ಸಂಗಾತಿಯೊಂದಿಗೆ ಗೋವಾ ಪ್ರವಾಸ ಯೋಜಿಸುತ್ತಿದ್ದರೆ ಈ 5 ಸ್ಥಳಗಳನ್ನು ಮಿಸ್ ಮಾಡಬೇಡಿ; ನೀವು ನೋಡಲೇಬೇಕಾದ ಪ್ರಸಿದ್ಧ ತಾಣಗಳಿವು
ಕನ್ನಡ ಸುದ್ದಿ  /  ಜೀವನಶೈಲಿ  /  ಸಂಗಾತಿಯೊಂದಿಗೆ ಗೋವಾ ಪ್ರವಾಸ ಯೋಜಿಸುತ್ತಿದ್ದರೆ ಈ 5 ಸ್ಥಳಗಳನ್ನು ಮಿಸ್ ಮಾಡಬೇಡಿ; ನೀವು ನೋಡಲೇಬೇಕಾದ ಪ್ರಸಿದ್ಧ ತಾಣಗಳಿವು

ಸಂಗಾತಿಯೊಂದಿಗೆ ಗೋವಾ ಪ್ರವಾಸ ಯೋಜಿಸುತ್ತಿದ್ದರೆ ಈ 5 ಸ್ಥಳಗಳನ್ನು ಮಿಸ್ ಮಾಡಬೇಡಿ; ನೀವು ನೋಡಲೇಬೇಕಾದ ಪ್ರಸಿದ್ಧ ತಾಣಗಳಿವು

ಭಾರತದ ಪಶ್ಚಿಮ ಕರಾವಳಿಯಲ್ಲಿರುವ ಗೋವಾ ಒಂದು ಜನಪ್ರಿಯ ಪ್ರವಾಸಿ ತಾಣವಾಗಿದ್ದು,ಇದು ಸುಂದರವಾದ ಸ್ಥಳಗಳಿಗೆ ಹೆಸರುವಾಸಿಯಾಗಿದೆ. ನೀವು ಸಂಗಾತಿ ಜೊತೆಗೆ ಭೇಟಿ ನೀಡಲು ಯೋಜಿಸಿದ್ದರೆ, ಈ 5 ಆಕರ್ಷಕ ತಾಣಗಳಿಗೆ ಭೇಟಿ ನೀಡಲೇಬೇಕು.

ಸಂಗಾತಿಯೊಂದಿಗೆ ಗೋವಾ ಪ್ರವಾಸ ಯೋಜಿಸುತ್ತಿದ್ದರೆ ಈ 5 ಸ್ಥಳಗಳನ್ನು ಮಿಸ್ ಮಾಡಬೇಡಿ
ಸಂಗಾತಿಯೊಂದಿಗೆ ಗೋವಾ ಪ್ರವಾಸ ಯೋಜಿಸುತ್ತಿದ್ದರೆ ಈ 5 ಸ್ಥಳಗಳನ್ನು ಮಿಸ್ ಮಾಡಬೇಡಿ (PIXABAY )

ಭಾರತದ ಪಶ್ಚಿಮ ಕರಾವಳಿಯಲ್ಲಿರುವ ಗೋವಾ ಒಂದು ಜನಪ್ರಿಯ ಪ್ರವಾಸಿ ತಾಣವಾಗಿದ್ದು, ಕಡಲತೀರಗಳು, ಐತಿಹಾಸಿಕ ದೇವಾಲಯಗಳು, ಚರ್ಚ್‌ಗಳು ಮತ್ತು ಸುಂದರವಾದ ಸ್ಥಳಗಳಿಗೆ ಹೆಸರುವಾಸಿಯಾಗಿದೆ. ಇಲ್ಲಿನ ಪಾಕಪದ್ಧತಿ, ವಾಸ್ತುಶಿಲ್ಪ, ಪೋರ್ಚುಗೀಸ್ ಪ್ರಭಾವದಿಂದ ಬದಲಾದ ಜೀವನಶೈಲಿ ಇತ್ಯಾದಿಯನ್ನು ಅನುಭವಿಸುವುದೇ ಒಂದು ಆನಂದ. ಗೋವಾವು ವಿಶ್ರಾಂತಿ ಮತ್ತು ಸಾಹಸ ಎರಡಕ್ಕೂ ನೆಚ್ಚಿನ ತಾಣವಾಗಿದೆ. ಅದರಲ್ಲೂ ಗೋವಾದ ರಾತ್ರಿ ಜೀವನ ಜಗತ್ತನ್ನೇ ಆಕರ್ಷಿಸಿದೆ. ನೀವು ಸಂಗಾತಿ ಜೊತೆಗೆ ಭೇಟಿ ನೀಡಲು ಯೋಜಿಸಿದ್ದರೆ, ಈ 5 ಆಕರ್ಷಕ ತಾಣಗಳಿಗೆ ಭೇಟಿ ನೀಡಲೇಬೇಕು.

