Travel: ಕ್ರಿಸ್ಮಸ್‌ ಟೈಮ್‌ನಲ್ಲಿ ಲಂಡನ್‌ ಟ್ರಿಪ್‌ಗೆ ಹೋದ್ರೆ ಈ ರೈಲುಗಳಲ್ಲಿ ಟ್ರಾವೆಲ್‌ ಮಾಡೋದು ಖಂಡಿತ ಮಿಸ್‌ ಮಾಡ್ಬೇಡಿ
ಕನ್ನಡ ಸುದ್ದಿ  /  ಜೀವನಶೈಲಿ  /  Travel: ಕ್ರಿಸ್ಮಸ್‌ ಟೈಮ್‌ನಲ್ಲಿ ಲಂಡನ್‌ ಟ್ರಿಪ್‌ಗೆ ಹೋದ್ರೆ ಈ ರೈಲುಗಳಲ್ಲಿ ಟ್ರಾವೆಲ್‌ ಮಾಡೋದು ಖಂಡಿತ ಮಿಸ್‌ ಮಾಡ್ಬೇಡಿ

Travel: ಕ್ರಿಸ್ಮಸ್‌ ಟೈಮ್‌ನಲ್ಲಿ ಲಂಡನ್‌ ಟ್ರಿಪ್‌ಗೆ ಹೋದ್ರೆ ಈ ರೈಲುಗಳಲ್ಲಿ ಟ್ರಾವೆಲ್‌ ಮಾಡೋದು ಖಂಡಿತ ಮಿಸ್‌ ಮಾಡ್ಬೇಡಿ

ಚಳಿಗಾಲದಲ್ಲಿ ವಿದೇಶಗಳಿಗೆ ಟ್ರಿಪ್‌ ಹೋಗೋದು ಒಂಥರಾ ಮಜಾ ಕೊಡೋದು ನಿಜ. ಅದರಲ್ಲೂ ಕ್ರಿಸ್ಮಸ್‌ ಸಮಯದಲ್ಲಿ ಲಂಡನ್‌, ಯುರೋಪ್‌ನಂತಹ ದೇಶಗಳಿಗೆ ಹೋದ್ರೆ ನಿಮಗೆ ಮರೆಯಲಾರದ ಅನುಭವ ಸಿಗೋದು ಖಂಡಿತ. ನೀವು ಕ್ರಿಸ್ಮಸ್‌ ಟೈಮ್‌ನಲ್ಲಿ ಲಂಡನ್‌ಗೆ ಹೋದ್ರೆ ರೈಲು ಪಯಣವನ್ನು ಮಿಸ್‌ ಮಾಡ್ಲೇಬೇಡಿ.

ಕ್ರಿಸ್ಮಸ್‌ ಪರಿಕಲ್ಪನೆಯ ರೈಲು
ಕ್ರಿಸ್ಮಸ್‌ ಪರಿಕಲ್ಪನೆಯ ರೈಲು (VisitEngland )

ಕ್ರಿಸ್ಮಸ್‌ ಎಂದರೆ ಪ್ರಪಂಚದಾದ್ಯಂತ ಸಂಭ್ರಮ. ಇದು ಕೇವಲ ಕ್ರಿಶ್ಚಿಯನ್ನರು ಮಾತ್ರವಲ್ಲ ಎಲ್ಲಾ ಧರ್ಮದವರೂ ಸಂಭ್ರಮಿಸುವ ಹಬ್ಬ. ಭಾರತಕ್ಕಿಂತ ವಿದೇಶಗಳಲ್ಲಿ ಕ್ರಿಸ್ಮಸ್‌ ಹಬ್ಬ ಬಲು ಜೋರು. ಇಲ್ಲಿ ತಿಂಗಳು ಇರುವಾಗಲೇ ಕ್ರಿಸ್ಮಸ್‌ ಸಂಭ್ರಮ ಮನೆ ಮಾಡಿರುತ್ತದೆ. ಇನ್ನು ಯುನೈಟೆಡ್‌ ಕಿಂಗ್‌ಡಮ್‌ನಲ್ಲಿ ಕ್ರಿಸ್ಮಸ್‌ ಸಲುವಾಗಿ ವಿಶೇಷ ರೈಲು ಪ್ರಯಾಣ ಆಯೋಜಿಸಿರುತ್ತಾರೆ.

