು.
2. ಮನಾಲಿ
ಮನಾಲಿ ಹಿಮಾಚಲ ಪ್ರದೇಶದ ಒಂದು ಸುಂದರ ನಗರ. ಬೇಸಿಗೆ ಮತ್ತು ಚಳಿಗಾಲ ಎರಡರಲ್ಲೂ ಸಾಹಸ ಚಟುವಟಿಕೆಗಳಿಗೆ ಇದು ಜನಪ್ರಿಯ ಸ್ಥಳವಾಗಿದೆ. ಎತ್ತರದ ಶಿಖರಗಳು ಮತ್ತು ದಟ್ಟವಾದ ಕಾಡುಗಳಿಂದ ಸುತ್ತುವರೆದಿರುವ ಈ ನಗರವು ಸ್ಕೀಯಿಂಗ್ ಮತ್ತು ಸ್ನೋಬೋರ್ಡಿಂಗ್ ಅನ್ನು ಆನಂದಿಸಲು ಉತ್ತಮ ಸ್ಥಳವಾಗಿದೆ. ಸೋಲಾಂಗ್ ಕಣಿವೆಯಲ್ಲಿ ಪ್ಯಾರಾಗ್ಲೈಡಿಂಗ್ ಮಾಡುವಾಗ ನೀವು ಹಿಮಾಲಯದ ಅದ್ಭುತ ನೋಟಗಳನ್ನು ಸಹ ಆನಂದಿಸಬಹುದು. ನೀವು ನಿಮ್ಮ ಕುಟುಂಬದೊಂದಿಗೆ ಇಲ್ಲಿಗೆ ಹೋಗಬಹುದು, ಅಥವಾ ನೀವು ಈ ಸ್ಥಳವನ್ನು ಒಬ್ಬಂಟಿಯಾಗಿ ಆನಂದಿಸಬಹುದು.
3. ಗೋವಾ
ಗೋವಾ ತನ್ನ ಸುಂದರವಾದ ಕಡಲತೀರಗಳು ಮತ್ತು ರೋಮಾಂಚಕ ರಾತ್ರಿಜೀವನ (ನೈಟ್ ಲೈಫ್) ಕ್ಕೆ ಹೆಸರುವಾಸಿಯಾಗಿದೆ. ಇಲ್ಲಿಯೂ ಸಹ ನೀವು ರೋಮಾಂಚಕಾರಿ ಸಾಹಸ ಚಟುವಟಿಕೆಗಳನ್ನು ಆನಂದಿಸಬಹುದು. ಗೋವಾದಲ್ಲಿ ಸ್ಕೂಬಾ ಡೈವಿಂಗ್ ಮತ್ತು ಸ್ನಾರ್ಕ್ಲಿಂಗ್‌ನಂತಹ ಹಲವು ಚಟುವಟಿಕೆಗಳಿವೆ. ಇವುಗಳಲ್ಲದೆ, ನೀವು ಗೋವಾದಲ್ಲಿ ಪ್ಯಾರಾಸೈಲಿಂಗ್ ಮತ್ತು ಜೆಟ್ ಸ್ಕೀಯಿಂಗ್‌ನಂತಹ ಸಾಹಸಮಯ ಚಟುವಟಿಕೆಗಳನ್ನು ಸಹ ಆನಂದಿಸಬಹುದು.
4. ಜೈಸಲ್ಮೇರ್
ಥಾರ್ ಮರುಭೂಮಿಯ ಮಧ್ಯದಲ್ಲಿರುವ ಜೈಸಲ್ಮೇರ್ ಪ್ರದೇಶವು ಅದ್ಭುತ ದೃಶ್ಯಗಳಿಂದ ಕೂಡಿದೆ. ಇದು ನೀವು ವಿವಿಧ ಸಾಹಸಮಯ ಚಟುವಟಿಕೆಗಳನ್ನು ಆನಂದಿಸಬಹುದಾದ ಸ್ಥಳವಾಗಿದೆ. ಈ ಚಿನ್ನದ ನಗರಿಯು ಕೋಟೆಗಳು ಮತ್ತು ಮರಳು ದಿಬ್ಬಗಳಿಗೆ ಹೆಸರುವಾಸಿಯಾಗಿದೆ. ಒಂಟೆ ಸಫಾರಿಯಲ್ಲಿ ಥಾರ್ ಮರುಭೂಮಿಯ ವಿಶಾಲವಾದ ಮರಳು ದಿಬ್ಬಗಳನ್ನು ಆನಂದಿಸಬಹುದು. ಇದಲ್ಲದೆ, ಮರುಭೂಮಿ ಕ್ಯಾಂಪ್ ಮಾಡುವುದು ಕೂಡ ತುಂಬಾ ರೋಮಾಂಚಕಾರಿ ಅನುಭವ ನೀಡುತ್ತದೆ.
5. ಲಡಾಖ್
ಭಾರತದ ಉತ್ತರ ಭಾಗದಲ್ಲಿರುವ ಲಡಾಖ್, ಸಾಹಸ ಪ್ರಿಯರಿಗೆ ಸೂಕ್ತ ತಾಣವಾಗಿದೆ. ಈ ಸ್ಥಳವು ತನ್ನ ಅದ್ಭುತ ನೋಟಗಳು, ಎತ್ತರದ ಪರ್ವತಗಳಿಗೆ ಹೆಸರುವಾಸಿಯಾಗಿದೆ. ಇಲ್ಲಿ ನೀವು ಟ್ರೆಕ್ಕಿಂಗ್ ಮಾಡಬಹುದು. ಮೋಟಾರ್ ಸೈಕ್ಲಿಂಗ್ ಮತ್ತು ರಿವರ್ ರಾಫ್ಟಿಂಗ್‌ನಂತಹ ವಿವಿಧ ಸಾಹಸ ಚಟುವಟಿಕೆಗಳನ್ನು ಸಹ ಆನಂದಿಸಬಹುದು.