ಗೋವಾ ಪ್ರವಾಸ ಕೈಗೊಂಡರೆ ತಪ್ಪದೆ ಭೇಟಿ ನೀಡಬೇಕಾದ 5 ತಾಣಗಳು

ಮಹಲ್ಸಾ ದೇವಿ ದೇವಾಲಯ: ಗೋವಾದಲ್ಲಿ ಚರ್ಚುಗಳು ಮತ್ತು ಕಡಲತೀರಗಳು ಮಾತ್ರವಲ್ಲ, ಪ್ರಾಚೀನ ದೇವಾಲಯಗಳಿಗೂ ಪ್ರಸಿದ್ಧ ಪ್ರವಾಸಿ ತಾಣವಾಗಿದೆ. ಅಂತಹ ಐತಿಹಾಸಿಕ ದೇವಾಲಯವೆಂದರೆ ಗೋವಾದ ಮರ್ಡೋಲ್‌ನಾ ಫೋಂಡಾದಲ್ಲಿರುವ ಮಲ್ಸಾ ದೇವಿ ದೇವಸ್ಥಾನ. ಈ ಪ್ರಾಚೀನ ದೇವಾಲಯವು ವಿಷ್ಣುವಿನ ಸ್ತೀ ಅವತಾರವಾದ ಮಲ್ಸಾ ದೇವಿಗೆ ಅಪ್ರಿತವಾಗಿದ್ದು, ಹಿಂದೂಗಳಿಗೆ ಇದು ಬಹಳ ಪವಿತ್ರ ಸ್ಥಳವಾಗಿದೆ. ಭಾರತದ ಅಪರೂಪದ ದೇವಾಲಯವಾಗಿದ್ದು, ಇಲ್ಲಿ ವಿಷ್ಣುವನ್ನು ಪುರುಷ ಮತ್ತು ಸ್ತೀ ಎರಡೂ ರೂಪದಲ್ಲಿ ಪೂಜಿಸಲಾಗುತ್ತದೆ. ಹೀಗಾಗಿ ಭಕ್ತರು ಮಲ್ಸಾ ದೇವಿ ದೇವಸ್ಥಾನದ ಮೇಲೆ ಅಪಾರ ನಂಬಿಕೆ ಹೊಂದಿದ್ದಾರೆ. ಈ ದೇವಾಲಯದ ಬಗ್ಗೆ ಒಂದು ಪೌರಾಣಿಕ ನಂಬಿಕೆಯಿದ್ದು, ದೇವಾಲಯದ ಗಂಟೆ ಬಾರಿಸುತ್ತಿರುವಾಗ ಯಾರಾದರೂ ಸುಳ್ಳು ಹೇಳಿದರೆ, ದೇವಿ ಅವರನ್ನು ಮೂರು ದಿನಗಳಲ್ಲಿ ಶಿಕ್ಷಿಸುತ್ತಾಳಂತೆ.

ದೂಧ್‌ಸಾಗರ್ ಜಲಪಾತ: ಭಗವಾನ್ ಮಹಾವೀರ ಅಭಯಾರಣ್ಯ ಮತ್ತು ಮೋಲೆಮ್ ರಾಷ್ಟ್ರೀಯ ಉದ್ಯಾನವನದ ನಡುವೆ ಇರುವ ದೂಧ್‌ಸಾಗರ್ ಜಲಪಾತವು ಗೋವಾದ ಅತ್ಯಂತ ಪ್ರಸಿದ್ಧ ಪ್ರವಾಸಿ ತಾಣಗಳಲ್ಲೊಂದಾಗಿದೆ. ಮಾಂಡೋವಿ ನದಿಯಲ್ಲಿರುವ ಈ ಜಲಪಾತದ ಎತ್ತರ ಸುಮಾರು 310 ಮೀಟರ್. ಈ ಸುಂದರ ದೃಶ್ಯ ವೈಭವ ವೀಕ್ಷಣೆಗೆ ದೇಶ-ವಿದೇಶಗಳಿಂದ ಪ್ರವಾಸಿಗರು ಬರುತ್ತಾರೆ.