ರೈಲು ಹಾಗೂ ಕ್ರಿಸ್ಮಸ್‌ ನಡುವೆ ಅವಿನಾಭಾವ ಸಂಬಂಧವಿದೆ. ಪುಟಾಣಿ ರೈಲುಗಳಲ್ಲಿ ಮಕ್ಕಳನ್ನು ಖುಷಿ ಪಡಿಸಲು ಸಾಂತಕ್ಲಾಸ್‌ ಬರುವುದನ್ನು ನಾವು ನೋಡಿರುತ್ತೇವೆ. ಇನ್ನು ಲಂಡನ್‌ನಲ್ಲಿ ಕ್ರಿಸ್ಮಸ್‌ ಸಮಯದಲ್ಲಿ ರೈಲು ಪ್ರಯಾಣ ನಿಜಕ್ಕೂ ವಿಶೇಷ. ನೀವು ಅಲ್ಲಿ ಇದ್ರೆ ಅಥವಾ ಅಲ್ಲಿಗೆ ಟ್ರಿಪ್‌ ಮಾಡುವ ಪ್ಲಾನ್‌ ಇದ್ರೆ ಈ 6 ರೈಲುಗಳಲ್ಲಿ ಓಡಾಡಿಲ್ಲ ಅಂದ್ರೆ ಖಂಡಿತ ನೀವು ಮಿಸ್‌ ಮಾಡಿಕೊಳ್ಳುತ್ತೀರಿ.

ಬೋಡ್ಮಿನ್ ಮತ್ತು ವೆನ್ಫೋರ್ಡ್ ರೈಲ್ವೆ, ಸಾಂಟಾ ಬೈ ಸ್ಟೀಮ್

ಬೋಡ್ಮಿನ್ ಮತ್ತು ವೆನ್ಫೋರ್ಡ್ ಹಲವು ದಶಕಗಳಿಂದ ಕ್ರಿಸ್ಮಸ್‌ ಸಮಯದಲ್ಲಿ ತಮ್ಮದೇ ಆದ ವಿಶೇಷ ರೈಲುಗಳನ್ನು ಓಡಿಸುತ್ತಿದೆ. ಈ ರೈಲುಗಳು ಗ್ಲಿನ್‌ ಕಣಿವೆಯ ಮೂಲಕ ಸಾಗುತ್ತವೆ. ಈ ದಾರಿಯು ಸಾಕಷ್ಟು ಮರಗಳು, ಧುಮ್ಮಿಕ್ಕುವ ನೀರು ಹೀಗೆ ಕಣ್ಣಿಗೆ ಹಬ್ಬ ಮಾಡುವಂತಿರುತ್ತದೆ. ಈ ರೈಲು ಡಿಸೆಂಬರ್‌ 21 ಗುರುವಾರ ಹಾಗೂ 22 ಶುಕ್ರವಾರ ಸಂಚರಿಸುತ್ತದೆ. bodminrailway.co.uk ವೆಬ್‌ಸೈಟ್‌ ಮೂಲಕ ರೈಲು ಬುಕ್‌ ಮಾಡಬಹುದು.

