ಫಾರಿನ್ ಟ್ರಿಪ್ ಹೋಗಬೇಕು ಅಂತ ಆಸೆ ಇರೋರು ಗಮನಿಸಿ, ಮಾರ್ಚ್‌ನಲ್ಲಿ ಭಾರತದಿಂದ ಅತಿ ಕಡಿಮೆ ಖರ್ಚಿನಲ್ಲಿ ಹೋಗಿ ಬರಬಹುದಾದ ದೇಶವಿದು
ಕನ್ನಡ ಸುದ್ದಿ  /  ಜೀವನಶೈಲಿ  /  ಫಾರಿನ್ ಟ್ರಿಪ್ ಹೋಗಬೇಕು ಅಂತ ಆಸೆ ಇರೋರು ಗಮನಿಸಿ, ಮಾರ್ಚ್‌ನಲ್ಲಿ ಭಾರತದಿಂದ ಅತಿ ಕಡಿಮೆ ಖರ್ಚಿನಲ್ಲಿ ಹೋಗಿ ಬರಬಹುದಾದ ದೇಶವಿದು

ಫಾರಿನ್ ಟ್ರಿಪ್ ಹೋಗಬೇಕು ಅಂತ ಆಸೆ ಇರೋರು ಗಮನಿಸಿ, ಮಾರ್ಚ್‌ನಲ್ಲಿ ಭಾರತದಿಂದ ಅತಿ ಕಡಿಮೆ ಖರ್ಚಿನಲ್ಲಿ ಹೋಗಿ ಬರಬಹುದಾದ ದೇಶವಿದು

ಮಾರ್ಚ್‌ ತಿಂಗಳಲ್ಲಿ ಫಾರಿನ್ ಟ್ರಿಪ್ ಹೋಗಬೇಕು ಅಂತ ಪ್ಲಾನ್ ಮಾಡ್ತಾ ಇದೀರಾ, ಆದ್ರೆ ಎಲ್ಲಿಗೆ ಹೋಗೋದು ಅಂತ ಗೊಂದಲ ಕಾಡ್ತಾ ಇದ್ಯಾ, ಮುಂದಿನ ತಿಂಗಳು ಅಂತರರಾಷ್ಟ್ರೀಯ ಪ್ರವಾಸ ಮಾಡುವವರು ಭೇಟಿ ನೀಡಲು ಬೆಸ್ಟ್ ಎನ್ನಿಸುವ ದೇಶವೊಂದರ ಬಗ್ಗೆ ಇಲ್ಲಿ ಮಾಹಿತಿ ನೀಡಲಾಗಿದೆ. ಹಾಗಾದರೆ ಆ ದೇಶ ಯಾವುದು, ಏನದರ ವಿಶೇಷ ಎನ್ನುವ ವಿವರ ಇಲ್ಲಿದೆ.

ಮಾರ್ಚ್‌ನಲ್ಲಿ ಭಾರತದಿಂದ ಅತಿ ಕಡಿಮೆ ಖರ್ಚಿನಲ್ಲಿ ಹೋಗಿ ಬರಬಹುದಾದ ದೇಶವಿದು
ಮಾರ್ಚ್‌ನಲ್ಲಿ ಭಾರತದಿಂದ ಅತಿ ಕಡಿಮೆ ಖರ್ಚಿನಲ್ಲಿ ಹೋಗಿ ಬರಬಹುದಾದ ದೇಶವಿದು

ವಿದೇಶ ಪ್ರವಾಸ ಮಾಡಬೇಕು ಎನ್ನುವುದು ಹಲವರ ಕನಸಾಗಿರುತ್ತದೆ. ಆದರೆ ಬಜೆಟ್ ಹಾಗೂ ಸಮಯ ಹೊಂದಿಸೋದು ಖಂಡಿತ ಕಷ್ಟ ಎನ್ನಿಸುತ್ತದೆ. ಮಾರ್ಚ್‌ ತಿಂಗಳಲ್ಲಿ ನೀವು ಅಂತರರಾಷ್ಟ್ರೀಯ ಪ್ರವಾಸ ಮಾಡಬೇಕು ಅಂತಿದ್ರೆ ಈಗಲೇ ತಯಾರಿ ಶುರು ಮಾಡಬೇಕು. ಮಾರ್ಚ್‌ ತಿಂಗಳಲ್ಲಿ ಭಾರತದಿಂದ ಕಡಿಮೆ ಖರ್ಚಿನಲ್ಲಿ ಭೇಟಿ ನೀಡಬಹುದಾದ ಸುಂದರ ದೇಶವೊಂದರ ಬಗ್ಗೆ ನಾವಿವತ್ತು ಹೇಳುತ್ತೇವೆ.