ಅಗುವಾಡಾ ಕೋಟೆ: ಗೋವಾದ ಪ್ರಮುಖ ಆಕರ್ಷಣೆಗಳಲ್ಲಿ ಅಗುವಾಡಾ ಕೋಟೆಯೂ ಒಂದು. ಇದು ಕೂಡ ಬಹಳ ಜನಪ್ರಿಯವಾದ ಪ್ರವಾಸಿ ತಾಣ. ಇಲ್ಲಿ ಪೋರ್ಚುಗೀಸರು ನಿರ್ಮಿಸಿದ ದೀಪಸ್ತಂಭವಿದ್ದು, ಐತಿಹಾಸಿಕ ಮಹತ್ವಕ್ಕೆ ಹೆಸರುವಾಸಿಯಾಗಿದೆ. ಅಗುವಾಡಾ ಕೋಟೆಯು ಪ್ರಾಚೀನ ಕಾಲದಲ್ಲಿ ಪೋರ್ಚುಗೀಸರ ಪ್ರಮುಖ ಮತ್ತು ಅಮೂಲ್ಯವಾದ ಕೋಟೆಗಳಲ್ಲಿ ಒಂದಾಗಿತ್ತು. ಇದು ಅರೇಬಿಯನ್ ಸಮುದ್ರ ಮತ್ತು ಮಾಂಡೋವಿ ನದಿ ದಡದಲ್ಲಿದ್ದು, ಆಕರ್ಷಕ ಪ್ರವಾಸಿ ತಾಣವಾಗಿದೆ.

ಮಹಾಲಕ್ಷ್ಮಿ ದೇವಸ್ಥಾನ: ಉತ್ತರ ಗೋವಾದ ಮಹಾಲಕ್ಷ್ಮಿ ದೇವಾಲಯವು ಪ್ರವಾಸಿಗರಲ್ಲಿ ಬಹಳ ಜನಪ್ರಿಯವಾಗಿದೆ. ಈ ದೇವಾಲಯದಲ್ಲಿ ಪ್ರತಿಷ್ಠಾಪಿಸಲಾದ ದೇವಿಯ ವಿಗ್ರಹವು ತುಂಬಾ ಅದ್ಭುತ ಮತ್ತು ನಿಗೂಢವಾಗಿದೆ. ಈ ದೇವಿಯ ವಿಗ್ರಹದ ತಲೆಯ ಮೇಲೆ ಲಿಂಗವಿದ್ದು, ಇದು ದೇವಿಯ ಸಾತ್ವಿಕ ರೂಪವನ್ನು ಪ್ರತಿನಿಧಿಸುತ್ತದೆ. ಇದು ಪ್ರವಾಸಿಗರ ಪ್ರಮುಖ ಆಕರ್ಷಣೆಯ ಕೇಂದ್ರವಾಗಿದೆ. ಮಹಾಲಕ್ಷ್ಮಿ ದೇವಾಲಯದ ಗರ್ಭಗುಡಿಯಲ್ಲಿರುವ 18 ಪವಿತ್ರ ವಿಗ್ರಹಗಳು ಭಾಗವತ ಪುರಾಣದ ದೃಶ್ಯಗಳನ್ನು ಚಿತ್ರಿಸುತ್ತವೆ.

ಕ್ಯಾಂಡೋಲಿಮ್ ಬೀಚ್: ಗೋವಾ ರಾಜಧಾನಿ ಪಣಜಿಯಿಂದ ಸುಮಾರು 12.5 ಕಿ.ಮೀ ದೂರದಲ್ಲಿರುವ ಕ್ಯಾಂಡೋಲಿಮ್ ಬೀಚ್‌ಗೆ ಪ್ರವಾಸಿಗರು ಬರುವ ಸಂಖ್ಯೆ ಕೊಂಚ ಕಡಿಮೆ. ಹೀಗಾಗಿ ಈ ಬೀಚ್ ದೇಶ-ವಿದೇಶದ ಪ್ರವಾಸಿಗರಲ್ಲಿ ಬಹಳ ಜನಪ್ರಿಯವಾಗಿದೆ. ಇದು ಕೂಡ ಗೋವಾದ ಪ್ರಮುಖ ಆಕರ್ಷರ ತಾಣಗಳಲ್ಲಿ ಒಂದಾಗಿದೆ.

Whats_app_banner