ಈಸ್ಟ್‌ ಲಂಕಾಶೈರ್‌ ರೈಲ್ವೇ

ಈಸ್ಟ್‌ ಲ್ಯಾಂಕ್ಸ್‌ ರೈಲು ದೊಡ್ಡ ಪಟ್ಟಣವನ್ನು ಆಧರಿಸಿದ ಪಾರಂಪರಿಕ ರೈಲುಮಾರ್ಗದಲ್ಲೇ ಸಾಗುವ ಅಸಾಮಾನ್ಯ ರೈಲು. ಇದರ ಮುಖ್ಯ ನಿಲ್ದಶಣ ಬರಿ ಎಂಬ ಪಟ್ಟಣದಲ್ಲಿರುತ್ತದೆ. ಈ ಪಟ್ಟಣವು ಕ್ರಿಸ್ಮಸ್‌ ಹಬ್ಬಕ್ಕೆ ಹೆಸರುವಾಸಿಯಾಗಿದೆ. ಚಲಿಸುವ ಹಿಮಕರಡಿಗಳ ಗಾಯನ, ಕ್ರಿಸ್ಮಸ್‌ ಟ್ರೀಗಳು ಹೀಗೆ ಇಡೀ ರೈಲನ್ನು ಕ್ರಿಸ್ಮಸ್‌ ಪರಿಕಲ್ಪನೆಯಲ್ಲಿ ರೂಪಿಸಲಾಗಿದೆ. 3 ದಿನಗಳಲ್ಲಿ ದಿನಕ್ಕೆ ಒಂಬತ್ತು ರೈಲುಗಳು ನಿರೀಕ್ಷಿತ 40,000 ಮಂದಿಗೆ ಸೇವೆ ಸಲ್ಲಿಸುತ್ತವೆ. eastlancsrailway.org.uk ಹೆಚ್ಚಿನ ಈ ಮಾಹಿತಿಗೆ ಈ ವೆಬ್‌ಸೈಟ್‌ ಚೆಕ್‌ ಮಾಡಿ.

ಕ್ಯಾಲೆಡೋನಿಯನ್ ರೈಲ್ವೆ (ಬ್ರೆಚಿನ್), ಪೋಲಾರ್ ಎಕ್ಸ್‌ಪ್ರೆಸ್

ಪೋಲಾರ್‌ ಎಕ್ಸ್‌ಪ್ರೆಸ್‌ ಈವೆಂಟ್‌ಗಳು 2004 ರ ಮಕ್ಕಳ ಚಲನಚಿತ್ರವನ್ನು ಆಧರಿಸಿ ಪರವಾನಿಗೆ ಪಡೆದ ಮನರಂಜನೆಗಳಾಗಿವೆ. ಇದು ಕೂಡ ಕ್ರಿಸ್ಮಸ್‌ ಪರಿಕಲ್ಪನೆಯಲ್ಲಿ ರೂಪಿಸಲಾಗಿರುವ ರೈಲು. ಇದು 7,000 ಜನರ (ಬ್ರೆಚಿನ್) ಪಟ್ಟಣದಿಂದ ಸುಮಾರು 20 (ಡನ್ ಸೇತುವೆ) ಹಳ್ಳಿಗೆ ಸಾಗುತ್ತದೆ. ನವೆಂಬರ್‌ 18ರಿಂದಲೇ ಈ ರೈಲು ಓಡಾಟ ಆರಂಭವಾಗುತ್ತದೆ. caledonianrailway.com ವೆಬ್‌ಸೈಟ್‌ ಮೂಲಕ ಟಿಕೆಟ್‌ ಬುಕ್‌ ಮಾಡಬಹುದು.

ಎಪ್ಪಿಂಗ್ ಓಂಗರ್ ರೈಲ್ವೇ, ಲೈಟ್ಸ್ ಎಕ್ಸ್‌ಪ್ರೆಸ್

ಲೈಟ್‌ ಟ್ರೇನ್‌ಗಳು ಎಂದು ಕರೆಸಿಕೊಳ್ಳುವ ಈ ರೈಲುಗಳು ಕ್ರಿಸ್ಮಸ್‌ ಆಕರ್ಷಣೆ ಹೊಂದಿರುವುದು ಸುಳ್ಳಲ್ಲ. ಈ ರೈಲಿಗೆ ವಿವಿಧ ಬಣ್ಣಗಳ ಲೈಟ್‌ಗಳನ್ನು ಅಳವಡಿಸಿರಲಾಗುತ್ತದೆ. ಎಂಜಿನ್‌ನ ಉಗಿ ಕೂಡ ಬಣ್ಣದ ಉಗಿಯನ್ನೇ ಹೊರ ಹಾಕುತ್ತದೆ. ನವೆಂಬರ್ 25 ರಿಂದ ಈ ರೈಲು ಓಡಾಟ ಆರಂಭಿಸುತ್ತದೆ. eorailway.co.uk ಇಲ್ಲಿ ಬುಕ್ಕಿಂಗ್‌ ಮಾಡಬಹುದು.