ಹೌದು ಮಾರ್ಚ್‌ನಲ್ಲಿ ಕಡಿಮೆ ಖರ್ಚಿನಲ್ಲಿ ಭಾರತದಿಂದ ಹೋಗಿ ಬರಬಹುದಾದ ಪ್ರಸಿದ್ಧ ದೇಶ ಮಲೇಷ್ಯಾ. ಸ್ವಚ್ಛಂದ ಆಕಾಶ, ಸುಂದರ ಕಡಲತೀರಗಳಲ್ಲಿ ನಿಮ್ಮ ದಿನವನ್ನು ಕಳೆಯಲು ಮಲೇಷ್ಯಾಗೆ ನೀವು ಭೇಟಿ ನೀಡಬಹುದು. ಹಾಗಾದರೆ ಮಲೇಷ್ಯಾಗೆ ತೆರಳುವ ವಿಮಾನ ವ್ಯವಸ್ಥೆ ಹೇಗೆ, ಅಲ್ಲಿ ಏನೆಲ್ಲಾ ನೋಡಬಹುದು ಎನ್ನುವ ಸಂಪೂರ್ಣ ವಿವರ ಇಲ್ಲಿದೆ.

ಭಾರತದಿಂದ ಮಲೇಷ್ಯಾಕ್ಕೆ ನೇರ ವಿಮಾನ ಸೌಲಭ್ಯ

ಮಲೇಷ್ಯಾದ ಕೌಲಾಲಂಪುರಕ್ಕೆ ಭಾರತದ ವಿವಿಧ ಸ್ಥಳಗಳಿಂದ ನೇರ ವಿಮಾನ ಸೌಲಭ್ಯವಿದೆ. ಎಲ್ಲೆಲ್ಲಿಂದ ವಿಮಾನ ಸೌಲಭ್ಯಗಳಿವೆ, ದರ ಎಷ್ಟು ಎನ್ನುವ ವಿವರ ಇಲ್ಲಿದೆ.

* ಪೋರ್ಟ್ ಬ್ಲೇರ್‌ನಿಂದ ವಿಮಾನ ದರ - 2,854 ರೂ

* ಬೆಂಗಳೂರಿನಿಂದ ವಿಮಾನ ದರ- 6,505 ರೂ

* ಕೊಚ್ಚಿಯಿಂದ ವಿಮಾನ ದರ - 6,576 ರೂ

* ಕೋಲ್ಕತ್ತಾದಿಂದ ವಿಮಾನ ದರ - 6,736 ರೂ

* ವಿಶಾಖಪಟ್ಟಣದಿಂದ ವಿಮಾನ ದರ - 6,903 ರೂ

* ತಿರುಚಿರಾಪಳ್ಳಿಯಿಂದ ವಿಮಾನ ದರ - 7,147 ರೂ

* ಅಮೃತಸರದಿಂದ ವಿಮಾನ ದರ - 7,324 ರೂ

* ತಿರುವನಂತಪುರಂನಿಂದ ವಿಮಾನ ದರ - 7,567 ರೂ

* ಚೆನ್ನೈನಿಂದ ವಿಮಾನ ದರ - 7,739 ರೂ

* ಲಕ್ನೋದಿಂದ ವಿಮಾನ ದರ - 7,874 ರೂ

* ಜೈಪುರದಿಂದ ವಿಮಾನ ದರ - 8,146 ರೂ

* ನವದೆಹಲಿಯಿಂದ ವಿಮಾನ ದರ - 8,929 ರೂ

* ಮುಂಬೈನಿಂದ ವಿಮಾನ ದರ - 10,558 ರೂ

ಮಲೇಷ್ಯಾದಲ್ಲಿ ತಪ್ಪದೇ ನೋಡಬೇಕಾದ ಕೆಲವು ಸ್ಥಳಗಳು

ಪೆಟ್ರೋನಾಸ್ ಅವಳಿ ಗೋಪುರಗಳು (ಟ್ವಿನ್ ಟವರ್‌)

ವಿಶ್ವದ ಅತಿ ಎತ್ತರದ ಅವಳಿ ಗೋಪುರ ಅಥವಾ ಟ್ವಿನ್ ಟವರ್ ಇರುವುದು ಮಲೇಷ್ಯಾದಲ್ಲಿ. ಇಲ್ಲಿಗೆ ಭೇಟಿ ನೀಡದೇ ಮಲೇಷ್ಯಾ ಪ್ರವಾಸ ಪೂರ್ಣವಾಗುವುದಿಲ್ಲ. ಅದರಲ್ಲೂ ರಾತ್ರಿ ಹೊತ್ತಿನಲ್ಲಿ ವಿದ್ಯುತ್‌ ದೀಪಗಳಿಂದ ಅವಳಿ ಗೋಪುರ ಅಂದ ಇನ್ನಷ್ಟು ಹೆಚ್ಚಾಗುತ್ತದೆ. ಇದು ಪ್ರವಾಸಿಗರನ್ನು ಬೆರಗುಗೊಳಿಸುವುದು ಸುಳ್ಳಲ್ಲ.

ಲೆಗೊಲ್ಯಾಂಡ್ ಮಲೇಷ್ಯಾ

ಇದು ಆಕರ್ಷಕವಾದ ಲೆಗೊ-ಪ್ರೇರಿತ ಆಕರ್ಷಣೆಗಳು, ಥೀಮ್ ಗೇಮ್‌ ಪ್ರದೇಶಗಳು ಮತ್ತು ಸೌಮ್ಯ ಸವಾರಿಗಳನ್ನು ಹೊಂದಿರುವ ಥೀಮ್ ಪಾರ್ಕ್ ಆಗಿದೆ. ಇದು ಕೂಡ ಮಲೇಷ್ಯಾದಲ್ಲಿ ನೋಡಬೇಕಾದ ಸ್ಥಳಗಳಲ್ಲಿ ಒಂದಾಗಿದೆ.

ಬಟು ಕೇವ್ಸ್‌

ಇದು ಮಲೇಷ್ಯಾದ ಟ್ರೇಡ್ ಮಾರ್ಕ್ ಅಂತಲೇ ಹೇಳಬಹುದು. ಮಲೇಷ್ಯಾದಲ್ಲಿರುವ ಪ್ರಸಿದ್ಧ ಹಿಂದೂ ದೇಗುಲ ಇರುವುದು ಈ ಸ್ಥಳದಲ್ಲೇ. ಸುಣ್ಣದ ಕಲ್ಲಿನ ಗುಹೆಗಳನ್ನು ಹೊಂದಿರುವ ಈ ಸ್ಥಳಕ್ಕೆ ಪ್ರಪಂಚದಾದ್ಯಂತ ಇರುವ ಹಿಂದೂಗಳು ಭೇಟಿ ನೀಡುತ್ತಾರೆ. ಇಲ್ಲಿ ಅತಿ ಎತ್ತರದ ಷಣ್ಮುಖನ ವಿಗ್ರಹವಿದೆ.

ಕೆಎಲ್‌ಸಿಸಿ ಪಾರ್ಕ್

ಇದು ಅತಿ ಸುಂದರ ಮಾನವ ನಿರ್ಮಿತ ಪಾರ್ಕ್ ಆಗಿದೆ. ಸುಂದರ ಕಾರಂಜಿಗಳು, ಉದ್ಯಾನವನದ ವಾತಾವರಣ, ಸಂಜೆ ವಾಕ್ ಮಾಡಲು ಹೇಳಿ ಮಾಡಿಸಿದ ಅದ್ಭುತ ವಾತಾವರಣ ಇರುವ ಈ ಜಾಗವು ಮಲೇಷ್ಯಾದಲ್ಲಿ ಪ್ರವಾಸಿಗರನ್ನು ಆಕರ್ಷಿಸುತ್ತದೆ.

Whats_app_banner