ನೆನೆ ವ್ಯಾಲಿ ರೈಲ್ವೆ, ಯುಲೆಟೈಡ್ ಈವ್ನಿಂಗ್ ಎಕ್ಸ್‌ಪ್ರೆಸ್

ವಾನ್ಸ್‌ಫೋರ್ಡ್ ಮತ್ತು ಪೀಟರ್‌ಬರೋ ನಡುವೆ ಡಿಸೆಂಬರ್ 9 ಮತ್ತು 16 ರಂದು ಮಾತ್ರ ಕಾರ್ಯನಿರ್ವಹಿಸುವ ಈ ರೈಲು 12 ಮತ್ತು ಅದಕ್ಕಿಂತ ಹೆಚ್ಚಿನ ವಯಸ್ಸಿನವರಿಗೆ ಮಾತ್ರ ಕಾರ್ಯನಿರ್ವಹಿಸುತ್ತದೆ. 1930 ರ ದಶಕದಿಂದ ಬೆಲ್ಜಿಯಂ ತರಬೇತುದಾರರೂ ಇದ್ದಾರೆ, ಅವರು 2010 ರ ಟಿವಿ ಚಲನಚಿತ್ರ ಮರ್ಡರ್ ಆನ್ ದಿ ಓರಿಯಂಟ್ ಎಕ್ಸ್‌ಪ್ರೆಸ್‌ನಲ್ಲಿ ಬಾರ್ ಕಾರಿನ ಪಾತ್ರವನ್ನು ನಿರ್ವಹಿಸಿದ್ದಾರೆ. ಕೋಚ್‌ಗಳು ಭವ್ಯವಾಗಿವೆ. ಈ ರೈಲಿನಲ್ಲಿ ಡ್ರಿಂಕ್ಸ್‌ ಮಾಡಲು ಅವಕಾಶವಿರುವುದು ವಿಶೇಷ. ಇದರಲ್ಲಿ ನಿಮ್ಮ ಟಿಕೆಟ್‌ ರಿಸರ್ವ್‌ ಮಾಡಲು nvr.org.uk ವೆಬ್‌ಸೈಟ್‌ ಚೆಕ್‌ ಮಾಡಿ.

ನಾರ್ತ್ ಯಾರ್ಕ್ ಮೂರ್ಸ್ ರೈಲ್ವೆ, ಸಾಂಟಾ ಸ್ಪೆಷಲ್‌

ಈ ವಿಶೇಷ ರೈಲುಗಳು ಪಿಕರಿಂಗ್ ಅಥವಾ ಗ್ರೋಸ್ಮಾಂಟ್ ನಿಲ್ದಾಣಗಳಿಂದ ಪ್ರಾರಂಭವಾಗುತ್ತವೆ. ಇದರಲ್ಲಿ ಸಾಂಟಾಕ್ಲಾಸ್‌ ವೇಷಧಾರಿಗಳು ನಿಮಗೆ ವಿಶೇಷ ಉಡುಗೊರೆಗಳನ್ನೂ ನೀಡುತ್ತಾರೆ. ಚಳಿಗಾಲದಲ್ಲಿ ಕಣಿವೆ ಪ್ರದೇಶಗಳಲ್ಲಿ ಈ ರೈಲಿನಲ್ಲಿ ಪ್ರಯಾಣ ಮಾಡುವುದೇ ಅಂದ. nymr.co.uk ಈ ವೆಬ್‌ಸೈಟ್‌ನಲ್ಲಿ ಟಿಕೆಟ್‌ ಬುಕ್‌ ಮಾಡಬಹುದು.

Whats_app_banner